ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಹೊಸ ವಾಹನಗಳ ಮಾರಾಟದಲ್ಲಿ ತುಸು ಚೇತರಿಕೆ ನಂತರವು ಕೆಲವು ಕಾರು ಮಾರಾಟ ಸಂಸ್ಥೆಗಳು ಸತತ ನಷ್ಟ ಅನುಭವಿಸುತ್ತಿದ್ದು, ಕನಿಷ್ಠ ಮಟ್ಟದ ವಾಹನಗಳ ಮಾರಾಟಕ್ಕೂ ಪರದಾಟುವಂತಹ ಪರಿಸ್ಥಿತಿ ಎದುರಾಗಿದೆ. ಇದರಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಕೂಡಾ ಒಂದಾಗಿದ್ದು, ಕಾರುಗಳ ಮಾರಾಟವನ್ನು ಉತ್ತೇಜಿಸಲು ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ.

ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಆಟೋ ಉದ್ಯಮದಲ್ಲಿ ಹೊಸ ನಿಯಮಗಳ ಜಾರಿಯಿಂದಾಗಿ ಆಟೋ ಉದ್ಯಮದಲ್ಲಿ ಹೊಸ ವಾಹನ ಮಾರಾಟ ಪ್ರಕ್ರಿಯೆಯೂ ತುಸು ಮಂದಗತಿಯಲ್ಲಿ ಸಾಗಿದ್ದು, ಬಿಎಸ್-4 ಸ್ಟಾಕ್ ಪ್ರಮಾಣವು ಆಟೋ ಕಂಪನಿಗಳಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಭಾರೀ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡುತ್ತಿವೆ. ಅದರಲ್ಲೂ ಕಳೆದ ಐದಾರು ತಿಂಗಳಿನಿಂದ ಹೊಸ ಕಾರು ಮಾರಾಟದಲ್ಲಿ ತೀವ್ರ ನಷ್ಟ ಅನುಭವಿಸಿರುವ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಕಾರು ಮಾರಾಟಕ್ಕೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಹೋಂಡಾ ತನ್ನ ಜನಪ್ರಿಯ ಪ್ರೀಮಿಯಂ ಕಾರು ಆವೃತ್ತಿಗಳಾದ ಸಿಆರ್-ವಿ, ಬಿಆರ್-ಬಿ, ಸಿಟಿ ಸೆಡಾನ್, ಜಾಝ್, ಡಬ್ಲ್ಯುಆರ್-ವಿ ಮತ್ತು ಅಮೇಜ್ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಸಿಆರ್-ವಿ ಎಸ್‌ಯುವಿ(ರೂ. 5 ಲಕ್ಷ)

ಹೋಂಡಾ ಸಂಸ್ಥೆಯ ಐಷಾರಾಮಿ ಕಾರು ಆವೃತ್ತಿಯಾದ ಸಿಆರ್-ವಿ ಎಸ್‌ಯುವಿ ಮೇಲೆ ಗರಿಷ್ಠ ರೂ.5 ಲಕ್ಷ ತನಕ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, 7-ಸೀಟರ್‌ನೊಂದಿಗೆ 2-0-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.28.33 ಲಕ್ಷ ಮತ್ತು ಟಾಪ್ ಮಾದರಿಗೆ ರೂ. 32.83 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಪ್ರತಿ ಡೀಸೆಲ್ ವೆರಿಯೆಂಟ್ ಮೇಲೂ ರೂ.5 ಲಕ್ಷ ಡಿಸ್ಕೌಂಟ್ ಪಡೆಯಬಹುದಾಗಿದೆ.

ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಬಿಆರ್‌-ವಿ ಎಂಪಿವಿ(ರೂ. 1.10 ಲಕ್ಷ)

7 ಸೀಟರ್ ಮಲ್ಟಿ ಪರ್ಪಸ್ ವೆಹಿಕಲ್ ಮಾದರಿಯಾಗಿರುವ ಬಿಆರ್‌-ವಿ ಖರೀದಿ ಮೇಲೆ ಹೋಂಡಾ ಸಂಸ್ಥೆಯು ರೂ.1.10 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಬಿಆರ್‌-ವಿ ಖರೀದಿಗೆ ಲಭ್ಯವಿದೆ. ರೂ. 1.20 ಲಕ್ಷ ಡಿಸ್ಕೌಂಟ್ ಅಲ್ಲದೇ ಆಯ್ದ ಡೀಲರ್ಸ್‌ಗಳಲ್ಲಿ ಬಿಆರ್‌-ವಿ ಖರೀದಿ ಮೇಲೆ ರೂ.36 ಸಾವಿರ ಮೌಲ್ಯ ಆಕ್ಸೆರಿಸ್‌ಗಳನ್ನು ಸಹ ಉಚಿತವಾಗಿ ಪಡೆದುಕೊಳ್ಳಬಹುದು.

ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಸಿವಿಕ್ ಸೆಡಾನ್(ರೂ.75 ಸಾವಿರ)

ಕಳೆದ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಸಿವಿಕ್ ಐಷಾರಾಮಿ ಸೆಡಾನ್ ಮೇಲೆ ಹೋಂಡಾ ಸಂಸ್ಥೆಯು ರೂ.75 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, 1.6-ಲೀಟರ್ ಡೀಸೆಲ್ ಮತ್ತು 1.8-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಸಿಟಿ ಸೆಡಾನ್(ರೂ.62 ಸಾವಿರ)

ಸಿ ಸೆಗ್ಮೆಂಟ್‌ನಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಸಿಟಿ ಸೆಡಾನ್ ಮಾದರಿಯ ಮೇಲೆ ಹೋಂಡಾ ಸಂಸ್ಥೆಯು ರೂ.62 ಸಾವಿರ ಡಿಸ್ಕೌಂಟ್ ಘೋಷಿಸಲಾಗಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಿಟಿ ಕಾರು ಹೊಸ ಸುರಕ್ಷಾ ನೀತಿ ಅನುಸಾರವಾಗಿ ಇದೀಗ ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರು ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್(ರೂ.50 ಸಾವಿರ)

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಜಾಝ್ ಕಾರಿನ ಖರೀದಿ ಮೇಲೆ ಹೋಂಡಾ ಸಂಸ್ಥೆಯು ರೂ.50 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದ್ದು, 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಜಾಝ್ ಕಾರು ಖರೀದಿಗೆ ಇದು ಸುವರ್ಣಾವಕಾಶ.

MOST READ: ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಇಳಿಕೆ- ಹೆಚ್ಚಳಗೊಂಡ ಹೊಸ ವಾಹನಗಳ ಮಾರಾಟ..!

ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ(ರೂ.45 ಸಾವಿರ)

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ ಮೇಲೆ ಹೋಂಡಾ ಸಂಸ್ಥೆಯು ರೂ.45 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ಜಾಝ್ ಮಾದರಿಯಲ್ಲೇ ಎಂಜಿನ್ ಆಯ್ಕೆ ಹೊಂದಿರುವ ಡಬ್ಲ್ಯುಆರ್-ವಿ ಕಾರು ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಉತ್ತಮ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಕಾರು ಮಾದರಿಯಾಗಿದೆ.

MOST READ: ಬರೋಬ್ಬರಿ 12 ಕೋಟಿ ಮೌಲ್ಯದ ಬೆಂಟ್ಲಿ ಮೊಜಾನ್ ಕಾರು ಖರೀದಿಸಿದ ಬೆಂಗಳೂರು ಉದ್ಯಮಿ

ಹೋಂಡಾ ಸಿಆರ್-ವಿ ಕಾರು ಖರೀದಿ ಮೇಲೆ ಬರೋಬ್ಬರಿ 5 ಲಕ್ಷ ಡಿಸ್ಕೌಂಟ್

ಅಮೇಜ್ ಕಂಪ್ಯಾಕ್ಟ್ ಸೆಡಾನ್(ರೂ.30 ಸಾವಿರ)

ಕಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲಿ ಮಾರುತಿ ಸುಜುಕಿ ಡಿಜೈರ್ ಆವೃತ್ತಿಗೆ ತೀವ್ರ ಪೈಪೋಟಿ ನೀಡುತ್ತಿರುವ ಅಮೇಜ್ ಕಾರಿನ ಮೇಲೆ ಹೋಂಡಾ ಸಂಸ್ಥೆಯು ರೂ. 30 ಸಾವಿರ ಘೋಷಣೆ ಮಾಡಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಅಮೇಜ್ ಕಾರು ಗ್ರಾಹಕರ ಬೇಡಿಕೆಯೆಂತೆ ಬರೋಬ್ಬರಿ 20 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

More from DriveSpark

Article Published On: Monday, November 4, 2019, 19:00 [IST]
English summary
Honda Discount Offers & Benefits For November. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+