ಧೋನಿಗೆ ಕಾರು ತೊಳೆಯಲು ಸಹಾಯ ಮಾಡಿದ ಮಗಳು ಝೀವಾ
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ತಮ್ಮ ಜಾಂಗಾ ಟ್ರಕ್ ಅನ್ನು ತೊಳೆಯುವಾಗ ತಮ್ಮ ಮಗಳು ಝೀವಾ ಅಪ್ಪನಿಗೆ ಸಹಾಯ ಮಾಡುವ ವೀಡಿಯೊಂದನ್ನು ಇನ್ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ನಿಸ್ಸಾನ್ ಒನ್ ಟನ್ ಆಫ್-ರೋಡ್ ಪಿಕಪ್ ಟ್ರಕ್ ಅನ್ನು ತೊಳೆಯುವ ವೀಡಿಯೊ ಸಖತ್ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆ ಧೋನಿಯವರು ಜಾಂಗಾ ಟ್ರಕ್ ಅನ್ನು ಖರೀದಿಸಿ ಸುದ್ದಿಯಲ್ಲಿದ್ದರು. ಇದೀಗ ಧೋನಿ ತನ್ನ ಮುದ್ದಿನ ಮಗಳು ಟ್ರಕ್ ತೊಳೆಯಲು ಸಹಾಯ ಮಾಡುವ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಅಪ್ಪನಿಗೆ ಜಾಂಗಾ ಟ್ರಕ್ ಅನ್ನು ತೊಳೆಯಲು ಸಹಾಯ ಮಾಡುವ ಝೀವಾ ವೀಡಿಯೊಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಧೋನಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವೀಡಿಯೊ ಪೂರ್ಣ ಪ್ರಮಾಣದ ವೀಡಿಯೊವಲ್ಲ, ಅದು ಬೂಮರಾಂಗ್ ವೀಡಿಯೊ ಆಗಿದೆ. ಈ ವೀಡಿಯೊ ಮೂಲಕ ನಮಗೆ ತಿಳಿಯುತ್ತದೆ ಧೋನಿ ಅವರು ಜಾಂಗಾ ಟ್ರಕ್ ಅನ್ನು ಎಷ್ಟು ಇಷ್ಟ ಪಡುತ್ತಾರೆ ಎಂಬುದು. ಕ್ಯಾಪ್ಟನ್ ಕೂಲ್ ಮಹಿ ಅವರಿಗೆ ಕಾರು ಮತ್ತು ಬೈಕ್‍ಗಳ ಕ್ರೆಜ್ ಹೆಚ್ಚು ಎಂಬುದು ಎಲ್ಲರಿಗೂ ಗೂತ್ತಿರುವ ವಿಷಯವಾಗಿದೆ.

ಅವರ ಗ್ಯಾರೇಜ್‍ನಲ್ಲಿ ಹಲವು ಎಕ್ಸೊಟಿಕ್ಸ್ ದ್ವಿಚಕ್ರ ವಾಹನಗಳಿವೆ. ಅವರ ಬಳಿ ಇರುವ ಅಪರೂಪದ ಮತ್ತು ದುಬಾರಿ ಬೈಕ್ ಕವಾಸಕಿ ಹೆಚ್ 2, ಯಮಹಾ ವೈಜೆಡ್-ಆರ್ 1, ಕವಾಸಕಿ ನಿಂಜಾ ಝಡ್ಎಕ್ಸ್ 14 ಆರ್, ಹೋಂಡಾ ಫೈರ್‌ಬ್ಲೇಡ್, ಒಂದೆರಡು ಹಾರ್ಲೆ-ಡೇವಿಡ್ಸನ್ ಬೈಕ್‌ಗಳು ಮತ್ತು ಯಮಹಾ ಆರ್‍ಡಿ 350 ಬೈಕ್‍ಗಳಿವೆ.

ಅವರ ಗ್ಯಾರೇಜ್‍ನಲ್ಲಿ ಅತ್ಯಂತ ಅಪರೂಪದ ಕಾನ್ಫೆಡರೇಟ್ ಎಕ್ಸ್ 132 ಹೆಲ್ ಕ್ಯಾಟ್ ಕೂಡ ಸೇರಿದೆ. ಎಂಎಸ್ ಧೋನಿ ಒಡೆತನದ ಐಕಾನಿಕ್ ಕಾರುಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ, ಲ್ಯಾಂಡ್ ರೋವರ್ ಡಿಸ್ಕವರಿ, ಹಮ್ಮರ್ ಎಚ್ 2 ಮತ್ತು ಈಗ ಈ ನಿಸ್ಸಾನ್ ಜಾಂಗಾ ಸೇರಿವೆ.

ನಿಸ್ಸಾನ್ ಜಾಂಗಾವು 1950ರಲ್ಲಿ ಉತ್ಪಾದಿಸಿದ ಡಾಡ್ಜ್ ಎಂ 37 ಟ್ರಕ್‍ನ ಮಾದರಿಯಲ್ಲಿದೆ. ಜೋಂಗಾ ಡಾಡ್ಜ್ ಎಂ 37 ಟ್ರಕ್‍ನ ಚಾಸಿಸ್ ಅನ್ನು ಬಳಸಿದ್ದಾರೆ ಮತ್ತು ಅದನ್ನು ನಿಸ್ಸಾನ್ ಪೆಟ್ರೋಲ್ ಎಂಜಿನ್ ಅನ್ನು ಜೋಡಿಸಲಾಗಿದೆ. ಜಾಂಗಾ ಅತ್ಯಂತ ವಿರಳ ಏಕೆಂದರೆ ಭಾರತೀಯ ಸೇನೆಯು ಸೀಮಿತ ಸಂಖ್ಯೆಯಲ್ಲಿ ಈ ವಾಹನವನ್ನು ತಯಾರಿಸಿದೆ.

ನಿಸ್ಸಾನ್ ಜಾಂಗಾವು 1950ರಲ್ಲಿ ಉತ್ಪಾದಿಸಿದ ಡಾಡ್ಜ್ ಎಂ 37 ಟ್ರಕ್‍ನ ಮಾದರಿಯಲ್ಲಿದೆ. ಜೋಂಗಾ ಡಾಡ್ಜ್ ಎಂ 37 ಟ್ರಕ್‍ನ ಚಾಸಿಸ್ ಅನ್ನು ಬಳಸಿದ್ದಾರೆ ಮತ್ತು ಅದನ್ನು ನಿಸ್ಸಾನ್ ಪೆಟ್ರೋಲ್ ಎಂಜಿನ್ ಅನ್ನು ಜೋಡಿಸಲಾಗಿದೆ. ಜಾಂಗಾ ಅತ್ಯಂತ ವಿರಳ ಏಕೆಂದರೆ ಭಾರತೀಯ ಸೇನೆಯು ಸೀಮಿತ ಸಂಖ್ಯೆಯಲ್ಲಿ ಈ ವಾಹನವನ್ನು ತಯಾರಿಸಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಧೋನಿ ಅವರು ಖರೀದಿಸಿದ ವಾಹನ 1999ರ ನಿಸ್ಸಾನ್ ಜಾಂಗಾವಾಗಿದೆ. ಈ ವಾಹನವನ್ನು ಎಸ್‌ಡಿ ಆಫ್ರೋಡರ್ಸ್ ನಕೋಡರ್ ಮರುವಿನ್ಯಾಸ ಮಾಡಿದೆ. ಇದರ ಇಂಟಿರಿಯರ್‍ನಲ್ಲಿ ಮಹಿಂದ್ರಾ ಥಾರ್ ಡ್ಯಾಶ್‍ಬೋರ್ಡ್ ಅನ್ನು ಬಳಸಲಾಗಿದೆ. ಇದು ಲೆದರ್ ಸೀಟು, ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ, ಎಲ್‍ಇಡಿ ಲ್ಯಾಂಪ್ ಮತ್ತು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಎಂಎಸ್ ಧೋನಿಯವರ ಗ್ಯಾರೇಜ್‍ನಲ್ಲಿ ನಿಸ್ಸಾನ್ ಜಾಂಗಾ ವಾಹನಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ ಎನ್ನಬಹುದು. ಧೋನಿಯವರು ತಮ್ಮ ವಾಹನವನ್ನು ಸ್ವಚ್ಚಗೊಳಿಸುವುದು ಇದೇ ಮೊದಲಲ್ಲ ಆದರೆ ತಮ್ಮ 4 ವರ್ಷದ ಮಗಳ ಜೊತೆಯಲ್ಲಿ ವಾಹನವನ್ನು ಸ್ವಚ್ಚಗೊಳಿಸುವ ಮೊದಲು ಎಂದು ಹೇಳಬಹುದು.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!
ಇನ್ಸ್ಟ್ರಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾದ ಬೂಮರಾಂಗ್ ವೀಡಿಯೊದಲ್ಲಿ ಧೋನಿ ಮುಂಭಾಗದ ಡೋರ್ ಅನ್ನು ಸ್ವಚಗೊಳಿಸುವಾಗ ತಮ್ಮ ಮಕ್ಕಳು ಬ್ರಷ್ ಬಳಿಸಿ ತನ್ನ ಶಾಲೆಯ ಸಮವಸ್ತ್ರದಲ್ಲಿ ಅಪ್ಪನಿಗೆ ಸ್ವಚ್ಚಗೊಳಿಸಲು ಸಹಾಯ ಮಾಡುತ್ತಿದ್ದಾಳೆ. ಇದಕ್ಕೆ ಧೋನಿಯವರು ' ದೊಡ್ಡ ವಾಹನಕ್ಕಾಗಿನ ಒಂದು ಸಣ್ಣ ಸಹಾಯ ಬಹಳ ದೂರ ಹೋಗುತ್ತದೆ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ಧೋನಿಯ ಮಗಳು ಝೀವಾ ಅಂತರ್ಜಾಲದಲ್ಲಿ ತುಂಡಾಟದ ವೀಡಿಯೊ ಮೂಲಕ ಆಗ ಆಗ ಜನರ ಗಮನಸೆಳೆಯುತ್ತಾಳೆ. ಇದೀಗ ಅಪ್ಪನಿಗೆ ಜಾಂಗಾ ವಾಹನವನ್ನು ಸ್ವಚ್ಚಗೊಳಿಸಲು ಸಹಾಯ ಮಾಡುವ ವೀಡಿಯೊ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾಳೆ.


Click it and Unblock the Notifications