ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಹ್ಯುಂಡೈ ಮೋಟಾರ್ಸ್ ಸಂಸ್ಥೆಯು ಸದ್ಯ ಕೊನಾ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮತ್ತಷ್ಟು ಎಲೆಕ್ಟ್ರಿಕ್ ಕಾರು ಖರೀದಿದಾರರನ್ನು ಸೆಳೆಯಲು ಹ್ಯುಂಡೈ ಮಾಡಿರುವ ಹೊಸ ಪ್ಲ್ಯಾನ್ ಕಾರು ಖರೀದಿದಾರರ ಆಕರ್ಷಣೆಗೆ ಕಾರಣವಾಗಿದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಸದ್ಯ ಆಟೋ ಮಾರುಕಟ್ಟೆಯಲ್ಲಿ ಅದೆಷ್ಟೋ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರು ಖರೀದಿಯ ಆಸಕ್ತಿ ಇದ್ದರೂ ಕೂಡಾ ದೂರದ ಪ್ರಯಾಣದ ವೇಳೆ ಎದುರಾಗಬಹುದಾದ ಚಾರ್ಜಿಂಗ್ ಸಮಸ್ಯೆಯಿಂದಾಗಿ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಹಿಂದೇಟು ಹಾಕುತ್ತಿರುವುದು ಸುಳ್ಳಲ್ಲ. ಇದಕ್ಕಾಗಿ ಹೊಸ ಪರಿಹಾರ ಸೂಚಿಸಿರುವ ಹ್ಯುಂಡೈ ಸಂಸ್ಥೆಯು ಫಾಸ್ಟ್‌ಚಾರ್ಜಿಂಗ್ ಸೌಲಭ್ಯದ ಜೊತೆಗೆ ಇದೀಗ ವೆಹಿಕಲ್ ಟು ವೆಹಿಕಲ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಪರಿಚಯಿಸಿದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಅಂದರೆ ಕೊನಾ ಕಾರು ಮಾಲೀಕರು ಪ್ರಯಾಣದ ವೇಳೆ ಚಾರ್ಜ್ ಖಾಲಿಯಾದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಕಾರಿನ ಮೂಲಕ ಒಂದಿಷ್ಟು ಚಾರ್ಜ್ ಮಾಡಿಕೊಂಡು ಪ್ರಯಾಣ ಮುಂದುವರಿಸಬಹುದಾದ ಸೌಲಭ್ಯ ಇದಾಗಿದ್ದು, ಇದರಿಂದ ಚಾರ್ಜಿಂಗ್ ಸಮಸ್ಯೆಗೆ ಇದು ತಾತ್ಕಾಲಿಕ ಪರಿಹಾರವಾಗಲಿದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಜೊತೆಗೆ ಅತಿ ಕಡಿಮೆ ಅವಧಿ ಚಾರ್ಜಿಂಗ್ ಮಾಡಿಕೊಳ್ಳಲು ಪೂರಕವಾದ 7.2KW AC ಚಾರ್ಜರ್ ಸೌಲಭ್ಯವನ್ನು ಕೊನಾ ಖರೀದಿದಾರರಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಬೆಂಗಳೂರು ಮತ್ತು ದೆಹಲಿಯಲ್ಲಿ ಮಾತ್ರ ಗ್ರಾಹಕರ ಬೇಡಿಕೆ ಮೇರೆಗೆ ಪೋರ್ಟಬಲ್ ಚಾರ್ಜರ್ ಮೂಲಕ ಕಾರು ಇರುವ ಸ್ಥಳಿಗಳಿಗೆ ಬಂದು ಚಾರ್ಜಿಂಗ್ ಮಾಡಿಕೊಡಲಾಗುತ್ತದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಸಾಮಾನ್ಯ ಪೆಟ್ರೋಲ್ ಕಾರುಗಳಿಂತಲೂ ಶೇ.80 ರಷ್ಟು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಹ್ಯುಂಡೈ ಕೊನಾ ಕಾರು ಪ್ರತಿ ಚಾರ್ಜ್‌ಗೆ 452ಕಿ.ಮಿ ಮೈಲೇಜ್ ಹೊಂದಿದ್ದು, ಅತಿ ಕಡಿಮೆ ನಿರ್ವಹಣಾ ವೆಚ್ಚದ ಮೂಲಕ ಕಾರು ಖರೀದಿದಾರರ ಗಮನಸೆಳೆಯುತ್ತಿದೆ. ಕೋನಾ ಕಾರು 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲ ವೈಶಿಷ್ಟ್ಯತೆಯನ್ನು ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳ ಮೈಲೇಜ್ ಪ್ರಮಾಣಕ್ಕೆ ಪ್ರಮಾಣ ಪತ್ರ ಒದಗಿಸುವ ಎಆರ್‌ಎಐ ಸಂಸ್ಥೆಯೇ ಕೋನಾ ಮೈಲೇಜ್ ಪ್ರಮಾಣವನ್ನು ಪ್ರಮಾಣಿಕರಿಸಿದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು 64kWh ಮತ್ತು 39.2kWh ಬ್ಯಾಟರಿ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಲ್ಲಿ ಸದ್ಯಕ್ಕೆ 39.2kWh ಬ್ಯಾಟರಿ ಸಾಮಾರ್ಥ್ಯ ಮಾದರಿಯನ್ನು ಮಾತ್ರವೇ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, 52 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್‌ ಆಗಬಲ್ಲ ಫಾಸ್ಟ್ ಚಾರ್ಜರ್ ಸೌಲಭ್ಯ ಈ ಕಾರಿನಲ್ಲಿದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಸಾಮಾರ್ಥ್ಯ ಕಾರುಗಳಂತೆಯೇ ಪರ್ಫಾಮೆನ್ಸ್‌ನಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಕೋನಾ ಕಾರು 155 ಕಿ.ಮಿ ಟಾಪ್ ಸ್ಪೀಡ್ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್‌ ಆಗಲು ಕನಿಷ್ಠ 8 ಗಂಟೆ ತೆಗೆದುಕೊಳ್ಳಲಿದೆ. ಹೀಗಾಗಿ ಕೋನಾ ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಆಕರ್ಷಕವಾಗಿದ್ದು, ಶೇ.80 ರಷ್ಟು ಚಾರ್ಜಿಂಗ್ ಮಾಡಲು ಕೇವಲ 52 ನಿಮಿಷ ತೆಗೆದುಕೊಳ್ಳುತ್ತದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಕ್ರೆಟಾ ಕಾರಿಗಿಂತಲೂ ತುಸು ಕಡಿಮೆ ಉದ್ದಳತೆ ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿದ್ದು, 4,180-ಎಂಎಂ ಉದ್ದ, 1,800-ಎಂಎಂ ಅಗಲ, 1,570-ಎಂಎಂ ಎತ್ತರ ಮತ್ತು 2,600-ಎಂಎಂ ವೀಲ್ಹ್‌ಬೇಸ್‌ನೊಂದಿಗೆ 332-ಲೀಟರ್ ಸಾಮರ್ಥ್ಯದ ಲಗೇಜ್ ಸ್ಪೆಸ್ ಪಡೆದುಕೊಂಡಿದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಹ್ಯುಂಡೈ ಸಂಸ್ಥೆಯು ಸದ್ಯ ವಿದೇಶಿ ಮಾರುಕಟ್ಟೆಗಳಿಂದ ಕೋನಾ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿರುವುದರಿಂದ ಹೊಸ ಕಾರು ತುಸು ದುಬಾರಿ ಎನ್ನಿಸಲಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 23.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹಾಗೆಯೇ ಹೊಸ ಕಾರಿನ ಮೇಲೆ ರೂ.1.50 ಲಕ್ಷ ತೆರಿಗೆ ವಿನಾಯ್ತಿ ಸಹ ಸಿಗಲಿದ್ದು, ಬ್ಯಾಟರಿ ಮೇಲೆ 8 ವರ್ಷಗಳ ವಾರಂಟಿ ನೀಡಲಾಗಿದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಕೋನಾ ಕಾರು ಬೆಲೆ ದುಬಾರಿಯಾಗಿದ್ದರೂ ಸಹ ಉತ್ತಮ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಖರೀದಿಗೆ ಉತ್ತಮ ಎನ್ನಿಸಲಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಕಾಸ್‌ಕ್ಲಾಡಿಂಗ್ ಫ್ರಂಟ್ ಗ್ರಿಲ್, ಬಾಡಿ ಕಲರ್ ಬಂಪರ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್, ಶಾರ್ಪ್ ಶೋಲ್ಡ್‌ರ್ ಲೈನ್ಸ್, ರಿಯರ್ ಸ್ಪಾಯ್ಲರ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಹೊರವಿನ್ಯಾಸದಲ್ಲಿ ಮಾತ್ರವಲ್ಲದೇ ಕಾರಿನ ಒಳಭಾಗದ ವಿನ್ಯಾಸವು ಸಹ ಎಲೆಕ್ಟ್ರಿಕ್ ಕಾರು ಖರೀದಿದಾರನ್ನು ಸೆಳೆಯುಲಿದ್ದು, ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್, ಹೋಂದಾಣಿಕೆ ಮಾಡಬಹುದಾದ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಲೆದರ್ ಹೊದಿಕೆಯ ಸ್ಟಿರಿಂಗ್ ವೀಲ್ಹ್ ಮೌಂಟ್, 10 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಚಾಲಕನ ಸೀಟು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯ ಈ ಕಾರಿನಲ್ಲಿದೆ.

ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸಮಸ್ಯೆಗೆ ಹ್ಯುಂಡೈ ಹೊಸ ಪ್ಲ್ಯಾನ್

ಸುರಕ್ಷತೆಗೂ ಕೋನಾ ಕಾರಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆರು ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ತುರ್ತು ಕರೆ ಸೌಲಭ್ಯ, ಎಬಿಎಸ್ ಜೊತೆ ಇಬಿಡಿ, ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ವಿವಿಧ ಮಾದರಿಯ ಚಾಲನಾ ಅನುಭವಕ್ಕಾಗಿ ಇಕೋ, ಇಕೋ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಬದಲಿಸಿಕೊಳ್ಳಬಹುದಾಗಿದೆ.

Article Published On: Wednesday, December 4, 2019, 14:40 [IST]
English summary
Hyundai has introduces new charging solutions for Kona electric car customers in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+