ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ವಿವಿ‍ಐಪಿ ಕಾರುಗಳು ಸಂಚಾರಿಸುವಾಗ, ಸಾರ್ವಜನಿಕರ ವಾಹನಗಳನ್ನು ತಡೆದು, ರಸ್ತೆಯನ್ನು ಬಂದ್ ಮಾಡುವುದು ಭಾರತದಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ. ಇದರಿಂದ ವಿವಿ‍ಐಪಿಗಳು ಸರಾಗವಾಗಿ ಚಲಿಸುವಂತೆ ಮಾಡುವುದು ಇದರ ಹಿಂದಿರುವ ಉದ್ದೇಶವಾಗಿದೆ.

ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ಈ ರೀತಿಯ ಸೌಲಭ್ಯವನ್ನು ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ನೀಡಲಾಗುತ್ತದೆ. ಇದೇ ರೀತಿಯ ಸನ್ನಿವೇಶವೊಂದು ಈಚೆಗೆ ಪಶ್ಚಿಮ ಬಂಗಾಳದಲ್ಲಿ ಎದುರಾಗಿತ್ತು. ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರವರು ತಮ್ಮ ಬೆಂಗಾವಲು ಪಡೆಯ ಸಿಬ್ಬಂದಿಯೊಂದಿಗೆ ವಿಮಾನ ನಿಲ್ದಾಣದಿಂದ ವಾಪಸ್ ಆಗುತ್ತಿದ್ದಾಗ, ಎಲ್ಲಾ ವಾಹನಗಳನ್ನು ನಿಲ್ಲಿಸಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಟ್ರಾಫಿಕ್ ಜಾಮ್ ನೋಡಿ ಕುಪಿತರಾದ ಮಮತಾ ಬ್ಯಾನರ್ಜಿ ಈ ರೀತಿಯಾಗಿ ಟ್ರಾಫಿಕ್ ಜಾಮ್ ಉಂಟು ಮಾಡಿದ ಸಂಬಂಧ ಪಟ್ಟ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎ‍ಎನ್‍ಐ ನ್ಯೂಸ್ ಬಿಡುಗಡೆಗೊಳಿಸಿರುವ ಈ ವೀಡಿಯೊ ಆ ಘಟನೆಯ ಬಗ್ಗೆ ವಿವರಿಸುತ್ತದೆ.

ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಮಹೀಂದ್ರಾ ಸ್ಕಾರ್ಪಿಯೋದಲ್ಲಿ ಕುಳಿತು ಟ್ರಾಫಿಕ್ ಜಾಮ್ ಬಗೆಹರಿಸಲು ರಸ್ತೆ ಬದಿಯಲ್ಲಿ ವಾಹನದಲ್ಲಿ ಕಾಯುತ್ತಿರುವುದನ್ನು ಮೇಲಿನ ವೀಡಿಯೊದಲ್ಲಿ ಕಾಣಬಹುದು. ಮಮತಾ ಬ್ಯಾನರ್ಜಿರವರ ಬೆಂಗಾವಲು ಪಡೆಯು ಬಿಳಿ ಬಣ್ಣದ ಮಹೀಂದ್ರಾ ಬೊಲೆರೊ ಹಾಗೂ ಸ್ಕಾರ್ಪಿಯೋ ಎಸ್‌ಯುವಿಗಳನ್ನು ಒಳಗೊಂಡಿದೆ.

ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ಟೈಮ್ಸ್ ಆಫ್ ಇಂಡಿಯಾದ ವರದಿಗಳ ಪ್ರಕಾರ, ತಮ್ಮ ಕಾರಿನಿಂದ ಇಳಿದ ಮಮತಾ ಬ್ಯಾನರ್ಜಿ ವಿಐಪಿ ರಸ್ತೆಯ ತೆಘೋರಿಯಾ ಕ್ರಾಸಿಂಗ್‌ನಲ್ಲಿ ಕರ್ತವ್ಯದಲ್ಲಿದ್ದ ಸಂಬಂಧ ಪಟ್ಟ ಟ್ರಾಫಿಕ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ವರದಿಗಳ ಪ್ರಕಾರ, ತನ್ನ ಬೆಂಗಾವಲು ವಾಹನಗಳು ಸುಗಮವಾಗಿ ಸಾಗಲು ಅನುಕೂಲವಾಗುವಂತೆ ಸರ್ವಿಸ್ ರಸ್ತೆಯಲ್ಲಿ ಬೇರೆ ವಾಹನಗಳ ಸಂಚಾರವನ್ನು ನಿಲ್ಲಿಸಿ, ಟ್ರಾಫಿಕ್ ಜಾಮ್ ಉಂಟಾಗಿದ್ದ ಕಾರಣ ಅವರು ಹಾಗೆ ಮಾಡಿದ್ದಾರೆ.

ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ತಮ್ಮ ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸುವಂತೆ ಬೆಂಗಾವಲು ಪಡೆಗೆ ಸೂಚಿಸಿದ ಅವರು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ವರದಿಗಳ ಪ್ರಕಾರ, ಮಮತಾ ಬ್ಯಾನರ್ಜಿರವರು ನಾಲ್ಕೈದು ನಿಮಿಷಗಳ ಕಾಲ ರಸ್ತೆ ಬದಿಯಲ್ಲಿ ನಿಂತು, ಸಂಚಾರವು ಸಹಜ ಸ್ಥಿತಿಗೆ ಬಂದ ನಂತರ ಅಲ್ಲಿಂದ ತೆರಳಿದ್ದಾರೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ಮಮತಾ ಬ್ಯಾನರ್ಜಿರವರು ಗುರುವಾರ ಸಂಜೆ 5.45ರ ಸುಮಾರಿಗೆ ವಿಮಾನ ನಿಲ್ದಾಣದಿಂದ ಒಂಬತ್ತು ವಾಹನಗಳ ಬೆಂಗಾವಲು ಪಡೆಯೊಂದಿಗೆ ವಾಪಸ್ ಆಗುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಅನುಸರಿಸುವ ನಿಯಮಗಳ ಪ್ರಕಾರ, ವಿವಿ‍ಐಪಿಗಳು ಸಂಚರಿಸುವಾಗ ಮುಖ್ಯ ಮಾರ್ಗಗಳು ಹಾಗೂ ಕ್ರಾಸ್ಒವರ್ ರಸ್ತೆಗಳಲ್ಲಿನ ಸಂಚಾರವನ್ನು ನಿಲ್ಲಿಸಲಾಗುತ್ತದೆ.

MOST READ: ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಳ್ಳದೇ ಸರಾಗವಾಗಿ ವಿಐಪಿ ವಾಹನಗಳು ಹಾದುಹೋಗಲಿ ಎಂಬ ಕಾರಣಕ್ಕೆ ಈ ನಿಯಮಗಳನ್ನು ಅನುಸರಿಸಲಾಗುತ್ತದೆ. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಮಮತಾ ಬ್ಯಾನರ್ಜಿರವರು ಈ ನಿಯಮಗಳನ್ನು ಮುರಿಯಲು ಪ್ರಯತ್ನಿಸಿದ್ದರು.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ತಮ್ಮಿಂದ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಗುರುವಾರ ಸಂಚಾರಿಸುವಾಗ, ವಿಐಪಿ ರಸ್ತೆಗೆ ಸಮಾನಾಂತರವಾಗಿರುವ ಸರ್ವಿಸ್ ರಸ್ತೆಯಲ್ಲಿ ಹಲವಾರು ವಾಹನಗಳು ನಿಂತಿರುವುದನ್ನು ನೋಡಿದ ಅವರು, ತಮ್ಮ ಬೆಂಗಾವಲು ವಾಹನಗಳನ್ನು ನಿಲ್ಲಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ಮಮತಾ ಬ್ಯಾನರ್ಜಿರವರು ಒಳ್ಳೆಯ ನಡೆಯನ್ನು ಅನುಸರಿಸಿದ್ದಾರೆ. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಸಹ ಇದೇ ನಡೆಯನ್ನು ಅನುಸರಿಸಲಿ ಎಂದು ಹಾರೈಸುತ್ತೇವೆ.

Most Read Articles

Kannada
English summary
West Bengal CM Mamata Banerjee scolds cop for holding up traffic for her convoy - Read in kannada
Story first published: Monday, August 12, 2019, 14:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X