ಬಹಿರಂಗಗೊಂಡ ಹ್ಯುಂಡೈ ಒರಾ ಎಂಜಿನ್ ವಿಶೇಷತೆಗಳು

ಹ್ಯುಂಡೈ ಇಂಡಿಯಾ ತನ್ನ ಹೊಸ ಒರಾ ಸೆಡಾನ್‍‍ನ ಎಂಜಿನ್ ವಿಶೇಷತೆ ಮತ್ತು ಟ್ರಾನ್ಸ್ ಮಿಷನ್ ವಿವರ್‍‍ಗಳನ್ನು ಪ್ರಕಟಿಸಿದೆ. ಹೊಸ ಹ್ಯುಂಡೈ ಒರಾ ಭಾರತದಲ್ಲಿ ಬಿಡುಗಡೆಯಾದ ನಂತರ ಬಿಎಸ್-6 ಎಂಜಿನ್ ಹೊಂದಿರುವ ಹ್ಯುಂಡೈ ಕಂಪನಿಯ ಮೊದಲ ಸೆಡಾನ್ ಆಗಿರಲಿದೆ.

ಬಹಿರಂಗಗೊಂಡ ಹ್ಯುಂಡೈ ಒರಾ ಎಂಜಿನ್ ವಿಶೇಷತೆಗಳು

ಹ್ಯುಂಡೈ ಕಂಪನಿಯ ಪ್ರಕಾರ ಒರಾ ಮೂರು ಮಾದರಿಯ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ ಎಲೈಟ್ ಐ20ನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ವೆನ್ಯೂ ಕಾರಿನಲ್ಲಿರುವ 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಕ್ರೇಟಾ ಕಾರಿನಲ್ಲಿರುವ 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಎಲ್ಲಾ ಮೂರು ಎಂಜಿನ್‍ಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿರಲಿವೆ.

ಬಹಿರಂಗಗೊಂಡ ಹ್ಯುಂಡೈ ಒರಾ ಎಂಜಿನ್ ವಿಶೇಷತೆಗಳು

ಎಲ್ಲಾ ಮೂರು ಎಂಜಿನ್‍‍ಗಳು ಹ್ಯುಂಡೈ ವೆನ್ಯೂ ಮಾದರಿಯಲ್ಲೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.4 ಲೀಟರ್ ಡೀಸೆಲ್ ಎಂಜಿನ್ 90 ಬಿ‍‍ಹೆಚ್‍‍ಪಿ ಪವರ್ ಮತ್ತು 220 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿ‍‍ಹೆಚ್‍‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಹಿರಂಗಗೊಂಡ ಹ್ಯುಂಡೈ ಒರಾ ಎಂಜಿನ್ ವಿಶೇಷತೆಗಳು

ಈ ಎಲ್ಲಾ ಮೂರು ಎಂಜಿನ್‍ಗಳೊಂದಿಗೆ ಸ್ಟ್ಯಾಂಡರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. 1.2 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಆಯ್ಕೆಯಾಗಿ ನೀಡಲಾಗಿದೆ. ಹ್ಯುಂಡೈ ವೆನ್ಯೂ ರೀತಿಯಲ್ಲಿ ಒರಾ ಕಾರಿನಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ನೀಡಲಾಗಿಲ್ಲ.

ಬಹಿರಂಗಗೊಂಡ ಹ್ಯುಂಡೈ ಒರಾ ಎಂಜಿನ್ ವಿಶೇಷತೆಗಳು

ಹ್ಯುಂಡೈ ಒರಾ ಕಾರಿನಲ್ಲಿ ಹೊಸ ಎಂಜಿನ್ ಕಡಿಮೆ ವೈಬ್ರೇಷನ್ ಮತ್ತು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಸುಧಾರಿತ ಪರ್ಫಾಮೆನ್ಸ್ ನೀಡುತ್ತದೆ ಎನ್ನಲಾಗಿದೆ. ಒರಾ ಹ್ಯುಂಡೈ 'ಅಡ್ವಾನ್ಸ್ಡ್ ಆಫ್ಟರ್ ಟ್ರೀಟ್ಮೆಂಟ್ ಸಿಸ್ಟಮ್' ಎಂದು ಕರೆಯಲಾಗಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ.

ಬಹಿರಂಗಗೊಂಡ ಹ್ಯುಂಡೈ ಒರಾ ಎಂಜಿನ್ ವಿಶೇಷತೆಗಳು

ವಿನ್ಯಾಸದಲ್ಲಿ ಒರಾ ಆಕರ್ಷಕ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಕ್ಯಾಸ್ಕೇಡಿಂಗ್ ಗ್ರಿಲ್ ಮತ್ತು ಗ್ರ್ಯಾಂಡ್ ಐ10 ನಿಯೊಸ್‍‍ನಂತಹ ಹೆಡ್‍‍ಲೈಟ್‍‍ಗಳನ್ನು ಹೊಂದಿದೆ. ಎಕ್ಸೆಂಟ್‍‍ಗೆ ಹೋಲಿಸಿದರೆ ಹೊಸ ಸೆಡಾನ್‍‍ನಲ್ಲಿ ವಿನ್ಯಾಸಗೊಳಿಸಲಾದ ಬೋಲ್ಡ್ ಅಲಾಯ್ ವ್ಹೀಲ್ ಮತ್ತು ಹಿಂದಿನದಕ್ಕಿಂತ ಭಿನ್ನವಾದ ಹಿಂಭಾಗದ ವಿನ್ಯಾಸವನ್ನು ನವೀಕರಿಸಿದೆ.

ಬಹಿರಂಗಗೊಂಡ ಹ್ಯುಂಡೈ ಒರಾ ಎಂಜಿನ್ ವಿಶೇಷತೆಗಳು

ಎಕ್ಸೆಂಟ್ ಮಾದರಿಗೆ ಹೋಲಿಸಿದರೆ ಒರಾ ಇಂಟಿರಿಯರ್‍‍‍ನಲ್ಲಿ ದೊಡ್ದ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ಸ್ಟೀಯರಿಂಗ್ ವ್ಹೀಲ್, ಡ್ಯಾಶ್‍ಬೋರ್ಡ್ ಮತ್ತು ನಿಯೊಸ್‍‍ನಲ್ಲಿರುವ ಕೆಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಟಾಪ್ ಸ್ಪೆಕ್ ರೂಪಾಂತರದಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಮತ್ತು ಬ್ಲೂಟೂತ್‍‍ನೊಂದಿಗೆ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಹಿರಂಗಗೊಂಡ ಹ್ಯುಂಡೈ ಒರಾ ಎಂಜಿನ್ ವಿಶೇಷತೆಗಳು

ಹ್ಯುಂಡೈ ಈ ತಿಂಗಳ ಆರಂಭದಲ್ಲಿ ತಮ್ಮ ಮುಂಬರುವ ಸೆಡಾನ್ ಹೆಸರನ್ನು ಒರಾ ಎಂದು ಘೋಷಿಸಿತ್ತು. ಹ್ಯುಂಡೈ ಒರಾ ತನ್ನ ಸರಣಿಯ ಎಕ್ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಬದಲಿಸುವ ನಿರೀಕ್ಷಿಯಿದೆ. ಹ್ಯುಂಡೈ ಇದನ್ನು ಪ್ರತ್ಯೇಕ ಮಾದರಿಯಾಗಿ ಪರಿಚಯಿಸಬಹುದು, ಎಕ್ಸೆಂಟ್ ಜೊತೆಗೆ ಹೊಸ ಒರಾ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮಾರಾಟ ಮಾಡಬಹುದು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಹಿರಂಗಗೊಂಡ ಹ್ಯುಂಡೈ ಒರಾ ಎಂಜಿನ್ ವಿಶೇಷತೆಗಳು

ಭಾರತದಲ್ಲಿ ಒರಾ ಬಿಡುಗಡೆಯಾದ ಬಳಿಕ ಎಕ್ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಬದಲಿಸಲಿದೆ. ಇದು ಸ್ವಲ್ಪ ಸಮಯದವರೆಗೆ ಮಾತ್ರ ಮಾರಾಟದಲ್ಲಿರುತ್ತದೆ. ಹೊಸ ಕಾಂಪ್ಯಾಕ್ಟ್ ಸೆಡಾನ್ ಅನ್ನು ಅನೇಕ ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಹ್ಯುಂಡೈ ಒರಾ ಕಾರಿನ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಆದರೆ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

Article Published On: Thursday, November 21, 2019, 18:18 [IST]
English summary
Hyundai Aura Engine Specifications Revealed: India Launch Expected Soon - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+