ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದೆ ಟೊಯೊಟಾ ಗ್ಲಾಂಝಾ

ಟೊಯೊಟಾ ಬಹುನೀರಿಕ್ಷಿತ ಗ್ಲಾಂಝಾ ರೀಬ್ಯಾಡ್ಜ್ ಆವೃತ್ತಿಯು ಮುಂದಿನ ತಿಂಗಳು ಜೂನ್ 6ಕ್ಕೆ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರುವದು ಬಹುತೇಕ ಖಚಿತವಾಗಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದೆ ಟೊಯೊಟಾ ಗ್ಲಾಂಝಾ

ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಭಾರತದಲ್ಲಿ ಮೊದಲ ಬಾರಿಗೆ ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳನ್ನು ಉತ್ಪಾದನೆ ಮಾಡುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಯ ಭಾಗವಾಗಿ ಮಾರುತಿ ಸುಜುಕಿ ಜನಪ್ರಿಯ ಕಾರು ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್‌ನೊಂದಿಗೆ ಮರುಬಿಡುಗಡೆ ಮಾಡುತ್ತಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದೆ ಟೊಯೊಟಾ ಗ್ಲಾಂಝಾ

ಬಲೆನೊ ಕಾರಿನ ಮೂಲ ಆವೃತ್ತಿಯಂತೆಯೇ ಇರುವ ಗ್ಲಾಂಝಾ ಕಾರು ಟೊಯೊಟಾ ಸಂಸ್ಥೆಯ ಲೊಗೊ ಮತ್ತು ಮುಂಭಾಗದಲ್ಲಿ ಗ್ರಿಲ್ ಹೊರತುಪಡಿಸಿ ಬಹುತೇಕ ತಾಂತ್ರಿಕ ಅಂಶಗಳನ್ನು ಪ್ರಸ್ತುತ ಬಲೆನೊ ಮಾದರಿಯಿಂದ ಎರವು ಪಡೆದುಕೊಂಡಿದ್ದು, ಹೆಚ್ಚುವರಿಯಾಗಿ ಆಟೋ ಆ್ಯಂಡ್ರಾಯಿಡ್ ಮತ್ತು ಆ್ಯಪಲ್ ಕಾರ್ ಪ್ಲೇ ಸೌಲಭ್ಯವನ್ನು ಸ್ಟಾಂಡರ್ಡ್ ಆಗಿ ನೀಡಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದೆ ಟೊಯೊಟಾ ಗ್ಲಾಂಝಾ

ಜೊತೆಗೆ ಹೊಸ ಗ್ಲಾಂಝಾ ಕಾರು ಪೆಟ್ರೋಲ್ ಆವೃತ್ತಿಯು ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದ್ದು, 2020ರ ಎಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್- 6 ನಿಯಮಗಳಿಗೆ ಅನುಗುಣವಾಗಿ ಹೊಸ ಕಾರಿನ ಎಂಜಿನ್ ಮಾದರಿಯನ್ನು ಈಗಾಗಲೇ ಉನ್ನತಿಕರಿಸಲಾಗಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದೆ ಟೊಯೊಟಾ ಗ್ಲಾಂಝಾ

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿ ಬಲೆನೊ ಕಾರುಗಳು ಸ್ಮಾರ್ಟ್ ಹೈಬ್ರಿಡ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಬಲೆನೊ ಮಾದರಿಯಲ್ಲೇ ಗ್ಲಾಂಝಾ ಕಾರು ಕೂಡಾ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಆದ್ರೆ ಗ್ಲಾಂಝಾ ಆವೃತ್ತಿಯಲ್ಲಿ ಡೀಸೆಲ್ ಆವೃತ್ತಿಯನ್ನು ಬಿಡುಗಡೆ ಮಾಡುವ ಬಗ್ಗೆ ಇನ್ನು ಕೂಡಾ ಯಾವುದೇ ಸ್ಪಷ್ಟ ಮಾಹಿತಿಗಳಿಲ್ಲ,

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದೆ ಟೊಯೊಟಾ ಗ್ಲಾಂಝಾ

ಇನ್ನು ಗ್ಲಾಂಝಾ ಕಾರು ವಿ ಮತ್ತು ಜೆಡ್ ಎನ್ನುವ ಎರಡು ಆವೃತ್ತಿಯಲ್ಲಿ ಮಾರಾಟಕ್ಕೆ ಲಭ್ಯವಿರಲಿದ್ದು, ಗ್ಲಾಂಝಾ ಖರೀದಿಸುವ ಗ್ರಾಹಕರಿಗೆ ಟೊಯೊಟಾ ಸಂಸ್ಥೆಯು 3 ವರ್ಷ ಅಥವಾ 1 ಲಕ್ಷ ಕಿ.ಮಿ ಮೇಲೆ ಗರಿಷ್ಠ ವಾರಂಟಿ ನೀಡಲು ಮುಂದಾಗಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದೆ ಟೊಯೊಟಾ ಗ್ಲಾಂಝಾ

ಈ ಮೂಲಕ ಹ್ಯುಂಡೈ ಸಂಸ್ಥೆಗೆ ಮತ್ತಷ್ಟು ಪೈಪೋಟಿ ನೀಡಲು ಸಜ್ಜಾಗಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಹೊಸ ಯೋಜನೆಯ ಮೂಲಕ ಭಾರೀ ಪ್ರಮಾಣದ ಆದಾಯ ಗಳಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಯೋಜನೆಯು ಎರಡು ಸಂಸ್ಥೆಗಳಿಗೂ ಸಾಕಷ್ಟು ಸಹಕಾರಿಯಾಗಲಿದೆ.

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದೆ ಟೊಯೊಟಾ ಗ್ಲಾಂಝಾ

ಯಾಕೆಂದ್ರೆ ಹೊಸ ಕಾರುಗಳ ಉತ್ಪಾದನೆಗಾಗಿ ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದ್ದ ಮಾರುತಿ ಸುಜುಕಿ ಸಂಸ್ಥೆಯು ಉತ್ಪಾದನಾ ಸಾಮರ್ಥ್ಯಕ್ಕಿಂತ ಕಡಿಮೆ ಪ್ರಮಾಣವನ್ನು ಹೊಂದಿರುವ ಬಿಡದಿ ಟೊಯೊಟಾ ಘಟಕವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲು ಈ ಯೋಜನೆಯನ್ನು ರೂಪಿಸಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರಲಿದೆ ಟೊಯೊಟಾ ಗ್ಲಾಂಝಾ

ಇದಕ್ಕಾಗಿಯೇ ಸುಜುಕಿ ಸಂಸ್ಥೆಯು ಟೊಯೊಟಾ ಕಾರು ಉತ್ಪಾದನಾ ಘಟಕವನ್ನು ಉನ್ನತಿಕರಿಸಲು 1 ಬಿಲಿಯನ್ ಯುಎಸ್‌ ಡಾಲರ್( ಸುಮಾರು 7 ಸಾವಿರ ಕೋಟಿ) ಹೂಡಿಕೆ ಮಾಡಿರುವುದಲ್ಲದೇ ಕಾರುಗಳ ಉತ್ಪಾದನೆ ಮಾಡಲು ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸಲಿರುವ ಟೊಯೊಟಾ ಸಂಸ್ಥೆಯು ಮಾರುತಿ ಸುಜುಕಿ ಜೊತೆಗೂಡಿ ಸಾಮಾನ್ಯ ಕಾರುಗಳ ಜೊತೆಗೆ ಪೂರ್ಣಪ್ರಮಾಣದ ಹೈಬ್ರಿಡ್ ಕಾರುಗಳನ್ನು ಸಹ ಉತ್ಪಾದನೆ ಮಾಡುವ ಯೋಜನೆಯಲ್ಲಿವೆ.

Most Read Articles

Kannada
English summary
Glanza Gets Android Auto & Apple CarPlay. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X