ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ನಮ್ಮರಿಗೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸ ಬೇಡಿ ಅಂತಾ ಎಷ್ಟು ಹೇಳಿದರೂ ಕೇಳುವುದೇ ಇಲ್ಲಾ. ಕೇಸ್ ಬಿದ್ರು ಪರವಾಗಿಲ್ಲ ತಮ್ಮಿಷ್ಟದ್ದಂತೆ ವಾಹನ ಚಾಲನೆ ಮಾಡುತ್ತವೆ ಎನ್ನುವವರ ಸಂಖ್ಯೆಗೂ ಏನು ಕಮ್ಮಿಯಿಲ್ಲ. ಆದ್ರೆ ಇನ್ಮುಂದೆ ಹಾಗೆಲ್ಲಾ ಮಾಡುವುದಾರರೇ ಹತ್ತು ಬಾರಿ ಯೋಚಿಸುವುದು ಒಳಿತು.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಹೌದು, ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಕೂಡಾ ಹೆಚ್ಚುತ್ತಲೇ ಇದೆ. ಹೀಗಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಿರುದ್ಧ ಕೆಲವು ಕಠಿಣ ಕಾನೂನು ಕ್ರಮಗಳನ್ನು ಜರಗಿಸಲಾಗುತ್ತಿದ್ದು, ದಂಡದ ಬದಲಾಗಿ ಜೈಲು ಶಿಕ್ಷೆಗೆ ವಿಧಿಸಲಾಗುತ್ತಿದೆ.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ದೇಶಾದ್ಯಂತ ದಿನಂಪ್ರತಿ ಸಾವಿರಾರು ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದು, ದಂಡದ ಪ್ರಮಾಣವನ್ನು ಹೆಚ್ಚಳ ಮಾಡಿದರೂ ಸಹ ಕೆಲವರು ಮಾತ್ರ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಹೀಗಾಗಿ ಹೊಸ ಕ್ರಮಕ್ಕೆ ಮುಂದಾಗಿರುವ ಹೈದ್ರಾಬಾದ್ ಪೊಲೀಸರು ದಂಡದ ಬದಲಾಗಿ ಜೈಲಿಗೆ ಕಳುಹಿಸುತ್ತಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಕಳೆದ 2 ದಿನಗಳ ಹಿಂದಷ್ಟೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಟೆಕ್ಕಿಯೊಬ್ಬರಿಗೆ ಹೈದ್ರಾಬಾದ್ ಪೊಲೀಸರು ನಾಲ್ಕು ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ಡ್ರಂಕ್ ಆ್ಯಂಡ್ ಡ್ರೈವ್ ಕೇಸ್‌ನಲ್ಲಿ ಸಿಕ್ಕಿಬಿದ್ದ ಪರಿಣಾಮ ಜೈಲು ವಾಸವೇ ಗತಿಯಾಗಿದೆ.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ದೇಶದ ಪ್ರಮುಖ ನಗರಗಳ ಪೈಕಿ ಹೈದ್ರಾಬಾದ್‌‌ನಲ್ಲಿ ಅತಿಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿದ್ದು, ದಂಡದ ಮೊತ್ತವನ್ನು ಹೆಚ್ಚಳ ಮಾಡಿದರೂ ಸಹ ಬಹುತೇಕ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಹೀಗಾಗಿ ದಂಡದ ಬದಲಾಗಿ ಹೊಸ ಅಸ್ತ್ರ ಪ್ರಯೋಗಿಸುತ್ತಿರುವ ಪೊಲೀಸರು ಮೊದಲ ಬಾರಿಗೆ ತಪ್ಪು ಮಾಡಿದರೂ ಸರಿ ಪದೇ ಪದೇ ತಪ್ಪು ಮಾಡಿದರೂ ಸರಿ ಒಟ್ಟಿನಲ್ಲಿ ಜೈಲಿಗೆ ಕಳುಹಿಸಲೇ ಬೇಕು ಎಂಬ ತೀರ್ಮಾನ ಕೈಗೊಂಡಿದ್ದು, ಡ್ರಂಕ್ ಡ್ರೈವ್ ಅಷ್ಟೇ ಅಲ್ಲದೇ ಯಾವುದೇ ರೀತಿಯ ಸಂಚಾರ ನಿಯಮವನ್ನು ಉಲ್ಲಂಘಿಸಿದರೂ ಸಹ ಜೈಲಿಗೆ ಕಳುಹಿಸುತ್ತಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಈ ಬಗ್ಗೆ ಮಾತನಾಡಿರುವ ಟ್ರಾಫಿಕ್ ಅಸಿಸ್ಟಂಟ್ ಕಮಿಷನರ್ ಚಂದ್ರಶೇಖರ್ ಅವರು, ಸಂಚಾರಿ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಮಾಡಲು ಇಂತಹ ಕೆಲವು ಕಠಿಣ ಕ್ರಮಗಳು ಅನಿವಾರ್ಯವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಮತ್ತೊಬ್ಬ ವ್ಯಕ್ತಿಯನ್ನು ಸಹ ಜೈಲಿಗೆ ಕಳುಹಿಸಿರುವ ಹೈದ್ರಾಬಾದ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುತ್ತಿದ್ದು, ದೇಶದ ಇತರೆ ನಗರಗಳಿಂತಲೂ ವಿಭಿನ್ನ ಕಾನೂನು ಕ್ರಮಕೈಗೊಳ್ಳುತ್ತಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಇದಷ್ಟೇ ಅಲ್ಲದೇ ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ನೀಡುವ ಪೋಷಕರಿಗೂ ಸರಿಯಾಗಿ ಪಾಠ ಕಲಿಸುತ್ತಿರುವ ಹೈದ್ರಾಬಾದ್ ಪೊಲೀಸರು, ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡಿದ್ದ 10ಕ್ಕೂ ಪೋಷಕರನ್ನು ಮತ್ತು ನಿಯಮ ಬಾಹಿರವಾಗಿ ಬೈಕ್ ಚಾಲನೆ ಮಾಡಿದ ತಪ್ಪಿಗೆ 14ಕ್ಕೂ ಹೆಚ್ಚು ಬಾಲಕರನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿತ್ತು.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಮಕ್ಕಳ ಕೈಗೆ ಬೈಕ್ ಕೊಟ್ಟಿದ್ದ ಪೋಷಕರನ್ನು ಹೈದ್ರಾಬಾದ್ ಟ್ರಾಫಿಕ್ ಪೋಲಿಸರು ಕೋರ್ಟ್‌ಗೆ ಹಾಜರುಪಡಿಸಿದ್ದಾಗ ಪೋಷಕರ ಕ್ರಮಕ್ಕೆ ಛೀಮಾರಿ ಹಾಕಿದ್ದ ಕೋರ್ಟ್, 1 ದಿನ ಮಟ್ಟಿಗೆ ಜೈಲು ಶಿಕ್ಷೆ ನೀಡಿದ್ದಲ್ಲದೇ ಮಕ್ಕಳಿಗೆ ರಸ್ತೆ ನಿಯಮದ ಬಗ್ಗೆ ತಿಳುವಳಿಕೆ ಹೇಳುವಂತೆ ಖಡಕ್ ಸೂಚನೆ ನೀಡಿತ್ತು.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಹೈದ್ರಾಬಾದ್ ಒಂದರಲ್ಲೇ ಅಪ್ರಾಪ್ತ ಬಾಲಕರು ನಿಯಮ ಉಲ್ಲಂಘಿಸಿ ಚಾಲನೆ ಮಾಡಿದ ಹಿನ್ನೆಲೆ ಇದುವರೆಗೆ ಬರೋಬ್ಬರಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 150ಕ್ಕೂ ಹೆಚ್ಚು ಪೋಷಕರು ಜೈಲು ಕಂಬಿ ಎಣಿಸಿ ಬಂದಿದ್ದಾರೆ.

MOST READ: ವರ್ಷದ ಹಿಂದೆ ರೂ. 5 ಸಾವಿರಕ್ಕೂ ಗತಿ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಬೆಂಟ್ಲಿ ಕಾರಿನ ಒಡೆಯ

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಇನ್ನು ರಾಜಧಾನಿ ಬೆಂಗಳೂರಿನಲ್ಲೂ ಇಂತಹ ಕಠಿಣ ನಿಯಮಗಳನ್ನು ಸದ್ಯದಲ್ಲೇ ಜಾರಿ ತರುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳಿಗೆ ವಾಹನಗಳನ್ನು ನೀಡುವ ಮುನ್ನ ಎಚ್ಚರವಾಗಿರುವುದು ಒಳಿತು.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಜೊತೆಗೆ ಇತ್ತೀಚೆಗೆ ಯುವ ಬೈಕ್ ಸವಾರರು ವೀಲ್ಹಿಂಗ್ ಕ್ರೇಜ್‌ನತ್ತ ವಾಲುತ್ತಿದ್ದು, ಇದರಿಂದಾಗಿ ಸಾರ್ವಜನಿಕವಾಗಿ ತೊಂದರೆಯಾಗುತ್ತಿರುವುದಲ್ಲದೇ ತಮ್ಮ ಪ್ರಾಣಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿರುವುದು ಮತ್ತೊಂದು ದುರಂತ.

ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಜೈಲು ಶಿಕ್ಷೆ ಪಕ್ಕಾ..!

ಇದರಿಂದಾಗಿ ಎಚ್ಚರ ವಹಿಸಬೇಕಿರುವ ಪೋಷಕರು ಮಕ್ಕಳಿಗೆ ಬೈಕ್ ನೀಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಬೈಕ್ ನೀಡಿ. ಜೊತೆಗೆ ಅಪ್ರಾಪ್ತ ಮಕ್ಕಳು ಬೈಕ್ ಚಾಲನೆ ಮಾಡುವುದರ ಮೇಲೆ ನಿಗಾ ಇರಿಸುವುದಲ್ಲದೇ, ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಉತ್ತಮ.

Most Read Articles

Kannada
English summary
First time traffic offenders are being sent straight to JAIL in Hyderabad. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X