ದುಬೈನಲ್ಲಿ ಹೊಸ ರೂಲ್ಸ್- ಇನ್ಮುಂದೆ ವಾಹನ ಮಾಲೀಕರು ಕೇರ್ ಲೆಸ್ ಮಾಡುವ ಹಾಗಿಲ್ಲ..!
ಪ್ರವಾಸಿಗರ ಸ್ವರ್ಗವಾಗಿರುವ ದುಬೈನಲ್ಲಿ ಕಣ್ಣು ಹಾಯಿಸಿದ ಕಡೆಗೆಲ್ಲಾ ಸೂಪರ್ ಕಾರುಗಳದ್ದೆ ದರ್ಬಾರ್ ಅಂದ್ರೆ ತಪ್ಪಾಗುವುದಿಲ್ಲ. ಹೀಗಿರುವಾಗ ಅಲ್ಲಿನ ಪೊಲೀಸರು ಕೂಡಾ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಇದೀಗ ಮತ್ತೊಂದು ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.

ಹೌದು, ದುಬೈ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಮಾಲೀಕರ ವಿರುದ್ಧ ಈಗಾಗಲೇ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ನಗರದ ಅಂದಕ್ಕೆ ಕಳಂಕ ತರುವ ಕೊಳಕು ಮತ್ತು ಕೆಟ್ಟು ನಿಂತ ವಾಹನಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪಾರ್ಕ್ ಮಾಡುವುದನ್ನು ನಿಷೇಧ ಮಾಡಲಾಗಿದೆ. ಅಂದರೆ, ವರ್ಷಾನುಗಟ್ಟಲೇ ಕಾರು ಕ್ಲಿನ್ ಮಾಡದೆಯೇ ಅಥವಾ ಚಾಲನೆಗೆ ಸಾಧ್ಯವಿಲ್ಲದ ಕೆಟ್ಟ ವಾಹನಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪಾರ್ಕ್ ಮಾಡುವುದರ ವಿರುದ್ಧ ಹೊಸ ರೂಲ್ಸ್ ಜಾರಿ ಮಾಡಲಾಗಿದ್ದು, ನಗರದ ಸೌಂದರ್ಯಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ದುಬೈನ ಮುನ್ಸಿಪಲ್ ಕಾರ್ಪೋರೆಷನ್ ಮತ್ತು ಪೊಲೀಸ್ ಇಲಾಖೆಯು ಜಂಟಿಯಾಗಿ ಕೊಳಕು ಕಾರುಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ಕೊಳಕಾದ ಮತ್ತು ಕೆಟ್ಟು ನಿಂತ ವಾಹನಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪಾರ್ಕ್ ಮಾಡಿದ್ದೇ ಆದಲ್ಲಿ 500 ದಿರ್ಹಾಮ್ಸ್ (ರೂ.9,332) ದಂಡ ವಿಧಿಸಲಾಗುತ್ತಿದೆ.

ಒಂದು ವೇಳೆ ದಂಡದ ನಂತರವೂ ಸತತ 15 ದಿನಗಳ ಕಾಲ ಕೊಳಕಾದ ಮತ್ತು ಕೆಟ್ಟ ನಿಂತ ವಾಹನಗಳು ಅಲ್ಲಿಯೇ ಪಾರ್ಕ್ ಮಾಡಿರುವುದು ಕಂಡುಬಂದಲ್ಲಿ ಮತ್ತಷ್ಟು ಕಠಿಣಕ್ರಮ ಜರಗಿಸಲು ಮುಂದಾಗಿರುವ ಪೊಲೀಸರು ವಾಹನ ಮಾಲೀಕರಿಗೆ ಯಾವುದೇ ಮಾಹಿತಿ ನೀಡದೆಯೇ ಹರಾಜು ಹಾಕಲಾಗುತ್ತೆ.

ಇನ್ನು ದುಬೈನಲ್ಲಿ ಪ್ರತಿವರ್ಷ ಲಕ್ಷಾಂತರ ಸೂಪರ್ ಕಾರುಗಳು ಮಾರಾಟವಾಗುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಹಳೆಯ ಕಾರುಗಳ ಸಂಖ್ಯೆ ಕೂಡಾ ಹೆಚ್ಚುತ್ತಲೇ ಇದೆ. ಇದು ಪಾರ್ಕಿಂಗ್ ಸಮಸ್ಯೆ ಪ್ರಮುಖ ಕಾರಣವಾಗುತ್ತಿದ್ದು, ಬಹುತೇಕ ಕಾರು ಮಾಲೀಕರು ಹೊಸ ವಾಹನಗಳಿಗೆ ಪಾರ್ಕಿಂಗ್ ಒದಗಿಸಿ ಹಳೆಯ ವಾಹನಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪಾರ್ಕ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ನಗರದ ಅಂದಕ್ಕೆ ಧಕ್ಕೆ ಉಂಟಾಗುತ್ತಿದೆ ಎನ್ನುವ ಸಾರ್ವಜನಿಕ ದೂರಿನ್ವಯ ಈ ಕಠಿಣ ಕ್ರಮಕೈಗೊಳ್ಳಲಾಗಿದ್ದು, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಇನ್ನು ದುಬೈನಲ್ಲಿ ಅಷ್ಟೇ ಅಲ್ಲದೇ ಮುಂಬೈ ಮಹಾನಗರ ಪಾಲಿಕೆ ಕೂಡಾ ಇಂತದ್ದೆ ಒಂದು ಕಠಿಣ ನಿಯಮವನ್ನು ಜಾರಿಗೆ ತಂದಿದ್ದು, ಪೊಲೀಸ್ ಇಲಾಖೆಯ ಜೊತೆಗೂಡಿ ನೋ ಪಾರ್ಕಿಂಗ್ ಜಾಗಗಳಲ್ಲಿ ಪಾರ್ಕ್ ಮಾಡುವ ವಾಹನಗಳ ವಿರುದ್ಧ ಭರ್ಜರಿ ದಂಡ ವಸೂಲಿ ಮಾಡಲಾಗುತ್ತಿದೆ.

ಮುಂಬೈ ಮಹಾನಗರ ಪಾಲಿಕೆಯು(ಬಿಎಂಸಿ) ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವ ವಾಹನ ಮಾಲೀಕರಿಗೆ ರೂ.1 ಸಾವಿರದಿಂದ ರೂ.10 ಸಾವಿರ ತನಕ ದಂಡ ವಿಧಿಸುವ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ನೋ ಪಾರ್ಕಿಂಗ್ ಜಾಗಗಳಲ್ಲಿ ನಿಲುಗಡೆ ಮಾಡಲಾಗಿದ್ದ ವಾಹನಗಳ ಮಾಲೀಕರಿಂದ ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ

ನೋ ಪಾರ್ಕಿಂಗ್ ಪ್ರದೇಶ ಮತ್ತು ವಾಹನ ಮಾದರಿಗಳಿಗೆ ಅನುಗುಣವಾಗಿ ದಂಡದ ಮೊತ್ತವನ್ನು ವಿಧಿಸಲಾಗುತ್ತಿದ್ದು, ಮುಂಬೈ ಟ್ರಾಫಿಕ್ ಪೊಲೀಸರು ವಿಧಿಸುತ್ತಿರುವ ಭಾರೀ ಪ್ರಮಾಣದ ದಂಡಕ್ಕೆ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ.

ಹಾಗೆಯೇ ಮುಂಬೈ ಮಹಾನಗರ ಪಾಲಿಕೆಯು ನಗರದ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಹನಗಳನ್ನು ನಿಲುಗಡೆ ಮಾಡಿದ್ದಲ್ಲಿ ಅಂತಹ ವಾಹನ ಮಾಲೀಕರಿಗೆ ಅಧಿಕ ಮೊತ್ತದ ದಂಡ ವಿಧಿಸಲು ಸೂಚನೆ ನೀಡಲಾಗಿದೆ.

ಜೊತೆಗೆ ಪದೇ ಪದೇ ನಿಯಮ ಉಲ್ಲಂಘಿಸುವ ವಾಹನಗಳನ್ನು ಟ್ರಾಫಿಕ್ ಪೊಲೀಸರೇ ಜಪ್ತಿ ಮಾಡಲಿದ್ದು, ಹೊಸ ರೂಲ್ಸ್ ಜಾರಿಗೆ ಬಂದು ಎರಡೇ ದಿನದಲ್ಲಿ ಸಾವಿರ ವಾಹನ ಮಾಲೀಕರ ವಿರುದ್ಧ ಇ-ಚಲನ್ ಮೂಲಕ ದಂಡ ಹಾಕಲಾಗಿದೆ. ಇನ್ನು ಕೆಲವು ನೋ ಪಾರ್ಕಿಂಗ್‌ನಲ್ಲಿದ್ದ ವಾಹನಗಳನ್ನು ಟೋಯಿಂಗ್ ಮಾಡಲಾಗಿದ್ದು, ಅಧಿಕ ಪ್ರಮಾಣದ ದಂಡ ಮೊತ್ತವನ್ನು ಪಾವತಿಸಲು ಸಾಧ್ಯವಾಗದೆ ಬಹುತೇಕ ವಾಹನ ಸವಾರರು ತಮ್ಮ ವಾಹನಗಳನ್ನು ಮರಳಿ ಪಡೆಯಲು ಪರದಾಟುತ್ತಿದ್ದಾರೆ.
Image Source: 4


Click it and Unblock the Notifications








