ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನಾಯ್ತು ಅಂತ ನೀವೆ ನೋಡಿ...

ದೇಶದಲ್ಲಿ ದಿನಂಪ್ರತಿ ಸಾವಿರಾರು ಅಪಘಾತಗಳು ನಡೆಯುತ್ತಲೇ ಇವೆ. ಅಂತವುಗಳಲ್ಲಿ ಕೆಲವು ಬಾರಿ ಅಪಘಾತಗಳು ನಮ್ಮಿಂದಲೇ ಆದರೂ ಮತ್ತು ಇನ್ನು ಕೆಲವು ಬಾರಿ ನಾವು ಸರಿಯಾಗಿ ಡ್ರೈವಿಂಗ್ ಮಾಡುತ್ತಿದ್ದರೂ ಸಹ ರಸ್ತೆಯಲ್ಲಿ ಸಂಚರಿಸುವ ಇನ್ನಿತರೆ ವಾಹನಗಳಿಂದ ಅಪಘಾತವು ಸಂಭವಿಸುತ್ತದೆ. ಇಂದು ನಾವು ನಿಮಗೆ ತೋರಿಸಲಿರುವ ವಿಡಿಯೋ ಕೂಡಾ ಅಂತದ್ದೆ, ಇಲ್ಲಿ ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರಿಗೆ ಶೇರಿಂಗ್ ಆಟೋ ಬಂದ ಕಾರಣ ಅಪಘಾತ ಸಂಭವಿಸಿದೆ.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

ಹೌದು, ತಮಿಳುನಾಡಿನ ಹೆದ್ದಾರಿಯಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಎಂದೆ ಹೆಸರುವಾಸಿಯಾದ ಬಲೆನೊ ಕಾರು ಸ್ಪೀಡ್ ಆಗಿ ಸಂಚರಿಸುವ ಸಮಯದಲ್ಲಿ ಲೇನ್ ಚೇಂಜ್ ಮಾಡುತಿದ್ದ ಶೇರಿಂಗ್ ಆಟೋಗೆ ಗುದ್ದಿದ್ದು, ಬಲೆನೊ ಕಾರಿನ ಮುಂಭಾಗವು ಪೂರ್ಣವಾಗಿ ಡ್ಯಾಮೇಜ್ ಆಗಿದೆ. ಆದರೆ ಆಟೋಗೆ ದೊಡ್ಡ ಪ್ರಮಾಣದಲ್ಲಿ ಡ್ಯಾಮೇಜ್ ಏನು ಆಗಿಲ್ಲ ಅಂದ್ರೆ ನೀವು ನಂಬುತ್ತೀರಾ.? ಈ ವೀಡಿಯೋ ನೋಡಿ ನಿಮಗೆ ತಿಳಿಯುತ್ತೆ...

ವಿಡಿಯೋ ಗಮನಿಸರೆ ಹೆದ್ದಾರಿಯ ರಸ್ತೆಯಲ್ಲಿ ಸ್ಫೀಡ್ ಆಗಿ ಹೋಗುತ್ತಿದ್ದ ಮಾರುತಿ ಸುಜುಕಿ ಬಲೆನೊ ಕಾರು ಮುಂಭಾಗದಲ್ಲಿ ಲೇನ್ ಚೇಂಜ್ ಮಾಡಲು ಬಂದ ಶೇರಿಂಗ್ ಆಟೋಗೆ ಗುದ್ದಿದೆ. ಇಲ್ಲಿ ತಪ್ಪು ಶೇರಿಂಗ್ ಅಟೋ ಚಾಲನದ್ದೆ ಎಂದು ಕಲೆವರು ಹೇಳಿದರೆ ಇನ್ನು ಕೆಲವರು ಮಾರುತಿ ಸುಜುಕಿ ಸಂಸ್ಥೆಯ ಕಾರುಗಳ ಬಗ್ಗೆ ಮಾತನಾಡುತ್ತಿದ್ದಾರೆ.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

ಈ ದೃಶ್ಯವು ಮಾರುತಿ ಸುಜುಕಿ ಬಲೆನೊ ಕಾರಿನ ಡ್ಯಾಶ್‍ಬೋರ್ಡ್ ಮೇಲೆ ಅಳವಡಿಸಲಾಗಿದ್ದ ಕ್ಯಾಮೆರಾದಿಂದ ರೆಕಾರ್ಡ್ ಮಾಡಲಾಗಿದ್ದು, ಗುದ್ದಿದ್ದ ರಭಸಕ್ಕೆ ಶೇರಿಂಗ್ ಆಟೋನಲ್ಲಿ ಕುಂತಿದ್ದ ಒಬ್ಬ ಪ್ರಯಾಣಿಕ ಆಟೋದಿಂದ ಹಾರಿ ಕೆಳಕ್ಕೆ ಬಿದ್ದಿದ್ದಾನೆ. ಗುದ್ದಿದ್ದ ನಂತರ ಆಟೋ ಎಷ್ಟು ದೂರ ಹೋಗಿ ನಿಂತಿದೆ ನೋಡಿ.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

ಆಶ್ಚರ್ಯ ಏನಪ್ಪ ಅಂದ್ರೆ ಅಷ್ಟು ಸ್ಪೀಡ್‍ನಲ್ಲಿ ಬಂದ ಬಲೆನೊ ಕಾರಿನಿಂದ ಗುದ್ದಿಸಿಕೊಂಡರೂ ಸಹ ಆಟೋಗೆ ಹೆಚ್ಚು ಡ್ಯಾಮೇಜ್ ಆಗಲಿಲ್ಲ ಎಂಬುದು. ಈ ಕುರಿತಾಗಿ ಚಿತ್ರವನ್ನು ನೀವಿಲ್ಲಿ ಕಾಣಬಹುದು. ಶೇರ್ ಆಟೋವಿನ ಹಿಂಭಾಗದಲ್ಲಿ ಕೊಂಚ ಮಾತ್ರ ಡ್ಯಾಮೇಜ್ ಆಗಿದೆ.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

ಆಟೋ ಪಿಯಾಜಿಯೊ ಸಂಸ್ಥೆಯದ್ದು, ಕಾರು ಮಾರುತಿ ಸುಜುಕಿ ಸಂಸ್ಥೆ ನಿರ್ಮಾಣ ಮಾಡಿದ್ದು. ಹಾಗಾದರೆ ಯಾರು ನಿರ್ಮಾಣ ಮಾಡಿದ ವಾಹನ ಬಲಶಾಲಿಯಾಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಿದರೆ ಅದು ತಪ್ಪಾಗುತ್ತದೆ. ಆದರೆ ಡ್ರೈವಿಂಗ್ ಮಾಡುವ ವೇಳೆ ಎಚ್ಚರಿಕೆ ಇಂದ ಡ್ರೈವಿಂಗ್ ಮಾಡಿದರೆ ಒಳಿತು.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ, ಇಂತಹ ಅನಾಹುತಗಳಿಂದ ಪಾರಾಗಬಹುದು. ಅದರಲ್ಲಿಯು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಹೇಳಲಾಗದಷ್ಟು ವೇಗದಲ್ಲಿ ಸಂಚರಿಸುತ್ತಿರುತ್ತದೆ. ಆದುದರಿಂದ ನೀವು ಇಂಡಿಕೇಟರ್ ಹಾಕಿದ್ದರೂ ಸಹ ಕೈ ಸನ್ನೆ ಮಾಡಿ ಹಿಂಬದಿಯಲ್ಲಿ ಬರುತ್ತಿರುವ ವಾಹನ ಚಾಲಕನಗೆ ಸನ್ನೆ ಮಾಡಿ.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

ಇನ್ನು ಘಟನೆಯ ಬಗ್ಗೆ ಹೇಳುವುದಾದರೆ ವಿಡಿಯೋ ನೋಡಿದ ಹಲವಾರು ಮಂದಿ ಇಲ್ಲಿ ಮಾರುತಿ ಸುಜುಕಿ ಕಾರುಗಳ ನಿರ್ಮಾಣದ ಬಗ್ಗೆ ಅಪಹಾಸ್ಯ ಮಾಡುತ್ತಿದ್ದರೆ ಇನ್ನು ಕೆಲವರು ನೀಡುವ ಬೆಲೆಗೆ ಮೋಸವಿಲ್ಲದ ಹಾಗೆ ವೈಶಿಷ್ಟ್ಯತೆಗಳನ್ನು ಈ ಕಾರಿನಲ್ಲಿ ನೀಡಲಾಗಿದೆ ಎಂದು ಮಾರುತಿ ಸುಜುಕಿ ಸಂಸ್ಥೆಯನ್ನು ಸಪೋರ್ಟ್ ಮಾಡುತ್ತಿದ್ದಾರೆ.

Source: Viratian

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

01. ಪ್ರಯಾಣ ಆರಂಭಕ್ಕೂ ಮುನ್ನ

ದೂರ ಪ್ರಯಾಣ ಆರಂಭಕ್ಕೂ ಮುನ್ನ ಇಂಧನ ಟ್ಯಾಂಕ್ ಸಂಪೂರ್ಣವಾಗಿ ಭರ್ತಿ ಮಾಡಿಡಿ. ಇನ್ನು ಮೊಬೈಲ್ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಲು ಮರೆಯದಿರಿ. ಡ್ರೈವಿಂಗ್ ಲೈಸನ್ಸ್ ನಿಂದ ಹಿಡಿದು ಕಾರಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿ ಪ್ರತಿಗಳನ್ನು ಕೈಯಲ್ಲಿಟ್ಟುಕೊಳ್ಳಲು ಮರೆಯದಿರಿ.

MOST READ: ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುತ್ತೇವೆ - ಟಾಟಾ ಮೋಟಾರ್ಸ್

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

02. ವೇಗದಲ್ಲಿ ಮಿತಿಯಿರಲಿ

ಭಾರತೀಯ ಬಹುತೇಕ ಹೆದ್ದಾರಿಗಳಲ್ಲಿ ವೇಗ ಮಿತಿ ನಿಯಮ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹಾಗಾಗಿ ಹೆದ್ದಾರಿ ಪರಿಸ್ಥಿತಿಗೆ ಅನುಗುಣವಾಗಿ ವೇಗದಲ್ಲಿ ಮಿತಿಯಿರಲಿ. ನಿಮ್ಮ ಗುರಿ ತಲುಪಲು ಯಾವುದೇ ರೀತಿಯ ಅವಸರ ಬೇಡ. ಮಳೆ, ಟ್ರಾಫಿಕ್ ಅಥವಾ ಮಂಜಿನ ತೊಂದರೆಯಿದ್ದಲ್ಲಿ ನಿಧಾನವಾಗಿ ಚಲಿಸಲು ಮರೆಯದಿರಿ. ಮುನ್ಮುಖವಾಗಿ ಚಲಿಸುವ ಪ್ರತಿಯೊಂದು ವಾಹನವನ್ನು ಓವರ್ ಟೇಕ್ ಮಾಡುವ ಗೋಜಿಗೆ ಹೋಗದಿರಿ.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

03. ಟ್ಯಾಂಕರ್ ಮತ್ತು ಲಾರಿಗಳು

ಘಾಟಿ ಪ್ರದೇಶಗಳಲ್ಲಿ ನಿಧಾನವಾಗಿ ಚಲಿಸುವ ಅಮಿತ ಭಾರದ ಟ್ಯಾಂಕರ್ ಮತ್ತು ಸರಕು ಲಾರಿಗಳು ತುಂಬಿಕೊಂಡಿರುವುದರಿಂದ ಅತಿಯಾದ ಜಾಗ್ರತೆಯಿಂದ ಪ್ರಯಾಣ ಮುಂದುವರಿಸಿರಿ. ಹೆದ್ದಾರಿಗಳಲ್ಲಿ ಸಾಕಷ್ಟು ಹೊತ್ತು ಡ್ರೈವಿಂಗ್ ಮಾಡಿ ದಣಿವಾಗಿರುವುದರಿಂದ ಅಜಾಗರೂಕತೆಯಿಂದ ಚಾಲನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಓವರ್ ಟೇಕ್ ಮಾಡುವಾಗ ಎಚ್ಚರದಿಂದಿರಬೇಕು.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

04. ಎಡಭಾಗದಲ್ಲಿ ಚಲಿಸಿ

ಪ್ರಯಾಣದುದ್ಧಕ್ಕೂ ಬಲಬದಿಯಲ್ಲಿ ಚಲಿಸುವ ಸಾಹಸ ಬೇಡ. ಒಮ್ಮೆ ಓವರ್ ಟೇಕ್ ಮಾಡಿದ ಬಳಿಕ ಎಡಬದಿಯ ಲೇನ್ ನಲ್ಲಿ ಮುಂದಕ್ಕೆ ಚಲಿಸಿ.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

05. ರಸ್ತೆ ಉಬ್ಬುಗಳು

ಹೆದ್ದಾರಿಗಳಲ್ಲಿ ರಾತ್ರಿ ವೇಳೆಯಲ್ಲಿ ವೇಗವಾಗಿ ಚಲಿಸುವಾಗ ರಸ್ತೆ ಉಬ್ಬುಗಳು ಕಣ್ಣಿಗೆ ಕಾಣಸಿಗದು. ಇನ್ನು ಕೆಲವು ಕಡೆಗಳಲ್ಲಿ ರಸ್ತೆ ಉಬ್ಬುಗಳ ಚಿಹ್ನೆಯೇ ಇರಲಾರದು. ಹಾಗಾಗಿ ಆಕಸ್ಮತ್ ಎದುರಾಗುವ ರಸ್ತೆ ಉಬ್ಬುಗಳ ಬಗ್ಗೆ ಎಚ್ಚರದಿಂದಿರಬೇಕು. ಹಾಗಾಗಿ ವಾಹನಗಳ ನಡುವೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಇಂತಹ ವೇಗ ಮಿತಿಗಳ ಬಗ್ಗೆ ನಿಗಾವಹಿಸುವುದು ಒಳಿತು.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

06. ರಸ್ತೆ ಚಿಹ್ನೆ

ಪ್ರಯಾಣ ಹಾದಿಯ ಬಗ್ಗೆ ನಿಮಗೆ ಸ್ಪಷ್ಟವಾದ ಜ್ಞಾನವಿಲ್ಲದಿದ್ದಲ್ಲಿ ರಸ್ತೆ ಮಾರ್ಗ ಬದಿಗಳಲ್ಲಿರುವ ರಸ್ತೆ ಚಿಹ್ನೆಗಳನ್ನು ಪಾಲಿಸಲು ಮರೆಯದಿರಿ. ಕಡಿದಾದ ತಿರುವು, ಕಿರಿದಾದ ಸೇತುವೆ, ಅಂಕುಡೊಂಕುವಕ್ರಾಕೃತಿ, ಝಿಬ್ರಾ ಕ್ರಾಸಿಂಗ್, ಇಳಿಜಾರು, ರೈಲ್ವೆ ಕ್ರಾಸಿಂಗ್ ಹೀಗೆ ಎಲ್ಲ ರಸ್ತೆ ಚಿಹ್ನೆಗಳನ್ನು ನೋಡಿಕೊಂಡು ಮುನ್ನುಗಬೇಕು.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

07. ಎರಡು ಲೇನ್ ಹೆದ್ದಾರಿ

ಎರಡು ಲೇನ್ ಹೆದ್ದಾರಿಗಳನ್ನು ಸಮೀಪಿಸಿದಾಗ ವೇಗದಲ್ಲಿ ಮಿತಿಯಿರಲಿ. ಮುಂಭಾಗದಿಂದ ಬರುವ ವಾಹನಗಳು ಹೆಡ್ ಲೈಟ್ ಫ್ಲ್ಯಾಶ್ ಮಾಡಿದಾಗ ವಾಹನ ನಿಧಾನ ಮಾಡಿ ಆ ಗಾಡಿಗೆ ಮುಂದಕ್ಕೆ ಹೋಗಲು ಅನುವು ಮಾಡಿಕೊಡಿ. ಹಾಗೆಯೇ ಹೈ ಬಿಮ್ ಹೆಡ್ ಲೈಟ್ ಗಳನ್ನು ಡಿಮ್/ಡಿಪ್ ಮಾಡಲು ಮರೆಯದಿರಿ.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

08. ಘಾಟಿ ಪ್ರದೇಶ

ಘಾಟಿ ಪ್ರದೇಶದಂತಹ ಅಂಕು ಡೊಂಕಾದ ಕಡಿದಾದ ತಿರುವುಗಳನ್ನು ಒಳಗೊಂಡಿರುವ ಎರಡು ಲೇನ್ ಹೆದ್ದಾರಿಗಳಲ್ಲಿ ಚಲಿಸುವಾಗ ಅತೀಯ ಜಾಗ್ರತೆ ಅಗತ್ಯ. ಇಲ್ಲಿ ಓವರ್ ಟೇಕ್ ಮಾಡುವುದು ಶುದ್ಧ ಅಸಂಬಂಧ. ಅತೀವ ಏರಿಳಿತದಿಂದ ಕೂಡಿದ ಇಂತಹ ರಸ್ತೆಗಳಲ್ಲಿ ಲೇನ್ ತಪ್ಪುವುದು ಅಪಘಾತವನ್ನು ಕೈಬೀಸಿ ಕರೆದಂತೆ. ಇನ್ನು ರಸ್ತೆಗಳಲ್ಲಿ ಗುಂಡಿಗಳಿರುವುದರಿಂದ ನಿಧಾನವಾಗಿ ಸಂಚರಿಸಬೇಕು. ಘಾಟಿ ಪ್ರದೇಶದಲ್ಲಿ ಮೇಲಕ್ಕೆ ಏರುವ ವಾಹನಗಳು ಕಡಿದಾದ ತಿರುವುಗಳಲ್ಲಿ ಲೇನ್ ತಪ್ಪಿ ಬಲಭಾಗದತ್ತ ವಾಲುವ ಸಂಭವ ಇರುವುದರಿಂದ ಮೇಲಿಂದ ಕೆಳಕ್ಕೆ ಇಳಿಯುವ ವಾಹನಗಳು ವೇಗವನ್ನು ನಿಧಾನಗೊಳಿಸಿ ಮೇಲಕ್ಕೆರುವ ವಾಹನಗಳ ಸುಗಮ ಸಂಚಾರಕ್ಕೆ ಹಾದಿ ಬಿಟ್ಟುಕೊಡಬೇಕು.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

09. ದಣಿವು

ದೂರ ಪ್ರಯಾಣದ ವೇಳೆ ದಣಿವು ಆವರಿಸಲಿರುವುದರಿಂದ ಪ್ರಯಾಣದ ಮಧ್ಯೆ ಸಣ್ಣ ಪುಟ್ಟ ಬ್ರೇಕ್ ಪಡೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ರಾತ್ರಿ ವೇಳೆಯಲ್ಲಿ ಟೀ ಬ್ರೇಕ್ ನಿಮಗೆ ನಿದ್ರೆ ಬರುವುದನ್ನು ತಡೆಯಲಿದೆ. ಇನ್ನು ಒಂದಕ್ಕಿಂತ ಹೆಚ್ಚು ಚಾಲಕರಿದ್ದಲ್ಲಿ ಕಡಿಮೆ ಪಕ್ಷ ಪ್ರತಿ ಮೂರು ತಾಸಿಗೊಮ್ಮೆ ಚಾಲಕರನ್ನು ಬದಲಾಯಿಸಿಕೊಳ್ಳಿರಿ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

10. ಪಂಚರ್ ಆದಲ್ಲಿ

ಕಾರು ಬ್ರೇಕ್ ಡೌನ್ ಅಥವಾ ಪಂಚರ್ ಆದ್ದಲ್ಲಿ ರಸ್ತೆಯಿಂದ ಬದಿಗೆ ಸರಿಸಿ ಪಾರ್ಕಿಂಗ್ ಮಾಡಿಟ್ಟುಕೊಂಡು ಹಜಾರ್ಡ್ ಲೈಟ್ ಉರಿಸಲು ಮರೆಯದಿರಿ. ಕೆಂಪು ಪ್ರತಿಫಲಕ ಸೂಚನಾ ಫಲಕಗಳು ಇಲ್ಲಿ ನೆರವಿಗೆ ಬರಲಿದೆ. ಇದರಿಂದ ಚಕ್ರ ಬದಲಾಯಿಸಲು ಯಾವುದೇ ತೊಂದರೆ ಕಾಡದು.

ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನು ಅಂತ ನೀವೇ ನೋಡಿ...

11. ಅಪಕ್ವ ಚಾಲನೆ

ದೇಶದಲ್ಲಿ ನಡೆಯುತ್ತಿರುವ ಬಹುತೇಕ ಅಪಘಾತ ಪ್ರಕರಣಗಳು ಅಪಕ್ವ ರೀತಿಯ ಚಾಲನೆಯಿಂದಲೇ ನಡೆಯುತ್ತಿರುತ್ತದೆ. ಹಾಗಾಗಿ ಇತರರನ್ನು ದೂಷಿಸುವ ಮೊದಲು ನಿಮ್ಮ ತಪ್ಪನ್ನು ಮೊದಲು ಸರಿಪಡಿಸಿಕೊಂಡು ಸುರಕ್ಷಿತ ಚಾಲನೆಗೆ ಆಸ್ಪದ ಕೊಡರಿ.

Most Read Articles

Kannada
English summary
Maruti Suzuki Baleno Hits Share Auto Passengers Escape Unhurt - Shocking Video. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X