ಗಸ್ತು ನಿರ್ವಹಣೆಗಾಗಿ ಹಾರುವ ಬೈಕ್‌ಗಳನ್ನು ಅಳವಡಿಸಿಕೊಂಡ ದುಬೈ ಪೊಲೀಸರು..!!

ಸಾಮಾನ್ಯವಾಗಿ ಪೊಲೀಸರು ಅಪರಾಧ ನಡೆದ ಸ್ಥಳಗಳಿಗೆ ಹಾಗೂ ಗಸ್ತು ನಿರ್ವಹಣೆಗಾಗಿ ಕಾರು ಮತ್ತು ಬೈಕ್‌ನಲ್ಲಿ ಬರುವುದನ್ನು ನೋಡಿದ್ದೇವೆ. ಆದ್ರೆ ಇನ್ಮುಂದೆ ಪೊಲೀಸರು ಹಾರುವ ಬೈಕ್‌ಗಳಲ್ಲಿ ಬರಲಿದ್ದಾರೆ ಎಂದ್ರೆ ನೀವು ನಂಬಲೇಬೇಕು.

By Praveen

ಅಭಿವೃದ್ಧಿ ಹೊಂದಿದಂತೆ ಮುಂದುವರಿದ ರಾಷ್ಟ್ರಗಳಲ್ಲಿ ಅಪರಾಧ ಕೃತ್ಯಗಳು ಹೊಸ ಆಯಾಮ ಪಡೆದುಕೊಳ್ಳುತ್ತಿವೆ. ಹೀಗಾಗಿ ಗಸ್ತು ನಿರ್ವಹಣೆಗಾಗಿ ಹಲವು ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದ್ದು, ಇದೀಗ ದುಬೈ ಪೊಲೀಸರು ಹಾರುವ ಬೈಕ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಗಸ್ತು ನಿರ್ವಹಣೆಗಾಗಿ ಹಾರುವ ಬೈಕ್‌ಗಳನ್ನು ಅಳವಡಿಸಿಕೊಂಡ ದುಬೈ ಪೊಲೀಸರು..!!

ಇತರೆ ದೇಶಗಳ ಪೊಲೀಸ್ ವ್ಯವಸ್ಥೆಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ದುಬೈ ಪೊಲೀಸರು, ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿರುವ ಹಾರುವ ಬೈಕ್‌ಗಳ ಬಳಕೆಗೆ ಚಾಲನೆ ನೀಡಿದ್ದಾರೆ.

Recommended Video

Lamborghini Aventador S Walkaround Review | DriveSpark
ಗಸ್ತು ನಿರ್ವಹಣೆಗಾಗಿ ಹಾರುವ ಬೈಕ್‌ಗಳನ್ನು ಅಳವಡಿಸಿಕೊಂಡ ದುಬೈ ಪೊಲೀಸರು..!!

ಈ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ಸೆಳೆದಿರುವ ದುಬೈ ಪೊಲೀಸರು, ರಷ್ಯಾ ಮೂಲದ 'ಹೋವರ್ ಸರ್ಫ' ಸಂಸ್ಥೆಯ ನಿರ್ಮಾಣದ ಹೋವರ್ ಬೈಕ್‌ಗಳನ್ನು ಬಳಕೆ ಮಾಡುವ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗಸ್ತು ನಿರ್ವಹಣೆಗಾಗಿ ಹಾರುವ ಬೈಕ್‌ಗಳನ್ನು ಅಳವಡಿಸಿಕೊಂಡ ದುಬೈ ಪೊಲೀಸರು..!!

ಹೋವರ್ ಬೈಕ್ ವಿಶೇಷತೆ ಏನು?

ಹೋವರ್ ಸರ್ಫ ಸಂಸ್ಥೆ ನಿರ್ಮಾಣ ಮಾಡಿರುವ ಹೋವರ್ ಬೈಕ್ ಹಲವು ವಿಶೇಷತೆಗಳಿಂದ ಕೂಡಿದ್ದು, ನೆಲದಿಂದ 16 ಅಡಿ ಎತ್ತರದಲ್ಲಿ ಹಾರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಒಂದು ನೆಲದಿಂದ ಎತ್ತರ ಜಿಗಿದರೆ 25 ನಿಮಿಷಗಳ ಕಾಲ ಚಾಲನಾ ಸಾಮರ್ಥ್ಯ ಪಡೆದುಕೊಂಡಿದೆ.

ಗಸ್ತು ನಿರ್ವಹಣೆಗಾಗಿ ಹಾರುವ ಬೈಕ್‌ಗಳನ್ನು ಅಳವಡಿಸಿಕೊಂಡ ದುಬೈ ಪೊಲೀಸರು..!!

ಹೋವರ್ ಬೈಕ್‌ನಿಂದ ಏನು ಲಾಭ?

ಹೋವರ್ ಬೈಕ್‌ಗಳಿಂದ ಸಾಕಷ್ಟು ಲಾಭಗಳಿಂದ ತುರ್ತು ಸಂದರ್ಭದಲ್ಲಿ ನಿಗದಿತ ಪ್ರದೇಶಗಳಿಗೆ ಅತಿ ವೇಗವಾಗಿ ತಲುಪಲು ಸಹಕಾರಿಯಾಗಲಿವೆ. ಜೊತೆಗೆ ವಾಹನಗಳು ಚಾಲನೆ ಮಾಡಲು ಸಾಧ್ಯವಾದ ಪ್ರದೇಶಗಳನ್ನು ತಲುಪಲು ಕೂಡಾ ಬಳಕೆಯಾಗಲಿದೆ.

ಗಸ್ತು ನಿರ್ವಹಣೆಗಾಗಿ ಹಾರುವ ಬೈಕ್‌ಗಳನ್ನು ಅಳವಡಿಸಿಕೊಂಡ ದುಬೈ ಪೊಲೀಸರು..!!

ಇದರಿಂದ ತುರ್ತು ಪರಿಸ್ಥಿತಿ ನಡೆದ ಸ್ಥಳಗಳನ್ನು ಅತಿವೇಗವಾಗಿ ತಲುಪಬಹುದಲ್ಲದೆ ಅಪಘಾತಗಳ ಭೀಕರತೆಯನ್ನು ತಗ್ಗಿಸಬಹುದು. ಹೀಗಾಗಿಯೇ ದುಬೈ ಪೊಲೀಸ್ ಇಲಾಖೆಯು ಇಂತದೊಂದು ಮಹತ್ವದ ಯೋಜನೆಗೆ ಹಸಿರು ನಿಶಾನೆ ತೊರಿದೆ.

ಗಸ್ತು ನಿರ್ವಹಣೆಗಾಗಿ ಹಾರುವ ಬೈಕ್‌ಗಳನ್ನು ಅಳವಡಿಸಿಕೊಂಡ ದುಬೈ ಪೊಲೀಸರು..!!

ಭಾರತದಲ್ಲೂ ಇದು ಸಾಧ್ಯವೇ?

ಭಾರತದಲ್ಲೂ ಇಂತಹ ಮುಂದುವರಿದ ತಂತ್ರಜ್ಞಾನಗಳ ಅಳವಡಿಕೆ ಅವಶ್ಯಕತೆಯಿದ್ದು, ಸಂಬಂಧಪಟ್ಟ ಇಲಾಖೆಗಳನ್ನು ಇಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆಯಿದೆ ಎಂದ್ರೆ ತಪ್ಪಾಗಲಾರದು.

ದುಬೈ ಪೊಲೀಸರು ಹೋವರ್ ಬೈಕ್ ಕಾರ್ಯಾಚರಣೆ ಕುರಿತು ನಡೆದ ಪರೀಕ್ಷಾರ್ಥ ವಿಡಿಯೋ ಇಲ್ಲಿದೆ ನೋಡಿ.

ಗಸ್ತು ನಿರ್ವಹಣೆಗಾಗಿ ಹಾರುವ ಬೈಕ್‌ಗಳನ್ನು ಅಳವಡಿಸಿಕೊಂಡ ದುಬೈ ಪೊಲೀಸರು..!!

ಪ್ರಿಯ ಡ್ರೈವ್ ಸ್ಪಾರ್ಕ್ ಓದುಗರೇ ಹೋವರ್ ಬೈಕ್ ಕುರಿತು ನಿಮ್ಮ ಅಭಿಪ್ರಾಯಗಳ ಹಂಚಿಕೊಳ್ಳಿ ಜೊತೆಗೆ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಇಂತಹ ಯೋಜನೆಗಳ ಅವಶ್ಯಕತೆ ಇದೆಯೇ ಎಂಬುವುದರ ಬಗ್ಗೆ ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ಸಂದೇಹ ಕಳುಹಿಸಿ.

More from DriveSpark

Article Published On: Monday, October 16, 2017, 11:21 [IST]
English summary
Dubai police announce electric Star Wars-style hoverbikes for officers at Gitex tech conference.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+