ಶುರುವಾಯ್ತು ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ ಬುಕ್ಕಿಂಗ್

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹೆಚ್ಚಿನ ಕಾರುಗಳು ಎಸ್‍‍ಯುವಿಯಾಗಿರುತ್ತವೆ. ಜನರೂ ಸಹ ಎಸ್‍‍ಯುವಿ ಕಾರುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಬಹುತೇಕ ಎಲ್ಲಾ ಕಂಪನಿಗಳು ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ.

ಶುರುವಾಯ್ತು ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ ಬುಕ್ಕಿಂಗ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಆಸ್ಟನ್ ಮಾರ್ಟಿನ್ ತನ್ನ ಡಿಬಿ‍ಎಕ್ಸ್ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಬ್ರಿಟನ್ ಮೂಲದ ಆಸ್ಟನ್ ಮಾರ್ಟಿನ್ ಹೈ ಎಂಡ್ ಸ್ಪೋರ್ಟ್ಸ್ ಹಾಗೂ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಮಾರಾಟ ಮಾಡುವುದಕ್ಕೆ ಹೆಸರುವಾಸಿಯಾಗಿದೆ.

ಶುರುವಾಯ್ತು ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ ಬುಕ್ಕಿಂಗ್

ಆಸ್ಟನ್ ಮಾರ್ಟಿನ್ ಕಂಪನಿಯು ತನ್ನ 106 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಷಾರಾಮಿ ಎಸ್‍‍ಯುವಿ ಕಾರ್ ಅನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಇತ್ತೀಚಿಗೆ ಬಿಡುಗಡೆಯಾದ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ, ಐಷಾರಾಮಿ ಕಾರು ಪ್ರಿಯರ ಗಮನವನ್ನು ಸೆಳೆದಿದೆ.

ಶುರುವಾಯ್ತು ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ ಬುಕ್ಕಿಂಗ್

ಸಂದರ್ಶನವೊಂದರಲ್ಲಿ ಮಾತನಾಡಿರುವ ಆಸ್ಟನ್ ಮಾರ್ಟಿನ್ ಅಧ್ಯಕ್ಷರಾದ ಆಂಡಿ ಬಾಲ್ರಮರ್‍‍ರವರು, ಎಸ್‍‍ಯುವಿ ಮಾರುಕಟ್ಟೆಯು ಕಾರು ಕಂಪನಿಗಳಿಗೆ ಪ್ರಮುಖವಾದ ವ್ಯವಹಾರವಾಗಿದೆ. ಬಹುತೇಕ ಎಲ್ಲಾ ಕಾರು ಕಂಪನಿಗಳು ಎಸ್‍‍ಯುವಿ ತಯಾರಿಸುವಲ್ಲಿ ನಿರತವಾಗಿವೆ ಎಂದು ಹೇಳಿದರು.

ಶುರುವಾಯ್ತು ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ ಬುಕ್ಕಿಂಗ್

ಈ ಹೊಸ ಎಸ್‍‍ಯುವಿಯನ್ನು ಮುಂದಿನ ವರ್ಷದ ಏಪ್ರಿಲ್ ಹಾಗೂ ಜೂನ್ ತಿಂಗಳ ಅವಧಿಯಲ್ಲಿ ಪ್ರಪಂಚದ್ಯಾಂತವಿರುವ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುವುದು. ವಿನ್ಯಾಸ ಹಾಗೂ ಟೆಕ್ನಿಕಲ್ ಅಂಶಗಳಲ್ಲಿ ಬದಲಾವಣೆ ಮಾಡಬೇಕಿರುವ ಕಾರಣಕ್ಕೆ ಚೀನಾದಲ್ಲಿ ತಡವಾಗಿ ಮಾರಾಟ ಮಾಡಲಾಗುವುದು.

ಶುರುವಾಯ್ತು ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ ಬುಕ್ಕಿಂಗ್

ಈ ಎಸ್‍‍ಯುವಿಯನ್ನು ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ನಂತರ ಭಾರತದಲ್ಲಿಯೂ ಬುಕ್ಕಿಂಗ್ ಮಾಡಲಾಗಿದೆ ಎಂದು ಆಂಡಿ ಬಾಲ್ರಮರ್‍‍ರವರು ಹೇಳಿದರು. ಭಾರತದಲ್ಲಿ ಮುಂದಿನ ವರ್ಷ ಹಲವಾರು ಹೊಸ ಡೀಲರ್‍‍ಶಿಪ್‍‍ಗಳನ್ನು ಆರಂಭಿಸುವುದಾಗಿ ಅವರು ತಿಳಿಸಿದರು.

ಶುರುವಾಯ್ತು ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ ಬುಕ್ಕಿಂಗ್

ಇದರಿಂದಾಗಿ ಭಾರತದಲ್ಲಿನ ಮಾರಾಟ ಹಾಗೂ ಮಾರಾಟದ ನಂತರದ ಸೇವೆಯಲ್ಲಿ ಗುಣಮಟ್ಟ ಹೆಚ್ಚಾಗಲಿದೆ ಎಂದು ಹೇಳಿದರು. ಆಸ್ಟನ್ ಮಾರ್ಟಿನ್ ಕಂಪನಿಯು ಪ್ರತಿ ವರ್ಷ ಭಾರತದಲ್ಲಿ ಒಟ್ಟು ಮಾರಾಟವಾಗುವ ಕಾರುಗಳ ಪೈಕಿ 15%ನಿಂದ 20% ನಷ್ಟು ಕಾರುಗಳನ್ನು ಮಾರಾಟ ಮಾಡುತ್ತದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಶುರುವಾಯ್ತು ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ ಬುಕ್ಕಿಂಗ್

ಹೊಸ ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿಯನ್ನು ಕಳೆದ ವಾರ ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಎಸ್‍‍ಯುವಿಯಲ್ಲಿ ಎಲ್‍ಇ‍‍ಡಿ ಹೆಡ್‍‍ಲೈಟ್, ಎಲ್‍ಇ‍‍ಡಿ ಡೇ ಟೈಮ್ ಲೈಟ್ ಹಾಗೂ ಎಲ್‍ಇ‍‍ಡಿ ಟೇಲ್ ಲೈಟ್‍‍ಗಳಿವೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಶುರುವಾಯ್ತು ಆಸ್ಟನ್ ಮಾರ್ಟಿನ್ ಡಿಬಿ‍ಎಕ್ಸ್ ಎಸ್‍‍ಯುವಿ ಬುಕ್ಕಿಂಗ್

ಈ ಕಾರಿನಲ್ಲಿ 4.0 ಲೀಟರಿನ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 542 ಬಿ‍ಹೆಚ್‍‍ಪಿ ಪವರ್ ಹಾಗೂ 700 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 9 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೀಡಲಾಗುತ್ತದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.35 ಕೋಟಿಗಳಾಗಿದೆ.

Source: Autocar Pro

More from DriveSpark

Article Published On: Monday, November 25, 2019, 16:41 [IST]
English summary
Aston martin starts bookings for dbx suv in India - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+