ರೋಡ್ ಟ್ಯಾಕ್ಸ್‌ನಲ್ಲಿ ಭರ್ಜರಿ ಇಳಿಕೆ- ಹೆಚ್ಚಳಗೊಂಡ ಹೊಸ ವಾಹನಗಳ ಮಾರಾಟ..!
ವರ್ಷದ ಆರಂಭದಿಂದಲೂ ಆರ್ಥಿಕ ಹಿಂಜರಿತದ ಪರಿಣಾಮ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ವಾಹನ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಕಾರು ಖರೀದಿದಾರರನ್ನು ಸೆಳೆಯಲು ಗೋವಾ ಸರ್ಕಾರ ಕೈಗೊಂಡ ಮಹತ್ವದ ನಿರ್ಣಯವು ಹೊಸ ವಾಹನ ಮಾರಾಟದಲ್ಲಿ ಭಾರೀ ಹೆಚ್ಚಳವಾಗಲು ಕಾರಣವಾಗಿದೆ.

ಹೌದು, ಆರ್ಥಿಕ ಹಿಂಜರಿತದಿಂದಾಗಿ ದೇಶಾದ್ಯಂತ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಸದ್ಯ ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದಾಗಿ ಚೇತರಿಸಿಕೊಳ್ಳುತ್ತಿದ್ದು, ಗೋವಾ ಸರ್ಕಾರವು ಒಂದು ಹೆಜ್ಜೆ ಮುಂದೆ ಹೋಗಿ ವಾಹನ ಉತ್ಪಾದನಾ ಸಂಸ್ಥೆಗಳಿಗೆ ನೆರವಾಗಲು ರೋಡ್ ಟ್ಯಾಕ್ಸ್‌ನಲ್ಲಿ ಶೇ.50ರಷ್ಟು ವಿನಾಯ್ತಿ ಘೋಷಣೆ ಮಾಡಿತ್ತು. ಇದರ ಪರಿಣಾಮ ಹೊಸ ವಾಹನಗಳ ಮಾರಾಟದಲ್ಲಿ ಶೇ.40ರಷ್ಟು ಹೆಚ್ಚಳವಾಗಿದ್ದು, ಸಾರಿಗೆ ಇಲಾಖೆಗೊ ಭರ್ಜರಿ ಪ್ರಮಾಣದ ಆದಾಯ ಕೂಡಾ ಹರಿದುಬಂದಿದೆ.

ಆರ್‌ಟಿಒ ನೋಂದಣಿ ಸಂಖ್ಯೆಯಲ್ಲಿ ಸತತ ಕುಸಿತ ಹಿನ್ನಲೆಯಲ್ಲಿ ರೋಡ್ ಟ್ಯಾಕ್ಸ್ ಕಡಿತಗೊಳಿಸುವ ನಿರ್ಣಯ ಕೈಗೊಂಡಿದ್ದ ಗೋವಾ ಸರ್ಕಾರವು ಅಕ್ಟೋಬರ್ 1ರಿಂದ ಡಿಸೆಂಬರ್ 31ರ ತನಕ ಹೊಸ ವಾಹನ ಖರೀದಿ ಮಾಡುವ ವಾಹನ ಮಾಲೀಕರಿಗೆ ಶೇ.50ರಷ್ಟು ರೋಡ್ ಟ್ಯಾಕ್ಸ್‌ಲ್ಲಿ ವಿನಾಯ್ತಿ ನೀಡಲಾಗುವುದೆಂದು ಘೋಷಣೆ ಮಾಡಿತ್ತು.

ಇದರಿಂದ ಅಕ್ಟೋಬರ್ ಅವಧಿಯಲ್ಲಿ ದಸರಾ ಮತ್ತು ದೀಪಾವಳಿ ಉತ್ಸವಗಳು ಬಂದ ಹಿನ್ನಲೆಯಲ್ಲಿ ಭರ್ಜರಿ ಪ್ರಮಾಣದಲ್ಲಿ ಹೊಸ ವಾಹನಗಳು ಮಾರಾಟವಾಗಿದ್ದು, ರೋಡ್ ಟ್ಯಾಕ್ಸ್ ಕಡಿತದ ನಂತರ ಪಣಜಿಯೊಂದರಲ್ಲೇ ಸುಮಾರು 2 ಸಾವಿರಕ್ಕೂ ಅಧಿಕ ಪ್ರಯಾಣಿಕರ ಕಾರುಗಳು ಮಾರಾಟವಾಗಿವೆ.

ಈ ಮೂಲಕ ರಾಜ್ಯ ಸಾರಿಗೆ ಇಲಾಖೆಗೆ 4.2 ಕೋಟಿಯಷ್ಟು ರಸ್ತೆ ತೆರಿಗೆ ಸಂಗ್ರಹವಾಗಿದ್ದು, ಡಿಸೆಂಬರ್ 31ರ ತನಕ ಲಭ್ಯವಿರುವ ರೋಡ್ ವಿನಾಯ್ತಿ ಯೋಜನೆಯಡಿ ಮತ್ತಷ್ಟು ಹೊಸ ವಾಹನಗಳು ಮಾರಾಟವಾಗುವ ನೀರಿಕ್ಷೆಯಿದೆ. ಈ ಹಿಂದೆ ಗೋವಾದಲ್ಲಿ ರೂ.1.50 ಲಕ್ಷ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಶೇ.9ರಷ್ಟು, ರೂ.1.50 ಲಕ್ಷದಿಂದ ರೂ.3 ಲಕ್ಷ ಬೆಲೆಗೊಳಗಿನ ದ್ವಿಚಕ್ರ ವಾಹನಗಳಿಗೆ ಶೇ.12ರಷ್ಟು ಮತ್ತು ರೂ.3 ಲಕ್ಷ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಶೇ.15 ರಷ್ಟು ವಿಧಿಸಲಾಗುತ್ತಿದ್ದ ರೋಡ್ ಟ್ಯಾಕ್ಸ್ ಇದೀಗ ಶೇ.50 ರಷ್ಟು ಕಡಿತಗೊಂಡಿದೆ.

ಹಾಗೆಯೇ ರೂ.6 ಲಕ್ಷದೊಳಗಿನ ಹೊಸ ಕಾರುಗಳ ಮೇಲೆ ಶೇ.9ರಷ್ಟು, ರೂ.10 ಲಕ್ಷ ಮೇಲ್ಪಟ್ಟ ಹೊಸ ಕಾರುಗಳಿಗೆ ಶೇ.12ರಷ್ಟು ಮತ್ತು ರೂ. 15 ಲಕ್ಷ ಮೇಲ್ಪಟ್ಟ ಹೊಸ ಕಾರುಗಳ ಮೇಲೆ ಶೇ.13 ರಷ್ಟಿದ್ದ ರೋಡ್ ಟ್ಯಾಕ್ಸ್ ಕೂಡಾ ಇಳಿಕೆಯಾಗಿದ್ದು, ಹೊಸ ವಾಹನ ಮಾರಾಟವನ್ನು ಹೆಚ್ಚಿಸಲು ಈ ಆದೇಶವು ಸಾಕಷ್ಟು ಸಹಕಾರಿಯಾಗಿದೆ.

ಇನ್ನು 2019ರ ಆರಂಭದಿಂದಲೇ ಹೊಸ ವಾಹನ ಮಾರಾಟದಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ನಷ್ಟ ಅನುಭವಿಸುತ್ತಲೇ ಬಂದಿದ್ದು, ಆಟೋ ಮೊಬೈಲ್ ಕ್ಷೇತ್ರದ ಹಿನ್ನಡೆಗೆ ಅನೇಕ ಕಾರಣಗಳನ್ನು ಪಟ್ಟಿಮಾಡಲಾಗಿತ್ತು.
MOST READ: ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಆಟೋ ಮೊಬೈಲ್ ಕ್ಷೇತ್ರ ಸುಧಾರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದ ಕಾರು ಉತ್ಪಾದನಾ ಸಂಸ್ಥೆಗಳು ಹೆಚ್ಚಳವಾಗಿರುವ ಜಿಎಸ್‌ಟಿ ಇಳಿಕೆ ಮತ್ತು ಬಿಎಸ್-4 ವಾಹನ ಮಾರಾಟದ ವಿಚಾರವಾಗಿ ಉಂಟಾಗಿರುವ ಗೊಂದಲವನ್ನು ಸರಿಪಡಿಸುವಂತೆ ಮನವಿ ಮಾಡಿದ್ದವು.
MOST READ: ರೂ.10 ಲಕ್ಷದೊಳಗೆ ಬಿಡುಗಡೆಯಾಗಲಿದೆ ಎಂಜಿ ಮೋಟಾರ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

ಆದರೆ ಬಿಎಸ್-4 ವಾಹನ ಮಾರಾಟ ವಿಚಾರದಲ್ಲಿನ ಗೊಂದಲ ನಿವಾರಣೆ ಮಾಡಿದ್ದ ಕೇಂದ್ರ ಸರ್ಕಾರವು ಜಿಎಸ್‌ಟಿ ಇಳಿಕೆ ಹಿಂದೇಟು ಹಾಕಿತ್ತು. ತದನಂತರ ಜಿಎಸ್‌ಟಿ ಇಳಿಕೆಯ ಬದಲಾಗಿ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿ ಬಿಡಿಭಾಗಗಳ ಆಮದು ಮೇಲೆ ವೆಚ್ಚವನ್ನು ತಗ್ಗಿಸಿತ್ತು.
MOST READ: ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಇದರಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಮಾರಾಟವು ಕಳೆದ ಎರಡು ತಿಂಗಳ ಅವಧಿಗಿಂತಲೂ ಇದೀಗ ತುಸು ಚೇತರಿಕೆ ಕಾಣುತ್ತಿದ್ದು, ಇದರ ಮಧ್ಯೆ ಗೋವಾ ಸರ್ಕಾರವು ಕೈಗೊಂಡಿರುವ ಕ್ರಮವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಮತ್ತಷ್ಟು ವರದಾನವಾಗಿದೆ.


Click it and Unblock the Notifications








