ಜೂನ್ ಅವಧಿಗೆ ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ಕಾರುಗಳ ಮಾರಾಟ ಪ್ರಮಾಣವು ಸಾಕಷ್ಟು ಇಳಿಮುಖವಾಗಿರುವುದು ಆಟೋ ಉತ್ಪಾದನಾ ಸಂಸ್ಥೆಗಳಿಗೆ ತಲೆಬಿಸಿಯಾಗಿದ್ದು, ಸ್ಟಾಕ್ ಪ್ರಮಾಣವನ್ನು ಕರಗಿಸಲು ಬಹುತೇಕ ಕಾರು ಸಂಸ್ಥೆಗಳು ತಾತ್ಕಾಲಿಕವಾಗಿ ಹೊಸ ಕಾರು ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿವೆ. ಇವುಗಳಲ್ಲಿ ಟಾಟಾ ಸಹ ಕಾರು ಉತ್ಪಾದನೆಗೆ ಬ್ರೇಕ್ ಹಾಕಿದ್ದು, ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿರುವ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಡಿಸ್ಕೌಂಟ್ ಯೋಜನೆ ಘೋಷಿಸಿದೆ.

ಜೂನ್ ಅವಧಿಗೆ ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಟಾಟಾ ಸಂಸ್ಥೆಯು ಜೂನ್ ಅವಧಿಯಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ರಿಯಾಯ್ತಿಗಳನ್ನು ನೀಡುತ್ತಿದ್ದು, 'ಗ್ರೇಟ್ ಕಾರ್ಸ್, ಗ್ರೇಟ್ ಬೆನ್‌‌ಫಿಟ್ಸ್' ಎನ್ನುವ ಅಭಿಯಾನದ ಮೂಲಕ ಜೂನ್ ಅವಧಿಯಲ್ಲಿ ಗರಿಷ್ಠ ಕಾರು ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಹಾಗಾದ್ರೆ ಯಾವ ಕಾರು ಖರೀದಿ ಮೇಲೆ ಎಷ್ಟು ರಿಯಾಯ್ತಿ ನೀಡಲಾಗಿದೆ ಎನ್ನುವ ಮಾಹಿತಿಗಾಗಿ ಮುಂದಿನ ಪುಟದತ್ತ ಸಾಗಿರಿ..

ಜೂನ್ ಅವಧಿಗೆ ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಟಾಟಾ ಸದ್ಯ ಮಾರುಕಟ್ಟೆಯಲ್ಲಿ ಹೆಕ್ಸಾ, ನೆಕ್ಸಾನ್, ಹ್ಯಾರಿಯರ್, ಟಿಗೋರ್, ಟಿಯಾಗೋ, ಸಫಾರಿ ಸ್ಟ್ರೋಮ್, ಸುಮೊ ಗೋಲ್ಡ್, ಜೆಸ್ಟ್ ಮತ್ತು ನ್ಯಾನೋ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಆಯ್ದ ಕಾರುಗಳ ಮೇಲೆ ಮಾತ್ರ ಡಿಸ್ಕೌಂಟ್ ಘೋಷಿಸಿದೆ.

ಜೂನ್ ಅವಧಿಗೆ ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಮಾಹಿತಿಗಳ ಪ್ರಕಾರ, ಟಾಟಾ ಸಂಸ್ಥೆಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ರೂ.86 ಸಾವಿರ ಡಿಸ್ಕೌಂಟ್ ಘೋಷಿಸಿದ್ದು, ಎಸ್‌ಯುವಿ ಮಾದರಿಯಾದ ಹೆಕ್ಸಾ ಮೇಲೆಯೇ ಗರಿಷ್ಠ ಪ್ರಮಾಣದ ಆಫರ್‌ಗಳನ್ನು ನೀಡಲಾಗುತ್ತಿದೆ.

ಜೂನ್ ಅವಧಿಗೆ ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಹೆಕ್ಸಾ ಎಕ್ಸ್‌ಚೆಂಜ್ ಮೇಲೆ ರೂ.40 ಸಾವಿರ ಸೇರಿ ವಿವಿಧ ಆಫರ್ ಒಳಗೊಂಡ ಪ್ಯಾಕೇಜ್ ರೂ.86 ಸಾವಿರ ಡಿಸ್ಕೌಂಟ್ ಪಡೆದುಕೊಳ್ಳಲಿದ್ದು, ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿಯ ಮೇಲೆ ರೂ. 76 ಸಾವಿರ ಮೌಲ್ಯದ ರಿಯಾಯ್ತಿ ಪಡೆದುಕೊಳ್ಳಬಹುದು. ಇನ್ನು ನೆಕ್ಸಾನ್ ಕಾರು ಖರೀದಿ ಮೇಲೂ ಭರ್ಜರಿ ಆಫರ್ ಘೋಷಣೆ ಮಾಡಿರುವ ಟಾಟಾ ಸಂಸ್ಥೆಯು ರೂ.66 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದೆ.

ಜೂನ್ ಅವಧಿಗೆ ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಇದರ ಜೊತೆಗೆ ಆಯ್ದ ಗ್ರಾಹಕರಿಗೆ ಚಿನ್ನ ಗೆಲ್ಲುವ ಅವಕಾಶವನ್ನು ಸಹ ನೀಡಲಾಗುತ್ತಿದ್ದು, ಜೂನ್ 15ರ ಒಳಗಾಗಿ ನೆಕ್ಸಾನ್ ಖರೀದಿಗಾಗಿ ಬುಕ್ಕಿಂಗ್ ಮಾಡುವ ಗ್ರಾಹಕರು ರೂ.3,500 ಮೌಲ್ಯ 1 ಗ್ರಾಂ ಚಿನ್ನವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಜೂನ್ ಅವಧಿಗೆ ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಇದರ ಹೊರತಾಗಿ ಹ್ಯಾರಿಯರ್ ಮತ್ತು ಟಿಯಾಗೋ ಕಾರುಗಳ ಮೇಲೆ ಯಾವುದೇ ಆಫರ್ ಘೋಷಣೆ ಮಾಡದ್ದಿದ್ದರೂ ಸಹ ಗ್ರಾಹಕರ ಆಯ್ಕೆಯಲ್ಲಿ ಈ ಕಾರುಗಳು ಮುಂಚೂಣಿಯಲ್ಲಿದ್ದು, ಬೇಡಿಕೆ ಕಳೆದುಕೊಳ್ಳುತ್ತಿರುವ ಹೆಕ್ಸಾ ಮತ್ತು ಟಿಯಾಗೋ ಕಾರಗಳ ಮೇಲೆ ಹೆಚ್ಚಿನ ಆಫರ್ ನೀಡಲಾಗಿದೆ.

ಜೂನ್ ಅವಧಿಗೆ ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ಇದರಲ್ಲಿ ನೆಕ್ಸಾನ್ ಕಾರು ಸಹ ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮುನ್ನುಗ್ಗಲ್ಲು ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ.

ಜೂನ್ ಅವಧಿಗೆ ಟಾಟಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್

ವಿ.ಸೂಚನೆ- ಟಾಟಾ ಕಾರುಗಳನ್ನು ಡಿಸ್ಕೌಂಟ್ ಬೆಲೆಗಳಲ್ಲಿ ಖರೀದಿ ಬಯಸುವ ಗ್ರಾಹಕರು ನಿಮ್ಮ ಹತ್ತಿರದ ಅಧಿಕೃತ ಡೀಲರ್ಸ್ ಬಳಿ ಮತ್ತಷ್ಟು ಮಾಹಿತಿ ಪಡೆದುಕೊಂಡು ವ್ಯವಹಾರ ಮುಂದುವರಿಸುವ ಅವಶ್ಯಕತೆಯಿದ್ದು, ಒಂದು ನಗರದಿಂದ ಮತ್ತೊಂದು ನಗರಕ್ಕೆ ಡಿಸ್ಕೌಂಟ್ ಬೆಲೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿರುತ್ತವೆ.

Most Read Articles

Kannada
English summary
Discounts on the Tata Hexa, Tiago, Nexon. Read in Kannada.
Story first published: Wednesday, June 12, 2019, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X