ಅನಾವರಣಗೊಂಡ ಬಹುನಿರೀಕ್ಷಿತ ಆಡಿ ಕ್ಯೂ5 ಹೈಬ್ರಿಡ್ ಆವೃತ್ತಿ

ಆಡಿ ಈ ವರ್ಷಾರಂಭದಲ್ಲಿ ನಡೆದ ಜಿನೀವಾ ಮೋಟಾರ್ ಶೋದಲ್ಲಿ ಹೈಬ್ರಿಡ್ ಮಾದರಿಯ ಕಾರನ್ನು ಅನಾವರಣಗೊಳಿಸಿತ್ತು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿರಲಿಲ್ಲ. ಆಡಿ ಕಂಪನಿಯು ಈಗ ಅಧಿಕೃತವಾಗಿ ತನ್ನ ಕ್ಯೂ5 ಪ್ಲಗ್ - ಇನ್ ಹೈಬ್ರಿಡ್ ವಾಹನದ ಬಗ್ಗೆ ಘೋಷಿಸಿದ್ದು, 55 ಟಿ‍ಎಫ್‍‍ಸಿ‍ಐ ಕ್ವಾಟ್ರೋ ಎಂದು ಹೆಸರಿಡಲಾಗಿದೆ.

ಅನಾವರಣಗೊಂಡ ಬಹುನಿರೀಕ್ಷಿತ ಆಡಿ ಕ್ಯೂ5 ಹೈಬ್ರಿಡ್ ಆವೃತ್ತಿ

ಹೊಸ ಕ್ಯೂ5 ಪ್ಲಗ್ ಇನ್ ವಾಹನದಲ್ಲಿ 2.0 ಲೀಟರಿನ ಟರ್ಬೊಚಾರ್ಜ್ 4 ಸಿಲಿಂಡರ್ ಎಂಜಿನ್ ಇದ್ದು, ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಪ್ರೊಪಲ್‍‍ಷನ್ ಹೊಂದಿದೆ. 367 ಬಿಹೆಚ್‍‍ಪಿ ಮತ್ತು 500 ಎನ್‍ಎಂ ಟಾರ್ಕ್ ಉತ್ಪಾದಿಸಿ, ಕ್ಯೂ5 ವಾಹನವನ್ನು 5.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗದಲ್ಲಿ ಚಲಿಸುವಂತೆ ಮಾಡುತ್ತದೆ. ಈ ಕಾರಿನ ಗರಿಷ್ಟ ವೇಗವು ಪ್ರತಿ ಗಂಟೆಗೆ 238 ಕಿ.ಮೀ ಆಗಿದೆ. ಮೊದಲಿದ್ದ ಎಸ್‍‍ಕ್ಯೂ 5 ವಾಹನಕ್ಕಿಂತ 13 ಬಿ‍‍ಹೆಚ್‍‍ಪಿ ಹೆಚ್ಚು ಉತ್ಪಾದಿಸುತ್ತದೆ. ಎಸ್‍‍ಕ್ಯೂ5 ವಾಹನವು, 3.0 ಲೀಟರ್ ಟರ್ಬೊಚಾರ್ಜ್‍‍ನ ವಿ6 ಎಂಜಿನ್ ಹೊಂದಿತ್ತು.

ಅನಾವರಣಗೊಂಡ ಬಹುನಿರೀಕ್ಷಿತ ಆಡಿ ಕ್ಯೂ5 ಹೈಬ್ರಿಡ್ ಆವೃತ್ತಿ

ಕ್ಯೂ5 ಹೈಬ್ರಿಡ್ ಕಾರು, ಎಸ್ ಸರಣಿಯ ಕಾರಿಗಿಂತ ಅಧಿಕ ಪವರ್ ಹೊಂದಿದೆ. ಎಲೆಕ್ಟ್ರಿಕ್ ಗೇರ್ ಗಳನ್ನು ಹೊಂದಿದೆ. ಆಡಿ ಕಂಪನಿಯ ಪ್ರಕಾರ ಕ್ಯೂ 5 ಪ್ಲಗ್ ಇನ್ ಕಾರು, ಎಲೆಕ್ಟ್ರಿಕ್ ಚಾರ್ಜ್ ಹೊಂದಿದ್ದಾಗ 40 ಕಿ.ಮೀ ವರೆಗೆ ಚಲಿಸುತ್ತವೆ. ಈ ಕಾರಿನ ಬೂಟ್ ಕಂಪಾರ್ಟ್‍‍ಮೆಂಟ್ ಕೆಳಗೆ 14.1 ಕಿಲೋ ವ್ಯಾಟ್‍‍ನ ಬ್ಯಾಟರಿ ಅಳವಡಿಸಲಾಗಿದೆ.

ಅನಾವರಣಗೊಂಡ ಬಹುನಿರೀಕ್ಷಿತ ಆಡಿ ಕ್ಯೂ5 ಹೈಬ್ರಿಡ್ ಆವೃತ್ತಿ

ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್‍‍ನಲ್ಲಿ 7 ಸ್ಪೀಡಿನ ಟ್ರಾನ್ಸ್ ಮಿಷನ್ ಇದ್ದು, ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಡ್ರೈವ್ ಟಾರ್ಕ್ ಗೆ ಬದಲಾಯಿಸುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಟಾಪ್ ಸ್ಪೀಡ್ 135 ಕಿ.ಮೀ ಆಗಿದೆ. ಆಡಿ ಕಂಪನಿಯ ಹೇಳಿಕೆ ಪ್ರಕಾರ 400 ವೊಲ್ಟ್ ನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಎರಡೂವರೆ ಗಂಟೆ ಬೇಕಾಗುತ್ತದೆ.

ಅನಾವರಣಗೊಂಡ ಬಹುನಿರೀಕ್ಷಿತ ಆಡಿ ಕ್ಯೂ5 ಹೈಬ್ರಿಡ್ ಆವೃತ್ತಿ

220 ವೊಲ್ಟ್ ನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಆರು ಗಂಟೆಗಳು ಬೇಕಾಗುತ್ತದೆ. ಈ ವಾಹನದಲ್ಲಿ ಮೂರು ಡ್ರೈವಿಂಗ್ ಮೋಡ್‍‍ಗಳಿವೆ. ಮೊದಲಿಗೆ ಈ ಕಾರು ಆಟೋಮ್ಯಾಟಿಕ್ ಆಗಿ ಇವಿ ಮೋಡ್‍‍ಗೆ ಬಂದು, ಆಕ್ಸೆಲೆರೇಟರ್ ಪೆಡಲ್ ಪುಶ್ ಮಾಡುವವರೆಗೂ ಎಂಜಿನ್ ಆನ್ ಆಗುವುದನ್ನು ತಪ್ಪಿಸುತ್ತದೆ. ನ್ಯಾವಿಗೇಶನ್ ಆಕ್ಟಿವ್ ಆಗಿದ್ದರೆ, ಹೈಬ್ರಿಡ್ ಮೋಡ್‍‍ಗೆ ಬದಲಾಗುತ್ತದೆ ಅಥವಾ ಹೈಬ್ರಿಡ್ ಮೋಡ್ ಅನ್ನು ಮ್ಯಾನುಯಲ್ ಆಗಿ ಆಯ್ಕೆಮಾಡಿಕೊಳ್ಳಬೇಕಾಗುತ್ತದೆ.

ಅನಾವರಣಗೊಂಡ ಬಹುನಿರೀಕ್ಷಿತ ಆಡಿ ಕ್ಯೂ5 ಹೈಬ್ರಿಡ್ ಆವೃತ್ತಿ

ಇದರಲ್ಲಿರುವ ತಂತ್ರಜ್ಞಾನವು ರಸ್ತೆ ಹೇಗಿದೆ ಎಂಬುದರ ಮೇಲೆ, ಕ್ಯೂ5 ವಾಹನವು, ಯಾವಾಗ ಇವಿ ಮೋಡ್ ಅಥವಾ ಹೈಬ್ರಿಡ್ ಮೋಡ್ ಬಳಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಇದಕ್ಕಾಗಿ ಈ ವಾಹನದಲ್ಲಿರುವ ಬಿಲ್ಟ್ ಇನ್ ನ್ಯಾವಿಗೇಶನ್ ಬಳಸಬೇಕು, ಕಾರ್ ಪ್ಲೇ ಅಥವಾ ಆಂಡ್ರಾಯಿಡ್ ಆಟೊ ಆಪ್ಲಿಕೇಶನ್‍‍ಗಳನ್ನಲ್ಲ. ಕೊನೆಯ ಮೋಡ್, ಬ್ಯಾಟರಿ ಮೋಡ್ ಆಗಿದ್ದು, ಪೂರ್ತಿ ಚಾಲನೆ ಮುಗಿಯುವವರೆಗೆ ಬ್ಯಾಟರಿ ಚಾರ್ಜ್ ಅನ್ನು ಒಂದೇ ರೀತಿಯಾಗಿಡುತ್ತದೆ.

MOST READ: ಕಡಿಮೆ ಅವಧಿಯಲ್ಲಿ ದಾಖಲೆ ಬರೆದ ಕವಾಸಕಿ ನಿಂಜಾ 300

ಅನಾವರಣಗೊಂಡ ಬಹುನಿರೀಕ್ಷಿತ ಆಡಿ ಕ್ಯೂ5 ಹೈಬ್ರಿಡ್ ಆವೃತ್ತಿ

ಯೂರೋಪ್ ನಲ್ಲಿ ಕ್ಯೂ 5 ಪ್ಲಗ್ ಇನ್ ಅನೇಕ ಆಯ್ಕೆಗಳನ್ನು ಸ್ಟಾಂಡರ್ಡ್ ಆಗಿ ನೀಡುತ್ತದೆ. ಈ ಹೈಬ್ರಿಡ್ ಪ್ಲಗ್ ಇನ್ ವಾಹನದ ಬೆಲೆಯು ಯೂರೋಪ್ ನಲ್ಲಿ 60,450 ಯೂರೋಗಳಾಗಿದೆ. ಭಾರತೀಯ ಮೌಲ್ಯದಲ್ಲಿ ರೂ.47,04,722. ಇದರ ಜೊತೆಗೆ ಹೆಚ್ಚುವರಿ ತೆರಿಗೆ ಮತ್ತು ಆಮದು ಸುಂಕಗಳನ್ನು ಭರಿಸಬೇಕು. ಆಡಿ ಕಂಪನಿಯ ಪ್ರಕಾರ ಕ್ಯೂ 5 ಪ್ಲಗ್ ಇನ್ ಈ ವರ್ಷದ ಮೂರನೇ ಭಾಗದಲ್ಲಿ ಯೂರೋಪಿಯನ್ ಮಾರುಕಟ್ಟೆಗೆ ಕಾಲಿಡಲಿದೆ. ಭಾರತದಲ್ಲಿ ಈ ಎಲೆಕ್ಟ್ರಿಕ್ ವಾಹನದ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಯು ಲಭ್ಯವಾಗಿಲ್ಲ.

ಅನಾವರಣಗೊಂಡ ಬಹುನಿರೀಕ್ಷಿತ ಆಡಿ ಕ್ಯೂ5 ಹೈಬ್ರಿಡ್ ಆವೃತ್ತಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೈಬ್ರಿಡ್ ಎಂಜಿನ್ ಸಾಂಪ್ರಾದಾಯಿಕ ಎಂಜಿನ್‍‍ಗಳಿಗಿಂತ ಹೆಚ್ಚು ಬಲಶಾಲಿಯಾಗಿದೆ. ಇದರಲ್ಲಿ ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಉಪಯೋಗಿಸಲಾಗಿದೆ. ನಾವು ಈ ಕಾರನ್ನು ಭಾರತದಲ್ಲೂ ಕಾಣ ಬಯಸುತ್ತೇವೆ. ಆಡಿ ಕಂಪನಿಯು ಇದರಲ್ಲಿರುವ ಬಿಡಿ ಭಾಗಗಳನ್ನು ಸ್ಥಳೀಯವಾಗಿ ತಯಾರಿಸಿದ ನಂತರದಲ್ಲಿ ಭಾರತದಲ್ಲೂ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬೆಲೆ ಕೈಗೆಟುಕುವಂತಿರಲಿ ಎಂದು ಆಶಿಸುತ್ತೇವೆ.

Article Published On: Thursday, May 23, 2019, 11:08 [IST]
English summary
Audi Q5 Hybrid Revealed — Will It Make It To Indian Shores? - Read in kannada
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+