ಆಡಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಆಡಿ ಭಾರತದಲ್ಲಿರುವ ತನ್ನ ಕ್ಯೂ 5 ಮತ್ತು ಕ್ಯೂ 7 ಎಸ್‍‍ಯು‍ವಿಗಳ ಮೇಲೆ ಸೀಮಿತ ಅವಧಿಯವರೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಎರಡೂ ಮಾದರಿಗಳ ಮೇಲೆ ಕಂಪನಿಯು ಸೀಮಿತ ಅವಧಿಗೆ ಗಣನೀಯವಾಗಿ ಬೆಲೆ ಕಡಿಮೆಗೊಳಿಸಿದೆ.

ಆಡಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ದೇಶಿಯ ಮಾರುಕಟ್ಟೆಯಲ್ಲಿ ತನ್ನ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಆಡಿ ಕ್ಯೂ5 ಮತ್ತು ಕ್ಯೂ7 ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಆಡಿ ಕ್ಯೂ5 ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ರೂಪಾಂತರಗಳ ಬೆಲೆಯು ರೂ.55.80 ಲಕ್ಷಗಳಾಗುತ್ತದೆ. ಸೀಮಿತ ಅವಧಿಯ ಆಫರ್‍‍‍ನಲ್ಲಿ ಈ ಎಸ್‍‍ಯು‍ವಿಯ ಬೆಲೆಯು ಬರೊಬ್ಬರಿ ರೂ.5.9 ಲಕ್ಷಗಳಷ್ಟು ಕಡಿಮೆಯಾಗಲಿದೆ.

ಆಡಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಆಡಿ ಕ್ಯೂ7, 45 ಟಿಎಫ್ಎಸ್ಐ ಪೆಟ್ರೋಲ್ ಮತ್ತು 45 ಟಿ‍ಡಿಐ ಡೀಸೆಲ್ ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಬೆಲೆಗಳು ಕ್ರಮವಾಗಿ ರೂ.73.82 ಲಕ್ಷ ಮತ್ತು ರೂ.78.01 ಲಕ್ಷ ಗಳಾಗಿದೆ. ಆಡಿಯ ಹೊಸ ಆಫರ್‍ ನಂತರ ಕ್ಯೂ7, 45 ಟಿಎಫ್ಎಸ್‍ಐ ಮತ್ತು 45 ಟಿ‍ಡಿಐ ರೂಪಾಂತರಗಳ ಹೊಸ ಬೆಲೆ ರೂ.66.99 ಲಕ್ಷ ಮತ್ತು ರೂ.71.99 ಲಕ್ಷಗಳಾಗಿದೆ.

ಆಡಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲಾನ್ ಅವರು ಮಾತನಾಡಿ, 2009ರಲ್ಲಿ ಭಾರತದಲ್ಲಿ ಕ್ಯೂ5 ಮತ್ತು ಕ್ಯೂ7 ಬಿಡುಗಡೆಯಾದಾಗಿನಿಂದಲೂ ಎರಡು ಮಾದರಿಗಳು ಕೂಡ ಖರೀದಿದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ ಮತ್ತು ಇವು ಬ್ರ್ಯಾಂಡ್‍‍ನ ಯಶಸ್ವಿ ಮಾದರಿಗಳಾಗಿವೆ. ಭಾರತದಲ್ಲಿ ಕ್ಯೂ5 ಮತ್ತು ಕ್ಯೂ7 ಎಸ್‍‍ಯು‍ವಿಗಳ 10ನೇ ವಾರ್ಷಿಕೋತ್ಸವದ ಪ್ರಯುಕ್ತ ನಮ್ಮ ಗ್ರಾಹಕರಿಗೆ ಮತ್ತು ಆಡಿ ಪ್ರಿಯರಿಗೆ ವಿಶೇಷ ರಿಯಾಯಿತಿಯೊಂದಿಗೆ ಬಹುಮಾನ ನೀಡಲು ನಾವು ಬಯಸುತ್ತೇವೆ. ಈ ಸಂಭ್ರಮಾಚರಣೆಯ ಭಾಗವಾಗಿ ಕ್ಯೂ-ಮಾದರಿಗಳ ಬೆಲೆಯು ಅಗ್ಗವಾಗಿದೆ ಎಂದು ಹೇಳಿದರು.

ಆಡಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಆಡಿ ಕ್ಯೂ5 ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ2.0 ಲೀಟರ್ 40 ಟಿಡಿಐ ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ 187.7 ಬಿ‍ಹೆಚ್‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 2.0 ಲೀಟರ್ 45 ಟಿಎಫ್ಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ 248 ಬಿ‍ಹೆಚ್‍‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡು ಎಂಜಿನ್‍‍ಗಳು ಆಡಿಯ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಆಡಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಆಡಿ ಕ್ಯೂ7 ಎಸ್‍‍ಯು‍ವಿಯು ಕೂಡ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 3.0 ಲೀಟರ್ ವಿ6 ಟರ್ಬೊ ಡೀಸೆಲ್ ಎಂಜಿನ್ 245.4 ಬಿ‍ಹೆಚ್‍‍ಪಿ ಪವರ್ ಮತ್ತು 600 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 248 ಬಿ‍ಹೆಚ್‍‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್‍‍ಗಳಲ್ಲಿ ಕ್ವಾಟ್ರೋ ಅಲ್-ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ 8 ಸ್ಪೀಡ್ ಟಿಪ್ಟ್ರೋನಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಆಡಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಎರಡೂ ಎಸ್‍‍ಯು‍ವಿಗಳು ಸ್ಟ್ಯಾಂಡರ್ಡ್ ಎಲ್‍ಇಡಿ ಲೈಟಿಂಗ್ ಅನ್ನು ಹೊಂದಿವೆ. ಲೋವರ್ ಸ್ಪೆಕ್ ಕ್ಯೂ5 ಕಾರಿನಲ್ಲಿ ಸಾಮಾನ್ಯ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದ್ದರೆ, ಕ್ಯೂ7 ಎಸ್‍‍ಯು‍ವಿ ಅಲ್-ವೆದರ್ ಎಲ್ಇಡಿ ಹೆಡ್‍‍ಲ್ಯಾಂಪ್‍ಗಳನ್ನು ಹೊಂದಿದೆ. ಎರಡೂ ಎಸ್‍‍ಯು‍ವಿಗಳು ಡಿಆರ್‍ಎಲ್‍ಗಳನ್ನು ಹೊಂದಿದೆ. ಕಾರಿನಲ್ಲಿ ಅಲ್ಯೂಮಿನಿಯಂ ರೂಫ್ ರೈಲ್, ರೇರ್ ಸ್ಪಾಯ್ಲರ್, ಪನಾರೋಮಿಕ್ ಸನ್‍ರೂಫ್ ಸೇರಿದಂತೆ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ಆಡಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಇಂಟಿರಿಯರ್‍‍ನಲ್ಲಿ ಕ್ಯಾಬಿನ್‍‍ನ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸಲು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಟಚ್‍ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಮಲ್ಟಿಪಲ್ ಝೋನ್ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ ಮತ್ತು ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

ಆಡಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಆಡಿ ತಮ್ಮ ಕ್ಯೂ5 ಮತ್ತು ಕ್ಯೂ7 ಕಾರುಗಳಿಗೆ ಬೆಲೆಗಳಲ್ಲಿ ರಿಯಾಯಿತಿ ನೀಡುವ ಮೂಲಕ ತಮ್ಮ 10ನೇ ವಾರ್ಷಿಕೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಈ ಮೂಲಕ ಆಡಿ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ಈ ಮೂಲಕ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಈ ಯೋಜನೆಯಿಂದ ಆಡಿ ಕ್ಯೂ5 ಮತ್ತು ಕ್ಯೂ7 ಕಾರುಗಳ ಮಾರಾಟ ಮತ್ತಷ್ಟು ಹೆಚ್ಚಲಿದೆ ಎಂದು ನಿರೀಕ್ಷಿಸಬಹುದು.

Most Read Articles

Kannada
Read more on ಆಡಿ audi
English summary
Audi Q5 & Q7 Prices Reduced For A Limited Time In India - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X