ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಜನಪ್ರಿಯ ಕಾರು ತಯಾರಕ ಸಂಸ್ಥೆಯಾದ ಹೋಂಡಾ ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗಾಗಿ ಕೆಲವು ಹೊಸ ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಯುರೋಪ್ ಮಾರುಕಟ್ಟೆಯಲ್ಲಿ ಜನಪ್ರಿಯಗೊಳ್ಳತ್ತಿರುವ 5 ಆಸನವುಳ್ಳ ಹೆಚ್‍ಆರ್-ವಿ ಪ್ರೀಮಿಯಂ ಕ್ರಾಸ್ ಓವರ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸುವ ಸಂಬಂಧ ಮೊದಲ ಬಾರಿಗೆ ಭಾರತದಲ್ಲಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಹೋಂಡಾ ಇಂಡಿಯಾ ಸಂಸ್ಥೆಯು 2018ರಲ್ಲಿ ಸಿಆರ್-ವಿ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ ನಂತರ ಕಳೆದ ತಿಂಗಳು ಸಿವಿಕ್ 10ನೇ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಅಕ್ರಾಡ್ ನ್ಯೂ ಜನರೇಷನ್ ಮತ್ತು ಮಧ್ಯಮ ಆವೃತ್ತಿಯ ಐಷಾರಾಮಿ ಆವೃತ್ತಿಯಾಗಿರುವ ಹೆಚ್ಆರ್‍-ವಿ ಆವೃತ್ತಿ ಸೇರಿದಂತೆ ಒಟ್ಟು 3 ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಹೆಚ್‍ಆರ್-ವಿ ಕಾರು ಪ್ರೀಮಿಯಂ ವೈಶಿಷ್ಟ್ಯತೆಗಳಿಂದಾಗಿ ಹ್ಯುಂಡೈ ಕ್ರೆಟಾ, ರೆನಾಲ್ಟ್ ಕ್ಯಾಪ್ಚರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಈ ಕಾರು ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ 2014ರಲ್ಲೇ ಬಿಡುಗಡೆಗೊಂಡು ಇದೀಗ ಹೊಸದಾಗಿ ವಿನ್ಯಾಸಗೊಂಡು ಫೇಸ್‍‍ಲಿಫ್ಟ್ ಮಾದರಿಯಲ್ಲಿ ಮತ್ತೆ ಎಂಟ್ರಿ ಕೊಟ್ಟಿದೆ.

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಸದ್ಯ ಈ ಕಾರು ಜಪಾನ್ ಮಾರುಕಟ್ಟೆಯಲ್ಲಿ ವೆಝೆಲ್ ಎಂಬ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತೀಯ ಮಾರುಕಟ್ಟೆಗಾಗಿ ಹೆಸರು ಬದಲಾಯಿಸಿರುವ ಹೋಂಡಾ ಸಂಸ್ಥೆಯು ಜಾಝ್ ಕಾರಿನ ಪ್ಲಾಟ್‍‍‍ಫಾರ್ಮ್‍‍ನಲ್ಲೇ ಹೊಸ ಕಾರುನ್ನು ಅಭಿವೃದ್ದಿಗೊಳಿಸಲಿ ಹೆಚ್‌ಆರ್-ವಿ ಹೆಸರಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಇದಕ್ಕಾಗಿಯೇ ಸಿಟಿ ಸೆಡಾನ್ ಮತ್ತು ಡಬ್ಲ್ಯುಆರ್‍-ವಿ ಕಾರಿನ ಕೆಲವು ವಿನ್ಯಾಸಗಳನ್ನು ಸಹ ಎರವಲು ಪಡೆಯಲಾಗಿದ್ದು, ಕಾರಿನ ಬೆಲೆ ತಗ್ಗಿಸಲು ಕೆಲವು ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ಕೈಬಿಡಲಾಗಿದೆ. ಹಾಗೆಯೇ ಹೋಂಡಾ ಸಂಸ್ಥೆಯು ತನ್ನ ಹೊಸ ಮಾದರಿಯ 1.6-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಕಳೆದ ತಿಂಗಳು ಬಿಡುಗಡೆಯಾದ ಹೊಸ ಸಿವಿಕ್ ಕಾರಿಗೆ ಜೋಡಣೆ ಮಾಡಿ ಯಶಸ್ವಿಯಾಗಿದ್ದು, ಅದೇ ಎಂಜಿನ್ ಇದೀಗ ಹೆಚ್‌ಆರ್-ವಿ ಆವೃತ್ತಿಯಲ್ಲೂ ಜೋಡಣೆಯಾಗುವ ಸಾಧ್ಯತೆಗಳಿವೆ.

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

2013ರ ಡೆಟ್ರಾಯ್ಟ್ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಈ ಕಾರು ಆಕ್ರಮಣಕಾರಿ ವಿನ್ಯಾಸವನ್ನು ಪದೆದುಕೊಂಡಿದ್ದು, ಅಗಲವಾದ ಗ್ರಿಲ್, ಹೊಸ ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳು, ಟ್ವಿಕ್ಡ್ ಫಾಗ್ ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಹೊಸ ಫ್ರಂಟ್ ಬಂಪರ್ ಅನ್ನು ಅಳವಡಿಸಲಾಗಿದೆ.

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಹಾಗೆಯೇ ಕಾರಿನ ಒಳಭಾಗದಲ್ಲಿ ಹೋಂಡಾ ಸಂಸ್ಥೆಯ ಸ್ಯಾಟ್‌ಲೈಟ್ ನ್ಯಾವಿಗೆಷನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆಗಳನ್ನು ಒಳಗೊಂಡ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಇದಲ್ಲದೆ ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಕೀ ಲೆಸ್ ಎಂಟ್ರಿ, ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್ ಹಾಗು ಸೈಡ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಅಸ್ಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ನಂತಹ ಹಲವು ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೆಚ್‍ಆರ್‍-ವಿ ಫೇಸ್‍‍ಲಿಫ್ಟ್ ಕಾರುಗಳು 4,295ಎಂಎಂ ಉದ್ದ, 1,770ಎಂಎಂ ಅಗಲ ಮತ್ತು 1,605ಎಂಎಂ ಎತ್ತರವನ್ನು ಪಡೆದಿದ್ದು, 2,610ಎಂಎಂ ವ್ಹೀಲ್‍‍ಬೇಸ್ ಹಾಗು 470 ಲೀಟರ್‍‍ನ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಎಂಜಿನ್ ಸಾಮರ್ಥ್ಯ

ಹೊಸ ಹೆಚ್ಆರ್-ವಿ ಕಾರುಗಳು 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಮತ್ತು 1.6 ಲೀಟರ್ ಐ-ವಿಟೆಕ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬರಲಿದ್ದು, ಪೆಟ್ರೋಲ್ ಎಂಜಿನ್‍‍ಗಳು 175-ಬಿಹೆಚ್‍‍ಪಿ ಮತ್ತು 220-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದೆ.

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಅಂತೆಯೇ, ಡೀಸೆಲ್ ಎಂಜಿನ್‍‍ಗಳು 118-ಬಿಹೆಚ್‍‍ಪಿ ಮತ್ತು 300-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎರಡು ಎಂಜಿನ್‍‍ಗಳನ್ನು 6 ಸ್ಪೀಡ್ ಮ್ಯನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಪೆಟ್ರೋಲ್ ಎಂಜಿನ್‍‍ಗಳು ಪ್ರತೀ ಲೀಟರ್‍‍ಗೆ 17-18 ಕಿಲೋಮೀಟರ್ ಮತ್ತು ಡೀಸೆಲ್ ಎಂಜಿನ್ 20-22 ಕಿಲೋಮೀಟರ್ ಮೈಲೇಜ್ ನೀಡಲಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬರಲಿದೆ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಕಿಯಾ ಸೆಲ್ಟಾಸ್..!

ಹೆಚ್‌ಆರ್-ವಿ ಬಿಡುಗಡೆಗಾಗಿ ಭಾರತದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟ್ ನಡೆಸಿದ ಹೋಂಡಾ

ಇದರಿಂದಾಗಿ ಹೊಸ ಕಾರಿನ ಬೆಲೆಗಳು ಹೋಂಡಾ ಹೆಚ್‍ಆರ್‍-ವಿ ಕಾರಿನ ಬೇಸ್ ಮಾಡೆಲ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.13 ಲಕ್ಷದಿಂದ ಟಾಪ್ ಎಂಡ್ ಮಾಡೆಲ್‍‍ ಬೆಲೆಯು ರೂ.17 ಲಕ್ಷ ಇರಬಹುದೆಂದು ಅಂದಾಜಿಸಲಾಗುತ್ತಿದ್ದು,ಇದೇ ವರ್ಷ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಮಾರಾಟಕ್ಕೆ ಲಭ್ಯವಾಗಲಿದೆ.

Most Read Articles

Kannada
Read more on ಹೋಂಡಾ honda
English summary
Honda HR-V Spotted testing In India Ahead Of Its Expected Launch During The Festive Period. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X