ವಿಶ್ವದ ಅತಿ ದುಬಾರಿ ಬುಗಾಟಿ ಶಿರೊನ್ ಸ್ಪೆಷಲ್ ಎಡಿಷನ್ ಕಾರಿನ ಬೆಲೆ ಎಷ್ಟು ಗೊತ್ತಾ?
ಫ್ರೆಂಚ್ ಜನಪ್ರಿಯ ಹೈಪರ್ ಕಾರು ತಯಾಕ ಸಂಸ್ಥೆಯಾದ ಬುಗಾಟಿ ತನ್ನ ಬಹುನೀರಿಕ್ಷಿತ ಶಿರೊನ್ ಲಿಮಿಟೆಡ್ ಎಡಿಷನ್ ಐಷಾರಾಮಿ ಕಾರನ್ನು ಅನಾವರಣಗೊಳಿಸಿದ್ದು, ವಿಶ್ವದಲ್ಲೇ ಅತಿ ದುಬಾರಿ ಕಾರು ಮಾದರಿ ಎಂಬ ಖ್ಯಾತಿ ಪಡೆದಿರುವ ಈ ಕಾರಿನ ತಾಂತ್ರಿಕ ಮಾಹಿತಿಗಳು ಕೂಡಾ ಇಂಟ್ರಸ್ಟಿಂಗ್ ಆಗಿವೆ.

ಬುಗಾಟಿ ಸಂಸ್ಥೆಯು 1909ರಿಂದ ಕಾರು ಉತ್ಪಾದನೆಯಲ್ಲಿ ಹಲವು ಬದಲಾವಣೆಯೊಂದಿಗೆ ವಿಶ್ವದ ಅತಿ ದುಬಾರಿ ಕಾರು ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದು, ತನ್ನ 110ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಜನಪ್ರಿಯ ಶಿರೊನ್ ಕಾರಿನ ಸ್ಪೆಷನ್ ಎಡಿಷನ್ ಅನಾವರಣಗೊಳಿಸಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.
ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಬುಗಾಟಿ ಶಿರೊನ್ ಸ್ಪೆಷಲ್ ಎಡಿಷನ್ ಕಾರು ಮಾದರಿಯಾಗಿರುವುದರಿಂದ ಕೇವಲ 20 ಕಾರುಗಳು ಮಾರಾಟಕ್ಕೆ ಇರಲಿದ್ದು, ಇವು ಕೂಡಾ ಈಗಾಗಲೇ ಸಂಪೂರ್ಣವಾಗಿ ಮಾರಾಟಗೊಂಡಿವೆಯೆಂತೆ.

ಎಂಜಿನ್ ಸಾಮರ್ಥ್ಯ
ಬುಗಾಟಿ ಶಿರೊನ್ ಸ್ಪೆಷಲ್ ಎಡಿಷನ್ ಕಾರು 8.0-ಲೀಟರ್(8ಸಾವಿರ ಸಿಸಿ) W16 ಎಂಜಿನ್ ಪಡೆದಿದ್ದು, 1479-ಬಿಹೆಚ್‍ಪಿ ಮತ್ತು 1600-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಕೇವಲ 2.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಲೋ ಮೀಟರ್ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, 6.5 ಸೇಕೆಂಡಿಗೆ ಗಂಟೆಗೆ 200 ಕಿಲೋ ಮೀಟರ್ ಚಲಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಕಾರಿನ ತೂಕದ ವಿಷಯಕ್ಕೆ ಬಂದರೆ ಸ್ಟ್ಯಾಂಡರ್ಡ್ ವರ್ಷನ್‍ಗಿಂತ ಕಡಿಮೆ ತೂಕದ ಹೊಸ ಚಕ್ರಗಳು, ಕಾರ್ಬನ್ ಫೈಬರ್ ಇಂಟರ್‌ಕೂಲರ್ ಕವರ್ ಮತ್ತು ಕಾರ್ಬನ್ ಫೈಬರ್ ವಿಂಡ್‍ಸ್ಕ್ರೀನ್ ವೈಪರ್ ಗಳನ್ನು ಬಳಸಲಾಗಿದ್ದು, 18 ಕೆಜಿ ತೂಕವನ್ನು ಕಡಿತಗೊಳಿಸಲಾಗಿದೆ.

ಕಾರಿನ ಬಾಗಿಲುಗಳಿಗೆ ಸ್ಪೋರ್ಟ್ಸ್ ಲೋಗೊ ಜೊತೆಗೆ 110ನೇ ವಾರ್ಷಿಕೋತ್ಸವದ ಹೊಸ ಬ್ಯಾಡ್ಜ್ ಅಳವಡಿಸಲಾಗಿದ್ದು ಜೊತೆಗೆ ಇದರ ಸೆಂಟರ್ ಕಂಸೋಲ್ ನಲ್ಲಿ ಎಂಬ್ರಾಯ್ಡರಿ ಮಾಡಲಾಗಿದೆ. ಇದಲ್ಲದೆ ಅಲ್ಕಾಂಟರ್ ಮಿಶ್ರಣ, ಲೆದರ್‍ನೊಂದಿಗೆ ಬ್ಲಾಕ್ ಫಿನಿಷ್ ಅನ್ನು ಎಂಜಿನ್ ಸ್ಟಾರ್ಟರ್ ಬಳಿ ಅಳವಡಿಸಲಾಗಿದ್ದು, ಡ್ರೈವ್ ಮೋಡ್ ಸೆಲೆಕ್ಟ್ ಮಾಡಿಕೊಳ್ಳಬಲ್ಲ ಅನುಕೂಲತೆಯನ್ನು ಪಡೆದಿದೆ.

ಒಟ್ಟಿನಲ್ಲಿ ತಾಂತ್ರಿಕವಾಗಿ ಬಲಿಷ್ಠವಾಗಿರುವ ಬುಗಾಟಿ ಹೊಸ ಕಾರು ನೋಡಲು ಎಷ್ಟು ಅಂದ ಚೆಂದವಾಗಿದೆಯೋ ಹಾಗೆಯೇ ಬೆಲೆಯು ಕೂಡಾ ತುಸು ಹೆಚ್ಚು ಎನ್ನುವಷ್ಟಿದೆ. ಮೂಲಗಳ ಪ್ರಕಾರ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.28 ಕೋಟಿ ಬೆಲೆ ಹೊಂದಿದ್ದು, ಇದು ಆನ್‌ರೋಡ್ ಬೆಲೆಗಳಿಗೆ ಲೆಕ್ಕ ಹಾಕಿದರೆ ಹೆಚ್ಚು ಕಡಿಮೆ ರೂ. 40 ಕೋಟಿ ಬೆಲೆ ಪಡೆದುಕೊಳ್ಳಲಿದೆ.


Click it and Unblock the Notifications








