ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಭಾರತದಲ್ಲಿ ದಿನಂಪ್ರತಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಾಹನಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಮಹಾನಗರಗಳಲ್ಲಿ ಈ ರೀತಿಯಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯಂತೂ ಹೇಳ ತೀರದು. ಇಂತಹವರ ವಿರುದ್ಧ ಪೊಲೀಸರು ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತಾರೆ.

ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಸಂಚಾರಿ ನಿಯಮವನ್ನು ಉಲ್ಲಂಘಿಸಿದ ವಾಹನ ಸವಾರನೇ ಟ್ರಾಫಿಕ್ ಪೊಲೀಸ್ ಜೀವಕ್ಕೆ ಸಂಚಕಾರ ತಂದಿಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ತಡೆದ ಪೊಲೀಸಪ್ಪನ ಮೇಲೆಯೇ ಭೂಪನೊಬ್ಬ ತನ್ನ ಸ್ಕೂಟರ್ ಹರಿಸಿದ್ದಾನೆ. ಈ ಇಡೀ ಘಟನೆ ಸಿಸಿಟಿ‍‍ವಿಯಲ್ಲಿ ಸೆರೆಯಾಗಿದ್ದು, ಪ್ರತಿ ದಿನ ಹಗಲಿರುಳು ಎನ್ನದೇ ಕಾರ್ಯನಿರ್ವಹಿಸುವ ನಮ್ಮ ಪೊಲೀಸರ ಜೀವವೆಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡದೇ ಇರದು.

ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಈ ವೀಡಿಯೋದಲ್ಲಿ ಸೆರೆಯಾಗಿರುವಂತೆ ಎಂದಿನಂತೆ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರ ಕಾರ್ಯಾಚರಣೆ ನಡೆದಿತ್ತು. ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಗಸ್ತು ನಿರ್ವಹಣೆಯ ಕಾರಿನ ಬಳಿ ನಿಂತು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.

ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಈ ವೇಳೆ ಹೆಲ್ಮೆಟ್ ಇಲ್ಲದೇ ಸ್ಕೂಟರ್ ಚಲಾಯಿಸುತ್ತಿದ್ದ ಚಾಲಕ ಕಣ್ಣಿಗೆ ಬಿದ್ದೊಡನೆ ಒಬ್ಬ ಪೊಲೀಸ್ ಅಧಿಕಾರಿ ರಸ್ತೆ ಮಧ್ಯೆ ಬಂದು ಸ್ಕೂಟರ್ ಸವಾರನನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಅಲ್ಲಿ ನಡೆದಿದ್ದೇ ಬೇರೆ.

ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಸ್ಕೂಟರ್ ನಿಲ್ಲಿಸುವಂತೆ ದೂರದಿಂದಲೇ ಸೂಚಿಸಿದ ಪೊಲೀಸ್ ಅಧಿಕಾರಿಯು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮತ್ತಷ್ಟು ಹತ್ತಿರಕ್ಕೆ ಬಂದಿದ್ದಾರೆ. ಇಷ್ಟಾದರೂ ಪೊಲೀಸರ ಸೂಚನೆಗೆ ಕ್ಯಾರೇ ಎನ್ನದ ಸ್ಕೂಟರ್ ಸವಾರ ಮಾತ್ರ ವೇಗವಾಗಿ ನುಗ್ಗಲು ಯತ್ನಿಸಿದ್ದಾನೆ.

ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಅತಿ ವೇಗದಲ್ಲಿದ್ದಾಗ ಸ್ಕೂಟರ್ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸ್ ಅಧಿಕಾರಿಯ ಮೇಲೆಯೇ ಗಾಡಿ ಚಲಾಯಿಸಿದ್ದು, ಈ ವೇಳೆ ಪೊಲೀಸ್ ಅಧಿಕಾರಿ ಜೊತೆ ಸ್ಕೂಟರ್ ಸವಾರ ಕೂಡಾ ನೆಲಕ್ಕೆ ಬಿದ್ದಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಓಡಿ ಬಂದು ನೆಲಕ್ಕೆ ಬಿದ್ದಿದ್ದ ಪೊಲೀಸ್ ಮತ್ತು ಸ್ಕೂಟರ್ ಸವಾರನನ್ನು ರಕ್ಷಣೆ ಮಾಡಿದ್ದಾರೆ.

ಸ್ಕೂಟರ್ ಸವಾರನು ಪೊಲೀಸ್ ಮೇಲೆ ಸ್ಕೂಟರ್ ಹರಿಸಿರುವ ವೀಡಿಯೋ ಇಲ್ಲಿದೆ ನೋಡಿ.

MOST READ: ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಸ್ಕೂಟರ್ ಸವಾರನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿರುವ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಇಲ್ಲಿರುವ ಪ್ರಶ್ನೆಯೆಂದರೆ, ಇದೊಂದು ಪ್ರಮುಖ ಘಟನೆಯೆಂದು ಬಿಂಬಿತವಾಗಿಯೇ ಇಲ್ಲ. ಈ ರೀತಿಯ ಚಾಲಕರು ದೊಡ್ಡ ಸಂಖ್ಯೆಯಲ್ಲಿ ಬಹುತೇಕ ಎಲ್ಲಾ ನಗರಗಳಲ್ಲಿ ಇದ್ದು, ಅನಕ್ಷರಸ್ಥರಿಗಿಂತ ವಿದ್ಯಾವಂತರೇ ಹೆಚ್ಚು ಈ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವಾಹನ ತಪಾಸಣೆ ವೇಳೆ ಪೊಲೀಸ್ ಮೇಲೆಯೇ ಸ್ಕೂಟರ್ ಹರಿಸಿದ ಭೂಪ !!

ಪೊಲೀಸ್ ಇಲಾಖೆ ಇದರ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚಿ ನಿಯಮಗಳನ್ನು ಉಲ್ಲಂಘಿಸುವವರು ಎಷ್ಟೇ ದೊಡ್ಡವರಿರಲಿ, ಮುಲಾಜಿಲ್ಲದೇ ಕಠಿಣ ಕ್ರಮಗಳನ್ನು ಕೈಗೊಂಡಾಗ ಮಾತ್ರ ಈ ರೀತಿಯ ಪ್ರಕರಣಗಳನ್ನು ಮಟ್ಟ ಹಾಕಬಹುದು.

More from DriveSpark

Article Published On: Thursday, May 16, 2019, 14:33 [IST]
English summary
Reckless Scooter Rider Rams into Traffic Police When Asked To Stop - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+