ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಇ‍‍ಆರ್ ಹಾಗೂ ಎನ್‍‍ವೈ‍ಎಕ್ಸ್ ಇ‍ಆರ್ ಎಂಬ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.68,721 ಹಾಗೂ ರೂ.69,754 ಗಳಾಗಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ಕಂಪನಿಯ ಹೈ ಸ್ಪೀಡ್ ಸರಣಿಯ ಸ್ಕೂಟರ್‍‍ಗಳಾದ ಸ್ಟ್ಯಾಂಡರ್ಡ್ ಆಪ್ಟಿಮಾ ಇ5 ಹಾಗೂ ಎನ್‍‍ವೈ‍ಎಕ್ಸ್ ಇ5 ಸ್ಕೂಟರ್‍‍ಗಳನ್ನು ಅಭಿವೃದ್ದಿ ಪಡಿಸಿ ಆಪ್ಟಿಮಾ ಇ‍ಆರ್ ಹಾಗೂ ಎನ್‍‍ವೈ‍ಎಕ್ಸ್ ಇ‍ಆರ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಎರಡೂ ಹೊಸ ಸ್ಕೂಟರ್‍‍ಗಳಲ್ಲಿ ಸ್ಟಾಂಡರ್ಡ್ ಮಾದರಿಯಲ್ಲಿರುವಂತಹ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಆದರೆ ಸ್ಟಾಂಡರ್ಡ್ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳಲ್ಲಿ ಎರಡು ಬ್ಯಾಟರಿ ಪ್ಯಾಕ್‍‍ಗಳಿದ್ದರೆ, ಹೊಸ ಸ್ಕೂಟರ್‍‍ಗಳಲ್ಲಿ ಏಕೈಕ ಮೋಟಾರ್ ಇರಲಿದ್ದು, ಹೆಚ್ಚು ದೂರ ಪ್ರಯಾಣಿಸಲಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಇಆರ್, 48 ವೋಲ್ಟ್ ಸಿಂಗಲ್ ಬ್ಯಾಟರಿ ಪ್ಯಾಕ್‌ ಹೊಂದಿರುವ 600 ವ್ಯಾಟ್‍‍ನ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟರ್‌ ಹೊಂದಿರಲಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸ್ಟ್ಯಾಂಡರ್ಡ್ ಸ್ಕೂಟರ್‍‍ನಂತಹ ಪರ್ಫಾಮೆನ್ಸ್ ನೀಡಲಿದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 40 ಕಿ.ಮೀ ಎಂದು ನಿಗದಿಪಡಿಸಲಾಗಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಈ ಸ್ಕೂಟರಿನಲ್ಲಿರುವ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ದೂರವನ್ನು ಕ್ರಮಿಸುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಬ್ಯಾಟರಿಯು 4.5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಹೀರೋ ಎಲೆಕ್ಟ್ರಿಕ್ ಎನ್‍‍ವೈ‍ಎಕ್ಸ್ ಇಆರ್ ಸ್ಕೂಟರ್, ಆಪ್ಟಿಮಾ ಇ‍ಆರ್‍‍ನಲ್ಲಿರುವಂತಹ 48 ವೋಲ್ಟ್ ಬ್ಯಾಟರಿ ಪ್ಯಾಕ್ ಹಾಗೂ 600ವ್ಯಾಟ್‍‍ನ ಬಿಎಲ್‌ಡಿಸಿ ಮೋಟರ್ ಅನ್ನು ಹೊಂದಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಈ ಸ್ಕೂಟರ್ ಸಹ ಆಪ್ಟಿಮಾ ಇಆರ್ ಸ್ಕೂಟರ್‍‍ನಂತಹ ಸ್ಪೀಡ್, ಪರ್ಫಾಮೆನ್ಸ್, ಮೈಲೇಜ್ ಹೊಂದಿದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 40 ಕಿ.ಮೀಗಳಾಗಿದೆ. ಒಂದು ಬಾರಿಯ ಚಾರ್ಜ್‍‍ನಿಂದಾಗಿ 100 ಕಿ.ಮೀವರೆಗೆ ಚಲಿಸಲಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಹೊಸ ಸ್ಕೂಟರ್‍‍ಗಳ ಬಿಡುಗಡೆಯ ನಂತರ ಮಾತನಾಡಿದ ಹೀರೋ ಎಲೆಕ್ಟ್ರಿಕ್ ಇಂಡಿಯಾದ ಸಿಇಒ ಸೊಹಿಂದರ್ ಗಿಲ್‍‍ರವರು, ನಮ್ಮ ಎಲ್ಲ ಗ್ರಾಹಕರಿಗೆ ಉತ್ತಮವಾದ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ನೀಡಲು ನಾವು ಬಯಸುತ್ತೇವೆ. ಇ ಸ್ಕೂಟರ್‌ಗಳು ಕ್ರಮಿಸುವ ದೂರದ ಬಗ್ಗೆ ಹೆಚ್ಚಿನ ದೂರುಗಳು ಕೇಳಿ ಬಂದಿದ್ದವು.

ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಆಪ್ಟಿಮಾ ಇಆರ್ ಹಾಗೂ ಎನ್‍‍‍ವೈ‍ಎಕ್ಸ್ ಇಆರ್‌ ಸ್ಕೂಟರ್‍‍ಗಳಲ್ಲಿ ನಾವು ಆ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಇದರ ಜೊತೆಗೆ ಪರ್ಫಾಮೆನ್ಸ್ ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ. ಈ ಸೇರ್ಪಡೆಗಳ ಜೊತೆಗೆ ಫೇಮ್ 2 ಸೌಲಭ್ಯಗಳನ್ನು ಗ್ರಾಹಕರು ಪ್ರಶಂಸಿಸುತ್ತಾರೆ ಎಂಬ ವಿಶ್ವಾಸವಿದೆ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಈ ಸ್ಕೂಟರ್‍‍ಗಳು ಹೆಚ್ಚಿನ ದೂರವನ್ನು ಕ್ರಮಿಸಲಿವೆ ಎಂದು ಹೇಳಿದರು. ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಬಿಡುಗಡೆಯ ಜೊತೆಗೆ, ಹೀರೋ ಎಲೆಕ್ಟ್ರಿಕ್ ಬೆಂಗಳೂರಿನಲ್ಲಿ ಹೊಸ ಕಾರ್ಪೋರೇಟ್ ಕಚೇರಿಯನ್ನು ಆರಂಭಿಸುವುದಾಗಿ ತಿಳಿಸಿದೆ.

MOST READ: ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಈ ಕಚೇರಿಯನ್ನು ದಕ್ಷಿಣ ಭಾರತದಲ್ಲಿ ಕಂಪನಿಯನ್ನು ವಿಸ್ತರಿಸುವ ಯೋಜನೆಯ ಭಾಗವಾಗಿ ಆರಂಭಿಸಲಾಗುತ್ತಿದೆ. ಹೀರೋ ಎಲೆಕ್ಟ್ರಿಕ್, ಸದ್ಯ ಇರುವ 615 ಕಸ್ಟಮರ್ ಟಚ್ ಪಾಯಿಂಟ್‍‍ಗಳನ್ನು 2020ರ ವೇಳೆಗೆ 1000ಕ್ಕೆ ಏರಿಸುವ ಯೋಜನೆಯನ್ನು ಹೊಂದಿದೆ.

MOST READ: ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್

ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೀರೋ ಎಲೆಕ್ಟ್ರಿಕ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ದೂರ ಚಲಿಸುವ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದೆ. ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಹೆಚ್ಚು ದೂರ ಚಲಿಸುವುದಿಲ್ಲ ಎಂಬ ಆತಂಕವನ್ನು ಹೀರೋ ಎಲೆಕ್ಟ್ರಿಕ್ ದೂರ ಮಾಡಿದೆ. ಬಿಡುಗಡೆಯಾಗಿರುವ ಹೀರೋ ಎಲೆಕ್ಟ್ರಿಕ್‍‍ನ ಎರಡು ಹೊಸ ಸ್ಕೂಟರ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ಅವಾನ್ ಟ್ರೆಂಡ್ ಇ, ಒಕಿನಾವಾ ಪ್ರೈಸ್ ಹಾಗೂ ಅಥೆರ್ 450 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿವೆ.

Most Read Articles

Kannada
English summary
Hero Electric Optima ER & Nyx ER Electric Scooters Launched In India: Prices Start At Rs 68,721 - Read in kannada
Story first published: Monday, August 19, 2019, 16:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X