ಆಕರ್ಷಕ ವಿನ್ಯಾಸದ ಟ್ರಯಂಫ್ ಟ್ರೈಡೆಂಟ್ 660 ಸ್ಪೆಷಲ್ ಎಡಿಷನ್ ವಿಶೇಷತೆಗಳೇನು?

ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಬೈಕ್ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ ತನ್ನ ಟ್ರೈಡೆಂಟ್ 660 ಬೈಕ್ ಗಾಗಿ 'ಸ್ಲಿಪರಿ ಸ್ಯಾಮ್' ಎಂಬ ಸ್ಪೆಷಲ್ ಎಡಿಷನ್ ಮಾದರಿಯನ್ನು ಪರಿಚಯಿಸಿದೆ. ಇದು ಐಲ್ ಆಫ್ ಮ್ಯಾನ್ ಟಿಟಿಯಲ್ಲಿ ಸತತ ಐದು ಗೆಲುವುಗಳನ್ನು ಗಳಿಸಿದ ಮೂಲ ಸ್ಲಿಪರಿ ಸ್ಯಾಮ್ 750 ಸಿಸಿ ಟ್ರೈಡೆಂಟ್ ರೇಸ್ ಬೈಕ್ ಮತ್ತು ಟ್ರಯಂಫ್‌ಗಾಗಿ ಇತರ ಶಾರ್ಟ್ ಸರ್ಕ್ಯೂಟ್ ಗೆಲುವುಗಳಿಗೆ ಗೌರವವಾಗಿ ತಂದಿದ್ದಾರೆ.

ಹೊಸ ಟ್ರಯಂಫ್ ಟ್ರೈಡೆಂಟ್ 660 ಸ್ಪೆಷಲ್ ಎಡಿಷನ್ (Triumph Trident 660 Special Edition) ಲಿವರಿಯನ್ನು UK ನಲ್ಲಿ ಪ್ರಾರಂಭಿಸಲಾಗಿದೆ ಮತ್ತು ಇದು ಸ್ಟ್ಯಾಂಡರ್ಡ್ ಟ್ರಯಂಫ್ ಟ್ರೈಡೆಂಟ್ 660 ಮಾದರಿಗಿಂತ ಯಾವುದೇ ಹೆಚ್ಚುವರಿ ವೆಚ್ಚವನ್ನು ಹೊಂದಿಲ್ಲ. ಈ ಬೈಕ್ ಬ್ಲ್ಯಾಕ್ ಅಥವಾ ಗ್ರೇ ಬಣ್ಣವನ್ನು ಪ್ರಾಥಮಿಕ ಬಣ್ಣಗಳಾಗಿ ಹೊಂದಿರುವ ಸ್ಟ್ಯಾಂಡರ್ಡ್ ಶೇಡ್‌ಗಿಂತ ಭಿನ್ನವಾಗಿ, ಸ್ಲಿಪರಿ ಸ್ಯಾಮ್ ಲೈವರಿ ಟ್ರಿಪಲ್-ಟೋನ್ ಬಣ್ಣದವನ್ನು ಒಳಗೊಂಡಿದೆ.

Triumph Trident 660 Special Edition

ವಿನ್ಯಾಸ: ಈ ಸ್ಪೆಷಲ್ ಎಡಿಷನ್ ಬ್ಲೂ ಮತ್ತು ರೆಡ್ ಅಸ್ಸೆಟ್ ಗಳು ಮತ್ತು ಸಂಖ್ಯೆ '67' ರೇಸ್ ಗ್ರಾಫಿಕ್ಸ್‌ನೊಂದಿಗೆ ಬಿಳಿ ಪ್ರಾಥಮಿಕ ಛಾಯೆಯಿಂದ ಕೂಡಿದೆ. ಈ ಬೈಕಿನ ಫ್ಯೂಯಲ್ ಟ್ಯಾಂಕ್, ಫ್ರಂಟ್ ಫೆಂಡರ್, ಫ್ಲೈಸ್ಕ್ರೀನ್ ಮತ್ತು ಟೈಲ್ ವಿಭಾಗವನ್ನು ವಿಶೇಷ ಲಿವರಿಯಲ್ಲಿ ಚಿತ್ರಿಸಲಾಗಿದೆ. ಗಮನಾರ್ಹವಾಗಿ, ಟ್ರಯಂಫ್ ಫ್ಲೈಸ್ಕ್ರೀನ್, ಬೆಲ್ಲಿ ಪ್ಯಾನ್ ಮತ್ತು ಡಿ-ಡೈರೆಕ್ಷನಲ್ ಕ್ವಿಕ್-ಶಿಫ್ಟರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.

ಎಂಜಿನ್: ಇದಲ್ಲದೆ, ಈ ಸ್ಪೆಷಲ್ ಎಡಿಷನ್ ಟ್ರೈಡೆಂಟ್ 660 ಮಾದರಿಯ ವಿನ್ಯಾಸವನ್ನು ಹೊರತುಪಡಿಸಿ ತಾಂತ್ರಿಕ ವಿಷಯ ಎಲ್ಲಾ ಒಂದೇ ಆಗಿದೆ. ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕಿನಲ್ಲಿ ಇನ್-ಲೈನ್ ಮೂರು-ಸಿಲಿಂಡರ್ 660 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,250 ಆರ್‌ಪಿಎಂನಲ್ಲಿ 80 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 64 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Triumph Trident 660 Special Edition

ಎಂಜಿನ್ ನೊಂದಿಗೆ ಸ್ಲಿಪ್/ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಇನ್ನು ಈ ಬೈಕಿನಲ್ಲಿ ಎಲ್ಇಡಿ ಲೈಟಿಂಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಟಿಎಫ್ಟಿ ಡಿಸ್ ಪ್ಲೇಯನ್ನು ಸಹ ಒಳಗೊಂಡಿದೆ. 'ಮೈ ಟ್ರಯಂಫ್' ಆ್ಯಪ್ ಬಳಸಿ ಈ ಬೈಕಿನಲ್ಲಿರುವ ಡಿಜಿಟಲ್ ಡಿಸ್ಪ್ಲೇಯನ್ನು ರೈಡರ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದೆ.

ಬ್ರೇಕಿಂಗ್ ಸಿಸ್ಟಂ: ಪ್ರಮುಖವಾಗಿ ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 310 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ, ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ. ಟ್ರಯಂಫ್ ಟ್ರೈಡೆಂಟ್ 660 ಎರಡು ರೈಡಿಂಗ್ ಮೋಡ್‌ಗಳನ್ನು ಮತ್ತು ಟ್ರಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ.

Triumph Trident 660 Special Edition

ಸಸ್ಪೆಕ್ಷನ್: ಟ್ರಯಂಫ್ ಟ್ರೈಡೆಂಟ್ 660 (Triumph Trident 660) ಮಾದರಿಯು ಟೂಬುಲರ್ ಸ್ಟೀಲ್ ಚಾಸಿಸ್ ಅನ್ನು ಹೊಂದಿದೆ. ಈ ಟ್ರೈಡೆಂಟ್ 660 ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಶೋವಾ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಶೋವಾ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಸ್ಪೆಷಲ್ ಎಡಿಷನ್ ಮಾದರಿಯಲ್ಲೂ ಇದೆ ಸೆಟಪ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 1, 2024, 11:43 [IST]
English summary
New triumph trident 660 special edition top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+