ಬಿಡುಗಡೆಯಾದ ಹೀರೋ ಪ್ಲೆಷರ್ ಪ್ಲಸ್110

ಪ್ರಪಂಚದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್, ತನ್ನ ಹೊಸ ವಾಹನವಾದ ಪ್ಲೆಷರ್ ಪ್ಲಸ್110 ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೀರೋ ಪ್ಲೆಷರ್ ಪ್ಲಸ್110 ವಾಹನದ ಶೀಟ್ ಮೆಟಲ್ ವ್ಹೀಲ್ ಮಾದರಿಯ ಬೆಲೆಗಳು ರೂ.47,300 ರಿಂದ ಪ್ರಾರಂಭವಾದರೆ, ಕಾಸ್ಟ್ ವ್ಹೀಲ್ ಮಾದರಿಯ ಬೆಲೆಗಳು ರೂ.49,300 ರಿಂದ ಪ್ರಾರಂಭವಾಗುತ್ತವೆ.

ಬಿಡುಗಡೆಯಾದ ಹೀರೋ ಪ್ಲೆಷರ್ ಪ್ಲಸ್110

ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಂತೆ ಇವೆ. ಹೀರೋ ಕಂಪನಿಯು, ಇದೇ ವೇಳೆ ಹೊಸ ಮ್ಯಾಸ್ಟ್ರೋ ಎಡ್ಜ್ 125 ವಾಹನವನ್ನು ಸಹ ಬಿಡುಗಡೆಗೊಳಿಸಿತು. ಹೀರೋ ಪ್ಲೆಷರ್ ಪ್ಲಸ್ ವಾಹನದಲ್ಲಿ, ಡ್ಯೂಯೆಟ್ ವಾಹನದಲ್ಲಿ ಇದ್ದಂತಹ 110.9 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಇದೆ. ಪ್ಲೆಷರ್ ಪ್ಲಸ್ ವಾಹನದ ಎಂಜಿನ್ 8 ಬಿ‍‍ಹೆಚ್‍‍ಪಿ ಯನ್ನು 7,500 ಆರ್‍‍ಪಿ‍ಎಂನಲ್ಲಿ ಮತ್ತು 8.7 ಎನ್‍ಎಂ ಟಾರ್ಕ್ ಅನ್ನು 5,500 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

ಬಿಡುಗಡೆಯಾದ ಹೀರೋ ಪ್ಲೆಷರ್ ಪ್ಲಸ್110

ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಮೂಲಕ ಹಿಂಭಾಗದಲ್ಲಿರುವ ವ್ಹೀಲ್‍‍ಗೆ, ಪವರ್ ಬಿಡುಗಡೆ ಮಾಡುತ್ತದೆ. ಈ ಹೀರೋ ಪ್ಲೆಷರ್ ವಾಹನದ ತೂಕವು 101 ಕೆ.ಜಿ ಗಳಷ್ಟಿದೆ. 2006ರಲ್ಲಿ ಬಿಡುಗಡೆಯಾದಾಗಿನಿಂದ ಹೀರೋ ಪ್ಲೆಷರ್ ವಾಹನವು ಮಹಿಳಾ ಗ್ರಾಹಕರನ್ನು ತನ್ನೆಡೆಗೆ ಸೆಳೆದಿತ್ತು, ಪ್ಲೆಷರ್ ಪ್ಲಸ್ ಸಹ ಇದೇ ಗುರಿಯನ್ನಿಟ್ಟುಕೊಂಡಿದೆ.

ಬಿಡುಗಡೆಯಾದ ಹೀರೋ ಪ್ಲೆಷರ್ ಪ್ಲಸ್110

ಪ್ಲೆಷರ್ ಪ್ಲಸ್110 ವಾಹನದ ಹೊರ ವಿನ್ಯಾಸದಲ್ಲಿ ಯಾವುದೇ ಗೆರೆಗಳಿಲ್ಲ. ಪ್ಲೆಷರ್ ಪ್ಲಸ್110 ತನ್ನ ಹೆಡ್ ಲೈಟ್ ಯುನಿಟ್‍‍ನ ಸುತ್ತಲೂ ಕ್ರೋಮ್ ಬಣ್ಣವನ್ನು ಹೊಂದಿದೆ. ಸ್ಪಷ್ಟವಾಗಿರುವ ಇಂಡಿಕೇಟರ್‍‍ಗಳು ಮ್ಯಾಟ್ ಸಿಲ್ವರ್ ಟ್ರಿಮ್ ಹೊಂದಿವೆ.

ಬಿಡುಗಡೆಯಾದ ಹೀರೋ ಪ್ಲೆಷರ್ ಪ್ಲಸ್110

ಹೊಸ ಹೀರೋ ಸ್ಕೂಟರ್‍‍ನ ಎಡ ಮತ್ತು ಬಲ ಭಾಗದಲ್ಲಿ ತಿರುವುಗಳಂತಿದ್ದು, ಕ್ರೋಮ್ ಬಣ್ಣದಲ್ಲಿರುವ ಪ್ಲೆಷರ್ ಪ್ಲಸ್ ಬ್ಯಾಡ್ಜ್ ಅನ್ನು ಅಳವಡಿಸಲಾಗಿದೆ. ಹೀರೋ ಪ್ಲೆಷರ್ ಪ್ಲಸ್ 110 ವಾಹನದಲ್ಲಿ ಡ್ಯೂಯಲ್ ಟೆಕ್ಸ್ಚರ್ ಸೀಟುಗಳಿದ್ದು, ಹಿಂಭಾಗದಲ್ಲಿ ನಯವಾಗಿರುವ ಲ್ಯಾಂಪ್‍‍ಗಳು ಮತ್ತು ಇಂಡಿಕೇಟರ್‍‍ಗಳಿವೆ. ಹೀರೋ ಪ್ಲೆಷರ್ ಪ್ಲಸ್110 ನ ಮುಂಭಾಗದಲ್ಲಿ ಯು‍ಎಸ್‍‍ಬಿ ಚಾರ್ಜಿಂಗ್ ಪಾಯಿಂಟ್, ಎಲ್‍ಇ‍‍ಡಿ ಬೂಟ್ ಲ್ಯಾಂಪ್, ಹೊಸ ಬ್ಯಾಕ್‍‍ಲಿಟ್ ಸ್ಪೀಡೋ ಮೀಟರ್, ಜೊತೆಗೆ ಫ್ಯೂಯಲ್ ಹಾಗೂ ಸೈಡ್ ಸ್ಟಾಂಡ್ ಇಂಡಿಕೇಟರ್‍‍ಗಳಿವೆ.

ಬಿಡುಗಡೆಯಾದ ಹೀರೋ ಪ್ಲೆಷರ್ ಪ್ಲಸ್110

ಹೀರೋ ಪ್ಲೆಷರ್ ಪ್ಲಸ್‍ 110ನಲ್ಲಿ ದ್ವಿಚಕ್ರವಾಹನಗಳ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂಗಳಿವೆ.

MOST READ: ಟಾರ್ಕ್ ಮೋಟಾರ್ಸ್‍‍‍ಗೆ ರಾಯ್ ಕುರಿಯನ್ ಹೊಸ ಸಾರಥಿ

ಬಿಡುಗಡೆಯಾದ ಹೀರೋ ಪ್ಲೆಷರ್ ಪ್ಲಸ್110

ಪ್ಲೆಷರ್ ಪ್ಲಸ್ 110 ವಾಹನವು ಶೀಟ್ ಮೆಟಲ್ ವ್ಹೀಲ್ ಮತ್ತು ಕಾಸ್ಟ್ ವ್ಹೀಲ್ ಎಂಬ ಎರಡು ಮಾದರಿಗಳಲ್ಲಿ ದೊರೆಯುತ್ತದೆ. ಶೀಟ್ ಮೆಟಲ್ ವ್ಹೀಲ್‍ - ಗ್ಲಾಸಿ ಬ್ಲಾಕ್, ಗ್ಲಾಸಿ ಬ್ಲೂ, ಗ್ಲಾಸಿ ವೈಟ್ ಮತ್ತು ಗ್ಲಾಸಿ ರೆಡ್ - ಎಂಬ ನಾಲ್ಕು ವಿಧಗಳಲ್ಲಿ ದೊರೆಯುತ್ತದೆ. ಕಾಸ್ಟ್ ವ್ಹೀಲ್, ಮ್ಯಾಟ್ ಪೇಂಟ್ ಬಣ್ಣಗಳಲ್ಲಿ - ರೆಡ್, ಗ್ರೀನ್ ಮತ್ತು ವಾರ್ನಿಯರ್ ಗ್ರೇ - ಎಂಬ ಮೂರು ವಿಧಗಳಲ್ಲಿ ದೊರೆಯುತ್ತದೆ.

ಬಿಡುಗಡೆಯಾದ ಹೀರೋ ಪ್ಲೆಷರ್ ಪ್ಲಸ್110

ಹೀರೋ ಪ್ಲೆಷರ್ ಪ್ಲಸ್110 ಬಿಡುಗಡೆಯ ಬಗ್ಗೆ ಮಾತನಾಡಿದ, ಹೀರೋ ಮೋಟೊ ಕಾರ್ಪ್‍‍ನ ಗ್ಲೋಬಲ್ ಪ್ರಾಡಕ್ಟ್ ಪ್ಲಾನಿಂಗ್‍‍ನ ಮುಖ್ಯಸ್ಥ ಮಾಲೋ ಲೇ ಮಾಸನ್‍‍ರವರು, ಪ್ಲೆಷರ್ ಈ ಹಿಂದೆ ಮಹಿಳೆಯರ ಸೆಗ್‍‍ಮೆಂಟಿನ ಸ್ಕೂಟರ್ ಎಂದೇ ಬಿಂಬಿತವಾಗಿತ್ತು. ಈಗ ಪ್ಲೆಷರ್ ಪ್ಲಸ್110 ಸ್ಟೈಲಿಶ್ ರೈಡ್ ಬಯಸುವ ಯುವ ಜನಾಂಗವನ್ನು ತನ್ನತ್ತ ಸೆಳೆಯಲಿದೆ ಎಂದು ತಿಳಿಸಿದರು.

Most Read Articles

Kannada
English summary
Hero Pleasure+ 110 Launched In India — Prices Start At Rs 47,300 - Read in kannada
Story first published: Monday, May 13, 2019, 18:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X