ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಜಪಾನ್ ಮೂಲದ ಟೊಯೊಟಾ ಮೋಟಾರ್ ಕಾರ್ಪೊರೇಷನ್‍‍ನ ಅಂಗಸಂಸ್ಥೆಯಾದ, ಟೊಯೊಟಾ ಕಿರ್ಲೊಸ್ಕರ್ ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಕಾರ್ಯಾಚರಿಸುತ್ತಿದೆ. ಈಗ ಎರಡು ವರ್ಷಗಳ ನಂತರ ತನ್ನ ಮಿತಿಗಳಿಂದ ಹೊರ ಬಂದು, ಮುಂದಿನ 5 ರಿಂದ 7 ವರ್ಷಗಳಲ್ಲಿ ಒಂದು ಡಜನ್‍‍ನಷ್ಟು ಕಾರುಗಳನ್ನು ಬಿಡುಗಡೆಗೊಳಿಸಲಿದೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಕಿರ್ಲೊಸ್ಕರ್ ಈಗ ಸುಜುಕಿ ಕಂಪನಿಯ ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ. ಇಟಿಯೋಸ್ ಹಾಗೂ ಲಿವಾ ಕಾರುಗಳ ಉತ್ಪಾದನೆಯನ್ನು ಸುರಕ್ಷಾ ಫೀಚರ್‍‍ಗಳನ್ನು ಹೊಂದಿಲ್ಲದ ಕಾರಣಕ್ಕಾಗಿ 2020ರ ಕೊನೆಯ ಭಾಗದಿಂದ ಸ್ಥಗಿತಗೊಳಿಸಲಾಗುವುದು. ಟೊಯೊಟಾ ಕಂಪನಿಯು, ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಜೊತೆಗಿನ ಸಹಭಾಗಿತ್ವದಲ್ಲಿ ರೂ.12 ಲಕ್ಷವರೆಗಿನ ಬೆಲೆ ಹೊಂದಿರುವ ಅರ್ಧ ಡಜನ್‍‍ಗೂ ಹೆಚ್ಚಿನ ಕಾರುಗಳನ್ನು ಬಿಡುಗಡೆಗೊಳಿಸಲಿದ್ದು, ಮಾರುಕಟ್ಟೆಯಲ್ಲಿ 80%ಕ್ಕೂ ಹೆಚ್ಚಿನ ಹಿಡಿತ ಸಾಧಿಸಲಿದೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಇದರಲ್ಲಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳೂ ಸಹ ಸೇರಿವೆ. ಟೊಯೊಟಾ ಕಂಪನಿಯು 2020ರಲ್ಲಿ ಹೊಸ ವಿನ್ಯಾಸ, ಟೆಕ್ನಾಲಜಿ ಹೊಂದಿರುವ ವಿಟಾರಾ ಬ್ರಿಝಾ ಹಾಗೂ ವ್ಯಾಗನ್ ಆರ್ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸಲಿದೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಸಿಯಾಜ್ ಕಾರ್ ಅನ್ನು 2021-2022ರ ಮಧ್ಯದಲ್ಲಿ ಬಿಡುಗಡೆಗೊಳಿಸಿದರೆ, ಜಂಟಿಯಾಗಿ ಉತ್ಪಾದಿಸಲಾಗುವ ಸಿ ಎಂ‍‍ಪಿ‍‍ವಿ/ಎಸ್‍‍ಯು‍‍ವಿ ಬಿಡುಗಡೆಗೆ ಮುನ್ನ ಎರ್ಟಿಗಾ ಆಫ್ ಸ್ಪ್ರಿಂಗ್ ಕಾರನ್ನು 2023ರಲ್ಲಿ ಬಿಡುಗಡೆಗೊಳಿಸುವುದಾಗಿ ಮೂಲಗಳು ತಿಳಿಸಿವೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಕಂಪನಿಯು ಬಿಡುಗಡೆಗೊಳಿಸುವ ಎಲ್ಲಾ ವಾಹನಗಳು ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದಿರಲಿವೆ. ಸುಜುಕಿ ಕಂಪನಿಯು ತನ್ನ ಬಲೆನೋ, ವಿಟಾರಾ ಬ್ರಿಝಾ, ಎರ್ಟಿಗಾ ಹಾಗೂ ಸಿಯಾಜ್ ಕಾರುಗಳಿಗಾಗಿ ಟೊಯೊಟಾ ಕಂಪನಿಯಿಂದ ಹೈಬ್ರಿಡ್ ಟೆಕ್ನಾಲಜಿಯನ್ನು ಪಡೆಯಲಿದೆ. ಮಾರುತಿ ಕಂಪನಿಯ ಕಾರ್ಪೊರೇಟ್ ಅವರೇಜ್ ಫ್ಯೂಯಲ್ ಎಕನಾಮಿ ನಿಯಮಗಳನ್ನು 2022-2023ರ ವೇಳೆಗೆ ಪೂರೈಸಲಿದೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಈ ಸಹಭಾಗಿತ್ವದಿಂದಾಗಿ ಟೊಯೊಟಾ ತನ್ನ ಅಗ್ಗದ ಕಾಂಪ್ಯಾಕ್ಟ್ ಕಾರುಗಳ ತಯಾರಿಕೆಯಿಂದ ಹೊರಬಂದರೆ, ಸುಜುಕಿ ಕಂಪನಿಯು ಟೊಯೊಟಾ ಕಂಪನಿಯಿಂದ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ಟೆಕ್ನಾಲಜಿಯನ್ನು ಪಡೆಯಲಿದೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಮಾರುತಿ ಕಂಪನಿಯಿಂದ ಕಾಂಪ್ಯಾಕ್ಟ್ ಕಾರುಗಳನ್ನು ಪಡೆಯುವುದರ ಜೊತೆಗೆ, ಟೊಯೊಟಾ ಕಂಪನಿಯು ತನ್ನ ಇನೊವಾ ಹಾಗೂ ಫಾರ್ಚೂನರ್ ಕಾರುಗಳನ್ನು ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ನವೀಕರಿಸಲಿದೆ. ಜೊತೆಗೆ ಯಾರೀಸ್ ಸೆಡಾನ್ ಕಾರ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

MOST READ: ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಪರಿಣಿತರ ಪ್ರಕಾರ ಈ ಸಹಭಾಗಿತ್ವದಿಂದಾಗಿ ಟೊಯೊಟಾ ಹಾಗೂ ಸುಜುಕಿ ಕಂಪನಿಗಳು ಮುಂದಿನ ದಿನಗಳಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚಿನ ಕಾರುಗಳನ್ನು ತಯಾರಿಸಿ ಮಾರಾಟ ಮಾಡಲಿವೆ. ಇದರಿಂದಾಗಿ ಹೈಬ್ರಿಡ್ ವಾಹನಗಳು ಪರಿಸರ ಸ್ನೇಹಿಯಾಗಿ, ಪರಿಸರವನ್ನು ಸ್ವಚ್ಛವಾಗಿಡಲಿವೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಐ‍‍ಹೆ‍ಚ್‍ಎಸ್ ಮಾರ್ಕಿಟ್‍‍ನ ಗೌರವ್ ವಾಂಗಾಲ್ ರವರ ಪ್ರಕಾರ, ಟೊಯೊಟಾ ಕಂಪನಿಯು ಭಾರತದಲ್ಲಿ 2025ರ ವೇಳೆಗೆ ಸುಜುಕಿ ಕಂಪನಿಯ ಸಹಭಾಗಿತ್ವದೊಂದಿಗೆ ತನ್ನ ವಾಹನಗಳ ಉತ್ಪಾದನೆಯನ್ನು ಎರಡರಷ್ಟು ಹೆಚ್ಚಿಸಿಕೊಳ್ಳಲಿದೆ.

MOST READ: ಅನಾವರಣಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಬೈಕ್

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಹೆಚ್ಚಿನ ಕಾರುಗಳನ್ನು ತಯಾರಿಸುವುದರ ಜೊತೆಗೆ ಒಳ್ಳೆಯ ಗುಣಮಟ್ಟದ ಸುಜುಕಿ ಕಾರುಗಳನ್ನು ಪಡೆಯಲಿದೆ. ಹೆಚ್ಚಿನ ಕಾರುಗಳನ್ನು ಹೊಂದುವುದರ ಜೊತೆಗೆ ಕಂಪನಿಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ತಿಳಿಸಿದರು. ಈಗಾಗಲೇ ಟೊಯೊಟಾ ಹಾಗೂ ಸುಜುಕಿ ಕಂಪನಿಗಳು ಜೊತೆಯಾಗಿ ಕೆಲಸ ಮಾಡಲು ಶುರು ಮಾಡಿದ್ದು, ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುತ್ತಿದ್ದಾರೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾದ ಹೊಸ ಪ್ರಿಮೀಯಂ ಹ್ಯಾಚ್‍‍ಬ್ಯಾಕ್ ಗ್ಲಾಂಜಾ ಬೆಲೆಯನ್ನು ಅಂದಾಜು ಮಾಡಿದಿಕ್ಕಿಂತ ಹೆಚ್ಚು ನಿಗದಿ ಪಡಿಸಲಾಗಿದೆ. ಗ್ಲಾಂಜಾ ಕಾರ್ ಅನ್ನು ಬಲೆನೋ ಕಾರಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಹುದೆಂದು ಅಂದಾಜಿಸಲಾಗಿತ್ತು. ಆದರೆ ಬಲೆನೋ ಕಾರಿನಷ್ಟೆ ಬೆಲೆ ನಿಗದಿಪಡಿಸಿ, ಟೊಯೊಟಾ ಕಂಪನಿಯು ತನ್ನ ಆಕ್ರಮಣಕಾರಿ ನಿಲುವನ್ನು ಪ್ರದರ್ಶಿಸಿದೆ.

MOST READ: ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

2019ರ ಆರ್ಥಿಕ ವರ್ಷದ ಕೊನೆಗೆ ಟೊಯೊಟಾ ಕಂಪನಿಯು 1.5 ಲಕ್ಷ ವಾಹನಗಳನ್ನು ಮಾರಾಟ ಮಾಡಿ, ಮಾರುಕಟ್ಟೆಯಲ್ಲಿ 4.5%ನಷ್ಟು ಶೇರು ಹೊಂದಿದೆ. ಕಳೆದ ವರ್ಷಗಳಲ್ಲಿ 5.5 - 6%ಗಳವರೆಗೆ ಶೇರನ್ನು ಹೊಂದಿತ್ತು. ಇನೊವಾ ಹಾಗೂ ಫಾರ್ಚೂನರ್ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದ ಕಾರಣ ಕಂಪನಿಯು ಲಾಭದತ್ತ ಮುಖ ಮಾಡಿದೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಮಾರುತಿ ಕಂಪನಿಯ ಹೊಸ ಕಾರುಗಳನ್ನು ಟೊಯೊಟಾ ಕಂಪನಿಯು ತನ್ನ ಘಟಕಗಳಲ್ಲಿ ತಯಾರಿಸಲಿದ್ದು, ಭಾರತದಲ್ಲಿನ ತನ್ನ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಈ ಕಂಪನಿಗಳ ಕೆಲವು ಕಾರುಗಳು ಭಾರತೀಯ ಮಾರುಕಟ್ಟೆಗೆ ಹೆಚ್ಚಿನ ಉತ್ತೇಜನವನ್ನು ನೀಡಲಿವೆ. ಟೊಯೊಟಾ ಕಂಪನಿಯು ಈ ವಾಹನಗಳನ್ನು ಬೇರೆ ಮಾರುಕಟ್ಟೆಗಳಲ್ಲಿಯೂ ಸಹ ಬಳಸಲಿದೆ.

ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ಟೊಯೊಟಾ ಕಿರ್ಲೊಸ್ಕರ್ ಕಂಪನಿಯ ವಕ್ತಾರರೊಬ್ಬರು ಮಾತನಾಡಿ, 2019ರ ಮಾರ್ಚ್‍‍ನಲ್ಲಿ ಘೋಷಿಸಿದಂತೆ, ಸುಜುಕಿ ಕಂಪನಿಯು ಅಭಿವೃದ್ಧಿಪಡಿಸಿರುವ ವಿಟಾರಾ ಬ್ರಿಝಾ ಎಸ್‍‍ಯು‍‍ವಿಯ ಉತ್ಪಾದನೆಯನ್ನು 2022ರಿಂದ ಟೊಯೊಟಾ ಘಟಕದಲ್ಲಿ ಆರಂಭಿಸಲಾಗುವುದು. ನಾವು ಭವಿಷ್ಯದಲ್ಲಿ ಬಿಡುಗಡೆಗೊಳಿಸಲಿರುವ ಕಾರುಗಳ ಬಗ್ಗೆ ಈಗ ಏನನ್ನೂ ಹೇಳಲು ಸಾಧ್ಯವಿಲ್ಲವೆಂದು ತಿಳಿಸಿದರು.

More from DriveSpark

Article Published On: Wednesday, June 19, 2019, 13:19 [IST]
English summary
Boosted by Suzuki, Toyota plans India blitz with a dozen models - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+