ಹೋಂಡಾ ಕಾರುಗಳ ಮೇಲೆ ರೂ.5 ಲಕ್ಷದ ತನಕ ಡಿಸ್ಕೌಂಡ್
ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಸರಣಿಯ ಪ್ರಮುಖ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹೋಂಡಾ ಕಂಪನಿಯು ಬರೊಬ್ಬರಿ ರೂ.5 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಹೋಂಡಾ ಪ್ರಮುಖ ಬಿಎಸ್-4 ಕಾರುಗಳ ಮೇಲೆ ಈ ಆಫರ್ ಅನ್ನು ನೀಡಿದೆ. ಹೋಂಡಾ ಕಾರ್ಸ್ ಇಂಡಿಯಾದ ಮಾರಾಟವು ಕಳೆದ ನವೆಂಬರ್ ತಿಂಗಳಲ್ಲಿ ಶೇ.50 ರಷ್ಟು ಕುಸಿತವಾಗಿದೆ. ಅಲ್ಲದೇ ಬಿಎಸ್-6 ಮಾಲಿನ್ಯ ನಿಯಮ ಮುಂದಿನ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಜಾರಿಯಾಗಿರುವುದರಿಂದ ಹೋಂಡಾ ತನ್ನ ಸರಣಿಯಲ್ಲಿರುವ ಕಾರುಗಳನ್ನು ನಿಯಮಕ್ಕೆ ಅನುಸಾರವಾಗಿ ನವೀಕರಿಸುತ್ತಿದೆ.

ಇದರಿಂದ ಸ್ಟಾಕ್‍ನಲ್ಲಿರುವ ಬಿಎಸ್-4 ಕಾರುಗಳ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ವರ್ಷದ ಅಂತಿಮ ಡಿಸೆಂಬರ್ ತಿಂಗಳಲ್ಲಿ ಹೋಂಡಾ ಅಮೇಜ್ ಕಾರಿನ ಮೇಲೆ ರೂ.30,000 ನಗದು ರಿಯಾಯಿತಿ ಮತ್ತು ನಾಲ್ಕರಿಂದ ರಿಂದ ಐದು ವರ್ಷಗಳವರೆಗೆ ವಾರಂಟಿಯನ್ನು ಘೋಷಿಸಿದೆ.

ಹೋಂಡಾ ಅಮೇಜ್ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್‍ಗಳು ಕ್ರಮವಾಗಿ 89 ಬಿಹೆಚ್‌ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಉತ್ಪಾದಿಸಿದರೆ, 1.5 ಲೀಟರ್ ಎಂಜಿನ್ 99-ಬಿಎಚ್‌ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೋಂಡಾ ಡಬ್ಲ್ಯುಆರ್-ವಿ ಬಿಎಸ್-4 ಎಂಜಿನ್ ಕಾರಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಡಬ್ಲ್ಯುಆರ್-ವಿ ಕಾರಿಗೆ ರೂ.25.000 ನಗದು ರಿಯಾಯಿತಿ ಮತ್ತು ರೂ.20.000 ವಿನಿಮಯ ಬೋನಸ್ ಅನ್ನು ಘೋಷಿಸಿದೆ.

ಜನಪ್ರಿಯ ಹೋಂಡಾ ಸಿಟಿ ಬಿಎಸ್-4 ಕಾರಿಗೆ ರೂ.32,000 ನಗದು ರಿಯಾಯಿತಿ ಮತ್ತು ರೂ.30,000 ವಿನಿಮಯ ಬೋನಸ್ ಮತ್ತು ಒಟ್ಟು 45,000ದವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಹೋಂಡಾ ಇಂಡಿಯಾ ಕಂಪನಿಯ ಜನಪ್ರಿಯ ಮಾದರಿಗಳಲ್ಲಿ ಸಿಟಿ ಕೂಡ ಒಂದಾಗಿದೆ.

ಹೋಂಡಾ ಸಿಟಿ ಪೆಟ್ರೋಲ್ ಆವೃತ್ತಿಗೆ ರೂ.25,000 ನಗದು ರಿಯಾಯಿತಿ ಮತ್ತು ರೂ.20,000 ವಿನಿಮಯ ಬೋನಸ್ ಅನ್ನು ಘೋಷಿಸಿದೆ. ಹೋಂಡಾ ಸಿಟಿ ಬಿಎಸ್-4 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಹೋಂಡಾ ಬಿಆರ್-ವಿ ಕಾರಿಗೆ 33,500 ನಗದು ರಿಯಾಯಿತಿ ಮತ್ತು 50,000 ವಿನಿಮಯ ಬೋನಸ್ ಅನ್ನು ಘೋಷಿಸಿದೆ. ಹೋಂಡಾ ಬಿಆರ್ ವಿ 1.5 ಲೀಟರಿನ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಹೋಂಡಾ ಸಿವಿಕ್ ಪೆಟ್ರೋಲ್ ಕಾರಿನ ಮೇಲೆ ರೂ.1,25,000 ನಗದು ರಿಯಾಯಿತಿಯನ್ನು ಘೋಷಿಸಿದೆ. ಹೋಂಡಾ ಸಿವಿಕ್ 2.0 ಪೆಟ್ರೋಲ್ ಎಂಜಿನ್ 154 ಬಿಹೆಚ್‍ಪಿ ಪವರ್ ಮತ್ತು 187 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೋಂಡಾ ಸಿಆರ್‍ವಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹೋಂಡಾ ಸಿಆರ್-ವಿ 1.6 ಲೀಟರ್ ಆವೃತ್ತಿಯ ಮೇಲೆ ರೂ.4 ಲಕ್ಷದವರೆಗೆ ನಗದು ರಿಯಾಯಿತಿಯನ್ನು ಘೋಷಿಸಿದೆ. ಹೋಂಡಾ ಸಿಆರ್-ವಿ 1.6 ಡೀಸೆಲ್ ಆವೃತ್ತಿಗಳ ಮೇಲೆ ರೂ.5 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ.


Click it and Unblock the Notifications