ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ತಮ್ಮ ಹೆಸರಿನಲ್ಲಿ ಗಿನ್ನಿಸ್ ವರ್ಲ್ದ್ ರೆಕಾರ್ಡ್‍‍ಗಳನ್ನು ಹೊಂದುವುದು ಹಲವರಿಗೆ ಸಾಧನೆಯ ವಿಷಯವಾಗಿದೆ. ಆಟೋ ಮೊಬೈಲ್ ಪ್ರಿಯರಿಗಂತೂ, ಅತಿ ವೇಗವಾಗಿ ವಾಹನವನ್ನು ಚಲಾಯಿಸಿ ರೆಕಾರ್ಡ್ ಮಾಡುವುದರಲ್ಲಿ ಸಿಗುವ ಖುಷಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ.

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಬ್ರಿಟನ್ನಿನ ಉದ್ಯಮಿಯೊಬ್ಬರು ವಿಚಿತ್ರವಾದ ವಿಶ್ವ ದಾಖಲೆಯೊಂದಕ್ಕೆ ಕೈ ಹಾಕಿ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆಟೋ ರಿಕ್ಷಾವನ್ನು ಅತಿ ವೇಗವಾಗಿ ಚಾಲನೆ ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಬ್ರಿಟನ್ನಿನ ಉದ್ಯಮಿ ಮ್ಯಾಟ್ ಎವೆರಾರ್ಡ್ ರವರು, ಆಟೋ ರಿಕ್ಷಾವನ್ನು ಇದುವರೆಗಿನ ಟಾಪ್ ಸ್ಪೀಡ್ ಆದ 74.30 ಮೈಲಿ ಅಥವಾ 119.58 ಕಿ.ಮೀ ವೇಗದಲ್ಲಿ ಚಾಲನೆ ಮಾಡಿದ್ದಾರೆ. ಈ ದಾಖಲೆಯನ್ನು ಮ್ಯಾಟ್ ಎವೆರಾರ್ಡ್ ರವರ ಬ್ಯಾಂಗ್‍‍ಕಾಕ್ ಟುಕ್ ಟುಕ್ ಎಂಬ ವಾಹನದಲ್ಲಿ ಮಾಡಲಾಗಿದ್ದು, ದಾಖಲೆ ನಿರ್ಮಿಸಲೆಂದೇ ಈ ಆಟೋವನ್ನು ಮಾಡಿಫೈ ಮಾಡಲಾಗಿತ್ತು.

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಪ್ರೆಸ್ ಅಸೋಸಿಯೆಷನ್‍‍ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿರುವಂತೆ, ಇಡೀ ರಾತ್ರಿಯ ಮಾತುಕತೆಯ ನಂತರ, ಎವೆರಾರ್ಡ್‍‍ರವರು ಈ ಟುಕ್ ಟುಕ್ ಅನ್ನು, ಇ-ಬೇ ವೆಬ್‍‍ಸೈಟಿನಲ್ಲಿ 3,000 ಪೌಂಡ್ (ಭಾರತೀಯ ಮೌಲ್ಯದಲ್ಲಿ ರೂ.2.74 ಲಕ್ಷ) ನೀಡಿ ಖರೀದಿಸಿದರು.

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಎವೆರಾರ್ಡ್‍‍ರವರ ಪತ್ನಿ ಈ ದುಬಾರಿ ಖರೀದಿಯ ಬಗ್ಗೆ ಜಗಳವಾಡಿದ್ದರು. ಆದರೆ ಎವೆರಾರ್ಡ್‍‍ರವರು ಈ ಖರೀದಿಯನ್ನು ಸಮರ್ಥಿಸಿಕೊಂಡು, ಹೊಸ ವಿಶ್ವ ದಾಖಲೆ ನಿರ್ಮಿಸಲು ಈ ವಾಹನವನ್ನು ಬಳಸಿದರು. 1971 ಬ್ಯಾಂಗ್‍‍ಕಾಕ್ ಟುಕ್ ಟುಕ್ ಮೊದಲಿಗೆ 350 ಸಿಸಿಯ ಟೂ ಸ್ಟ್ರೋಕ್ ಎಂಜಿನ್ ಹೊಂದಿತ್ತು.

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಈ ಎಂಜಿನ್‍‍ನಿಂದಾಗಿ ಅವರಿಗೆ ವಿಶ್ವ ದಾಖಲೆಯನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಮ್ಯಾಟ್ ರವರು ಈ ಟುಕ್ ಟುಕ್ ಅನ್ನು ಮಾಡಿಫೈ ಮಾಡಲು ಶುರು ಮಾಡಿದರು. ಮೊದಲ ಹೆಜ್ಜೆಯಾಗಿ ದೊಡ್ಡದಾದ ಎಂಜಿನ್ ಅಳವಡಿಸಲು ನಿರ್ಧರಿಸಿ, ದೈಹತ್ಸು ಕಂಪನಿಯ 1.3 ಲೀಟರಿನ ಫ್ಯೂಯಲ್ ಇಂಜೆಕ್ಟೆಡ್ ಮೋಟಾರ್ ಎಂಜಿನ್ ಅಳವಡಿಸಿದರು. ಇದರ ಜೊತೆಗೆ, ಎಂಜಿನ್‍‍ನನ್ನು ಟ್ಯೂನ್ ಮಾಡಿ, ಎರಡು ರೇಡಿಯೆಟರ್‍‍ಗಳನ್ನು ಅಳವಡಿಸಲಾಯಿತು.

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಆಟೋ ರಿಕ್ಷಾವನ್ನು ಹೆಚ್ಚಿನ ವೇಗದಲ್ಲಿ ನಿಯಂತ್ರಣದಲ್ಲಿಡಲು, ಟ್ರಾಕ್ ಗಳನ್ನು ಮಾರ್ಪಡಿಸಿ, ಅವುಗಳಿಗೆ ದಪ್ಪದಾದ ಟಯರ್‍‍ಗಳನ್ನು ಅಳವಡಿಸಲಾಯಿತು.

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಸಸ್ಪೆಂಷನ್ ಅನ್ನು ಕಡಿಮೆ ಮಾಡಿ, ಟುಕ್ ಟುಕ್ ಗೆ ಹೊಸ ವ್ಹೀಲ್, ಡ್ಯಾಷ್ ಬೋರ್ಡ್ ಮತ್ತು ಸೀಟುಗಳನ್ನು ಅಳವಡಿಸಲಾಯಿತು. ಈ ಎಲ್ಲಾ ಬದಲಾವಣೆಗಳಿಗಾಗಿ ಅವರಿಗೆ ಸುಮರು 20,000 ಪೌಂಡ್ ಅಂದರೆ ರೂ.18.25 ಲಕ್ಷಗಳಷ್ಟು ಖರ್ಚಾಯಿತು. ಈ ಹಿಂದಿನ ವಿಶ್ವದಾಖಲೆಯಲ್ಲಿ, ಪ್ರಯಾಣಿಕನನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು 109.43 ಕಿ.ಮೀ ವೇಗದಲ್ಲಿ ಆಟೋವನ್ನು ಚಲಾಯಿಸಿಲಾಗಿತ್ತು. ಈ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ನಿರ್ಮಿಸುವುದು ಎವೆರಾರ್ಡ್‍‍ರವರ ಗುರಿಯಾಗಿತ್ತು.

MOST READ: ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಮ್ಯಾಟ್ ಎವೆರಾರ್ಡ್‍‍ರವರ ಸೋದರ ಸಂಬಂಧಿ ರಸೆಲ್ ಶಿಯರ್‍‍ಮನ್‍‍ರವರು ಆಟೋದಲ್ಲಿ ಪ್ರಯಾಣಿಕರಾಗಿ ಕುಳಿತು, ಹೊಸ ವಿಶ್ವ ದಾಖಲೆ ನಿರ್ಮಿಸಲು ಸಹಕರಿಸಿದರು. ಈ ಜೋಡಿ ಸೇರಿ ಯಾರ್ಕ್ ಷೈರ್ ನಲ್ಲಿರುವ ಎಲ್ವಿಂಗ್ಟನ್ ಏರ್‍‍ಫೀಲ್ಡ್ ರನ್‍‍ವೇ ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದರು.

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಮ್ಯಾಟ್ ಎವೆರಾರ್ಡ್‍‍ರವರು ಮಾತನಾಡಿ, ಆರಂಭದಲ್ಲಿ ಆಟೋ ಹೆಚ್ಚು ಅಲುಗಾಡುತ್ತಿತ್ತು. ಸ್ವಲ್ಪ ವೇಗವಾಗಿ ಚಲಾಯಿಸಿದ ನಂತರ ಆಟೋದ ವ್ಹೀಲ್ ಸ್ವಲ್ಪ ಅಲುಗಾಡುತ್ತಿತ್ತು. ಅದೇ ವೇಗದಲ್ಲಿ ಮುಂದುವರೆದ ನಂತರ ಮತ್ತೆ ಅಲುಗಾಡಲೂ ಪ್ರಾರಂಭಿಸಿತಾದರೂ ನಂತರ ಸರಿ ಹೋಯಿತು. ನನಗೆ ಭಯವಾಗಲಿಲ್ಲ ಎಂದು ತಿಳಿಸಿದರು. ಎವೆರಾರ್ಡ್‍‍ರವರು ಟುಕ್ ಟುಕ್ ಗಾಡಿಯನ್ನು ಮತ್ತೆ ಮಾಡಿಫೈ ಮಾಡಿಸಿ, ತಮ್ಮ ಸ್ವಂತ ದಾಖಲೆಯನ್ನು ಮುರಿದು 100 ಮೈಲಿ (160 ಕಿ.ಮೀ)ವೇಗದಲ್ಲಿ ಆಟೋವನ್ನು ಚಲಾಯಿಸಬೇಕೆಂದಿದ್ದಾರೆ.

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿರುವ ಆಟೋರಿಕ್ಷಾಗಳು ಅಷ್ಟೇನೂ ಶಕ್ತವಲ್ಲದ ಸಿಂಗಲ್ ಸಿಲಿಂಡರ್ ಎಂಜಿನ್‍‍ಗಳನ್ನು ಹೊಂದಿದ್ದು, 200 ಸಿಸಿಯ ಸಾಮರ್ಥ್ಯದ ಆಸುಪಾಸಿನಲ್ಲಿವೆ. ಪವರ್ ಅಷ್ಟೇನೂ ಹೆಚ್ಚಿಲ್ಲದಿದ್ದರೂ, ಕೆಲವು ಆಟೋ ರಿಕ್ಷಾಗಳನ್ನು 60 ಕಿ.ಮೀ ವೇಗದಲ್ಲಿ ಚಲಾಯಿಸಬಹುದು, ಆದರೆ ಕೆಲವು ರಿಕ್ಷಾ ಚಾಲಕರು 70 ಕಿ.ಮೀ ವೇಗದಲ್ಲಿ ಓಡಿಸುವುದನ್ನು ನಾವು ನೋಡಿದ್ದೇವೆ.

ಜಗತ್ತಿನ ಅತಿ ವೇಗದ ಆಟೋರಿಕ್ಷಾದ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

1300 ಸಿಸಿ ಯ ಎಂಜಿನ್ ಅನ್ನು ಅಳವಡಿಸಿದ ನಂತರ ಟುಕ್ ಟುಕ್ ವಾಹನವನ್ನು ಹೆಚ್ಚು ವೇಗವಾಗಿ ಚಲಾಯಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಸಮಸ್ಯೆ ಇರುವುದು ಸ್ಥಿರತೆಯ ವಿಷಯದಲ್ಲಿ. ಆಟೋ ರಿಕ್ಷಾಗಳು, ವೇಗದಲ್ಲಿ ಒಂದೇ ರೀತಿಯ ಸ್ಥಿರತೆಯನ್ನು ಹೊಂದಿರುವುದಿಲ್ಲ. ಮ್ಯಾಟ್ ಎವೆರಾರ್ಡ್‍‍ರವರು ಆಟೋ ಚಲಾಯಿಸುವಾಗ ಆಟೋ ನಿಧಾನವಾಗುವ ಸಾಧ್ಯತೆಗಳಿದ್ದವು. ತಮ್ಮ ಮುಂದಿನ ಗುರಿಯಾದ 160 ಕಿ.ಮೀ ವೇಗವನ್ನು ಮುಟ್ಟಲು ಎವರಾರ್ಡ್ ರವರು ಸ್ಥಿರವಾಗಿರುವ ಟುಕ್ ಟುಕ್‍‍ನೊಂದಿಗೆ ಬರುವ ಸಾಧ್ಯತೆಗಳಿವೆ.

Most Read Articles

Kannada
English summary
Fastest Auto-Rickshaw In The World: 119.5 KM/H Gives English Businessman The Record - Read in kannada
Story first published: Friday, May 17, 2019, 10:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X