Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೀರೋ ಎಕ್ಸ್‌ಟ್ರಿಮ್ 200ಎಸ್ ಮತ್ತು ಎಕ್ಸ್‌ಪಲ್ಸ್ 200 ಬೈಕ್‍ಗಳ ವಿತರಣೆ ಶುರು..
ಹೀರೋ ಮೋಟೊಕಾರ್ಪ್ ಸಂಸ್ಥೆಯು ಮೇ ತಿಂಗಳ ಮೊದಲ ವಾರದಲ್ಲಿ ತಮ್ಮ ಹೊಸ ಎಕ್ಸ್‌ಟ್ರಿಮ್ 200ಎಸ್ ಮತ್ತು ಎಕ್ಸ್‌ಪಲ್ಸ್ 200 ಬೈಕ್‍ಗಳನ್ನು ಬಿಡುಗಡೆ ಮಾಡಲಾಗಿದ್ದು, ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಈ ಬೈಕ್‍ಗಳು ಅಡ್ವೆಂಚರ್ ಹಾಗು ಸ್ಪೋರ್ಟ್ ಬೈಕ್ ಪ್ರಿಯರಲ್ಲಿ ಹೆಚ್ಚು ನಿರೀಕ್ಷೆಯೆನ್ನು ಹುಟ್ಟುಹಾಕಿತ್ತು.

ಬಿಡುಗಡೆಗೊಂಡ ಹೀರೋ ಎಕ್ಸ್‌ಪಲ್ಸ್ 200 ವೇರಿಯೆಂಟ್ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 97,000 ಹೀರೋ ಎಕ್ಸ್‌ಪಲ್ಸ್ 200 ಟಿ ವೇರಿಯೆಂಟ್ ರೂ. 94,000, ಎಕ್ಸ್‌ಪಲ್ಸ್ 200 ಬೈಕಿನ ಇಂಜೆಕ್ಟೆಡ್ ವರ್ಶನ್ ರೂ. 1.05 ಲಕ್ಷ ಹಾಗು ಎಕ್ಸ್‌ಟ್ರಿಮ್ 200ಎಸ್ ಬೈಕ್‍ಗಳು ರೂ. 98,500 ಬೆಲೆಯನ್ನು ಪಡೆದುಕೊಂಡಿದೆ. ಗಾಡಿವಾಡಿ ವರದಿ ಪ್ರಕಾರ ಮಾರುಕಟ್ಟೆಗೆ ಲಗ್ಗೆಯಿಟ್ಟ ಸುಮಾರು ಒಂದು ತಿಂಗಳುಗಳ ನಂತರ ಈ ಬೈಕ್‍ಗಳು ಗ್ರಾಹಕರ ಕೈ ಸೇರಲು ಸಜ್ಜುಗೊಂಡಿದೆ, ಅಂದರೇ ಈ ಬೈಕ್‍ಗಳ ವಿರತಣೆಯನ್ನು ಡೀಲರ್‍ಗಳು ಶುರು ಮಾಡಿದ್ದಾರೆ.

ಹೀರೋ ಬಿಡುಗಡೆ ಮಾಡಿರುವ ಎಕ್ಸ್‌ಪಲ್ಸ್ 200 ಮಾದರಿಯು ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಹೊಂದಿದ್ದರೆ ಎಕ್ಸ್‌ಪಲ್ಸ್ 200ಟಿ ಮಾದರಿಯು ಟೂರರ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಕಾಬ್ಯೂರೆಟೆಡ್ ಮತ್ತು ಫ್ಯೂಲ್ ಇಂಜೆಕ್ಷಡೆಡ್ ಎಂಜಿನ್ ಸೌಲಭ್ಯಗಳೊಂದಿಗೆ ಹೊಸ ಬೈಕ್ ಖರೀದಿ ಲಭ್ಯವಿರಲಿದೆ.

ಎಂಜಿನ್ ಸಾಮರ್ಥ್ಯ
ಹೊಸ ಎಕ್ಸ್‌ಪಲ್ಸ್ 200 ಮತ್ತು ಎಕ್ಸ್‌ಪಲ್ಸ್ 200ಟಿ ಮಾದರಿಗಳು 199.6 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದ್ದು, 5-ಸ್ಪೀಡ್ ಮ್ಯನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 18.4-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಇನ್ನು ಅಡ್ವೆಂಚರ್ ಮತ್ತು ಟೂರರ್ ವಿಭಾಗದಲ್ಲಿನ ಬೇಡಿಕೆಯೆಂತೆ ಗರಿಷ್ಠ ಮಟ್ಟದ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಬೈಕ್‌ಗಳು ಡ್ಯುಯಲ್ ಪರ್ಪಸ್ ಟೈರ್, 21-ಇಂಚಿನ ಫ್ರಂಟ್ ವೀಲ್ಹ್, 18-ಇಂಚಿನ ರಿಯರ್ ವೀಲ್ಹ್ ಸೌಲಭ್ಯ ಪಡೆದಿದ್ದು, ಫುಲ್ ಎಲ್‌ಇಡಿ ರೌಂಡ್ ಹೆಡ್‌ಲ್ಯಾಂಪ್, ಸಿಂಗಲ್ ಪೀಸ್ ಸೀಟ್, ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಗೇರ್ ಇಂಡಿಕೇಟರ್ ಗಮನಸೆಳೆಯುತ್ತವೆ.

ಹಾಗೆಯೇ ಹೊಸ ಬೈಕ್‌ಗಳಲ್ಲಿ ಸರ್ವಿಸ್ ರಿಮೆಂಡರ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕಾಲ್ ಅಲರ್ಟ್, ಬ್ಲೂಟೂಥ್ ಕನೆಕ್ಟಿವಿಟಿ ಸೌಲಭ್ಯವಿದ್ದು, ಬೈಕ್ ಸವಾರರ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, ಕನ್ವೆಷನಲ್ ಎಕ್ಸಾಸ್ಟ್, ಸಣ್ಣದಾದ ವೀಂಡ್ ಸ್ಕೀನ್, ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಮತ್ತು ಲಾಂಗ್ ಟ್ರಾವೆಲ್ ಸಸ್ಪೆಷನ್ ಅಳವಡಿಸಲಾಗಿದೆ.

ಇನ್ನು ಎಕ್ಸ್‌ಟ್ರಿಮ್ 200ಎಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ 98,500 ಬೆಲೆ ಹೊಂದಿದ್ದು, ಎಕ್ಸ್‌ಟ್ರಿಮ್ 200ಆರ್ ಮಾದರಿಯಲ್ಲೇ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 199.6-ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಪ್ರೇರಣೆಯಿಂದ 18.1-ಬಿಎಚ್‌ಪಿ ಮತ್ತು 17.1-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪೋರ್ಟಿ ವೈಶಿಷ್ಟ್ಯತೆಗಳಿಂದಾಗಿ ಕರಿಜ್ಮಾ ಬೈಕ್ ನೆನಪಿಸುವ ಹೊಸ ಎಕ್ಸ್‌ಟ್ರಿಮ್ 200ಎಸ್ ಮಾದರಿಯು ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಿಭಜಿತ ಆಸನ, ಸ್ಪೋರ್ಟಿ ಎಕ್ಸಾಸ್ಟ್ ಮತ್ತು ಬ್ಲೂಟೂಥ್ ಸಂಪರ್ಕದೊಂದಿಗೆ ಕಾಲ್ ನೋಟಿಫೀಕೆಶನ್, ಸರ್ವಿಸ್ ರಿಮೆಂಡರ್, ಟರ್ನ್ ಬೈ ಟರ್ನ್ ನೇವಿಗೇಷನ್ ಸೌಲಭ್ಯವನ್ನು ಪಡೆಯಬಹುದಾಗಿದೆ.

ಹಾಗೆಯೇ ಹೊಸ ಬೈಕಿನಲ್ಲಿ 37-ಎಂಎಂ ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 7 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮೊನೊಶಾರ್ಕ್ ಸೌಲಭ್ಯವನ್ನು ಒದಗಿಸಲಾಗಿದ್ದು, 17-ಇಂಚಿನ ಅಲಾಯ್ ಚಕ್ರಗಳು, ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಒದಗಿಸಲಾಗಿದೆ.

ಈ ಮೂಲಕ ಅಡ್ವೆಂಚರ್ ಪ್ರಿಯರ ಬೇಡಿಕೆಯನ್ನು ಅತಿ ಕಡಿಮೆ ಬೆಲೆಯಲ್ಲಿ ಪೂರೈಸಲು ಯತ್ನಿಸಿರುವ ಹೀರೋ ಸಂಸ್ಥೆಯು, ಎಕ್ಸ್‌ಪಲ್ಸ್ 200 ಬೈಕ್ ಮಾದರಿಯನ್ನು 5 ವಿವಿಧ ಬಣ್ಣಗಳಲ್ಲಿ ಮತ್ತು ಎಕ್ಸ್‌ಪಲ್ಸ್ 200ಟಿ ಮಾದರಿಯನ್ನು 4 ಬಣ್ಣಗಳಲ್ಲಿ ಪರಿಚಯಿಸಿದೆ.