ಸೆನೆಗಲ್‍ನಿಂದ ಅಶೋಕ್ ಲೇಲ್ಯಾಂಡ್ ಬಸ್‍ಗಳಿಗೆ ಬೇಡಿಕೆ
ಚೆನ್ನೈ ಮೂಲದ ಹಿಂದುಜಾ ಗ್ರೂಪಿನ ಅಂಗ ಸಂಸ್ಥೆಯಾದ ವಾಣಿಜ್ಯ ವಾಹನಗಳ ತಯಾರಕ ಸಂಸ್ಥೆ ಅಶೋಕ್ ಲೇಲ್ಯಾಂಡ್ ಆಫ್ರಿಕಾದ ರಾಷ್ಟ್ರ ಸೆನೆಗಲ್‍ಗೆ ಸೆನ್ ಬಸ್ ಇಂಡಸ್ಟ್ರಿಸ್ ಬೇಡಿಕೆಯ ಮೇರೆಗೆ ಸುಮಾರು 10.06 ಮಿಲಿಯನ್ ಯೂರೋ (ಭಾರತೀಯ ಮೌಲ್ಯದಲ್ಲಿ ರೂ.80 ಕೋಟಿ) ಬೆಲೆಯ 400 ಮಿನಿ ಬಸ್‍ಗಳನ್ನು ಪೂರೈಸಲಿದೆ.

ಸೆನ್ ಬಸ್ ಇಂಡಸ್ಟ್ರೀಸ್ ಸೆನೆಗಲ್‍ನ ರಾಜಧಾನಿ ಡಕಾರ್‍ನಲ್ಲಿ ಬಸ್‍ಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಅಶೋಕ್ ಲೇಲ್ಯಾಂಡ್ ಬಿಡುಗಡೆ ಮಾಡಿರುವ ಪ್ರೆಸ್ ನೋಟ್ ನಲ್ಲಿ ಸೆನೆಗಲ್‍ನ ಡಕಾರ್ ಡೆಮ್ ಡಿಕ್‍ಗೆ 475 ಬಸ್‍ಗಳನ್ನು ಪೂರೈಸಿದ ನಂತರ ಹೊಸ ಬಸ್ಸುಗಳಿಗಾಗಿ ಬೇಡಿಕೆ ಬಂದಿದೆ ಎಂದು ತಿಳಿಸಲಾಗಿದೆ. ಅಶೋಕ್ ಲೇಲ್ಯಾಂಡ್‍ನ ವರದಿಗಳ ಪ್ರಕಾರ, ಈಗಲ್ 916 ಬಸ್ಸುಗಳು ಬಲಿಷ್ಟ ಹಾಗೂ ಗಟ್ಟಿಮುಟ್ಟಾಗಿವೆ, ಈ ಬಸ್ಸುಗಳನ್ನು ಆಫ್ರಿಕಾಗಾಗಿಯೇ ಅಭಿವೃದ್ಧಿಪಡಿಸಲಾಗಿದೆ.

ಉತೃಷ್ಟ ತಂತ್ರಜ್ಞಾನದ ಜೊತೆಯಲ್ಲಿ ಯೂರೋ 3 ಮಾಲಿನ್ಯ ನಿಯಮಗಳನ್ನು ಸಹ ಅಳವಡಿಸಲಾಗಿದೆ. ಕಾರ್ಯ ದಕ್ಷತೆಯಲ್ಲಿ ಮತ್ತು ಇಂಧನ ಕ್ಷಮತೆಯಲ್ಲಿ ಈಗಲ್ ಬಸ್ಸುಗಳು ಆರಾಮದಾಯಕ, ಸುರಕ್ಷಿತ ಹಾಗೂ ಲಾಭದಾಯಕವಾಗಿವೆ. ಅನೇಕ ಬಾರಿ ಈ ವಾಹನವನ್ನು ಆಫ್ರಿಕಾದ ಗ್ರಾಹಕರೊಂದಿಗೆ ಪರೀಕ್ಷೆಗೊಳಪಡಿಸಲಾಗಿದೆ.

ಅನೇಕ ಯಶಸ್ವಿ ಯೋಜನೆಗಳಲ್ಲಿ ಈ ಬಸ್ಸನ್ನು ಬಳಸಿ, ಪರೀಕ್ಷಿಸಲಾಗಿತ್ತು. ಸೆನೆಗಲ್ ಈ ವರ್ಷದ ಜೂನ್‍ನಿಂದ ಬಸ್ಸುಗಳನ್ನು ಪಡೆಯಲಿದೆ ಎಂದು ತಿಳಿಸಲಾಗಿದೆ. ಅಶೋಕ್ ಲೇಲ್ಯಾಂಡ್ ನ, ಪ್ರಾಜೆಕ್ಟ್ ಮತ್ತು ಡಿಫೆನ್ಸ್ ಸೇಲ್ಸ್ ನ ಇಂಟರ್‍ನ್ಯಾಷನಲ್ ಆಪರೇಷನ್ಸ್, ಉಪಾಧ್ಯಕ್ಷರಾದ ಅರಿಜಿತ್ ದತ್ತಾ ಚೌಧರಿರವರು ಈ ಬಗ್ಗೆ ಮಾತನಾಡಿದ್ದಾರೆ.

ಈ ಬೇಡಿಕೆಯಿಂದ ಸೆನೆಗಲ್‍ನಲ್ಲಿರುವ ಗ್ರಾಮೀಣ ಪ್ರದೇಶಗಳನ್ನು ಸೆನೆಗಲ್‍ನ ನಗರ ಪ್ರದೇಶಗಳೊಂದಿಗೆ ಬೆಸೆಯಲಾಗುವುದು ಮತ್ತು ಸರಾಗವಾದ ಸಾರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಅಶೋಕ್ ಲೇಲ್ಯಾಂಡ್, ಸೆನ್ ಬಸ್ ಇಂಡಸ್ಟ್ರಿಯ ಜೊತೆಗೂಡಿ ಸ್ಥಳೀಯವಾಗಿ ಸೆಮಿ ಕ್ನಾಕ್ ಬಸ್‍ಗಳ ಉತ್ಪಾದನೆಗೆ ಸಹಕಾರ ನೀಡಲಿದೆ. ಅಶೋಕ್ ಲೇಲ್ಯಾಂಡ್‍ನ ಎಂಜಿನಿಯರ್‍ಗಳ ತಂಡವು ಸೆನ್ ಬಸ್‍ನಲ್ಲಿರುವ ತಾಂತ್ರಿಕ ತಂಡದೊಂದಿಗೆ ಸೇರಿ ವಾಹನಗಳ ಉತ್ಪಾದನೆ ಮಾಡಲಿದ್ದು, ಉತ್ತಮ ಗುಣಮಟ್ಟದ ವಾಹನಗಳನ್ನು ನೀಡಲಿದ್ದು, ನಂತರದಲ್ಲಿ ಸೇಲ್ಸ್ ಸಪೋರ್ಟ್ ನೀಡಲಿದೆ.

ಪೂರ್ಣ ಪ್ರಮಾಣದ ವರ್ಕ್‍ಶಾಪ್‍ಗಳನ್ನು ಸಹ ಡಕಾರ್‍ನಲ್ಲಿರುವ ಸೆನ್‍ಬಸ್ ಇಂಡಸ್ಟ್ರಿಯಲ್ಲಿ ನಡೆಸಲಾಗುವುದು ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
MOST READ: ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಅಶೋಕ್ ಲೇಲ್ಯಾಂಡ್ ಬಸ್ ಸೆಗ್‍ಮೆಂಟಿನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಸಾರಿಗೆ ವಾಹನಗಳನ್ನು ತಯಾರಿಸುವುದರಲ್ಲಿ, ವಿಶ್ವದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿದೆ. ಅಶೋಕ್ ಲೇಲ್ಯಾಂಡ್ ಕೈಗಾರಿಕೆಗಳಿಗಾಗಿ ಮತ್ತು ನೌಕೆಗಳಿಗಾಗಿ ಬಿಡಿಭಾಗಗಳನ್ನು ಮತ್ತು ಎಂಜಿನ್‍ಗಳನ್ನು ಸಹ ಉತ್ಪಾದಿಸುತ್ತದೆ. ಪ್ರಯಾಣಿಕ ಸಾರಿಗೆಯ ವಾಹನಗಳು 10 ರಿಂದ 74 ಸೀಟುಗಳನ್ನು ಹೊಂದಿರುತ್ತವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ನಾವು ರಸ್ತೆಗಳಲ್ಲಿ ಸಂಚರಿಸುವಾಗ ಅಶೋಕ್ ಲೇಲ್ಯಾಂಡ್ ವಾಹನಗಳನ್ನು ನೋಡಿದಾಗ ಅದು ನಮಗೆ ಸಾಮಾನ್ಯ ಸಂಗತಿಯಾಗಿ ಕಾಣುತ್ತದೆ. ಆದರೆ ಅಶೋಕ್ ಲೇಲ್ಯಾಂಡ್ ಕಂಪನಿಯು ವಿಶ್ವದಲ್ಲಿಯೇ ಬಸ್ ತಯಾರಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂಬುದೇ ಹೆಮ್ಮೆಯ ವಿಷಯವಾಗಿದೆ. ಫಿಫಾ ರ್‍ಯಾಂಕಿಂಗ್‍ನಲ್ಲಿ 23ನೇ ಸ್ಥಾನದಲ್ಲಿರುವ ಸೆನೆಗಲ್‍ನಂತಹ ದೇಶಕ್ಕೆ ಬಸ್ಸುಗಳನ್ನು ಪೂರೈಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.


Click it and Unblock the Notifications








