ಸದ್ಯದಲ್ಲೇ ಶುರುವಾಗಲಿದೆ ಟಾಟಾ ಆಲ್ಟ್ರೊಜ್ ಬುಕ್ಕಿಂಗ್

ಟಾಟಾ ಮೋಟಾರ್ಸ್ ತನ್ನ ಹೊಸ ಆಲ್ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಟೀಸರ್‍‍ನಲ್ಲಿ ಕಾರಿನ ಡ್ಯಾಶ್‌ಬೋರ್ಡ್ ಅನ್ನು ತೋರಿಸಲಾಗಿದೆ. ಈ ಕಾರು ಕೆಲವೇ ವಾರಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಟೀಸರ್‍‍ನಲ್ಲಿ ಆಲ್ಟ್ರೊಜ್‌ನ ಬುಕ್ಕಿಂಗ್‍‍ಗಳನ್ನು ಆರಂಭಿಸಿರುವುದಾಗಿ ಹೇಳಲಾಗಿದೆ. ಇದರಿಂದ ಈ ಕಾರು ಶೀಘ್ರದಲ್ಲಿಯೇ ಬಿಡುಗಡೆಯಾಗುವುದು ಖಚಿತವಾಗಿದೆ.

ಸದ್ಯದಲ್ಲೇ ಶುರುವಾಗಲಿದೆ ಟಾಟಾ ಆಲ್ಟ್ರೊಜ್ ಬುಕ್ಕಿಂಗ್

ಟಾಟಾ ಆಲ್ಟ್ರೊಜ್ ಕಾರು, ದೇಶಿಯ ಮಾರುಕಟ್ಟೆಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್‍‍‍ಮೆಂಟಿನಲ್ಲಿ ಮಾರುತಿ ಬಲೆನೊ, ಹೋಂಡಾ ಜಾಜ್, ಟೊಯೊಟಾ ಗ್ಲಾಂಜಾ ಹಾಗೂ ಹ್ಯುಂಡೈ ಎಲೈಟ್ ಐ20 ಕಾರುಗಳಿಗೆ ಪೈಪೋಟಿ ನೀಡಲಿದೆ. ಈ ಕಾರು ಬೇರೆ ಕಂಪನಿಯ ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದುವ ಸಾಧ್ಯತೆಗಳಿವೆ. ಆಲ್ಟ್ರೊಜ್ ಕಾರ್ ಅನ್ನು ಮೊದಲ ಬಾರಿಗೆ 2018ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ 45ಎಕ್ಸ್ ಕಾನ್ಸೆಪ್ಟ್‌ ಎಂದು ಪ್ರದರ್ಶಿಸಲಾಗಿತ್ತು.

ಉತ್ಪಾದನಾ ಆವೃತ್ತಿಯನ್ನು ಈ ವರ್ಷದ ಜಿನೀವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಈ ಕಾರ್ ಅನ್ನು, ಪ್ರತಿ ತಿಂಗಳು 20,000 ಕಾರುಗಳ ಮಾರಾಟವಾಗುವ ಪ್ರಿಮೀಯಂ ಹ್ಯಾಚ್‌ಬ್ಯಾಕ್ ಸೆಗ್‍‍ಮೆಂಟಿನಲ್ಲಿ ತೀವ್ರ ಪೈಪೋಟಿ ನೀಡುವ ಸಲುವಾಗಿ ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯ ಬಲೆನೊ ಹಾಗೂ ಹ್ಯುಂಡೈ ಕಂಪನಿಯ ಎಲೈಟ್ ಐ20 ಈ ಸೆಗ್‍‍ಮೆಂಟಿನಲ್ಲಿ ಪ್ರಾಬಲ್ಯ ಹೊಂದಿವೆ.

ಸದ್ಯದಲ್ಲೇ ಶುರುವಾಗಲಿದೆ ಟಾಟಾ ಆಲ್ಟ್ರೊಜ್ ಬುಕ್ಕಿಂಗ್

ಟೀಸರ್‍‍ನಲ್ಲಿ ತೋರಿಸಿರುವಂತೆ, ಆಲ್ಟ್ರೊಜ್‍‍ನಲ್ಲಿರುವ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಕನ್ಸೋಲ್ ಅನ್ನು , ಡ್ಯಾಶ್‌ಬೋರ್ಡ್‌ನ ಮೇಲೆ ಫ್ಲೋಟಿಂಗ್ ವಿನ್ಯಾಸದೊಂದಿಗೆ ಅಳವಡಿಸಲಾಗಿದೆ. ಟಾಟಾ ಹ್ಯಾರಿಯರ್ ಹಾಗೂ ನೆಕ್ಸಾನ್‌ ಕಾರುಗಳಲ್ಲಿಯೂ ಸಹ ಇದೇ ರೀತಿಯಾಗಿ ಅಳವಡಿಸಲಾಗಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಅಳವಡಿಸಲಾಗಿದೆ.

ಸದ್ಯದಲ್ಲೇ ಶುರುವಾಗಲಿದೆ ಟಾಟಾ ಆಲ್ಟ್ರೊಜ್ ಬುಕ್ಕಿಂಗ್

ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಫೀಚರ್ ಈ ಸೆಗ್‍‍ಮೆಂಟಿನ ಕಾರುಗಳಲ್ಲಿರುವ ಸಾಮಾನ್ಯವಾದ ಸಂಗತಿಯಾಗಿದೆ. ಈ ಕಾರಿನಲ್ಲಿರುವ ಫ್ಲಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್ ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಆಲ್ಟ್ರೊಜ್‌ನ ಇಂಟಿರಿಯರ್ ಅನ್ನು ಸಹ ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿರುವ ಸಾಫ್ಟ್ ಟಚ್ ಪ್ಲಾಸ್ಟಿಕ್‌ಗಳಿಂದ ಹಿಡಿದು ಉನ್ನತ ಮಟ್ಟದ ಸ್ಟಿರಿಯೊ ಸಿಸ್ಟಂಗಳವರೆಗೆ ಹಾಗೂ ಹಿಂಭಾಗದ ಎಸಿ ವೆಂಟ್‍‍ಗಳವರೆಗೆ, ಆಲ್ಟ್ರೊಜ್ ಈ ಸೆಗ್‍‍ಮೆಂಟಿನಲ್ಲಿ ಅತ್ಯಂತ ಐಷಾರಾಮಿ ಕೊಡುಗೆಯಾಗಿರಲಿದೆ.

ಸದ್ಯದಲ್ಲೇ ಶುರುವಾಗಲಿದೆ ಟಾಟಾ ಆಲ್ಟ್ರೊಜ್ ಬುಕ್ಕಿಂಗ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಫೀಚರ್‍‍ಗಳ ಬಗ್ಗೆ ಹೇಳುವುದಾದರೆ, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌, ರೇನ್ ಸೆನ್ಸಿಂಗ್ ವೈಪರ್‌, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಹಾಗೂ ಕ್ರೂಸ್ ಕಂಟ್ರೋಲ್‍‍ಗಳನ್ನು ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗುವುದು. ಈ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳೆರಡರಲ್ಲೂ ಮಾರಾಟ ಮಾಡುವ ಸಾಧ್ಯತೆಗಳಿವೆ. ಟಾಟಾ ನೆಕ್ಸಾನ್‌ನಲ್ಲಿರುವ 1.2 ಲೀಟರ್ 3 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಆಲ್ಟ್ರೊಜ್‌ನಲ್ಲಿಯೂ ಅಳವಡಿಸುವ ನಿರೀಕ್ಷೆಗಳಿವೆ.

ಸದ್ಯದಲ್ಲೇ ಶುರುವಾಗಲಿದೆ ಟಾಟಾ ಆಲ್ಟ್ರೊಜ್ ಬುಕ್ಕಿಂಗ್

ನೆಕ್ಸಾನ್‌ನಲ್ಲಿರುವ 1.5 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಸಹ ಅಳವಡಿಸುವ ಸಾಧ್ಯತೆಗಳಿವೆ. 6 ಸ್ಪೀಡ್‍‍ನ ಮ್ಯಾನುವಲ್ ಗೇರ್‌ಬಾಕ್ಸ್‌ಗಳು ಈ ಎಂಜಿನ್‌ಗಳೊಂದಿಗೆ ಸ್ಟಾಂಡರ್ಡ್ ಆಗಿ ಬರಲಿವೆ. ಬಿಡುಗಡೆಯಾಗುವ ಸಮಯದಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ನೀಡಲಾಗುತ್ತದೆಯೇ ಅಥವಾ ಎಎಂಟಿಗಳನ್ನು ನೀಡಲಾಗುತ್ತದೆಯೇ ಎಂಬುದು ತಿಳಿದುಬಂದಿಲ್ಲ. ಕೆಲವು ತಿಂಗಳುಗಳಲ್ಲಿ, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡುವುದು ಖಚಿತ ಎಂದು ಕಂಪನಿ ತಿಳಿಸಿದೆ.

ಸದ್ಯದಲ್ಲೇ ಶುರುವಾಗಲಿದೆ ಟಾಟಾ ಆಲ್ಟ್ರೊಜ್ ಬುಕ್ಕಿಂಗ್

ಆಲ್ಟ್ರೊಜ್ ಕಾರಿನಲ್ಲಿ ಮೊದಲ ಬಾರಿಗೆ ಟಾಟಾ ಕಂಪನಿಯ ಆಲ್ಫಾ (ಅಡ್ವಾನ್ಸ್ಡ್ ಲೈಟ್ ಫ್ಲೆಕ್ಸಿಬಲ್ ಅಗೈಲ್) ಆರ್ಕಿಟೆಕ್ಚರ್ ಅನ್ನು ಬಳಸಲಾಗಿದೆ. ಇದು ಮಾಡ್ಯುಲರ್ ಪ್ಲಾಟ್‌ಫಾರ್ಮ್ ಆಗಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಹಾರ್ನ್‌ಬಿಲ್ ಎಚ್2ಎಕ್ಸ್ ಮೈಕ್ರೊ ಎಸ್‌ಯುವಿ ಸೇರಿದಂತೆ ಟಾಟಾ ಮೋಟಾರ್ಸ್‍‍ನ ಹೊಸ ಕಾರುಗಳಲ್ಲಿ ಅಳವಡಿಲಾಗುವುದು. ಟಾಟಾ ಮೋಟಾರ್ಸ್, ಆಲ್ಟ್ರೊಜ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದ್ದು, 2020ರಲ್ಲಿ ಬಿಡುಗಡೆಗೊಳಿಸಲಿದೆ.

Source: AutoTech India

Most Read Articles

Kannada
English summary
Tata Altroz bookings open - Read in kannada
Story first published: Monday, July 29, 2019, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X