ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಭಾರತದ ಅಗ್ರ ಗಣ್ಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಎಕ್ಸ್ ಎಲ್6 ಎಂಬ ಮತ್ತೊಂದು ಹೊಸ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಹೊಸ ಕಾರ್ ಅನ್ನು ಕಂಪನಿಯ ನೆಕ್ಸಾ ಪ್ರಿಮೀಯಂ ಡೀಲರ್‍‍ಶಿಪ್‍‍ಗಳ ಮೂಲಕ ಮಾರಾಟ ಮಾಡಲಾಗುವುದು.

ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಈ ಕಾರು 1.5 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ಹೊಂದಿರಲಿದೆ. ಮಾರುಕಟ್ಟೆಯಲ್ಲಿರುವ ಎರ್ಟಿಗಾದ ಫೀಚರ್ಸ್ ಹಾಗೂ ವಿನ್ಯಾಸಗಳಿಗೆ ಹೋಲಿಸಿದರೆ, ಎಕ್ಸ್‌ಎಲ್ 6 ಕಾರು ಎರ್ಟಿಗಾಕ್ಕಿಂತ ಸುಮಾರು ರೂ.50,000 ಅಧಿಕ ಬೆಲೆಯನ್ನು ಹೊಂದಿರಲಿದೆ. ಎಕ್ಸ್ ಎಲ್6 ವಾಹನವನ್ನು ಟಾಪ್ ಮಾದರಿಯ ಆಲ್ಫಾ ಹಾಗೂ ಜೆಟಾ ಸರಣಿಗಳಲ್ಲಿ ಮಾತ್ರ ಮಾರಾಟ ಮಾಡಲಾಗುವುದು.

ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಇವುಗಳಲ್ಲಿ ನಾಲ್ಕು ಮಾದರಿಗಳಿರಲಿದ್ದು, ಎಲ್ಲಾ ನಾಲ್ಕು ಮಾದರಿಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳಿರಲಿವೆ. ಮಾರುತಿ ಸುಜುಕಿ ಎಕ್ಸ್‌ಎಲ್ 6 ಜೆಟಾ ಎಂಟಿ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.9.49 ಲಕ್ಷಗಳಾಗಲಿದೆ.

ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿರುವ ಆಲ್ಫಾ ಮಾದರಿಯ ಬೆಲೆಯು ಸುಮಾರು ಒಂದು ಲಕ್ಷ ಹೆಚ್ಚಿರಲಿದ್ದು, ಈ ಮಾದರಿಯ ಬೆಲೆಯು ರೂ.10.49 ಲಕ್ಷಗಳಾಗಿರಲಿದೆ. ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರುವ ಈ ಎರಡೂ ಮಾದರಿಗಳ ಬೆಲೆಯು ರೂ.50,000 ಹೆಚ್ಚಿರಲಿದೆ.

ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಎಕ್ಸ್‌ಎಲ್ ಜೆಟಾ ಎಟಿ ಬೆಲೆಯು ಸುಮಾರು ರೂ.9.99 ಲಕ್ಷಗಳಾದರೆ, ಟಾಪ್ ಮಾದರಿಯ ಆಲ್ಫಾ ಎಟಿಯ ಬೆಲೆ ರೂ.10.99 ಲಕ್ಷಗಳಾಗುತ್ತದೆ. ಮಾರುತಿ ಸುಜುಕಿ ಎಕ್ಸ್ಎಲ್ 6 ಕಾರಿನಲ್ಲಿಯೂ ಸಹ ಎರ್ಟಿಗಾ ಹಾಗೂ ಸಿಯಾಜ್ ಕಾರಿನಲ್ಲಿ ಅಳವಡಿಸಲಾಗಿದ್ದ 1.5 ಲೀಟರಿನ ಕೆ15ಬಿ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

Maruti XL6 Variants Expected Ex-Showroom
XL6 Zeta 1.5L Petrol MT Rs 9.49 Lakh
XL6 Zeta 1.5L Petrol MT Rs 10.49 Lakh
XL6 Zeta 1.5L Petrol AT Rs 9.99 Lakh
XL6 Alpha 1.5L Petrol AT Rs 9.99 Lakh
ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಈ ಎಂಜಿನ್ ಗರಿಷ್ಠ 103 ಬಿಹೆಚ್‌ಪಿ ಪವರ್ ಹಾಗೂ 138 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡಿನ ಮ್ಯಾನುವಲ್ ಹಾಗೂ 4 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ನೀಡಲಾಗುವುದು.

ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಎರ್ಟಿಗಾ ಕಾರಿಗೆ ಹೋಲಿಸಿದರೆ, ಮಾರುತಿ ಸುಜುಕಿ ಎಕ್ಸ್‌ಎಲ್ 6ನಲ್ಲಿ ಅಳವಡಿಸಲಾಗಿರುವ ಹಲವಾರು ಎಸ್‍‍ಯುವಿ ಪ್ರೇರಿತ ಸ್ಟೈಲಿಂಗ್ ಅಂಶಗಳಿಂದಾಗಿ ಎಕ್ಸ್ ಎಲ್6 ಹೆಚ್ಚು ಒರಟಾಗಿ ಕಾಣುತ್ತದೆ. ಮುಂಭಾಗದ ತುದಿಯು ಹೆಚ್ಚು ರೊಬೂಸ್ಟ್ ವಿನ್ಯಾಸವನ್ನು ಹೊಂದಿದೆ.

MOST READ: ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಇದರಲ್ಲಿ ದೊಡ್ಡ ಗಾತ್ರದ ಗ್ರಿಲ್, ಸ್ಲೀಕರ್ ಹೆಡ್‌ಲ್ಯಾಂಪ್‌ ಹಾಗೂ ಸ್ಕಿಡ್ ಪ್ಲೇಟ್‌‍‍ಗಳನ್ನು ಹೊಂದಿರುವ ಹೊಸ ಬಂಪರ್ ಇದೆ. ಮಾರುತಿ ಸುಜುಕಿ ಎಕ್ಸ್‌ಎಲ್ 6 ಕಾರಿನ ಸೈಡಿನಲ್ಲಿ ಕಪ್ಪು ಬಣ್ಣದ ಅಲಾಯ್ ವ್ಹೀಲ್‍‍ಗಳು, ಪ್ಲಾಸ್ಟಿಕ್ ಕ್ಲಾಡಿಂಗ್ ಹಾಗೂ ಸೈಡ್ ಸ್ಕರ್ಟ್‌ಗಳಲ್ಲಿ ಸ್ಕಿಡ್ ಪ್ಲೇಟ್‌ಗಳಿವೆ.

MOST READ: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಎಕ್ಸ್ ಎಲ್6 ಕಾರಿನ ಹಿಂಭಾಗವು ಎರ್ಟಿಗಾ ಕಾರಿನ ಹಿಂಭಾಗದಂತಿದೆ. ಆದರೆ ಹೆಚ್ಚುವರಿಯಾಗಿ ಸ್ಕಿಡ್ ಪ್ಲೇಟ್‌ನೊಂದಿಗೆ ಹೊಸ ಬಂಪರ್ ಹೊಂದಿದೆ. ಎಕ್ಸ್ ಎಲ್6 ಕಾರ್ ಅನ್ನು - ಸಿಲ್ವರ್, ಗ್ರೇ, ರೆಡ್, ಬ್ರೌನ್, ವೈಟ್ ಹಾಗೂ ನೆಕ್ಸಾ ಬ್ಲೂ ಎಂಬ ಆರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಮಾರುತಿ ಸುಜುಕಿ ಎಕ್ಸ್‌ಎಲ್ 6ನ ಇಂಟಿರಿಯರ್ ಎರ್ಟಿಗಾ ಕಾರಿನ ಇಂಟಿರಿಯರಿಗಿಂತ ವಿಭಿನ್ನವಾಗಿದೆ. ಎಕ್ಸ್ ಎಲ್6 ನ ಇಂಟಿರಿಯರ್ ಪೂರ್ತಿಯಾಗಿ ಕಪ್ಪು ಬಣ್ಣದ ಥೀಮ್ ಅನ್ನು ಹೊಂದಿದೆ. ಎರಡನೇ ಸಾಲಿನ ಕ್ಯಾಪ್ಟನ್ ಆಸನಗಳು ಹೊಸ ರೀತಿಯಲ್ಲಿವೆ.

ಮಾರುತಿ ಸುಜುಕಿ ಎಕ್ಸ್ ಎಲ್6ನ ನಿರೀಕ್ಷಿತ ದರಗಳಿವು

ಹಿಂಭಾಗದ ಕ್ಯಾಪ್ಟನ್ ಚೇರ್‍‍ಗಳು ಮಡಚಬಹುದಾದ ಆರ್ಮ್ ರೆಸ್ಟ್ ಗಳನ್ನು ಹೊಂದಿರಲಿವೆ. ಬಿಡುಗಡೆಯಾದ ನಂತರ ಮಾರುತಿ ಸುಜುಕಿಯ ಎಕ್ಸ್ ಎಲ್6 ಕಾರು, ಮಹೀಂದ್ರಾ ಮರಾಜೊ ಕಾರಿಗೆ ಪೈಪೋಟಿ ನೀಡಲಿದೆ.

Image Courtesy: GaadiWaadi

Most Read Articles

Kannada
English summary
Here Is The Expected Price List Of Upcoming Maruti Suzuki XL6 - Read in kannada
Story first published: Tuesday, August 13, 2019, 11:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X