ಬಿಎಸ್6 ಡೀಸೆಲ್ ಕಾರುಗಳ ಮಾರಾಟ ಮುಂದುವರೆಸಲಿದೆ ಹೋಂಡಾ
ಲೈವ್ ಮಿಂಟ್ ವರದಿಗಳ ಪ್ರಕಾರ, ಜಪಾನ್ ಮೂಲದ ಆಟೋ ಮೊಬೈಲ್ ಕಂಪನಿ ಹೋಂಡಾ ತನ್ನ ಡೀಸೆಲ್ ಮಾದರಿಯ ವಾಹನಗಳ ಮಾರಾಟವನ್ನು ಬಿಎಸ್6 ಮಾಲಿನ್ಯ ನಿಯಮಗಳು ಜಾರಿಯಾದ ನಂತರವೂ ಮುಂದುವರೆಸಲಿದೆ. ಫೋರ್ಡ್ ಮೋಟಾರ್ಸ್ ನಂತರ ಈ ರೀತಿಯಾಗಿ ಹೇಳಿಕೆ ನೀಡುತ್ತಿರುವ ಎರಡನೇ ಕಂಪನಿ ಹೋಂಡಾ ಮೋಟಾರ್ಸ್ ಆಗಿದೆ.

ಈ ವರ್ಷದ ನಾಲ್ಕನೇ ತ್ರೈಮಾಸಿಕದಿಂದ ಹೋಂಡಾ ತನ್ನಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಗಳ ವಾಹನಗಳನ್ನೂ ಬಿಎಸ್ 6 ಎಂಜಿನ್‍ಗಳಿಗೆ ಅಪ್‍ಗ್ರೇಡ್ ಮಾಡಲಿದೆ. ಹೋಂಡಾ ಕಾರ್ ಇಂಡಿಯಾ ಲಿಮಿಟೆಡ್‍ನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ತನ್ನ ಎರಡೂ ಮಾದರಿಯ ಎಂಜಿನ್‍ಗಳನ್ನು ಅಪ್‍ಗ್ರೇಡ್ ಮಾಡಲಿದೆ. ಈ ಮಾದರಿಯ ವಾಹನಗಳೆಂದರೆ - ಅಮೇಜ್, ಹೋಂಡಾ ಸಿಟಿ, ಡಬ್ಲೂಆರ್ - ವಿ, ಬಿಆರ್ - ವಿ, ಸಿವಿಕ್ ಮತ್ತು ಸಿಆರ್ - ವಿ. ಹೋಂಡಾ ಕಾರ್ ಇಂಡಿಯಾ ಲಿಮಿಟೆಡ್‍ನ, ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕರಾದ ರಾಜೇಶ್ ಗೊಯಲ್ ರವರು ಇದರ ಬಗ್ಗೆ ಮಾತನಾಡಿದ್ದಾರೆ.

ನಮ್ಮ ಅನುಭವದ ಪ್ರಕಾರ, ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್‍ಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಬಂದಾಗ, 80% ಗ್ರಾಹಕರು ತಾವು ಎಷ್ಟು ದೂರ ಪಯಣಿಸುತ್ತೇವೆ ಎಂದೂ, ಕಾರಿನ ಮೇಲೆ ಹೂಡಿರುವ ಬಂಡವಾಳ ಯಾವಾಗ ವಾಪಸ್ ಬರುವುದು ಎಂಬುದರ ಲೆಕ್ಕಚಾರ ಹಾಕುತ್ತಿರುತ್ತಾರೆ.

ಆದರೆ 20% ಗ್ರಾಹಕರು ತಾವು ಆಯ್ಕೆ ಮಾಡುವ ವಾಹನದ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಕಂಪನಿಯು ಈ 20% ಗ್ರಾಹಕರ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ತಿಳಿಸಿದರು. ಗೋಯಲ್ ರವರ ಪ್ರಕಾರ ಬಿಎಸ್6 ನಿಯಮಗಳು ಜಾರಿಗೆ ಬಂದ ನಂತರ ವಾಹನದ ಬಗೆಗಿರುವ ಭಾವನೆಗಳು ದೂರವಾಗಲಿವೆ.

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ನಡುವೆ ಇರುವ ಬೆಲೆಗಳ ವ್ಯತ್ಯಾಸ ಸಹ ಹೆಚ್ಚಲಿದೆ. ಆದರೆ ಡೀಸೆಲ್ ವಾಹನಗಳಿಗೆ ಇರುವ ಬೇಡಿಕೆಯು ತಕ್ಷಣಕ್ಕೆ ಕಡಿಮೆಯಾಗುವುದಿಲ್ಲ. ಆದ ಕಾರಣ ನಾವು ಬೇಡಿಕೆ ಇರುವವರೆಗೆ ಡೀಸೆಲ್ ಮಾದರಿಯ ವಾಹನಗಳನ್ನು ಪೂರೈಸುತ್ತೇವೆ ಮತ್ತು ಅದರ ನಂತರ ಪರ್ಯಾಯ ವ್ಯವಸ್ಥೆಗಳತ್ತ ಗಮನ ಹರಿಸುತ್ತೇವೆ ಎಂದು ತಿಳಿಸಿದರು. ಗೋಯಲ್ ರವರ ಪ್ರಕಾರ, ಬಿಎಸ್ 4 ನಿಂದ ಬಿಎಸ್ 6 ನಿಯಮಗಳಿಗೆ ವರ್ಗಾವಣೆಯಾಗುವುದನ್ನು ಅಚ್ಚುಕಟ್ಟಾಗಿ ನಿಭಾಯಿಸಲಾಗುವುದು.

ಹೋಂಡಾ ಕಂಪನಿಯು ಬಿಎಸ್6 ಆಧಾರಿತ ಎಂಜಿನ್‍ಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಈ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಎಲ್ಲಾ ಮಾದರಿಯ ವಾಹನಗಳ ಎಂಜಿನ್‍ಗಳನ್ನು ಬಿಎಸ್6 ನಿಯಮಗಳಿಗೆ ಅನುಗುಣವಾಗಿ ಬದಲಾಯಿಸಲಾಗುವುದು ಎಂದು ಹೇಳಿದರು.
MOST READ: ಬಿಡುಗಡೆಯಾದ ಹೀರೋ ಪ್ಲೆಷರ್ ಪ್ಲಸ್110

ಹೋಂಡಾ ಕಂಪನಿಯು ಸದ್ಯಕ್ಕೆ ಅಮೇಜ್, ಡಬ್ಲೂಆರ್-ವಿ, ಸಿಟಿ ಮತ್ತು ಬಿಆರ್-ವಿ ವಾಹನಗಳನ್ನು 1.5 ಲೀಟರಿನ ಡೀಸೆಲ್ ಎಂಜಿನ್‍ನಲ್ಲಿ ಮತ್ತು ಸಿವಿಕ್ ಮತ್ತು ಸಿಆರ್-ವಿ ವಾಹನಗಳನ್ನು 1.6 ಲೀಟರಿನ ಡೀಸೆಲ್ ಪವರ್‍ಟ್ರೇನ್‍ನಲ್ಲಿ ಮಾರಾಟ ಮಾಡುತ್ತಿದೆ. ಈ ಎಲ್ಲಾ ವಾಹನಗಳನ್ನು ಪೆಟ್ರೋಲ್ ಆವೃತ್ತಿಯಲ್ಲೂ ಸಹ ಮಾರಾಟ ಮಾಡಲಾಗುತ್ತಿದೆ.

ಬಿಎಸ್6 ನಿಯಮಗಳು ಜಾರಿಗೆ ಬಂದ ನಂತರ ಡೀಸೆಲ್ ಕಾರುಗಳ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ, ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ, ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಎಲ್ಲಾ ಬಗೆಯ ಡೀಸೆಲ್ ವಾಹನಗಳ ಮಾರಾಟವನ್ನು 2020ರ ಏಪ್ರಿಲ್ 1 ರಿಂದ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಟಾಟಾ ಮೋಟಾರ್ಸ್ ಸಹ ತನ್ನ ಕಡಿಮೆ ಸಾಮರ್ಥ್ಯದ ಡೀಸೆಲ್ ಎಂಜಿನ್ ವಾಹನಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಫೋರ್ಡ್ ಮೋಟಾರ್ಸ್ ನಂತರ ಡೀಸೆಲ್ ವಾಹನಗಳ ಮಾರಾಟವನ್ನು ಮುಂದುವರೆಸುವುದಾಗಿ ತಿಳಿಸಿದ ಎರಡನೇ ಕಂಪನಿ ಹೋಂಡಾ ಮೋಟಾರ್ಸ್ ಆಗಿದೆ. ಬಹುತೇಕ ಭಾರತೀಯರು ಡೀಸೆಲ್ ವಾಹನಗಳನ್ನು ಇಷ್ಟಪಡುವುದನ್ನು ಅರಿತಿರುವ ಹೋಂಡಾ ಮೋಟಾರ್ಸ್, ಡೀಸೆಲ್ ವಾಹನಗಳ ಮಾರಾಟವನ್ನು ಮುಂದುವರೆಸಲಿದೆ. ವಿದೇಶಿ ಕಂಪನಿಗಳು ಡೀಸೆಲ್ ವಾಹನಗಳ ಮಾರಾಟವನ್ನು ಮುಂದುವರೆಸಲು ಬಯಸಿದ್ದರೆ, ಭಾರತೀಯ ಕಂಪನಿಗಳು ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದು ಆಶ್ಚರ್ಯಕರವಾಗಿದೆ. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಹೋಂಡಾ ಕಾರ್ ಇಂಡಿಯಾ ಕಂಪನಿಗೆ ನಮನಗಳು.


Click it and Unblock the Notifications








