ಭರ್ಜರಿ ಗಿಫ್ಟ್ ಪಡೆದ ರಿಯಲ್ ಮ್ಯಾಡ್ರಿಡ್ ಆಟಗಾರರು

ಕ್ರಿಸ್‍‍ಮಸ್ ಹಬ್ಬಕ್ಕೆ ಇನ್ನೂ ಒಂದು ವಾರ ಬಾಕಿಯಿರುವಾಗಲೇ ಇಡೀ ಪ್ರಪಂಚದದ್ಯಾಂತ ಜನರು ಕ್ರಿಸ್‍‍ಮಸ್ ಆಚರಣೆಗೆ ಸಜ್ಜಾಗಿದ್ದಾರೆ. ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿರುವ ರಿಯಲ್ ಮ್ಯಾಡ್ರಿಡ್ ಆಟಗಾರರು ಕ್ರಿಸ್‍‍ಮಸ್ ಅನ್ನು ಭರ್ಜರಿಯಾಗಿ ಆಚರಿಸಲಿದ್ದಾರೆ.

ಭರ್ಜರಿ ಗಿಫ್ಟ್ ಪಡೆದ ರಿಯಲ್ ಮ್ಯಾಡ್ರಿಡ್ ಆಟಗಾರರು

ರಿಯಲ್ ಮ್ಯಾಡ್ರಿಡ್, ಸ್ಪೇನ್ ದೇಶದ ಫುಟ್‍‍ಬಾಲ್ ತಂಡವಾಗಿದೆ. ಪ್ರಪಂಚದ ವಿವಿಧ ದೇಶದ ಜನಪ್ರಿಯ ಪುಟ್‍‍ಬಾಲ್ ಆಟಗಾರರು ರಿಯಲ್ ಮ್ಯಾಡ್ರಿಡ್ ತಂಡದ ಭಾಗವಾಗಿದ್ದಾರೆ. ಈ ಕಾರಣಕ್ಕೆ ರಿಯಲ್ ಮ್ಯಾಡ್ರಿಡ್ ವಿಶ್ವದ ಫುಟ್‍‍ಬಾಲ್ ಪ್ರೇಮಿಗಳ ನೆಚ್ಚಿನ ತಂಡವಾಗಿದೆ.

ಭರ್ಜರಿ ಗಿಫ್ಟ್ ಪಡೆದ ರಿಯಲ್ ಮ್ಯಾಡ್ರಿಡ್ ಆಟಗಾರರು

ರಿಯಲ್ ಮ್ಯಾಡ್ರಿಡ್ ಫುಟ್‍‍ಬಾಲ್ ತಂಡದ ಆಟಗಾರರ ಈ ಸಂಭ್ರಮಕ್ಕೆ ಕಾರಣ ಆಡಿ ಕಾರುಗಳು. ಆಡಿ ಕಂಪನಿಯು ರಿಯಲ್ ಮ್ಯಾಡ್ರಿಡ್ ತಂಡದ ಅಧಿಕೃತ ಪ್ರಾಯೋಜಕರಾಗಿದೆ. ಈ ಕಾರಣಕ್ಕೆ ತಂಡದಲ್ಲಿರುವ ಎಲ್ಲಾ ಆಟಗಾರರಿಗೆ ಆಡಿ ಕಾರುಗಳನ್ನು ಕಾಣಿಕೆಯಾಗಿ ನೀಡುತ್ತಿದೆ.

ಭರ್ಜರಿ ಗಿಫ್ಟ್ ಪಡೆದ ರಿಯಲ್ ಮ್ಯಾಡ್ರಿಡ್ ಆಟಗಾರರು

ಆಡಿ ಕಂಪನಿಯು ಇದನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದೆ. ರಿಯಲ್ ಮ್ಯಾಡ್ರಿಡ್ ಆಟಗಾರರು ತಮ್ಮ ನೆಚ್ಚಿನ ಬಣ್ಣದಲ್ಲಿ ತಾವು ಇಷ್ಟ ಪಡುವ ಕಾರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆಡಿ ಕಂಪನಿಯು ಆಟಗಾರರಿಗೆ ಈ ಕಾರುಗಳನ್ನು ಕ್ರಿಸ್‍‍ಮಸ್ ಗಿಫ್ಟ್ ಆಗಿ ನೀಡುತ್ತಿದೆ.

ಭರ್ಜರಿ ಗಿಫ್ಟ್ ಪಡೆದ ರಿಯಲ್ ಮ್ಯಾಡ್ರಿಡ್ ಆಟಗಾರರು

ವರದಿಗಳ ಪ್ರಕಾರ, ರಿಯಲ್ ಮ್ಯಾಡ್ರಿಡ್ ತಂಡದ ಕೋಚ್ ಜಿನೈಡಿನ್ ಜಿಡಾನ್‍‍ರವರು ಬಹು ದುಬಾರಿಯಾದ ಕಾರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರೊಂದಿಗೆ ತಂಡದ ನಾಯಕರಾದ ಸರ್ಜಿಯೊ ರಾಮೋಸ್‍‍ರವರು ಸಹ ದುಬಾರಿ ಕಾರ್ ಅನ್ನು ಆಯ್ಕೆ ಮಾಡಿದ್ದಾರೆ.

ಭರ್ಜರಿ ಗಿಫ್ಟ್ ಪಡೆದ ರಿಯಲ್ ಮ್ಯಾಡ್ರಿಡ್ ಆಟಗಾರರು

ಸರ್ಜಿಯೊರವರು ಆಡಿ ಎ8 ಟಿ‍‍ಡಿಐ ಕ್ವಾಟ್ರೊ ಟಿಪ್ಟ್ರಾನಿಕ್ ಕಾರ್ ಅನ್ನು ಆಯ್ಕೆ ಮಾಡಿದ್ದಾರೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ರೂ.81 ಲಕ್ಷ ಬೆಲೆಯನ್ನು ಹೊಂದಿದೆ. ಸ್ಪೇನ್ ಮೂಲದ ಎ‍‍ಝಡ್ ಪತ್ರಿಕೆಯು ಈ ಕುರಿತು ವರದಿ ಮಾಡಿದೆ.

ಭರ್ಜರಿ ಗಿಫ್ಟ್ ಪಡೆದ ರಿಯಲ್ ಮ್ಯಾಡ್ರಿಡ್ ಆಟಗಾರರು

ತಂಡದಲ್ಲಿರುವ ಜರ್ಮನಿಯ ಮಿಡ್ ಫೀಲ್ಡರ್ ಟೋನಿ ಕ್ರೂಜ್‍‍ರವರು ರೂ.69 ಲಕ್ಷ ಮೌಲ್ಯದ ಆಡಿ ಕ್ಯೂ8 50ಟಿ‍ಡಿ‍ಐ ಕ್ವಾಟ್ರೊ ಟಿಪ್ಟ್ರಾನಿಕ್ ಕಾರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಇಂಗ್ಲೀಷ್ ಕ್ಲಬ್ ಆದ ಚೆಲ್ಸಿ ತಂಡ ತೊರೆದು ರಿಯಲ್ ಮ್ಯಾಡ್ರಿಡ್ ತಂಡ ಸೇರಿದ ಈಡನ್ ಹಜಾರ್ಡ್‍‍ರವರೂ ಸಹ ಆಡಿ ಕ್ಯೂ 8 ಕಾರ್ ಅನ್ನು ಆಯ್ಕೆ ಮಾಡಿದ್ದಾರೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಭರ್ಜರಿ ಗಿಫ್ಟ್ ಪಡೆದ ರಿಯಲ್ ಮ್ಯಾಡ್ರಿಡ್ ಆಟಗಾರರು

ಫುಟ್‍‍ಬಾಲ್ ಆಟಗಾರರಿಗೆ ಆಡಿ ಕ್ಯೂ8 50ಟಿ‍‍ಡಿ‍ಐ ಕ್ವಾಟ್ರೊ ಡಿಪ್ಟ್ರಾನಿಕ್ ನೆಚ್ಚಿನ ಕಾರ್ ಆಗಿದೆ. ಜೇಮ್ಸ್ ರೊಡ್ರಿಗಸ್‍‍ರವರೂ ಸಹ ಇದೇ ಕಾರ್ ಅನ್ನು ಆಯ್ಕೆ ಮಾಡಿಕೊಂಡರು. ಫ್ರಾನ್ಸ್ ತಂಡದ ಡಿಫೆಂಡರ್ ರಾಫೆಲ್ ವರಾನ್‍‍ರವರು ಆಡಿ ಇ ಟ್ರಾನ್ 55 ಕ್ವಾಟ್ರೊವನ್ನು ಆಯ್ಕೆ ಮಾಡಿಕೊಂಡರು.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಭಾರತದಲ್ಲಿ ಆಡಿ ಇ ಟ್ರಾನ್ 55 ಕ್ವಾಟ್ರೊ ಕಾರಿನ ಬೆಲೆ ರೂ.67 ಲಕ್ಷಗಳಾಗಿದೆ. ರಿಯಲ್ ಮ್ಯಾಡ್ರಿಡ್ ತಂಡದಿಂದ ದುಬಾರಿ ಸಂಭಾವನೆ ಪಡೆಯುವುದರ ಜೊತೆಗೆ ಆಡಿ ಕಂಪನಿಯು ನೀಡಿರುವ ದುಬಾರಿ ಬೆಲೆಯ ಕಾರುಗಳೂ ಸಹ ರಿಯಲ್ ಮ್ಯಾಡ್ರಿಡ್ ಆಟಗಾರರ ಕ್ರಿಸ್‍‍ಮಸ್ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿವೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಭರ್ಜರಿ ಗಿಫ್ಟ್ ಪಡೆದ ರಿಯಲ್ ಮ್ಯಾಡ್ರಿಡ್ ಆಟಗಾರರು

ಆಡಿ ಕಂಪನಿಯನ್ನು 109 ವರ್ಷಗಳ ಹಿಂದೆ ಆಗಸ್ಟ್ ಹೋರ್ಚ್‍‍ರವರು ಜರ್ಮನಿಯಲ್ಲಿ ಸ್ಥಾಪಿಸಿದರು. ಆಡಿ ಕಂಪನಿಯ ಕೇಂದ್ರ ಕಚೇರಿಯು ಜರ್ಮನಿಯ ಇಂಗೋಲ್‍‍ಸ್ಟಾಡ್‍‍‍ನಲ್ಲಿದೆ. ಆಡಿ ಪ್ರಪಂಚದ 9 ದೇಶಗಳಲ್ಲಿ 11 ಉತ್ಪಾದನಾ ಘಟಕಗಳನ್ನು ಹೊಂದಿದೆ. ಪ್ರಪಂಚದದ್ಯಾಂತ ಆಡಿ ಕಂಪನಿಯ ಕಾರುಗಳನ್ನು ಮಾರಾಟ ಮಾಡಲಾಗುತ್ತದೆ.

More from DriveSpark

Article Published On: Thursday, December 19, 2019, 10:51 [IST]
English summary
Real Madrid footballers get an Audi luxury car each for Christmas - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+