ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಮಿನಿ ಬ್ರಾಂಡ್ ಅಡಿಯಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಸಂಬಂಧ ಅಧ್ಯಯನ ಮಾಡುತ್ತಿರುವುದಾಗಿ ಘೋಷಿಸಿದೆ. ಎಲೆಕ್ಟ್ರಿಕ್ ಮೊಬಿಲಿಟಿಯನ್ನು ನೀಡುವ ಉದ್ದೇಶದಿಂದ ಕಂಪನಿಯು ತನ್ನ ಉತ್ಪನ್ನಗಳಲ್ಲಿ ಬದಲಾವಣೆ ನೀಡಲು ಬಯಸಿದೆ.

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಎಕಾನಾಮಿಕ್ ಟೈಮ್ಸ್ ಆಟೋ ಪ್ರಕಾರ, ಭಾರತದ ಕಂಪನಿಗಳು ತಮ್ಮದೇ ಕಂಪನಿಯ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿರುವ ಸಂದರ್ಭದಲ್ಲಿ ಬಿಎಂಡಬ್ಲ್ಯು ಈ ಪ್ರಕಟಣೆ ನೀಡಿದೆ. ವಿದೇಶಿ ಮೂಲದ ಕಂಪನಿಗಳು ತಮ್ಮ ಸರಣಿಯಲ್ಲಿ ವಿದ್ಯುತ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಏಷ್ಯಾ-ಪೆಸಿಫಿಕ್, ಪೂರ್ವ ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕನ್ ದೇಶಗಳ ಮಿನಿ ಮುಖ್ಯಸ್ಥರಾದ ಫ್ರಾಂಕೋಯಿಸ್ ರೋಕಾರವರು ಮಾತನಾಡಿ, ಎಲೆಕ್ಟ್ರಿಕ್ ಮೊಬಿಲಿಟಿಯನ್ನು ಸ್ವಾಗತಿಸಲು ಮಾರುಕಟ್ಟೆ ಸಿದ್ಧವಾಗಿದ್ದರೆ, ನಾವು ಅಲ್ಲಿಯೇ ಇರುತ್ತೇವೆ.

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಚೆನ್ನೈನಲ್ಲಿ ನಮ್ಮ ಒಂದು ಘಟಕವಿದ್ದು, ಇದರಿಂದ ನಮಗೆ ಅನುಕೂಲವಾಗಲಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ವಾಹನಗಳನ್ನು ನೀಡಬಹುದು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಕಾರ್ಯಸಾಧ್ಯತೆಯನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ ಎಂದು ಹೇಳಿದರು.

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ವಿದ್ಯುತ್ ವಾಹನಗಳನ್ನು ಬಿಡುಗಡೆಗೊಳಿಸುವುದು ದೇಶದ ಮೂಲಸೌಕರ್ಯಗಳನ್ನು ನಿರ್ಮಿಸುವ ಸಾಮರ್ಥ್ಯದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ರೋಕಾರವರು ಹೇಳಿದರು. ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಅವಶ್ಯಕವಾಗಿರುವ ಚಾರ್ಜಿಂಗ್ ಸೌಕರ್ಯಗಳನ್ನು ಅಳವಡಿಸಿಕೊಳ್ಳಲು ಭಾರತವು ಬಹಳ ದೂರ ಸಾಗಬೇಕಾಗಿದೆ.

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಮಿನಿ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ವಾಹನಗಳಲ್ಲಿ ತನ್ನದೇ ಆದ ಬದಲಾವಣೆಯನ್ನು ಯೋಜಿಸಿದೆ. ಕಂಪನಿಯು ತನ್ನ ಉತ್ಪಾದನೆಯ 90% ಅನ್ನು ಪೆಟ್ರೋಲ್ ಎಂಜಿನ್‌‍‍ನಲ್ಲಿ ಬಿಡುಗಡೆಗೊಳಿಸಲು ಬಯಸಿದೆ. ದೇಶದಲ್ಲಿರುವ ಡೀಸೆಲ್ ಎಂಜಿನ್‍‍ಗಳು ಎದುರಿಸುತ್ತಿರುವ ಸಮಸ್ಯೆಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಮಿನಿ ಕಂಪನಿಯು 2018ರಲ್ಲಿ ಭಾರತದಲ್ಲಿ 700 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಪ್ರಮಾಣವು 2017ಕ್ಕೆ ಹೋಲಿಸಿದರೆ 40%ನಷ್ಟು ಹೆಚ್ಚು. ಜಪಾನ್ ನಂತರ ಭಾರತವು ಮಿನಿಯ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಕಂಪನಿಯು ಈ ಸಮಯದಲ್ಲಿ ಭಾರತದಲ್ಲಿ 10 ಡೇಡಿಕೇಟೆಡ್ ಔ‍‍ಟ್‍‍ಲೆಟ್‍‍ಗಳನ್ನು ಹೊಂದಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಿನಿ ಕಂಪನಿಯು ಸ್ಟೋರ್ ಇಲ್ಲದ ಮಾರುಕಟ್ಟೆಗಳಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದೆ. ಕಂಪನಿಯು ವಾಹನಗಳಲ್ಲಿ ಈ ಮಾರುಕಟ್ಟೆಗಳಲ್ಲಿ ಪ್ರವಾಸ ಮಾಡುತ್ತಿದೆ. ಈ ಹಿಂದೆ ಎಂಜಿ ಮೋಟಾರ್ ಇಂಡಿಯಾ ಇದೇ ರೀತಿಯ ಪ್ರವಾಸವನ್ನು ಕೈಗೊಂಡಿತ್ತು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಕಂಪನಿಯು ಭಾರತದಲ್ಲಿ 30ಕ್ಕೂ ಹೆಚ್ಚು ನಗರಗಳಿಗೆ ಭೇಟಿ ನೀಡಿದೆ. ಆದರೆ ಈ ಭೇಟಿಯಿಂದ ಮಾರಾಟದ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದಾದರೂ ಪ್ರಯೋಜನವಾಗಿದೆಯೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಮಿನಿ ಕಂಪನಿಯು 2020ರ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಹೊಸ ಕ್ಲಬ್‌ಮ್ಯಾನ್‌ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಬಿಡುಗಡೆಗೊಳಿಸುವ ವಾಹನಗಳನ್ನು ಜಾಗತಿಕ ಮಾರುಕಟ್ಟೆಗೆ ಸರಿಸಮನಾಗಿ ನೀಡುವ ಯೋಜನೆಯಲ್ಲಿದೆ. ರೋಕಾರವರು ಭಾರತದಲ್ಲಿ ಮಾರಾಟವಾಗುವ ಮಿನಿ ಜಾಗತಿಕ ಮಾರುಕಟ್ಟೆಗೆ ಸಮನಾಗಿರುತ್ತದೆ ಎಂದು ಹೇಳುತ್ತಾರೆ.

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಿನಿ ಕಂಪನಿಯ ಯೋಜನೆಯು ಆಸಕ್ತಿದಾಯಕವಾಗಿದ್ದರೂ, ಭಾರತದಲ್ಲಿರುವ ಮೂಲ ಸೌಕರ್ಯಗಳು ಎಲೆಕ್ಟ್ರಿಕ್ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ಸನ್ನು ಕಾಣುವಷ್ಟು ಸಂಖ್ಯೆಯಲ್ಲಿಲ್ಲ.

ಮಿನಿ ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಬಿ‍ಎಂ‍‍ಡಬ್ಲ್ಯು

ಕೇಂದ್ರ ಸರ್ಕಾರವು ತನ್ನ ಫೇಮ್ 2 ಯೋಜನೆ ಮೂಲಕ ಎಲೆಕ್ಟ್ರಿಕ್ ವಾಹನಗಳನ್ನು ಬೆಂಬಲಿಸುತ್ತಿದೆ. ಇದರ ಜೊತೆಗೆ ಭಾರತೀಯ ಗ್ರಾಹಕರ ಮನಸ್ಥಿತಿಯು ಇನ್ನು ಎಲೆಕ್ಟ್ರಿಕ್ ವಾಹನಗಳತ್ತ ತೆರಳಲು ಸಿದ್ದವಾಗಿಲ್ಲ.

Article Published On: Sunday, November 24, 2019, 11:30 [IST]
English summary
BMW Plans To Launch Electric Vehicles In India Under The MINI Brand: Waiting For Better Infra - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+