ಪುಟಿನ್ ಸ್ವಾಗತಿಸಿದ ಪ್ರಧಾನಿ ಮೋದಿ.. ಆ ಬಳಿಕ, ಗಮನ ಸೆಳೆದ ಆನೆ ಗಾತ್ರದ ಟೊಯೊಟಾ ಫಾರ್ಚುನರ್‌! ಬೆಲೆ, ವಿಶೇಷತೆಗಳೇನು?

ನಿನ್ನೆ ಸಂಜೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬರಮಾಡಿಕೊಂಡರು. ಆ ಬಳಿಕ, ಇಬ್ಬರು ನಾಯಕರು ಪ್ರಧಾನ ಮಂತ್ರಿ ಅವರ ಲೋಕ ಕಲ್ಯಾಣ್ ಮಾರ್ಗ್ ನಿವಾಸಕ್ಕೆ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಸದ್ಯ, ಈ ಕಾರಿನ ಮೇಲೆ ಎಲ್ಲರ ಗಮನವು ಕೇಂದ್ರೀಕರಿಸಿದೆ.

ಯಾವ ಕಾರದು:

ಪ್ರಧಾನಿ ನರೇಂದ್ರ ಮೋದಿ ಹಾಗೂ ವ್ಲಾಡಿಮಿರ್ ಪುಟಿನ್ ಅವರು, ಒಟ್ಟಿಗೆ ಟೊಯೊಟಾ ಫಾರ್ಚುನರ್ (Toyota Fortuner) ಕಾರಿನಲ್ಲಿ ತೆರಳಿದ್ದಾರೆ. ಇದು ಎಂಹೆಚ್ 01 ಇಎನ್ 5795 (MH 01 EN 5795) ನೋಂದಣಿ ಸಂಖ್ಯೆಯನ್ನು ಹೊಂದಿದೆ. ಬಿಎಸ್-VI ಎಮಿಷನ್ ಮಾನದಂಡಗಳ ಪ್ರಕಾರದಲ್ಲಿದ್ದು, 2024ರ ಏಪ್ರಿಲ್‌ನಲ್ಲಿ ನೋಂದಣಿ ಮಾಡಲಾಗಿದೆ. 2039ರ ಏಪ್ರಿಲ್ ತಿಂಗಳವರೆಗೆ ಫಿಟ್‌ನೆಸ್ ಸರ್ಟಿಫಿಕೇಟ್ ಚಾಲ್ತಿಯಲ್ಲಿದೆ. ವಿಶೇಷತೆವಾಗಿ ಈ ಕಾರನ್ನು ವಿಐಪಿಗಳ ಭದ್ರತೆಯ ಹಿತದೃಷ್ಟಿಯಿಂದ ಸಿದ್ದಪಡಿಸಲಾಗಿದೆ.

Pm Narendra Modi And Vladimir Putin Travelled Toyota Fortuner Suv Full Trending

ಪ್ರಧಾನಿ ಮೋದಿ ಬಳಸುವ ಕಾರು ಯಾವುದು:

ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ರೇಂಜ್ ರೋವರ್ ಸೆಂಟಿನೆಲ್ (Range Rover Sentinel) ಕಾರನ್ನು ಉಪಯೋಸಲಾಗುತ್ತದೆ. ಇದೊಂದು ಶಸ್ತ್ರಸಜ್ಜಿತ ಎಸ್‌ಯುವಿಯಾಗಿದೆ. ಇದರ ಗಾಜುಗಳು ಗುಂಡು ನಿರೋಧಕವಾಗಿವೆ. ರನ್-ಫ್ಲಾಟ್ ಟೈರ್‌ಗಳನ್ನು ಹೊಂದಿದೆ. ಪಂಕ್ಚರ್ ಆದರೂ 80 ಕೆಎಂಪಿಹೆಚ್ ವೇಗದಲ್ಲಿ ಸಂಚರಿಸಬಲ್ಲದು. ಇದರೊಂದಿಗೆ ಹೆಚ್ಚಿನ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪುಟಿನ್ ಉಪಯೋಗಿಸುವ ಕಾರಿನ ಬಗ್ಗೆ ಗೊತ್ತಾ:

ರಷ್ಯಾ ನಿರ್ಮಿತ ಔರಸ್ ಸೆನಾಟ್ ಲಿಮೋಸಿನ್ (Aurus Senat Limousine) ಸೆಡಾನ್‌ನ್ನು ಪುಟಿನ್‌ ಅವರಿಗೆ ಗರಿಷ್ಠ ಭದ್ರತೆ ಒದಗಸಲು ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ತಕ್ಕಂತೆ ಸಾಕಷ್ಟು ಶಸ್ತ್ರಸಜ್ಜಿತವಾಗಿದೆ. ಇದು 6/7 ಆಸನಗಳನ್ನು ಒಳಗೊಂಡಿದೆ. 4.4-ಲೀ. ಟ್ವಿನ್-ಟರ್ಬೊ ವಿ8 ಪೆಟ್ರೋಲ್ ಹೈಬ್ರಿಡ್ ಎಂಜಿನ್‌ನ್ನು ಹೊಂದಿದೆ. ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ & ಡಿಜಿಟಲ್ ಕ್ಲಸ್ಟರ್‌ಗಾಗಿ ಡುಯಲ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಗಳು, ಕ್ಲೇಮೇಟ್ ಕಂಟ್ರೋಲ್ ಸೆಟ್ಟಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಸ್ಟ್ಯಾಂಡರ್ಡ್ ಟೊಯೊಟಾ ಫಾರ್ಚುನರ್ ವಿಶೇಷತೆಗಳೇನು:

ಇದೊಂದು ಫುಲ್-ಸೈಜ್ ಎಸ್‌ಯುವಿಯಾಗಿದೆ. ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿದೆ. ರೂ.33.65 ಲಕ್ಷದಿಂದ ರೂ.48.85 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಸ್ಟ್ಯಾಂಡರ್ಡ್, ಲೆಜೆಂಡರ್, ಜಿಆರ್ ಎಸ್ ಮತ್ತು ಲೀಡರ್ ಎಡಿಷನ್ ಎಂಬ 4 ಆಕರ್ಷಕವಾದ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಕಾರು ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗ‌ಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 20-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್, ಸಿಲ್ವರ್ ಮೆಟಾಲಿಕ್, ಫ್ಯಾಂಟಮ್ ಬ್ರೌನ್ ಹಾಗೂ ಪ್ಲಾಟಿನಂ ವೈಟ್ ಪರ್ಲ್ ಬಣ್ಣಗಳೊಂದಿಗೂ ದೊರೆಯುತ್ತದೆ. 225 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,745 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ 'ಫಾರ್ಚುನರ್' 2.8-ಲೀ. ಮೈಲ್ಡ್ ಹೈಬ್ರಿಡ್ ಡೀಸೆಲ್, 2.8-ಲೀ. ಡೀಸೆಲ್ ಮತ್ತು 2.7-ಲೀ. ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 10.3 ರಿಂದ 14 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 190 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಇದು 7 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡಬಹುದು. 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕನೆಕ್ಟ್ಡ್ ಕಾರ್ ಟೆಕ್, 6 ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್, ಕಿಕ್-ಟು-ಓಪನ್ ಪವರ್ಡ್ ಟೈಲ್‌ಗೇಟ್ ಮತ್ತು ಡುಯಲ್-ಜೋನ್ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 7-ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Friday, December 5, 2025, 13:29 [IST]
English summary
Pm narendra modi and vladimir putin travelled toyota fortuner suv full trending
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+