ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ಜರ್ಮನ್ ಆಟೋ ಉತ್ಪಾದನಾ ಸಂಸ್ಥೆಯಾದ ಆಡಿ ತನ್ನ ಬಹುನೀರಿಕ್ಷಿತ ಇ-ಟ್ರಾನ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುವುದಾಗಿ ಸುಳಿವು ನೀಡಿದೆ. ಹಲವು ಅತ್ಯಾಧುನಿಕ ಸೌಲಭ್ಯಗಳ ಪ್ರೇರಣೆ ಹೊಂದಿರುವ ಇ-ಟ್ರಾನ್ ಕಾರು ಐಷಾರಾಮಿ ಕಾರುಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹಸಿರು ವಾಹನಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಾಹನ ಉತ್ಪಾದನಾ ವಿಭಾಗದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಆಡಿ ಸಂಸ್ಥೆಯು ಮೊದಲ ಪ್ರಯತ್ನವಾಗಿ ಇ-ಟ್ರಾನ್ ಎನ್ನುವ ಎಲೆಕ್ಟ್ರಿಕ್ ಐಷಾರಾಮಿ ಎಸ್‌ಯುವಿ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಗಾಗಿ ಸಿದ್ದತೆ ನಡೆಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತದಲ್ಲೂ ಇ-ಟ್ರಾನ್ ಆವೃತ್ತಿಯನ್ನು ಅನಾವರಣಗೊಳಿಸಲಾಗಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ದೆಹಲಿ ಬಳಿಯ ಗುರುಗ್ರಾಮ್‌ನಲ್ಲಿ ನಡೆದ ಆಡಿ ಹೊಸ ಕಾರು ಮಾರಾಟ ಮಳಿಗೆಗೆ ಚಾಲನೆ ನೀಡುವುದರ ಜೊತೆಗೆ ಇ-ಟ್ರಾನ್ ಕಾರನ್ನು ಸಹ ಅನಾವರಣಗೊಳಿಸಲಾಗಿದ್ದು, ಹಲವು ಅತ್ಯಾಧುನಿಕ ಡ್ರೈವ್ ಸೌಲಭ್ಯಗಳನ್ನು ಹೊತ್ತು ಮಾರುಕಟ್ಟೆ ಪ್ರವೇಶಿಸಲಿದೆ ಎಂಬ ಭರವಸೆ ನೀಡಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ಶಾರ್ಪ್ ಆ್ಯಂಡ್ ಸ್ಟೈಲ್ ಆವೃತ್ತಿಯಾಗಿರುವ ಇ-ಟ್ರಾನ್ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ಸ್, ಆಕರ್ಷಕ ರೂಫ್ ಲೈನ್, ಬೂಟ್ ಮೇಲೆ ಎಲ್ಇಡಿ ಬಾರ್ಸ್, 20.5-ಇಂಚಿನ ಅಲಾಯ್ ವೀಲ್ಹ್, ರಿಯರ್ ವ್ಯೂ ಮಿರರ್ ಮೇಲೆ ಕ್ಯಾಮೆರಾ ಸೇರಿದಂತೆ ಮುಂಭಾಗ ಚಕ್ರಗಳಲ್ಲಿ 125ಕೆವಿ ಮೋಟಾರ್ ಮತ್ತು ಹಿಂಭಾಗದ ಚಕ್ರಗಳಲ್ಲಿ 140 ಕೆ.ವಿ ಮೋಟಾರ್ ಸಹಾಯದೊಂದಿಗೆ ಆಲ್ ವೀಲ್ಹ್ ಪವರ್‌ ಪಡೆದುಕೊಂಡಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ಇ-ಟ್ರಾನ್ ಕಾರಿನಲ್ಲಿ 95kWh ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವನ್ನು ಹೊಂದಿದ್ದು, ಪ್ರತಿ ಗಂಟೆಗೆ 200ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದೆ. ಡಿಸಿ ಚಾರ್ಜರ್ ಮೂಲಕ ಅಥವಾ 400 ವೊಲ್ಟ್ಸ್ ಹೋಮ್ ಚಾರ್ಜರ್‌ನೊಂದಿಗೆ 95kWh ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ 5.7 ಸೇಕೆಂಡುಗಳಲ್ಲಿ 100 ಕಿ.ಮಿ ಗರಿಷ್ಠ ವೇಗ ಸಾಧಿಸುವ ಇ-ಟ್ರಾನ್ ಕಾರು ಟೆಸ್ಲಾ ಎಕ್ಸ್, ಜಾಗ್ವಾರ್ ಐಪೆಸ್ ಮತ್ತು ಮರ್ಸಿಡಿಸ್ ಬೆಂಝ್ ಇಕ್ಯೂಸಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ಆದ್ರೆ ಇ-ಟ್ರಾನ್ ಕಾರಿನ ಅಧಿಕೃತ ಮೈಲೇಜ್ ಕುರಿತಾಗಿ ಯಾವುದೇ ಮಾಹಿತಿ ಹಂಚಿಕೊಳ್ಳದ ಆಡಿ ಸಂಸ್ಥೆಯು ಸದ್ಯ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಕುರಿತಾಗಿ ಮಾಹಿತಿ ಹಂಚಿಕೊಳ್ಳಲಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ಹಾಗೆಯೇ 4.9-ಮೀಟರ್ ಉದ್ದವಿರುವ ಇ-ಟ್ರಾನ್ ಕಾರು ಸದ್ಯ ಮಾರಾಟವಾಗುತ್ತಿರುವ ಕ್ಯೂ5 ಮತ್ತು ಕ್ಯೂ7 ಕಾರುಗಳಿಂತಲೂ ಉತ್ತಮ ಒಳವಿನ್ಯಾಸವನ್ನು ಹೊಂದಿದ್ದು, 5-ಸೀಟರ್ ಆಸನ ಸೌಲಭ್ಯದೊಂದಿಗೆ 660-ಲೀಟರ್ ಸಾಮಾರ್ಥ್ಯದ ಬೂಟ್ ಸ್ಪೆಸ್ ಪಡೆದುಕೊಂಡಿದೆ. ಒಂದು ವೇಳೆ ಇನ್ನು ಹೆಚ್ಚಿನ ಮಟ್ಟದ ಬೂಟ್‌ಸ್ಪೆಸ್ ಬೇಕಿದ್ದಲ್ಲಿ ಎರಡನೇ ಸಾಲಿನ ಆಸನಗಳನ್ನು ಫೋರ್ಡ್ ಮಾಡುವ ಮೂಲಕ 1,725-ಲೀಟರ್‌ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ಇನ್ನು ಇ-ಟ್ರಾನ್ ಕಾರು ಹೊರಭಾಗದ ವಿನ್ಯಾಸದಂತೆಯೇ ಒಳವಿನ್ಯಾಸದಲ್ಲೂ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಲಿದ್ದು, ಮ್ಯಾಟ್ರಿಕ್ಸ್ ಟೆಕ್ನಾಲಜಿ ಪ್ರೇರಣೆಯೊಂದಿಗೆ ಮಲ್ಟಿ ಟಚ್‌ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕ್ರಿಯೆಚರ್ ಕಂಫರ್ಟ್, ಬ್ಯಾಂಗ್ ಆ್ಯಂಡ್ ಓಲ್ಪ್‌ಸೆನ್ ಸೌಂಡ್ ಸಿಸ್ಟಂ ಸೌಲಭ್ಯವನ್ನು ಹೊಂದಿರಲಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ಕಾರಿನ ಒಳಭಾಗವನ್ನು ಸಹ ಗ್ರಾಹಕ ಆದ್ಯತೆ ಮೇರೆಗೆ ವಿವಿಧ 4 ಮಾದರಿಯ ಡ್ಯುಯಲ್ ಬಣ್ಣಗಳ ಇಂಟಿರಿಯರ್ ನೀಡಲಾಗಿದ್ದು, ಹೊಸ ಭಾಗದಲ್ಲಿ 10 ಬಣ್ಣಗಳ ಆಯ್ಕೆ ನೀಡಲಾಗಿದೆ. ಒಟ್ಟಿನಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಇ-ಟ್ರಾನ್ ಕಾರು 2020ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 80 ಲಕ್ಷದಿಂದ ರೂ. 1.10 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

ಇದರೊಂದಿಗೆ ಆಡಿ ಸಂಸ್ಥೆಯು ಭಾರತದಲ್ಲಿ ತನ್ನ ಕಾರು ಮಾರಾಟ ತಂತ್ರದಲ್ಲಿ ಮಹತ್ವದ ಬದಲಾವಣೆ ತರುವ ಸಂಬಂಧ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಗುರುಗ್ರಾಮ್ ಬಳಿ ಹೊಸದಾಗಿ ಚಾಲನೆ ನೀಡಲಾಗಿರುವ ಮಾರಾಟ ಮಳಿಗೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಗ್ರಾಹಕರ ಸೇವೆಗಳನ್ನು ಒದಗಿಸಲಾಗಿದೆ.

ಆಡಿ ಮೊದಲ ಐಷಾರಾಮಿ ಎಲೆಕ್ಟ್ರಿಕ್ ವರ್ಷನ್ ಇ-ಟ್ರಾನ್ ಭಾರತದಲ್ಲಿ ಅನಾವರಣ

10,500 ಸ್ಕ್ವೆರ್ ಫೀಟ್‌ನಲ್ಲಿ ನಿರ್ಮಾಣವಾಗಿರುವ ಆಡಿ ಹೊಸ ಮಾರಾಟ ಮಳಿಗೆಯಲ್ಲಿ ಒಂದೇ ಬಾರಿಗೆ 21 ಕಾರುಗಳನ್ನು ಪ್ರದರ್ಶನಗೊಳಿಸುವಷ್ಟು ಸ್ಥಳಾವಕಾಶ ಒದಗಿಸಲಾಗಿದ್ದು, ಇದರ ಪಕ್ಕದಲ್ಲೇ ಬಾಡಿ ಶಾಪ್ ಕೂಡಾ ತೆರೆದುಕೊಂಡಿದೆ. ಈ ಮೂಲಕ ದೆಹಲಿ ಮತ್ತು ಸುತ್ತುಮತ್ತಲಿನ ನಗರಗಳ ಗ್ರಾಹಕರಿಗೆ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ನೀಡುವ ಭರವಸೆ ನೀಡಿದ್ದು, ಗ್ರಾಹಕರಿಗೆ ಅಂತರಾಷ್ಟ್ರೀಯ ಮಟ್ಟದ ಸೇವೆಗಳನ್ನು ಒದಗಿಸುವುದೇ ನಮ್ಮ ಗುರಿಯಾಗಿರುವ ಬಗ್ಗೆ ಆಡಿ ಹೆಡ್ ರಾಹಿಲ್ ಅನ್ಸಾರಿ ಡ್ರೈವ್‌ಸ್ಪಾರ್ಕ್ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

Article Published On: Friday, August 2, 2019, 18:03 [IST]
English summary
Audi Unveils All Electric E-Tron And First Digital Showroom — Details And Pictures.
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+