ಆಟೋ ರಿಕ್ಷಾಗಳನ್ನು ಹಿಂದಿಕ್ಕುತ್ತಾ ಬಜಾಜ್ ಕ್ಯೂಟ್.?

ಆಟೋ ರಿಕ್ಷಾಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ವಿವಿಧ ಹೋರಾಟಗಳ ನಂತರ ಹೊಸ ರೀತಿಯ ಕ್ಯೂಟ್ ಕ್ವಾಡ್ರಿ ಸೈಕಲ್ ಬೈಕ್ ಮಾದರಿಯನ್ನು ಅನ್ನು ಬಿಡುಗಡೆಗೊಳಿಸಲು ಬಜಾಜ್ ಸಿದ್ಧವಾಗಿದೆ. ಈ ವಾಹನವು ಒಮ್ಮೆ ಬಿಡುಗಡೆಗೊಂಡಲ್ಲಿ, ಆಟೋವನ್ನು ನೀವು ಮ್ಯೂಸಿಯಂಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬರಬಹುದು.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲ್ಲು ಸಜ್ಜುಗೊಳ್ಳುತ್ತಿರುವ ಬಜಾಜ್ ಕ್ಯೂಟ್ ವಿಶೇಷತೆ ಏನು..?

ಹಲವು ಸುತ್ತಿನ ಮಾತುಕತೆಯ ನಂತರ ಭಾರತ ಸರ್ಕಾರವು ಕ್ವಾಡ್ರಿ ಸೈಕಲ್ ಮಾದರಿಗಳಿಗೆ ಅನುಮತಿ ನೀಡಿದೆ. ಹೀಗಾಗಿ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್‌ಗಳನ್ನು ಪರಿಚಯಿಸಲು ಬಜಾಜ್ ಯೋಜನೆ ರೂಪಿಸಿದ್ದು, ಪ್ರಸ್ತುತ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಹೊಸ ಬಜಾಜ್ ಕ್ಯೂಟ್ ವಾಹನಗಳು ರೂ. 2.63 ಲಕ್ಷದ ಬೆಲೆಯಲ್ಲಿ ಶೀಘ್ರವೇ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಏಕೆಂದರೆ ಈಗಾಗಲೆ ಕ್ಯೂಟ್ ವಾಹನಗಳು ಡೀಲರ್‍‍ಗಳ ಯಾರ್ಡ್ ತಲುಪುತ್ತಿದ್ದು, ಟೆಸ್ಟ್ ಡ್ರೈವ್ ಅನ್ನು ಸಹ ಶುರು ಮಾಡಲಾಗಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲ್ಲು ಸಜ್ಜುಗೊಳ್ಳುತ್ತಿರುವ ಬಜಾಜ್ ಕ್ಯೂಟ್ ವಿಶೇಷತೆ ಏನು..?

ಬಜಾಜ್ ಕ್ಯೂಟ್ ವಾಹನವು ವಿಶೇಷವಾದ ಉಪಕರಣಗಳಿಂದ ತಯಾರಿಸಲಾಗಿದ್ದು, ಸುಮಾರು 400 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದೆ. ಇದ್ರಲ್ಲಿ ನಾಲ್ಕು ಮಂದಿ ಕೂರುವ ಸ್ಥಳಾವಕಾಶವಿದ್ದು, ಟಾಟಾ ನ್ಯಾನೊ ಕಾರಿನಂತೆಯೆ ಇದರಲ್ಲಿಯು ಸಹ ಮುಂಭಾಗದಲ್ಲಿನ ಬೂಟ್ ಸ್ಪೇಸ್ ಕೆಳಗೆ ಇರಿಸಲಾಗಿದೆ. ಮತ್ತು ಹೆಚ್ಚಿನ ಸ್ಥಳವಕಾಶಕ್ಕಾಗಿ ಹಿಂಬದಿಯ ಸೀಟ್‍‍ಗಳನ್ನು ಮಡಿಚಿಕೊಳ್ಳಬಹುದಾಗಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲ್ಲು ಸಜ್ಜುಗೊಳ್ಳುತ್ತಿರುವ ಬಜಾಜ್ ಕ್ಯೂಟ್ ವಿಶೇಷತೆ ಏನು..?

ಬಜಾಜ್ ಸಂಸ್ಥೆಯು ಈ ವಾಹನವನ್ನು ಈಗಾಗಲೇ ವಿವಿಧ ರಾಷ್ಟ್ರಗಳಿಗೆ ರಫ್ತು ಕೂಡಾ ಮಾಡುತ್ತಿದ್ದು, ಪ್ರತಿ ತಿಂಗಳಿಗೆ 5000 ಯೂನಿಟ್ ಕ್ಯೂಟ್ ಕ್ವಾಡ್ರಿಗಳನ್ನು ಉತ್ಪಾದಿಸುತ್ತಿದೆ. ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು ನಾಲ್ಕು ಚಕ್ರಗಳನ್ನು ಪಡೆದುಕೊಂಡಿರಲಿದ್ದು, ಆಟೋಗಿಂತ ಹೆಚ್ಚು ಶಕ್ತಿಶಾಲಿಯಾಗಿರಲಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲ್ಲು ಸಜ್ಜುಗೊಳ್ಳುತ್ತಿರುವ ಬಜಾಜ್ ಕ್ಯೂಟ್ ವಿಶೇಷತೆ ಏನು..?

ಪುಣೆಯಲ್ಲಿನ ಬಜಾಜ್ ಆಟೋ ಆಧಾರಿತ ಕಾರ್ಖಾನೆಯಲ್ಲಿ ವಾರ್ಷಿಕವಾಗಿ ಸುಮಾರು 60,000 ಯೂನಿಟ್ ಕ್ಯೂಟ್ ಕ್ವಾಡ್ರಿಸೈಕಲ್ ವಾಹನವನ್ನು ಉತ್ಪಾದಿಸುತ್ತಿದ್ದು, ಬಜಾಜ್ ಆಟೋ ಸಂಸ್ಥೆಯು ಈಗಾಗಲೆ ಲ್ಯಾಟಿನ್ ಅಮೇರಿಕಾ,ಯೂರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ 2015ರಿಂದಲೂ ಮಾರಾಟ ಮಾಡುತ್ತಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲ್ಲು ಸಜ್ಜುಗೊಳ್ಳುತ್ತಿರುವ ಬಜಾಜ್ ಕ್ಯೂಟ್ ವಿಶೇಷತೆ ಏನು..?

ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು 217ಸಿಸಿ 4 ಸ್ಟ್ರೋಕ್ಸ್ ಮತ್ತು ಸಿಂಗಲ್ ಸಿಲಿಂಡರ್ , ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13 ಬಿಹೆಚ್‍‍ಪಿ ಮತ್ತು 20 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲ್ಲು ಸಜ್ಜುಗೊಳ್ಳುತ್ತಿರುವ ಬಜಾಜ್ ಕ್ಯೂಟ್ ವಿಶೇಷತೆ ಏನು..?

ಮೈಲೇಜ್

ಬಜಾಜ್ ಕ್ಯೂಟ್ ವಾಹನಗಳಲ್ಲಿ 8 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ ಹಾಗು 35 ಕಿಲೋಗ್ರಾಂ ಸಾಮರ್ಥ್ಯದ ಸಿಎನ್‍ಜಿ ಟ್ಯಾಂಕ್ ಅನು ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ಇಂಧನ ಆಧಾರಿತ ವಾಹನಗಳು ಪ್ರತೀ ಲೀಟರ್‍‍ಗೆ ಸುಮಾರು 35 ಕಿಲೋಮೀಟರ್ ಮತ್ತು ಸಿಎನ್‍ಜಿ ಆವೃತ್ತಿಯ ವಾಹನಗಳು ಪ್ರತೀ ಕಿಲೋಗ್ರಾಂಗೆ ಸುಮಾರು 43 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

MOST READ: ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುತ್ತೇವೆ - ಟಾಟಾ ಮೋಟಾರ್ಸ್

ಆಟೋ ರಿಕ್ಷಾಗಳನ್ನು ಹಿಂದಿಕ್ಕಲ್ಲು ಸಜ್ಜುಗೊಳ್ಳುತ್ತಿರುವ ಬಜಾಜ್ ಕ್ಯೂಟ್ ವಿಶೇಷತೆ ಏನು..?

ವೈಶಿಷ್ಟ್ಯತೆಗಳು

ಕ್ಯೂಟ್ ಕ್ವಾಡ್ರಿಲಾಟರಲ್ ವಾಹನದಲ್ಲಿನ ಡ್ಯಾಶ್ ಬೋರ್ಡ್ ಮಧ್ಯ ಭಾಗದಲ್ಲಿ ಸ್ಪೀಡೋಮೀಟರ್ ಅನ್ನು ಕಾಣಬಹುದಾಗಿದ್ದು, ಇದು ಅನಾಲಾಗ್ ಮತ್ತು ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ. ಇವಿಗಳ ಜೊತೆಗೆ ಈ ವಾಹನದಲ್ಲಿ ಎಂಪಿ3 ಪ್ಲೇಯರ್, ಯುಎಸ್‍ಬಿ ಪೋರ್ಟ್ಸ್ ಹಾಗು ಆಕ್ಸ್ ಕೇಬಲ್‍‍ಗಳನ್ನು ಕನೆಕ್ಟ್ ಮಾಡಿಕೊಳ್ಳಬಹುದಾದ ಸೌಕರ್ಯಗಳಿವೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲ್ಲು ಸಜ್ಜುಗೊಳ್ಳುತ್ತಿರುವ ಬಜಾಜ್ ಕ್ಯೂಟ್ ವಿಶೇಷತೆ ಏನು..?

ಕ್ಯೂಟ್ ಕ್ವಾಡ್ರಿ ಸೈಕಲ್‌ಳು ಗರಿಷ್ಠವಾಗಿ ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 2752-ಎಮ್ಎಮ್ ಉದ್ದ, 1312 ಎಮ್ಎಮ್ ಅಗಲ ಮತ್ತು 1650-ಎಮ್ಎಮ್ ಎತ್ತರವನ್ನು ಪಡೆದಿದ್ದು ಜೊತೆಗೆ ಸಿಎನ್‍‍ಜಿ ವರ್ಷನ್‍‍ನಲ್ಲಿ ಕೂಡಾ ಲಭ್ಯವಿರಲಿದೆ.

MOST READ: ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನಾಯ್ತು ಅಂತ ನೀವೆ ನೋಡಿ...

ಬೆಲೆ ಮತ್ತು ಬಿಡುಗಡೆಯ ಅವಧಿ

ಈಗಾಗಲೆ ಈ ವಾಹನಕ್ಕಾಗಿ ಮಹಾರಾಷ್ಟಾ ಹಾಗು ಕೇರಳಾ ರಾಜ್ಯಗಳಲ್ಲಿ ಡಿಮ್ಯಾಂಡ್ ಅಧಿಕವಾಗುತ್ತಿದೆ. ಹೀಗಾಗಿ ಸಂಸ್ಥೆಯು ಇಂಧನ ಆಧಾರಿತ ಕ್ಯೂಟ್ ವಾಹನಕ್ಕೆ ರೂ. 2.63 ಲಕ್ಷ ಹಾಗು ಸಿಎನ್‍ಜಿ ಆಧಾರಿತ ಕ್ಯೂಟ್‍ಗೆ ರೂ. 2.83 ಲಕ್ಷದ ಮಾರಾಟದ ಬೆಲೆಯನ್ನು ನೀಡಲಾಗಿದೆ. ಇನ್ನು ಬಿಡುಗಡೆಯ ಅವಧಿಯ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲವಾದರೂ, ಎಪ್ರಿಲ್ ಮುಗಿಯುವುದರೊಳಗೆ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲ್ಲು ಸಜ್ಜುಗೊಳ್ಳುತ್ತಿರುವ ಬಜಾಜ್ ಕ್ಯೂಟ್ ವಿಶೇಷತೆ ಏನು..?

ಕ್ಯೂಟ್ ಕ್ವಾಡ್ರಿ ಸೈಕಲ್ ಅನ್ನು ಮೂಲತಃ ವಾಣಿಜ್ಯ ಪ್ರಯಾಣಿಕ ವಾಹನಗಳು ಮಾತ್ರ ಉಪಯೋಗಿಸಲು ಯೋಜಿಸಲಾಗಿತ್ತು. ಪ್ರಸ್ತುತ ವಿದೇಶಿ ವಿನಿಮಯ ಕೇಂದ್ರದಲ್ಲಿರುವ ಆಟೋ ರಿಕ್ಷಾ ಚಾಲಕರುಗಳಿಗೆ ಇದು ಬಹುಮುಖ್ಯವಾಗಿದ್ದು ಅವರೆಲ್ಲರೂ ಈ ಕ್ವಾರಿಯನ್ನು ಬಳಸಬಹುದಾಗಿದೆ. ಇಲ್ಲವಾದಲ್ಲಿ ರಿಕ್ಷಾಗಳು ಕಾಣೆಯಾದಂತೆ ಮುಂದಿನ ದಿನಗಳಲ್ಲಿ ಆಟೋಗಳು ಕೂಡಾ ಕಾಣೆಯಾಗಬಹುದು.

Source: Ujjwal Saxena

More from DriveSpark

Article Published On: Monday, March 18, 2019, 9:52 [IST]
English summary
Bajaj Qute aims to replace rickshaw – Arrives at Bajaj showroom. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+