3 ಸೀರಿಸ್ ಜಿಟಿ ಸೆಡಾನ್ ಕಾರು ಮಾರಾಟಕ್ಕೆ ಬಿಎಂಡಬ್ಲ್ಯು ಗುಡ್‌ ಬೈ?

ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಹಲವು ವರ್ಷಗಳಿಂದ ಮಾರಾಟವಾಗುತ್ತಿರುವ 3 ಸೀರಿಸ್ ಜಿಟಿ ಸೆಡಾನ್ ಕಾರು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸಲಿದೆ ಎನ್ನಲಾಗಿದ್ದು, ಇದಕ್ಕೆ ಪೂರಕ ಎಂಬಂತೆ ಬಿಎಂಡಬ್ಲ್ಯು ಸಂಸ್ಥೆಯೇ 3 ಸೀರಿಸ್ ಜಿಟಿ ಉತ್ಪಾದನೆಯನ್ನು ಕೈಬಿಡುವ ಬಗ್ಗೆ ಸುಳಿವು ನೀಡಿದೆ.

3 ಸೀರಿಸ್ ಜಿಟಿ ಸೆಡಾನ್ ಕಾರು ಮಾರಾಟಕ್ಕೆ ಬಿಎಂಡಬ್ಲ್ಯು ಗುಡ್‌ ಬೈ?

ಹೌದು, ಈ ಹಿಂದೆ 1975ರಲ್ಲಿ ಬಿಡುಗಡೆಯಾಗಿ ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡು ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದ 3 ಸೀರಿಸ್ ಮಾದರಿಯು ಕಳೆದ ಕೆಲ ವರ್ಷಗಳಿಂದ ಮಾರಾಟದಲ್ಲಿ ಸೊನ್ನೆ ಸುತ್ತುತ್ತಿದೆ. ಈ ಹಿನ್ನೆಲೆಯಲ್ಲಿ 3 ಸೀರಿಸ್ ಜಿಟಿ ಮಾದರಿಯ ಉತ್ಪಾದನೆಯನ್ನು ನಿಲ್ಲಿಸುವ ಕುರಿತು ಬಿಎಂಡಬ್ಲ್ಯು ಸಂಸ್ಥೆಯ ಹಿರಿಯ ಅಧಿಕಾರಿಗಳೇ ಮಾಹಿತಿ ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

3 ಸೀರಿಸ್ ಜಿಟಿ ಸೆಡಾನ್ ಕಾರು ಮಾರಾಟಕ್ಕೆ ಬಿಎಂಡಬ್ಲ್ಯು ಗುಡ್‌ ಬೈ?

ಸದ್ಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳ ಮಾರಾಟದಲ್ಲಿ ಸೆಡಾನ್ ಆವೃತ್ತಿಗಳಿಂತ ಎಸ್‌ಯುವಿ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದೆ. ಇದರಿಂದ ಮಧ್ಯಮ ಗಾತ್ರದ ಐಷಾರಾಮಿ ಸೆಡಾನ್ ಆವೃತ್ತಿಗಳಿಗೆ ತೀವ್ರ ಹಿನ್ನಡೆಯಾಗುತ್ತಿರುವುದು 3 ಸೀರಿಸ್ ಜಿಟಿ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ.

3 ಸೀರಿಸ್ ಜಿಟಿ ಸೆಡಾನ್ ಕಾರು ಮಾರಾಟಕ್ಕೆ ಬಿಎಂಡಬ್ಲ್ಯು ಗುಡ್‌ ಬೈ?

ಈ ಕುರಿತು ಬಿಎಂಡಬ್ಲ್ಯು ಇಂಡಿಯಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮ ಸಂಸ್ಥೆಯೊಂದರ ಸಂದರ್ಶನದಲ್ಲಿ 3 ಸೀರಿಸ್ ಜಿಟಿ ಸ್ಥಗಿತಗೊಳಿಸುತ್ತಿರುವ ಬಗ್ಗೆ ಮಾತನಾಡಿದ್ದು, ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸುವ ಕಾರು ಆವೃತ್ತಿಗಳನ್ನು ಕೈಬಿಡುವುದು ಅನಿವಾರ್ಯ ಎಂದಿದ್ದಾರೆ.

3 ಸೀರಿಸ್ ಜಿಟಿ ಸೆಡಾನ್ ಕಾರು ಮಾರಾಟಕ್ಕೆ ಬಿಎಂಡಬ್ಲ್ಯು ಗುಡ್‌ ಬೈ?

ಆದ್ರೆ ಸದ್ಯಕ್ಕೆ 3 ಸೀರಿಸ್ ಜಿಟಿ ಉತ್ಪಾದನೆಯನ್ನು ಮುಂದುವರಿಸುವ ಬಗ್ಗೆ ಮಾಹಿತಿ ನೀಡಿರುವ ಬಿಎಂಡಬ್ಲ್ಯು ಹಿರಿಯ ಅಧಿಕಾರಿಗಳು, ಮುಂದಿನ ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತೇವೆ. ಅಲ್ಲಿನ ತನಕ 3 ಸೀರಿಸ್ ಜಿಟಿ ಆವೃತ್ತಿಗಳು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿರದೆ ಎಂದಿದ್ದಾರೆ.

3 ಸೀರಿಸ್ ಜಿಟಿ ಸೆಡಾನ್ ಕಾರು ಮಾರಾಟಕ್ಕೆ ಬಿಎಂಡಬ್ಲ್ಯು ಗುಡ್‌ ಬೈ?

ಇದಲ್ಲದೇ ಬಿಎಂಡಬ್ಲ್ಯು ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆ ತಕ್ಕಂತೆ ಸೆಡಾನ್ ಕಾರುಗಳಿಂತ ಹೆಚ್ಚು ಎಸ್‌ಯುವಿ ಕಾರುಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಎಕ್ಸ್ ಸೀರಿಸ್ ಕಾರುಗಳ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

3 ಸೀರಿಸ್ ಜಿಟಿ ಸೆಡಾನ್ ಕಾರು ಮಾರಾಟಕ್ಕೆ ಬಿಎಂಡಬ್ಲ್ಯು ಗುಡ್‌ ಬೈ?

ಹೀಗಾಗಿ ಭವಿಷ್ಯದಲ್ಲಿ ಕೆಲವೇ ಕೆಲವು ಸೆಡಾನ್ ಮಾದರಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಕಾರು ಆವೃತ್ತಿಗಳನ್ನು ಎಸ್‌ಯುವಿ ಮಾದರಿಯಲ್ಲೇ ಮಾರಾಟ ಮಾಡಲು ನಿರ್ಧರಿಸಿದ್ದು, ಪ್ರತಿಸ್ಪರ್ಧಿ ಕಾರು ಉತ್ಪಾದನಾ ಸಂಸ್ಥೆಗಳಾದ ಆಡಿ, ಮರ್ಸಿಡಿಸ್ ಬೆಂಝ್ ಮತ್ತು ವೋಲ್ವೋ ಸಂಸ್ಥೆಗಳಿಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಕಾರುಗಳನ್ನು ಅಭಿವೃದ್ಧಿಗೊಳಿಸಲಿದೆ.

3 ಸೀರಿಸ್ ಜಿಟಿ ಸೆಡಾನ್ ಕಾರು ಮಾರಾಟಕ್ಕೆ ಬಿಎಂಡಬ್ಲ್ಯು ಗುಡ್‌ ಬೈ?

ಇನ್ನು 3 ಸೀರಿಸ್ ಜಿಟಿ ಮಾದರಿಯು 2.0-ಲೀಟರ್ ಡೀಸೆಲ್ ಎಂಜಿನ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಡೀಸೆಲ್ ಆವೃತ್ತಿಯು 190-ಬಿಎಚ್‌ಪಿ, 400-ಎನ್ಎಂ ಟಾರ್ಕ್ ಮತ್ತು ಪೆಟ್ರೋಲ್ ಆವೃತ್ತಿಯು 252-ಬಿಎಚ್‌ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ನಕಲಿ ಕಾರು ಮಾರಿ ಟೋಪಿ ಹಾಕಿದ ಡೀಲರ್..!

3 ಸೀರಿಸ್ ಜಿಟಿ ಸೆಡಾನ್ ಕಾರು ಮಾರಾಟಕ್ಕೆ ಬಿಎಂಡಬ್ಲ್ಯು ಗುಡ್‌ ಬೈ?

ಈ ಮೂಲಕ ಪರ್ಫಾಮೆನ್ಸ್ ಪ್ರಿಯರ ಮೆಚ್ಚುಗೆ ಕಾರಣವಾಗಿರುವ 3 ಸೀರಿಸ್ ಜಿಟಿ ಕಾರು ಮಾದರಿಗೆ ಇತ್ತೀಚೆಗೆ ಪ್ರತಿಸ್ಪರ್ಧಿ ಕಾರು ಮಾದರಿಗಳು ಹೆಚ್ಚುತ್ತಿದ್ದು, ಮಾರಾಟದಲ್ಲಿ ತೀವ್ರ ಪೈಪೋಟಿಯಿಂದಾಗಿ ನಿಗದಿತ ಮಟ್ಟದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ. ಹೀಗಿರುವಾಗ ಬೇಡಿಕೆಯಿಲ್ಲದ ವಾಹನಗಳ ಉತ್ಪಾದನೆಯನ್ನು ಕೈಬಿಡುವುದು ಆಟೋ ಉದ್ಯದಮದಲ್ಲಿ ಹೊಸ ವಿಚಾರ ಅಲ್ಲವೇ ಅಲ್ಲ.

Most Read Articles

Kannada
English summary
Low Sales Numbers Forces BMW To Discontinue 3-Series GT.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X