ಆಡಿ ಆರ್8ರ ಬದಲಿಗೆ ರಸ್ತೆಗಿಳಿಯಲಿರುವ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು

ಜರ್ಮನಿಯ ಲಗ್ಷುರಿ ಕಾರು ತಯಾರಕ ಕಂಪನಿ ಆಡಿ ಇತ್ತೀಚಿಗಷ್ಟೇ ತನ್ನ ಆರ್8 ಸೂಪರ್ ಕಾರನ್ನು ಹೆಚ್ಚಿನ ಪವರ್ ಪರ್ಫಾಮೆನ್ಸ್ ಮಾಡೆಲ್ ಆಗಿ ಮಾಡಿ ಟ್ವೀಕಿಂಗ್ ಡಿಸೈನ್ ನೀಡಿದೆ. ಇದರ ಫಲವಾಗಿ ಸೂಪರ್ ಕಾರು ತನ್ನ ಐಕಾನಿಕ್ ವಿ10 ಸೌಂಡ್ ಟ್ರಾಕ್ ಅನ್ನು ಹಾಗೆಯೇ ಉಳಿಸಿಕೊಂಡು ಹೊಸ ಮಾದರಿಯಲ್ಲಿ ಸದ್ದು ಮಾಡಲಿದೆ.

ಆಡಿ ಆರ್8ರ ಬದಲಿಗೆ ರಸ್ತೆಗಿಳಿಯಲಿರುವ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು

ಕಾರ್ ಮ್ಯಾಗಜೀನ್ ಸುದ್ದಿ ಮೂಲದ ಪ್ರಕಾರ, ಈಗ ಚಾಲ್ತಿಯಲ್ಲಿರುವ ಆರ್ 8 ಕಾರು, ಈ ಮಾದರಿಯಲ್ಲಿ ಬರಲಿರುವ ಕೊನೆಯ ಕಾರು ಇದಾಗಿರಲಿದೆ. ಬ್ರಿಟಿಷ್ ಪಬ್ಲಿಕೇಷನ್ ವರದಿಯ ಪ್ರಕಾರ, ಆಡಿ ಮೂರು ವರ್ಷಗಳ ಕಾಲಾವಧಿಯಲ್ಲಿ ಆರ್ 8 ಇಂಟರ್ನಲ್ ಕಂಬಸ್ಜನ್ ಎಂಜಿನ್ ಬದಲು ಎಲೆಕ್ಟ್ರಿಕ್ ಸೂಪರ್ ಕಾರನ್ನು ಹೊಂದಲಿದ್ದು, ಅದರ ಹೆಸರು ಇ ಟ್ರಾನ್ ಜಿಟಿಆರ್ ಆಗಿರಲಿದೆ. ಅದು ಮೂರು ಎಲೆಕ್ಟ್ರಿಕ್ ಮೋಟಾರ್‍‍ಗಳಿಂದ ಶಕ್ತಿಯನ್ನು ಪಡೆಯಲಿದೆ ಎಂದು ಹೇಳಲಾಗಿದೆ.

ಆಡಿ ಆರ್8ರ ಬದಲಿಗೆ ರಸ್ತೆಗಿಳಿಯಲಿರುವ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು

ಕಾರ್ ಮ್ಯಾಗಜೀನ್ ವರದಿಯ ಪ್ರಕಾರ ಮೂರು ವರ್ಷಗಳ ಒಳಗೆ ಆಲ್ ಎಲೆಕ್ಟ್ರಿಕ್ ಇ ಟ್ರಾನ್ ಜಿಟಿಆರ್ ರಸ್ತೆಗಿಳಿಯಲಿದ್ದು, ಟ್ರಯೋ ಎಲೆಕ್ಟ್ರಿಕ್ ಮೋಟಾರ್ ಚಾರ್ಜ್ ಮಾಡುವುದರಿಂದ 650 ಬಿಹೆಚ್‍ಪಿ ಯನ್ನು ಪಡೆಯಲಿದೆ.

ಆಡಿ ಆರ್8ರ ಬದಲಿಗೆ ರಸ್ತೆಗಿಳಿಯಲಿರುವ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು

ಬ್ಯಾಟರಿ ಸಾಮರ್ಥ್ಯವು 95 ಕೆಡಬ್ಲ್ಯೂಹೆಚ್ ಆಗಿರಲಿದೆ. ಒಂದು ಬಾರಿಗೆ ಈ ಬ್ಯಾಟರಿಯಿಂದ 483 ಕಿ.ಮೀ ದೂರವನ್ನು ಕ್ರಮಿಸುವಷ್ಟು ಚಾರ್ಜ್ ಮಾಡಬಹುದು. ಈ ಬ್ಯಾಟರಿ ಪ್ಯಾಕ್ ವೈರ್‍‍ಲೆಸ್ ಚಾರ್ಜಿಂಗ್ ಒಳಗೊಂಡಿರಲಿದ್ದು, ಚಾರ್ಜರ್‍‍ಗಳ ಅವಶ್ಯಕತೆಯನ್ನು ಮತ್ತು ವಿಭಿನ್ನ ಮಾದರಿಯ ಚಾರ್ಜಿಂಗ್ ಗಳನ್ನು ಜೊತೆಯಲ್ಲಿ ಒಯ್ಯುವುದರಿಂದ ಮುಕ್ತಿ ನೀಡುತ್ತದೆ.

ಆಡಿ ಆರ್8ರ ಬದಲಿಗೆ ರಸ್ತೆಗಿಳಿಯಲಿರುವ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು

ಮೂಲಗಳ ಪ್ರಕಾರ ಹೊಸ ಆಡಿ ಇ ಟ್ರಾನ್ ಜಿಟಿಆರ್, ಪೋರ್ಷೆ ಸಂಸ್ಥೆಯ ಟೆಕ್ಯಾನ್ ಕಾರಿನ ತಂತ್ರಜ್ಞಾನವನ್ನು ಅವಲಂಬಿಸಿದೆ. ಇದು ಫೋಕ್ಸ್ ವ್ಯಾಗನ್ ಗ್ರೂಪಿನ ಮೊದಲ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು ಆಗಿರಲಿದೆ. ಆಡಿ ಇ ಟ್ರಾನ್ ಜಿಟಿಆರ್ ಅಲ್ಯುಮಿನಿಯಂ ಮೊನೊಕಾಕ್ ಚಾಸೀಸ್ ಹೊಂದಿರಲಿದ್ದು, ಟೆಕ್ಯಾನ್ ನ ಜೆ 1 ಪ್ಲಾಟ್‍ಫಾರಂ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ.

ಆಡಿ ಆರ್8ರ ಬದಲಿಗೆ ರಸ್ತೆಗಿಳಿಯಲಿರುವ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು

ಕಾರ್ ಮ್ಯಾಗಜೀನ್ ವರದಿಯ ಪ್ರಕಾರ, ಅಲ್ಯುಮಿನಿಯಂ ಮೊನೊಕಾಕ್ ಚಾಸೀಸ್ ಹೊಸ ಆಡಿ ಸೂಪರ್ ಕಾರಿನ ತೂಕವನ್ನು ಕಡಿಮೆ ಮಾಡಲು ನೆರವಾಗಲಿದೆ. ಇದರಿಂದ 0 - 100 ಕಿ.ಮೀ ವೇಗವನ್ನು 2.0 ಸೆಕೆಂಡುಗಳಲ್ಲಿ ಕ್ರಮಿಸಬಹುದು.

MUST READ: ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ಆಡಿ ಆರ್8ರ ಬದಲಿಗೆ ರಸ್ತೆಗಿಳಿಯಲಿರುವ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು

ಆ ಕಾರನ್ನು ಈಗಿರುವ ಹೈಪರ್ ಕಾರುಗಳ ಸ್ಪ್ರಿಂಟ್ ಗಳ ವ್ಯಾಪ್ತಿಗೆ ತರಲಿದೆ. ಆಡಿ ಇ ಟ್ರಾನ್ ಎಲೆಕ್ಟ್ರಿಕ್ ಸೂಪರ್ ಕಾರುಗಳಿಗೆ, ಆಲ್ ವ್ಹೀಲ್ ಡ್ರೈವ್ ಸೆಟ್ ಅಪ್, ಹೈಪರ್ ಕಾರುಗಳ ಆಕ್ಸೆಲೇರೆಷನ್ ನೀಡಲು ನೆರವಾಗಲಿದೆ. ಈ ಕಾರು ತನ್ನ ಮುಂಭಾಗದಲ್ಲಿ 5 ರಿಂಗುಗಳ ಕ್ವಾಟ್ರೋ ಬ್ರಾಂಡಿಂಗ್ ನ ಬ್ಯಾಡ್ಜ್ ಹೊಂದಿರಲಿದೆ. ಇದರ ಹೊರತಾಗಿ 2022 ರ ಆಸುಪಾಸಿನಲ್ಲಿ ಬಿಡುಗಡೆಯಾಗಲಿರುವ ಆಡಿ ಎಲೆಕ್ಟ್ರಿಕ್ ಸೂಪರ್ ಕಾರಿನ ಬಗ್ಗೆ ಬೇರೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ಸೂಪರ್ ಕಾರುಗಳಿಗೆ ಬದಲಾಗುವ ಕಾಲವು ಸನ್ನಿಹಿತವಾಗಿದ್ದು, ಆಡಿ ಸಹ ತನ್ನ ಆರ್8 ಇ ಟ್ರಾನ್ ನಲ್ಲಿ ಅಳವಡಿಸಿಕೊಳ್ಳುವ ಮೂಲಕ ರಸ್ತೆಗಿಳಿಯುವ ತವಕದಲ್ಲಿದೆ. ನಾವು ವಿ10ನ ಸೌಂಡ್ ಟ್ರಾಕ್ ಅನ್ನು ಮಿಸ್ ಮಾಡಿಕೊಳ್ಳುವ ಸಂಭವವಿದೆಯಾದರೂ ಇದೆಕ್ಕೆಲ್ಲಾ 2022ರ ಅಸುಪಾಸಿನಲ್ಲಿ ಬಿಡುಗಡೆಯಾಗಲಿರುವ ಇ ಟ್ರಾನ್ ಜಿಟಿಆರ್ ಉತ್ತರ ನೀಡಲಿದೆ.

More from DriveSpark

Article Published On: Tuesday, April 23, 2019, 14:41 [IST]
English summary
Audi R8 To Be Replaced By All-Electric Supercar — V10 Soundtrack To Be Replaced By Electric Whine - Read in Kannada
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+