ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಬಿಎಂಡಬ್ಲ್ಯು ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಎಲ್ಲಾ ಪೆಟ್ರೋಲ್ ಎಂಜಿನ್ ವಾಹನಗಳು ಬಿಎಸ್6 ಎಂಜಿನ್ ಹೊಂದಲಿವೆ ಎಂದು ಘೋಷಿಸಿದೆ. ಭಾರತದಲ್ಲಿ ಮಾರಾಟವಾಗುವ ಬಿಎಂಡಬ್ಲ್ಯು ಕಂಪನಿಯ ಎಲ್ಲಾ ಪೆಟ್ರೋಲ್ ಎಂಜಿನ್ ವಾಹನಗಳನ್ನು ಹೊಸ ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಅಪ್‍‍ಡೇಟ್‍‍ಗೊಳಿಸಲಾಗುವುದು.

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಹೊಸ ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಅದಕ್ಕೂ ಮುನ್ನ ಬಿಎಂಡಬ್ಲ್ಯು ಕಂಪನಿಯ ಕಾರುಗಳು ಬಿಎಸ್ 6 ಎಂಜಿನ್ ಹೊಂದಲಿವೆ. ಡೀಸೆಲ್ ಎಂಜಿನ್‍‍ಗಳನ್ನು ಮುಂಬರುವ ದಿನಗಳಲ್ಲಿ ನವೀಕರಿಸಲಾಗುವುದೆಂದು ಕಂಪನಿ ತಿಳಿಸಿದೆ.

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಬಿಎಸ್ 6 ಡೀಸೆಲ್ ಎಂಜಿನ್‍‍ಗಳ ಉತ್ಪಾದನೆಯನ್ನು ಕಂಪನಿಯು ಆರಂಭಿಸಿದೆ. ಇವುಗಳಲ್ಲಿ 5 ಸೀರಿಸ್ ಹಾಗೂ 6 ಸೀರಿಸ್ ಜಿಟಿ ಕಾರುಗಳೂ ಸಹ ಸೇರಿವೆ. ಬಿ‍ಎಂ‍‍ಡಬ್ಲ್ಯು ಕಂಪನಿಯು ಶೀಘ್ರದಲ್ಲೇ ತನ್ನ ಸರಣಿಯಲ್ಲಿ ಬಿಎಸ್ 6 ಡೀಸೆಲ್ ಎಂಜಿನ್ ಹೊಂದಿರುವ ಮೂರನೇ ಕಾರ್ ಆದ ಎಕ್ಸ್ 1 ಉತ್ಪಾದನೆಯನ್ನು ಆರಂಭಿಸಲಿದೆ.

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ಹಾಗೂ ಸಿಇಒ ಆದ ರುದ್ರತೇಜ್‍‍ರವರು ಮಾತನಾಡಿ, 2019ರಲ್ಲಿ ನಮ್ಮ ಹೊಸ ಕಾರುಗಳ ಬಂಡವಾಳವು ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿವೆ.

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಬಿಎಸ್ 6 ಎಂಜಿನ್ ಕಾರುಗಳನ್ನು ನಿಗದಿತ ಸಮಯಕ್ಕಿಂತ ಮುಂಚೆಯೇ ಆರಂಭಿಸಿ ನಮ್ಮ ಹೊಸ ಕಾರುಗಳಿಗೆ ಬೇಡಿಕೆಯನ್ನು ಪೂರೈಸಲು ನಾವು ಮಾಡುತ್ತಿರುವ ಕಾರ್ಯತಂತ್ರದ ವಿಧಾನವಾಗಿದೆ ಎಂದು ಹೇಳಿದರು.

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಬಿಎಂಡಬ್ಲ್ಯು ಇಂಡಿಯಾದ ಗ್ರಾಹಕರು ನಮ್ಮ ಸರಣಿಯಲ್ಲಿರುವ ಯಾವುದೇ ವಾಹನದಲ್ಲಿ ಬಿಎಸ್ 6 ಎಂಜಿನ್ ಹೊಂದಿರುವ ಕಾರು ಖರೀದಿಸ ಬಹುದು. ಬಿಎಂಡಬ್ಲ್ಯು ಸರಣಿಯ ಕಾರುಗಳು ಆಕರ್ಷಕವಾಗಿವೆ. ಹೊಸ ಟೆಕ್ನಾಲಜಿಯನ್ನು ಬಿಎಸ್ 4 ಮಾದರಿಯ ಸೀಮಿತ ಕಾರುಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಭಾರತದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಕಾರುಗಳನ್ನು ಬಿಎಸ್ 4 ಹಾಗೂ ಬಿಎಸ್ 6 ಎರಡೂ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುತ್ತದೆಂದು ಬಿಎಂಡಬ್ಲ್ಯು ತಿಳಿಸಿದೆ. ಬಿಎಂಡಬ್ಲ್ಯು ಗ್ರಾಹಕರು ಕಾರು ಖರೀದಿಸುವ ವೇಳೆಯಲ್ಲಿ ಎರಡೂ ಎಂಜಿನ್‍‍ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿ‍ಎಂ‍‍ಡಬ್ಲ್ಯು ಬಿಎಸ್ 6 ಎಂಜಿನ್ ಹೊಂದಿರುವ ತನ್ನ ಕಾರುಗಳ ಬೆಲೆಯನ್ನು ಶೀಘ್ರದಲ್ಲೇ 6%ನಷ್ಟು ಹೆಚ್ಚಿಸುವುದಾಗಿ ತಿಳಿಸಿದೆ. ಕಂಪನಿಯು ಕೆಲ ಬಿಎಸ್ 4 ಮಾದರಿಗಳ ಮೇಲೆ ಹಣಕಾಸಿನ ಪ್ರಯೋಜನಗಳನ್ನು ನೀಡುತ್ತಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಬಿಎಂಡಬ್ಲ್ಯು ಕಂಪನಿಯು ಇತ್ತೀಚೆಗೆ 2019ರ 3 ಸೀರಿಸ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ದೇಶಿಯ ಮಾರುಕಟ್ಟೆಯಲ್ಲಿರುವ ಹೊಸ ತಲೆಮಾರಿನ ಬಿಎಂಡಬ್ಲ್ಯು 3 ಸೀರಿಸ್ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.41.40 ಲಕ್ಷಗಳಾಗಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಹೊಸ ಬಿಎಂಡಬ್ಲ್ಯು 3 ಸೀರಿಸ್ ಕಾರ್ ಅನ್ನು ಮೂರು ಮಾದರಿಗಳಲ್ಲಿ, ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ ಬಿ‍ಎಂ‍ಡಬ್ಲ್ಯು ಕಂಪನಿಯು ತನ್ನ ಎಂ 5 ಕಾಂಪಿಟೇಷನ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಈ ಹೊಸ ವಾಹನದ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.54 ಕೋಟಿಗಳಾಗಿದೆ. ಹೊಸ ಬಿಎಂಡಬ್ಲ್ಯು ಎಂ 5 ಕಾಂಪಿಟೇಷನ್, ಸ್ಟ್ಯಾಂಡರ್ಡ್ ಎಂ 5 ಮಾದರಿಗಿಂತ ಹೆಚ್ಚು ಪರ್ಫಾಮೆನ್ಸ್ ಆಧಾರಿತ ಸೆಡಾನ್ ಆಗಿದೆ. ಈ ವಾಹನವು ಹಲವಾರು ಫೀಚರ್‍‍ಗಳನ್ನು ಹೊಂದಿದೆ.

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿ‍ಎಂ‍‍ಡಬ್ಲ್ಯು ಭಾರತದಲ್ಲಿರುವ ಹಲವು ಐಷಾರಾಮಿ ಕಾರು ಕಂಪನಿಗಳ ಪೈಕಿ ಒಂದಾಗಿದೆ. ಈ ಸೆಗ್‍‍ಮೆಂಟಿನಲ್ಲಿರುವ ಕಂಪನಿಗಳಲ್ಲಿ ಮೊದಲ ಬಾರಿಗೆ ತನ್ನ ಎಲ್ಲಾ ಕಾರುಗಳನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದೆ.

ಬಿ‍ಎಸ್ 6 ಎಂಜಿನ್ ಹೊಂದಲಿವೆ ಬಿಎಂಡಬ್ಲ್ಯು ಪೆಟ್ರೋಲ್ ಕಾರುಗಳು

ಬಿ‍ಎಂ‍‍ಡಬ್ಲ್ಯು ಕಳೆದ ಕೆಲ ತಿಂಗಳ ಅವಧಿಯಲ್ಲಿ ಹಲವಾರು ಕಾರುಗಳನ್ನು ಬಿಡುಗಡೆಗೊಳಿಸಿದೆ. 3 ಸೀರಿಸ್ ಹಾಗೂ ಎಂ 5 ಕಾಂಪಿಟೇಷನ್ ಕಾರುಗಳ ಜೊತೆಗೆ ಬಿ‍ಎಂ‍‍ಡಬ್ಲ್ಯು ಕಂಪನಿಯು 7 ಸೀರಿಸ್ ಹಾಗೂ ಎಕ್ಸ್ 7 ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

Most Read Articles

Kannada
English summary
BMW Updates Portfolio With BS6-Compliant Models In India: Production Of Updated Models Begin - Read in Kannada
Story first published: Friday, November 22, 2019, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X