Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎ4 ಮತ್ತು ಕ್ಯೂ7 ಲೈಫ್‍ಸ್ಟೈಲ್ ಎಡಿಷನ್ ಬಿಡುಗಡೆ ಮಾಡಿದ ಆಡಿ
ಜರ್ಮನ್ ಕಾರು ತಯಾರಕ ಕಂಪನಿ ಆಡಿ ತನ್ನ ಲೈಫ್‍ಸ್ಟೈಲ್ ಎಡಿಷನ್‍ಗಳಾದ ಆಡಿ ಎ4 ಮತ್ತು ಆಡಿ ಕ್ಯೂ7 ಕಾರುಗಳನ್ನು ಬಿಡುಗಡೆ ಮಾಡಿದೆ. ಈ ಲೈಫ್ ಸ್ಟೈಲ್ ಎಡಿಷನ್ ಗಳು ಹೆಚ್ಚು ಫೀಚರ್‍ಗಳನ್ನು ಹೊಂದಿದ್ದು, ಮಾರಾಟದಲ್ಲಿ ಏರಿಕೆ ಕಾಣುವ ಸಾಧ್ಯತೆಗಳಿವೆ.

ಆಡಿ ಕಂಪನಿಯ ಹೇಳಿಕೆಯ ಪ್ರಕಾರ, ಲೈಫ್‍ಸ್ಟೈಲ್ ಎಡಿಷನ್ ನ ಕ್ಯೂ7 ಸ್ಪೋರ್ಟ್ಸ್ ಕಾರು ಅನೇಕ ಹೊಸ ಫೀಚರ್ ಗಳನ್ನು ಒಳಗೊಂಡಿದೆ. ಅವುಗಳೆಂದರೆ ರೇರ್ ಸೀಟ್ ಎಂಟರ್ ಟೇನ್ ಮೆಂಟ್ ಸಿಸ್ಟಂ, ಸೈಡ್ ರನ್ನಿಂಗ್ ಬೋರ್ಡ್‍ಗಳು, ಎಲ್ಇಡಿ ಎಂಟ್ರಿ ಲೈಟ್ಸ್ ಮತ್ತು ಎಸ್‍ಪ್ರೆಸ್ಸೋ ಮೊಬಿಲ್. ಲೈಫ್‍ಸ್ಟೈಲ್ ಎಡಿಷನ್ ಎ4 ನಲ್ಲಿ ಟೇಲ್‍ಗೇಟ್ ಸ್ಪಾಯಿಲರ್ ಮತ್ತು ಸ್ಮೋಕ್ಡ್ ಎಲ್ಇಡಿ ಟೇಲ್ ಲೈಟ್ ಗಳಿವೆ. ಆಡಿ ಕಂಪನಿಯ ಇಂಡಿಯಾ ಹೆಡ್ ರಾಹಿಲ್ ಅನ್ಸಾರಿ ರವರು ಮಾತನಾಡಿ ಆಡಿ ಎ6 ಲೈಫ್‍ಸ್ಟೈಲ್ ಬಿಡುಗಡೆಯ ನಂತರ ನಮಗೆ ಗ್ರಾಹಕರಿಂದ ಸಿಕ್ಕ ಅದ್ಭುತ ಪ್ರತಿಕ್ರಿಯೆ ಮತ್ತು ಬೇಡಿಕೆಯ ಹಿನ್ನೆಲೆಯಲ್ಲಿ ನಾವು ಜನಪ್ರಿಯ ಮಾದರಿಗಳಾದ ಆಡಿ ಕ್ಯೂ7 ಮತ್ತು ಆಡಿ ಎ4 ಲೈಫ್‍ಸ್ಟೈಲ್ ಎಡಿಷನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಆಡಿ ಕ್ಯೂ7 ಲಗ್ಷುರಿ ಎಸ್‍ಯುವಿ ಸೆಗ್ ಮೆಂಟಿನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದ್ದು, ವಿಐಪಿಗಳು, ಪ್ರಭಾವಿಗಳು ಮತ್ತು ಉದ್ಯಮಿಗಳ ನಡುವೆ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಆಡಿ ಎ4 ಆಡಿ ಎ ಸರಣಿಯಲ್ಲಿ ಹೆಚ್ಚು ಮಾರಾಟವಾಗುತ್ತಿದ್ದು, ಈಗ ಹಿಂದೆಂದಿಗಿಂತ ಹೆಚ್ಚು ಆಕರ್ಷಣಿಯವಾಗಿದೆ.

ಆಡಿ ಕ್ಯೂ7 ಮತ್ತು ಆಡಿ ಎ4 ಲೈಫ್ ಸ್ಟೈಲ್ ಎಡಿಷನ್‍ಗಳ ಬಿಡುಗಡೆಯ ನಂತರ, ನಮ್ಮ ಗ್ರಾಹಕರಿಗೆ ಹೆಚ್ಚು ಫೀಚರ್‍ಗಳನ್ನು ಮತ್ತು ಹೊಸ ಬಗೆಯ ಆಕ್ಸೆಸರೀಸ್ ಗಳನ್ನು ನಮ್ಮ ಭಾರತೀಯ ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು. ಆಡಿ ಕಂಪನಿಯ ಪ್ರಕಾರ ಹಿಂಬದಿಯಲ್ಲಿ ಕುಳಿತುಕೊಳ್ಳುವ ಗ್ರಾಹಕರಿಗಾಗಿ ಟ್ವಿನ್ ಸ್ಕ್ರೀನ್ ಎಂಟರ್ ಟೈನ್‍ಮೆಂಟ್ ಸಿಸ್ಟಂ ಫೀಚರ್ ನೀಡಲಾಗಿದೆ.

ಆರ್‍ಎಸ್ಇ ರಿಮೋಟ್ ಎಂಬ ಉಚಿತ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ನೀಡಲಾಗಿದೆ. ಆರ್ ಎಸ್ಇ ರಿಮೋಟ್ ಆಂಡ್ರಾಯ್ಡ್ ಮತ್ತು ಆಪಲ್ ಫೋನ್‍ಗಳಲ್ಲಿ ಲಭ್ಯವಿದೆ. ಈ ಎಂಟರ್‍ಟೈನ್‍ಮೆಂಟ್ ಸಿಸ್ಟಂ 10 ಇಂಚಿನ ಹೆಚ್‍ಡಿ ರೆಡಿ ಸ್ಕ್ರೀನ್ ಮತ್ತು 16 ಜಿಬಿ ಇಂಟರ್ನಲ್ ಮೆಮೋರಿ ಒಳಗೊಂಡಿದೆ. ಈ ಲೈಫ್ ಸ್ಟೈಲ್ ಎಡಿಷನ್ ನಲ್ಲಿರುವ ಎಂಟ್ರಿ ಲೈಟ್ ಗಳು ಆ ಮಾದರಿಯ ಕಾರುಗಳ ಬ್ಯಾಡ್ಜ ಗಳನ್ನು ಬಿಂಬಿಸುತ್ತವೆ. ಆಡಿ ಕ್ಯೂ7 ನ ಮೇಲಿರುವ ಕ್ವಾಟ್ರೋ ಮತ್ತು ಎ4 ಕಾರಿನ ಮೇಲಿರುವ ಆಡಿ ಲೊಗೋ ಜೊತೆಯಲ್ಲಿ ಕ್ಯೂ 7 ನಲ್ಲಿ ರೂಫ್ ಮೌಂಟೆಡ್ ಸ್ಕಿ ಲಗೇಜ್ ಬಾಕ್ಸ್ ಗಳನ್ನು ನೀಡಲಾಗಿದೆ. ಪ್ರತಿಯೊಂದು ಬಾಕ್ಸ್ ಗಳ ತೂಕವು 150 ಕಿಲೋ ಗ್ರಾಂ ನಷ್ಟಿದೆ. ಈ ಎಸ್‍ಯುವಿ ಯಲ್ಲಿ ಎಸ್‍ಪ್ರೆಸ್ಸೊ ಮೊಬಿಲ್ ಯುನಿಟ್ ಮತ್ತು ಕೊಲ್ಡ್ ಸ್ಟೋರೆಜ್ ಬಾಕ್ಸ್ ಗಳು ಸಹ ಸೇರಿವೆ. ಅನ್ಸಾರಿ ಯವರ ಪ್ರಕಾರ ನಾವು ವಿಶ್ವ ದರ್ಜೆಯ ಪ್ರಾಡಕ್ಟ್ ಗಳನ್ನು ಭಾರತೀಯ ಗ್ರಾಹಕರಿಗೆ ಒದಗಿಸುತ್ತಿದ್ದು, ಗ್ರಾಹಕರ ಸಂತೃಪ್ತಿಯೇ ನಮ್ಮ ಆದ್ಯತೆಯಾಗಿದೆ. ಕಾರು ಡೆಲಿವರಿಗಾಗಿ ಹೆಚ್ಚುವರಿ ಟಚ್ ಪಾಯಿಂಟ್ ಗಳನ್ನು ತೆರೆಯಲು ಮತ್ತು ಸರ್ವಿಸ್ ನೀಡಲು ನಾವು ಬದ್ದರಾಗಿದ್ದು, ಈ ನಿಟ್ಟಿನಲ್ಲಿ ನಾವು ಈಗಾಗಲೇ ವಿಜಯವಾಡದಲ್ಲಿ ಆಡಿ ಸರ್ವಿಸ್ ಅನ್ನು ಉದ್ಘಾಟಿಸಿದ್ದೇವೆ ಎಂದು ತಿಳಿಸಿದರು.
MUST READ: ನ್ಯೂಯಾರ್ಕ್‍ನಲ್ಲಿ ಅನಾವರಣಗೊಂಡ ಮರ್ಸಿಡಿಸ್ ಎಎಂಜಿ ಜಿಎಲ್‍ಸಿ 63

ಆಡಿ ಲೈಫ್‍ಸ್ಟೈಲ್ ಎಡಿಷನ್ ಕ್ಯೂ 7 ನ ಬೆಲೆಯನ್ನು ಭಾರತದ ಎಕ್ಸ್ ಶೋರೂಂ ದರದಂತೆ 75.82 ಲಕ್ಷಗಳೆಂದು ಮತ್ತು ಆಡಿ ಲೈಫ್‍ಸ್ಟೈಲ್ ಎಡಿಷನ್ ಎ4 ನ ಬೆಲೆಯನ್ನು ಭಾರತದ ಎಕ್ಸ್ ಶೋರೂಂ ದರದಂತೆ 43.09 ಲಕ್ಷಗಳೆಂದು ನಿಗದಿಪಡಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ವಿವಿಧ ಕಾರು ತಯಾರಕರು ತಮ್ಮ ಪ್ರಾಡಕ್ಟ್ ಗಳನ್ನು ವಿಭಿನ್ನವಾಗಿಸಲು ಅನೇಕ ಹೊಸ ಮಾದರಿಯ ಕಾರುಗಳನ್ನು ತಯಾರಿಸುತ್ತಿದ್ದಾರೆ. ಕಾರು ತಯಾರಕರಾದ ಆಡಿ, ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯೂ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿ ತಮ್ಮ ಮಾದರಿಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಎಸ್ಸ್ ಪ್ರೆಸ್ಸೊ ಮೊಬಿಲ್ ಅನ್ನು ಚಾಲಕ ಮತ್ತು ಪ್ರಯಾಣಿಕರಿಗೆ ನೀಡುವ ಮೂಲಕ ಆಡಿ ಹೊಸ ಹೊಸ ಸೌಲಭ್ಯಗಳನ್ನು ನೀಡುತ್ತಿದ್ದು, ಗ್ರಾಹಕರಿಗೆ ಹೊಸ ಬಗೆಯ ಅನುಭವವನ್ನು ನೀಡುತ್ತಿದೆ.