ಬಿಡುಗಡೆಯಾಗಲಿರುವ ಹೊಸ ಬಜಾಜ್ ಅರ್ಬನೈಟ್ ಸ್ಕೂಟರ್‍‍ನ ವಿಶೇಷತೆ ಏನು.?

ಬಜಾಜ್ ಸಂಸ್ಥೆಯು ತಮ್ಮ ಮೊದಲ ಆಟೋಮ್ಯಾಟಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವುದರ ಬಗ್ಗೆ ಮಾಹಿತಿಯನ್ನು ಹೊರಹಾಕಿದ್ದು, ಈಗಾಗಲೇ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್‍ ವೇಳೆ ಕಾಣಿಸಿಕೊಂಡಿದೆ. ರೆಟ್ರೋ ಮಾದರಿಯ ವಿನ್ಯಾಸವುಳ್ಳ ಈ ಸ್ಕೂಟರ್ ಅನ್ನು ಪುಣೆಯಲ್ಲಿನ ಉತ್ಪಾದನಾ ಘಟಕದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಅರ್ಬನೈಟ್ ಸ್ಕೂಟರ್‍‍ನ ವಿಶೇಷತೆ ಏನು.?

ಬಜಾಜ್ ಬಿಡುಗಡೆ ಮಾಡಲಿರುವ ಹೊಸ ಆಟೋಮ್ಯಾಟಿಕ ಸ್ಕೂಟರ್ ಅನ್ನು ಅರ್ಬನೈಟ್ ಅಂಬ್ರೆಲಾ ಎಂಬ ನೇಮ್‍ಪ್ಲೆಟ್ ಆಧಾರದ ಮೇಲೆ ನಿರ್ಮಾಣ ಮಾಡುತಿದ್ದು, ಈ ಸ್ಕೂಟರ್‍‍ಗೆ ಚೇತಕ್, ಲೆಜೆಂಡ್ ಅಥವಾ ಸ್ಟೈಡ್ ಎಂಬ ಮೂರು ಹೆಸರಿನಲ್ಲಿ ಒಂದು ಹೆಸರನ್ನು ಆಯ್ಕೆ ಮಾಡಿ ನಾಮಕರಣ ಮಾಡಲಿದೆ ಎಂಬ ಸುದ್ದಿಗಳು ಕೂಡಾ ಕೇಳಿವರುತ್ತಿದ್ದವು. ಈ ಮೂರು ಹೆಸರುಗಳು ಜನಪ್ರಿಯವಾಗಿದ್ದರೂ ಸಹ ಚೇತಕ್ ಮಾತ್ರ ಬಹು ಹಿಂದಿನಿಂದಲೂ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸದ್ದು ಮಾಡಿತ್ತು.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಅರ್ಬನೈಟ್ ಸ್ಕೂಟರ್‍‍ನ ವಿಶೇಷತೆ ಏನು.?

ಇದರಿಂದಾಗಿ ಅರ್ಬನೈಟ್ ಆಟೋಮ್ಯಾಟಿಕ್ ಸ್ಕೂಟರ್ ಕ್ಲಾಸಿಕ್ ಚೇತಕ್ ಹೆಸರನ್ನು ಅಳವಡಿಸಬಹುದೆಂಬ ಅವಕಾಶವಿದ್ದು, ಚೇತಕ್ ಎಂಬ ಹೆಸರನ್ನು ಇಟ್ಟಿದ್ದೆ ಆದಲ್ಲಿ ಸ್ಕೂಟರ್ ವಿಭಾಗದಲ್ಲಿ ತನ್ನ ಮಾರಾಟ ಸಂಖ್ಯೆಯನ್ನು ಉತ್ತಮವಾಗಿಸುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಸ್ಕೂಟರ್ ವಿಭಾಗದಲ್ಲಿ ಚೇತಕ್ ಎಂಬ ಹೆಸರು ಮತ್ತೆ ಕೇಳಿ ಬಂದಿದ್ದೆ ಆದಲ್ಲಿ, ಕ್ಲಾಸಿಕ್ ಮಾದರಿಯ ದ್ವಿಚಕ್ರ ಪ್ರೇಮಿಗಳಿಗೆ ಇದು ಬಹು ಬೇಗ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಅರ್ಬನೈಟ್ ಸ್ಕೂಟರ್‍‍ನ ವಿಶೇಷತೆ ಏನು.?

ಈಗಾಗಲೇ ಅರ್ಬನೈಟ್ ಪ್ರೊಟೊಟೈಪ್ ಸ್ಕೂಟರ್‍‍ಗಳು ಪುಣೆ ಮತ್ತು ಪುಣೆ ಹೊರಭಾಗದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮಾದರಿಗಳು ಕಾಣಿಸಿಕೊಂಡಿದೆ. ಅರ್ಬನೈಟ್ ಬ್ರಾಂಡ್ ಶೀಘ್ರವೇ ಪೆಟ್ರೋಲ್ ಮಾದರಿಯ ಪೆಟ್ರೋಲ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದು, ಮುಂದಿವ ವರ್ಷ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡಗಡೆ ಮಾಡಲಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಅರ್ಬನೈಟ್ ಸ್ಕೂಟರ್‍‍ನ ವಿಶೇಷತೆ ಏನು.?

ತಾಂತ್ರಿಕ ವೈಶಿಷ್ಟ್ಯತೆಗಳು

ಹೋಂಡಾ ಆಕ್ಟೀವಾ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುವ ಸಲುವಾಗಿ ಬಜಾಜ್ ಸಂಸ್ಥೆಯು ಈ ಸ್ಕೂಟರ್‍‍ನಲ್ಲಿ ಹೊಸ ಎಂಜಿನ್ ಮತ್ತು ಆಕ್ಟೀವಾ 125 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲು ಆಯಿಲ್ ಕೂಲ್ಡ್ ಎಂಜಿನ್ ಮಾದರಿಯನ್ನು ಸಹ ಪರಿಚಯಿಸಲಿದ್ದು, ಇನ್ನು ಎಲೆಕ್ಟ್ರಿಕ್ ಮಾದರಿಯ ಸ್ಕೂಟರ್‍‍ಗಳು ಅಥೆರ್ ಎನರ್ಜಿ ಸಂಸ್ಥೆಯ ಅಥೆರ್ 450 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಅಭಿವೃದ್ಧಿ ಮಾಡಲಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಅರ್ಬನೈಟ್ ಸ್ಕೂಟರ್‍‍ನ ವಿಶೇಷತೆ ಏನು.?

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಬಜಾಜ್ ಹಾಗು ಅರ್ಬನೈಟ್ ಸ್ಕೂಟರ್‍ ಕ್ಲಾಸಿಕ್ ವಿನ್ಯಾಸವನ್ನು ಪಡೆದುಕೊಂಡಿದ್ದು, ಎಲ್ಇಡಿ ಡಿಆರ್‍‍ಎಲ್‍ಗಳು, ಫುಲ್ಲಿ ಡಿಜಿಟಲ್ ಇಸ್ಟ್ರೂಮೆಂಟ್ ಕ್ಲಸ್ಟರ್, ಫ್ರಂಟ್ ಡಿಸ್ಕ್ ಬ್ರೇಕ್ ಆಯ್ಕೆ, ಯುಎಸ್‍ಬಿ ಚಾರ್ಜರ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದಿರಬಹುದು ಎಂಬ ಊಹೆಗಳಿವೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಅರ್ಬನೈಟ್ ಸ್ಕೂಟರ್‍‍ನ ವಿಶೇಷತೆ ಏನು.?

ಅರ್ಬನೈಟ್ ಸಂಸ್ಥೆಯು ಬಜಾಜ್ ಸಂಸ್ಥೆಯೊಂದಿಗೆ ಕೂಡಿ ಮತ್ತಷ್ಟು ಹೊಸ ವಾಹನಗಳನ್ನು ಬಿಡುಗಡೆಗೊಳಿಸುವ ಯೋಜನೆಯಿದ್ದು, ಭವಿಷ್ಯದಲ್ಲಿ ಅರ್ಬನೈಟ್ ಸಂಸ್ಥೆಯ ವಾಹನಗಳನ್ನು ನೀವು ಬಜಾಜ್ ಶೋರುಂಗಳಲ್ಲಿ ಖರೀದಿ ಮಾಡಬಹುದಾಗಿದೆ. ಈಗಾಗಲೇ ಕೆಟಿಎಂನೊಂದಿಗೆ ಕೈ ಜೋಡಿಸಿ ಪರ್ಫಾರ್ಮೆನ್ಸ್ ಬೈಕ್‍ಗಳ ವಿಭಾಗದಲ್ಲಿ ಸದ್ದು ಮಾಡುತ್ತಿರುವ ಬಜಾಜ್ ಇದೀಗ ಅರ್ಬನೈಟ್‍ನೊಂದಿಗೆ ಸ್ಕೂಟರ್‍‍ಗಳ ಉತ್ಪಾದನೆಗಾಗಿ ಕೈ ಜೋಡಿಸಿದೆ.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಅರ್ಬನೈಟ್ ಸ್ಕೂಟರ್‍‍ನ ವಿಶೇಷತೆ ಏನು.?

ಅರ್ಬನೈಟ್ ಬ್ರಾಂಡಿನ ಸ್ಕೂಟರ್‍ಅನ್ನು ಈ ವರ್ಷದ ಕೊನೆಯಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ. ಆದ ಕಾರಣ ಬಿಡುಗಡೆಗೆ ಮುನ್ನ ಸ್ಪಾಟ್ ಟೆಸ್ಟ್ ನಡೆಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಬಜಾಜ್ ಕಂಪನಿಯು ಪೆಟ್ರೋಲ್ ಮಾದರಿಯ ಸ್ಕೂಟರ್‍‍ಗಳನ್ನು ಮತ್ತೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬಜಾಜ್ ಕಂಪನಿಯು ಹಿಂದೆ ತನ್ನ ಗೇರ್ ಸ್ಕೂಟರ್ ಆದ ಚೇತಕ್‍‍ನಿಂದಾಗಿ ಖ್ಯಾತಿಗಳಿಸಿತ್ತು.

ಬಿಡುಗಡೆಯಾಗಲಿರುವ ಹೊಸ ಬಜಾಜ್ ಅರ್ಬನೈಟ್ ಸ್ಕೂಟರ್‍‍ನ ವಿಶೇಷತೆ ಏನು.?

ಬಜಾಜ್ ಕಂಪನಿಯು ಪೆಟ್ರೋಲ್ ಸ್ಕೂಟರ್ ಅನ್ನು ಮರು ಬಿಡುಗಡೆ ಮಾಡಲು ಎರಡು ಕಾರಣಗಳಿವೆ. ಮೊದಲನೆಯದು, ಸ್ಕೂಟರ್‍‍ಗಳು ಭಾರತದ ಆಟೋಮೋಬೈಲ್ ಉದ್ಯಮದ ಬಹು ದೊಡ್ಡ ಭಾಗವಾಗಿವೆ ಹಾಗೂ ಬಜಾಜ್ ಕಳೆದು ಹೋಗಿರುವ ತನ್ನ ಗತ ವೈಭವವನ್ನು ಮರಳಿ ಪಡೆಯಲು ಬಯಸಿದೆ. ಎರಡನೇಯದು, ಸ್ಕೂಟರ್ ಸೆಗ್‍‍ಮೆಂಟಿನ ಭಾಗವಾಗಲು ಬಯಸಿರುವ ಹೂಡಿಕೆದಾರರು ಬಜಾಜ್ ಕಂಪನಿಯ ಮೇಲೆ ಒತ್ತಡ ಹಾಕುತ್ತಿದ್ದಾರೆ.

Source: ThrustZone

Article Published On: Thursday, July 25, 2019, 15:59 [IST]
English summary
Bajaj Urbanite Scooter Spotted Testing Launch Ahead. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+