ಯೂರೋಪ್‍ನಲ್ಲಿ ಬಿಡುಗಡೆಗೊಂಡ ಬೆಂಟ್ಲಿ ಬೆಂಟಾಯ್ಗ ಹೈಬ್ರಿಡ್
ಬೆಂಟ್ಲಿ ಮೋಟಾರ್ಸ್ ಉತ್ತರ ಅಮೆರಿಕಾದ ಬಳಿಕ ಬೆಂಟಾಯ್ಗ ಹೈಬ್ರಿಡ್ ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದೀಗ ಬೆಂಟ್ಲಿ ಬೆಂಟಾಯ್ಗ ಹೈಬ್ರಿಡ್ ಮಾದರಿಯು ಅಂತರಾಷ್ಟ್ರೀಯ ಮಾರುಕಟ್ಟೆ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಲಭ್ಯವಿದೆ.

ಈ ಹೈಬ್ರಿಡ್ ರೂಪಾಂತರವು ಐಷಾರಾಮಿ ಎಸ್‍ಯುವಿಗಳಿಗೆ ಹೆಸರಾದ ಬೆಂಟ್ಲೆ ಮೋಟಾರ್ಸ್‍ನ ಮೊದಲ ಎಲೆಕ್ಟ್ರಿಫೀಕೇಶನ್ ಪ್ರಯತ್ನವಾಗಿದೆ. ಬ್ರಿಟನ್ ಮೂಲದ ವಾಹನ ತಯಾರಕ ಕಂಪನಿಯು 2023 ರ ವೇಳೆಗೆ ತನ್ನ ಎಲ್ಲಾ ಕಾರುಗಳನ್ನು ಎಲೆಕ್ಟ್ರಿಕರಣಗೊಳಿಸಲು ಯೋಜಿಸಿದೆ.

ಬೆಂಟ್ಲಿ ಬೆಂಟಾಯ್ಗದ ಹೈಬ್ರಿಡ್ ಮಾದರಿಯನ್ನು ಇಂಗ್ಲೆಂಡ್‍ನ ಕ್ರೀವ್‍ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಾಹನ ತಯಾರಕರು ಹೇಳುವಂತೆ ಇದು ಕಂಪನಿಯು ಕೇವಲ 79 ಕಿ.ಗ್ರಾಂ ಇಂಗಾಲದ ಡೈ ಆಕ್ಸೈಡ್ ನಿಂದ ತಯಾರಿಸಿರುವ ಕಾರು ಆಗಿರುತ್ತದೆ. ಅಲ್ಲದೇ ಹೈಬ್ರಿಡ್ ಎಂಜಿನ್ ಹೊಂದಿದ್ದರೂ, ಎಸ್‍ಯುವಿಯ ಅದೇ ರೀತಿಯ ಪರ್ಫಾಮೆನ್ಸ್ ನೀಡುತ್ತದೆ ಎಂದು ಬೆಂಟ್ಲಿ ಕಂಪನಿಯು ಹೇಳಿದೆ.

ಬೆಂಟ್ಲಿ ಬೆಂಟಾಯ್ಗ ಹೈಬ್ರಿಡ್ ಎಸ್‍ಯುವಿಯಲ್ಲಿ 3.0 ಲೀಟರಿನ ಟರ್ಬೋಚಾರ್ಜ್ಡ್ ವಿ 6 ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟಾರ್‍ನೊಂದಿಗೆ ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಮೋಟಾರ್ 126 ಬಿಹೆಚ್‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.ಈ ಎಲೆಕ್ಟ್ರಿಕ್ ಬ್ಯಾಟರಿಯನ್ನು ಕೇವಲ 2.5 ಗಂಟೆಗಳಲ್ಲಿ ಪೂರ್ತಿಯಾಗಿ ಜಾರ್ಜ್ ಮಾಡಬಹುದು.

ಹೊಸ ಎಸ್‍ಯುವಿಯನ್ನು ಇಂಟಿಲಿಜೆಂಟ್ ಸ್ಯಾಟಲೈಟ್ ನ್ಯಾವಿಗೇಷನ್ ಸೇರಿದಂತೆ ಹೊಸ ತಂತ್ರಜ್ಞಾನಗಳೊಂದಿಗೆ ಯೂರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಒಂದು ಬಾರಿಯ ಚಾರ್ಜ್‍ನಿಂದ 39 ಕಿ.ಮೀವರೆಗೂ ಚಲಿಸುತ್ತದೆ.

ಹೊಸ ಬೆಂಟಾಯ್ಗ ಎಸ್‍ಯುವಿಯಲ್ಲಿ ಇವಿ ಡ್ರೈವ್ ಮೋಡ್, ಹೈಬ್ರಿಡ್ ಮೋಡ್, ಹೋಲ್ಡ್ ಮೋಡ್ ಎಂಬ ಮೂರು ಹೈಬ್ರಿಡ್ ಮೋಡ್‍ಗಳಿವೆ. ವಾಹನಕ್ಕೆ ಶಕ್ತಿ ತುಂಬಲು ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸುತ್ತದೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಹೈಬ್ರಿಡ್ ಮೋಡ್‍ನಲ್ಲಿ ನ್ಯಾವಿಗೇಷನ್ ಸಿಸ್ಟಂನ ಮಾಹಿತಿಯು ಪವರ್ ಬಳಕೆಯನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ. ಹೋಲ್ಡ್ ಮೋಡ್‍ನಲ್ಲಿರುವಾಗ ಎಲೆಕ್ಟ್ರಿಕ್ ಶ್ರೇಣಿಯನ್ನು ಕಾಪಾಡಿಕೊಳ್ಳಲು ಎಂಜಿನ್ ಮತ್ತು ಎಲೆಕ್ಟ್ರಿಕ್ ಪವರ್ ಅನ್ನು ಸಮತೋಲನಗೊಳಿಸಲಾಗುತ್ತದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬೆಂಟ್ಲಿ ಕೇವಲ 5.5 ಸೆಕೆಂಡ್‍ಗಳಲ್ಲಿ 0-100 ಕಿ.ಮೀ ವೇಗವನ್ನು ಮುಟ್ಟುತ್ತದೆ.ಬೆಂಟ್ಲಿ ಎಸ್‍ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 254 ಕಿ.ಮೀಗಳಾಗಿದೆ. ಎಸ್‍ಯುವಿ ಬ್ರೇಕ್ ಎನರ್ಜಿ ರಿಜನರೇಷನ್ ಸಹ ಹೊಂದಿದೆ. ಈ ಫೀಚರ್ ಎಸ್‍ಯುವಿಯ ವೇಗವು ಕಡಿಮೆಯಾದಾಗ ಬ್ಯಾಟರಿಯನ್ನು ರೀಚಾರ್ಜ್ ಮಾಡುತ್ತದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿರುವ ಬೆಂಟ್ಲೆ ಬೆಂಟಾಯ್ಗ ಹೈಬ್ರಿಡ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗಿ ಯಶಸ್ಸುಗಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಈ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.


Click it and Unblock the Notifications