ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!
ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಭಾರತದ ಬಹುತೇಕ ಕಡೆಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಾಗಿದೆ. ಕಾನೂನು ಪಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ತಡೆಗಟ್ಟಲು ರಸ್ತೆಗಳಲ್ಲಿ ಹಾಜರಿರುವುದು, ಕ್ಯಾಮರಾಗಳ ಮೂಲಕ ನಿಗಾವಹಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಇದ್ದಾರೆ.

ಕಾನೂನು ಪಾಲಿಸ ಬೇಕಾದ ಪೊಲೀಸರೇ ನಿಯಮ ಉಲ್ಲಂಘಿಸುತ್ತಿರುವ ಹಲವು ಪ್ರಕರಣಗಳು ವರದಿಯಾಗಿವೆ. ಹಲವು ಬಾರಿ ನಿಯಮ ಉಲ್ಲಂಘಿಸುವಾಗ ಪೊಲೀಸರೇ ಸಿಕ್ಕಿ ಬಿದ್ದ ಪ್ರಸಂಗಗಳು ವರದಿಯಾಗಿವೆ. ಸೀಟ್ ಬೆಲ್ಟ್ ಧರಿಸದೇ ಜೀಪ್ ಚಲಾಯಿಸುತ್ತಿದ್ದ ಪೊಲೀಸರನ್ನು ಅಡ್ಡಗಟ್ಟಿದ್ದ ಬೈಕ್ ಸವಾರನೊಬ್ಬ ಸೀಟ್ ಬೆಲ್ಟ್ ಧರಿಸುವಂತೆ ಒತ್ತಾಯಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಈ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.
ಈ ವೀಡಿಯೊದಲ್ಲಿ ಬೈಕ್ ಚಾಲಕನು ಅಧಿಕೃತ ಪೊಲೀಸ್ ಜೀಪ್ ಅನ್ನು ಚೇಸ್ ಮಾಡುತ್ತಿರುವುದನ್ನು ಕಾಣಬಹುದು. ಈ ಘಟನೆಯನ್ನು ಬೈಕ್ ಚಾಲಕನು ತನ್ನ ಹೆಲ್ಮೆಟ್‍ನಲ್ಲಿದ್ದ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾನೆ. ಸಿಂಗಲ್ ಲೇನ್ ರಸ್ತೆಯಲ್ಲಿ, ಕೆಟಿಎಂ 390 ಡ್ಯೂಕ್ ಬೈಕ್ ಸವಾರ ಪೊಲೀಸ್ ವಾಹನದ ಪಕ್ಕಕ್ಕೆ ಬಂದು ಸೀಟ್ ಬೆಲ್ಟ್ ಬಗ್ಗೆ ಕೇಳುತ್ತಾನೆ.

ಪೊಲೀಸ್ ವಾಹನದಲ್ಲಿದ್ದ ಇಬ್ಬರು ಪೊಲೀಸರು ವಿಂಡೊ ತೆಗೆದು ಬೈಕ್ ಸವಾರನಿಗೆ ಉತ್ತರಿಸುತ್ತಾರೆ. ಆದರೂ ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆಯನ್ನು ಮುಂದುವರೆಸುತ್ತಾರೆ. ಬೈಕ್ ಚಾಲಕನು ಪೊಲೀಸ್ ವಾಹನವನ್ನು ಓವರ್‍ಟೇಕ್ ಮಾಡಿ, ವಾಹನವನ್ನು ಅಡ್ಡಗಟ್ಟಿ ನಿಲ್ಲಿಸುತ್ತಾನೆ.

ಮತ್ತೊಮ್ಮೆ ಬೈಕ್ ಸವಾರನು ಪೊಲೀಸರ ಬಳಿ ಸೀಟ್ ಬೆಲ್ಟ್ ಬಗ್ಗೆ ಕೇಳುತ್ತಾನೆ. ಆದರೆ ಪೊಲೀಸರು ಸೀಟ್ ಬೆಲ್ಟ್ ಧರಿಸಲು ನಿರಾಕರಿಸುತ್ತಾರೆ. ವಾದ ವಿವಾದಗಳ ನಂತರ ಇಬ್ಬರೂ ಪೊಲೀಸರು ಸೀಟ್ ಬೆಲ್ಟ್ ಧರಿಸುತ್ತಾರೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಸಹ ಜನಸಾಮಾನ್ಯರು ನಿಯಮ ಉಲ್ಲಂಘಿಸುವ ಪೊಲೀಸರನ್ನು ಪ್ರಶ್ನಿಸುತ್ತಿರುವ ವೀಡಿಯೊಗಳು ವೈರಲ್ ಆಗಿದ್ದವು. ಎಲ್ಲಾ ಪೊಲೀಸರು ನಿಯಮಗಳನ್ನು ಪಾಲಿಸುವುದಿಲ್ಲ.

ಹಿಂದೊಮ್ಮೆ ಹೆಲ್ಮೆಟ್ ಧರಿಸದ ಪೊಲೀಸರನ್ನು ಪ್ರಶ್ನಿಸಿದ್ದ ಬೈಕ್ ಸವಾರನನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇತ್ತೀಚಿಗೆ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ಪೊಲೀಸರೊಬ್ಬರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿತ್ತು.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಈ ಚಿತ್ರವನ್ನು ಗಮನಿಸಿದ್ದ ಹಿರಿಯ ಅಧಿಕಾರಿಗಳು, ಆ ಪೊಲೀಸ್ ಅನ್ನು ಅಮಾನತುಗೊಳಿಸಿದ್ದರು. ಆದರೂ ಸಹ, ಕೆಲವು ಪೊಲೀಸರು ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿಲ್ಲ. ಭಯದಿಂದಾಗಿ ಸಾರ್ವಜನಿಕರೂ ಸಹ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪೊಲೀಸರನ್ನು ಪ್ರಶ್ನಿಸುತ್ತಿಲ್ಲ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವಾಗ ಪೊಲೀಸರು ಕರ್ತವ್ಯದಲ್ಲಿರಬಹುದು. ಅವರನ್ನು ಈ ರೀತಿಯಾಗಿ ತಡೆದು ನಿಲ್ಲಿಸುವುದನ್ನು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಎಂದು ಕರೆಯಬಹುದು. ಇದರಿಂದ ಅವರನ್ನು ತಡೆದು ನಿಲ್ಲಿಸುವ ವ್ಯಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.
MOST READ: ಹೊಸ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಪೊಲೀಸರನ್ನು ತಡೆದು ನಿಲ್ಲಿಸುವುದು ಒಳ್ಳೆಯ ಕ್ರಮವಲ್ಲ. ನಿಯಮಗಳನ್ನು ಉಲ್ಲಂಘಿಸುವ ಪೊಲೀಸರು, ಟ್ರಾಫಿಕ್ ಸಿಗ್ನಲ್‌ನಲ್ಲಿದ್ದಾಗ ಅವರನ್ನು ಪ್ರಶ್ನಿಸಿದರೆ ಒಳ್ಳೆಯದು. ಅವರೊಂದಿಗೆ ಮಾತನಾಡಲು ಸಾಧ್ಯವಾಗದಿದ್ದರೆ, ನಿಯಮಗಳನ್ನು ಉಲ್ಲಂಘಿಸುತ್ತಿರುವ ವೀಡಿಯೊ ತೆಗೆದು ಕಂಪ್ಲೈಂಟ್ ಅನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಬಹುದು.

ಅಥವಾ ಆ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ಆ ವೀಡಿಯೊಗೆ ಹಿರಿಯ ಅಧಿಕಾರಿಗಳನ್ನು ಟ್ಯಾಗ್ ಮಾಡುವುದು ಒಳಿತು. ಈ ರೀತಿ ಮಾಡುವುದರಿಂದ ನಿಯಮ ಉಲ್ಲಂಘಿಸುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.

ಆಗಸ್ಟ್ 15ರಿಂದ ತಿದ್ದುಪಡಿಯಾದ ಹೊಸ ಮೋಟಾರು ವಾಹನ ಕಾಯ್ದೆಯು ಜಾರಿಗೆ ಬಂದಿದೆ. ಈ ಕಾಯ್ದೆಯ ಪ್ರಕಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೆಚ್ಚಿನ ಪ್ರಮಾಣದ ದಂಡಗಳನ್ನು ವಿಧಿಸಲಾಗುವುದು. ಇದರಿಂದಾಗಿ ನಿಯಮ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಗಳಿವೆ.

ಈ ಕಾಯ್ದೆಯ ಪ್ರಕಾರ ನಿಯಮಗಳನ್ನು ಉಲ್ಲಂಘಿಸುವ ಸರ್ಕಾರಿ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಎರಡು ಪಟ್ಟು ಹೆಚ್ಚು ದಂಡ ವಿಧಿಸ ಬಹುದಾಗಿವೆ. ಆದರೆ ಇದುವರೆಗೂ ಯಾವ ಸರ್ಕಾರಿ ನೌಕರರಿಗೂ ಈ ರೀತಿಯಾಗಿ ದಂಡ ವಿಧಿಸಿದ ಪ್ರಕರಣಗಳು ದಾಖಲಾಗಿಲ್ಲ.
Source: INFINITY 7/YouTube


Click it and Unblock the Notifications








