ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಹೋಂಡಾ ಸಂಸ್ಥೆಯು ಮಾರ್ಚ್ 7ರಂದು ತಮ್ಮ 10ನೆಯ ತಲೆಮಾರಿನ ಸಿವಿಕ್ ಕಾರನ್ನು ಬಿಡುಗಡೆ ಮಾಡಿದರೂ ಸಹ, ಅದರ ಮುನ್ನವೇ ಫೆಬ್ರುವರಿ ತಿಂಗಳಿನಲ್ಲಿ ಕಾರಿನ ಖರೀದಿಗಾಗಿ ಪ್ರೀ-ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು. ಬುಕ್ಕಿಂಗ್ ಪ್ರಾರಂಭಗೊಂಡ ಎರಡು ವಾರಗಳಲ್ಲಿ ಸುಮಾರು 1,600ಕ್ಕು ಅಧಿಕ ಸಂಖ್ಯೆಯಲ್ಲಿ ಗ್ರಾಹಕರು ಖರೀದಿ ಮಾಡಲಾಗಿತ್ತು.

ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಹೀಗೆ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಹೋಂಡಾ ಸಿವಿಕ್ ಕಾರುಗಳು ಮೇ ತಿಂಗಳ ಕಾರು ಮಾರಾಟದಲ್ಲಿ ಕೂಡಾ ತನ್ನ ಎದುರಾಳಿಗಳನ್ನು ಹಿಂದಿಕ್ಕಿದೆ. ಹೌದು, ಮೇ 2019 ರಲ್ಲಿ 368 ಯೂನಿಟ್ ಸಿವಿಕ್ ಕಾರುಗಳು ಮಾರಾಟವಾದರೆ, 134 ಯೂನಿಟ್ ಟೊಯೊಟಾ ಕೊರೊಲ ಆಲ್ಟಿಸ್, 234 ಯೂನಿಟ್ ಹ್ಯುಂಡೈ ಎಲಾಂಟ್ರಾ ಹಾಗು 105 ಯೂನಿಟ್ ಸ್ಕೋಡಾ ಆಕ್ಟೇವಿಯಾ ಕಾರುಗಳು ಮಾರಾಟಗೊಂಡಿದೆ.

ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರೀಮಿಯಂ ಸೆಡಾನ್ ಕಾರುಗಳನ್ನು ನೀಡುತ್ತಿರುವ ಬಹುತೇಕ ವಾಹನ ತಯಾರಕ ಸಂಸ್ಥೆಗಳಾಲ್ಲಿ ಹೋಂಡಾ ಕೂಡಾ ಒಂದು. ಆದರೆ ಸುಮಾರು 20 ಲಕ್ಶದ ಬೆಲೆ ಬಾಳುವ ಸೆಡಾನ್ ಕಾರುಗಳನ್ನು ಖರೀದಿ ಮಾಡುವ ಬದಲು ಗ್ರಾಹಕರು ಇದೇ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಸ್‍ಯುವಿ ಕಾರುಗಳ ಮೇಲೆ ತಮ್ಮ ಒಲವನ್ನು ತೋರುತ್ತಿರುವ ಕಾರಣ ಸೆಡಾನ್ ಕಾರುಗಳ ಮಾರಾಟವು ಕಡಿಮೆ ಆಗುತ್ತಿದೆ ಅಂತಾನೇ ಹೇಳ್ಬೊದು.

ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಹೊಸ ಕಾರಿನ ಬೆಲೆ

ಹೋಂಡಾ ಸಿವಿಕ್ ಕಾರುಗಳು 3 ಪೆಟ್ರೋಲ್ ವೆರಿಯಂಟ್ ಹಾಗು ಎರಡು ಡೀಸೆಲ್ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ.17.69 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಆಸಕ್ತ ಗ್ರಾಹಕರು ಹತ್ತಿರದಲ್ಲಿರುವ ಹೋಂಡಾ ಡೀಲರ್‍‍ನ ಬಳಿ 31,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಎಂಜಿನ್ ಸಾಮರ್ಥ್ಯ

2019ರ ಹೊಸ ಹೋಂಡಾ ಸಿವಿಕ್ ಕಾರು ಈ ಬಾರಿ ಎರಡು ಎಂಜಿನ್ ಮಾದರಿಗಳಲ್ಲಿ ಬಿಡುಗಡೆಗೊಂಡಿದೆ. ಪೆಟ್ರೋಲ್ ಮಾದರಿಯ ಹೋಂಡಾ ಸಿವಿಕ್ ಕಾರು 1.8 ಲೀಟರ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 139ಬಿಹೆಚ್‍ಪಿ ಮತ್ತು 174ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದೆ. ಪೆಟ್ರೋಲ್ ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಇನ್ನು ಡೀಸೆಲ್ ಮಾದರಿಯ ಹೋಂಡಾ ಸಿವಿಕ್ ಕಾರುಗಳು 1.6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 118ಬಿಹೆಚ್‍ಪಿ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಮೈಲೇಜ್

ಹೀಗಾಗಿ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಒಂದು ಹೆಜ್ಜೆ ಮುನ್ನಡೆ ಸಾಧಿಸಿರುವ ಹೋಂಡಾ ಸಂಸ್ಥೆಯು ಹೊಸ ಸಿವಿಕ್ ಕಾರುಗಳ ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು, 47 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯದೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 16.5 ಕಿ.ಮಿ ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ 26.8 ಕಿಮಿ ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ.

ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, 17-ಇಂಚಿನ ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಹಾಗೆಯೇ ಹೊಸ ಕಾರು 4,656-ಎಂಎಂ ಉದ್ದ, 1,799-ಎಂಎಂ ಅಗಲ, 1,433-ಎಂಎಂ ಎತ್ತರ, 2,700-ಎಂಎಂ ವೀಲ್ಹ್ ಬೆಸ್ ಮತ್ತು 170-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ಲ್ಯಾಟಿನಂ ವೈಟ್ ಪರ್ಲ್, ರೆಡಿಯೆಂಟ್ ರೆಡ್, ಮಾರ್ಡನ್ ಸ್ಟೀಲ್, ಲೌನರ್ ಸಿಲ್ವರ್ ಮತ್ತು ಗೋಲ್ಡನ್ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಮಾರಾಟದಲ್ಲಿ ಹ್ಯುಂಡೈ ಎಲಾಂಟ್ರಾ ಕಾರನ್ನು ಹಿಂದಿಕ್ಕಿದ ಹೋಂಡಾ ಸಿವಿಕ್

ಲಭ್ಯವಿರುವ ಬಣ್ಣಗಳು

ಹತ್ತನೆಯ ತಲೆಮಾರಿನ ಹೋಂಡಾ ಸಿವಿಕ್ ಕಾರುಗಳು ಗ್ರಾಹಕರ ರುಚಿಗೆ ಅನುಗುಣವಾಗಿ ಪ್ಲಾಟಿನಂ ವೈಟ್ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಮಾಡರ್ನ್ ಸ್ಟೀಲ್ ಮೆಟಾಲಿಕ್, ಲೂನಾರ್ ಸಿಲ್ವರ್ ಮೆಟಾಲಿಕ್ ಮತು ಗೋಲ್ಡೆನ್ ಬ್ರೌನ್ ಮೆಟಾಲಿಕ್ ಎಂಬ 5 ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

More from DriveSpark

Article Published On: Monday, June 10, 2019, 9:16 [IST]
English summary
Honda Civic Defeats Hyundai Elantra In Sales. Read In Kannada
Read more on ಹೋಂಡಾ honda sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+