ಡಿಸೆಂಬರ್ 11ರಂದು ಅನಾವರಣವಾಗಲಿದೆ ಹ್ಯುಂಡೈ ಒರಾ

ಭಾರತದ ಎರಡನೇ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತನ್ನ ಹೊಸ ಒರಾ ಕಾಂಪ್ಯಾಕ್ಟ್ ಸೆಡಾನ್ ಮುಂದಿನ ಡಿಸೆಂಬರ್ 19ರಂದು ಅನಾವರಣಗೊಳಿಸುತ್ತಿದೆ. ಎಕ್ಸೆಂಟ್‍‍ನ ಉತ್ತರಾಧಿಕಾರಿಯಾಗಲಿರುವ ಒರಾ ಕಾಂಪ್ಯಾಕ್ಟ್ ಸೆಡಾನ್ ಬಿಎಸ್-6 ಆವೃತ್ತಿಯಾಗಿದೆ.

ಡಿಸೆಂಬರ್ 11ರಂದು ಅನಾವರಣವಾಗಲಿದೆ ಹ್ಯುಂಡೈ ಒರಾ

ಹ್ಯುಂಡೈ ಕಂಪನಿಯ ಪ್ರಕಾರ ಒರಾ ಮೂರು ಮಾದರಿಯ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ ಎಲೈಟ್ ಐ20ನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ವೆನ್ಯೂ ಕಾರಿನಲ್ಲಿರುವ 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಕ್ರೇಟಾ ಕಾರಿನಲ್ಲಿರುವ 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಎಲ್ಲಾ ಮೂರು ಎಂಜಿನ್‍ಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿರಲಿವೆ.

ಡಿಸೆಂಬರ್ 11ರಂದು ಅನಾವರಣವಾಗಲಿದೆ ಹ್ಯುಂಡೈ ಒರಾ

ಎಲ್ಲಾ ಮೂರು ಎಂಜಿನ್‍‍ಗಳು ಹ್ಯುಂಡೈ ವೆನ್ಯೂ ಮಾದರಿಯಲ್ಲೇ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ 83 ಬಿ‍‍ಹೆಚ್‍‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.4 ಲೀಟರ್ ಡೀಸೆಲ್ ಎಂಜಿನ್ 90 ಬಿ‍‍ಹೆಚ್‍‍ಪಿ ಪವರ್ ಮತ್ತು 220 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡಿಸೆಂಬರ್ 11ರಂದು ಅನಾವರಣವಾಗಲಿದೆ ಹ್ಯುಂಡೈ ಒರಾ

ಇನ್ನೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿ‍‍ಹೆಚ್‍‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲ್ಲಾ ಮೂರು ಎಂಜಿನ್‍ಗಳೊಂದಿಗೆ ಸ್ಟ್ಯಾಂಡರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. 1.2 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಆಯ್ಕೆಯಾಗಿ ನೀಡಲಾಗಿದೆ.

ಡಿಸೆಂಬರ್ 11ರಂದು ಅನಾವರಣವಾಗಲಿದೆ ಹ್ಯುಂಡೈ ಒರಾ

ಹ್ಯುಂಡೈ ವೆನ್ಯೂ ರೀತಿಯಲ್ಲಿ ಒರಾ ಕಾರಿನಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ನೀಡಲಾಗಿಲ್ಲ. ಹ್ಯುಂಡೈ ಒರಾ ಕಾರಿನಲ್ಲಿ ಹೊಸ ಎಂಜಿನ್ ಕಡಿಮೆ ವೈಬ್ರೇಷನ್ ಮತ್ತು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಸುಧಾರಿತ ಪರ್ಫಾಮೆನ್ಸ್ ನೀಡುತ್ತದೆ ಎನ್ನಲಾಗಿದೆ.

ಡಿಸೆಂಬರ್ 11ರಂದು ಅನಾವರಣವಾಗಲಿದೆ ಹ್ಯುಂಡೈ ಒರಾ

ಒರಾ ಹ್ಯುಂಡೈ 'ಅಡ್ವಾನ್ಸ್ಡ್ ಆಫ್ಟರ್ ಟ್ರೀಟ್ಮೆಂಟ್ ಸಿಸ್ಟಮ್' ಎಂದು ಕರೆಯಲಾಗಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ. ವಿನ್ಯಾಸದಲ್ಲಿ ಒರಾ ಆಕರ್ಷಕ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಕ್ಯಾಸ್ಕೇಡಿಂಗ್ ಗ್ರಿಲ್ ಮತ್ತು ಗ್ರ್ಯಾಂಡ್ ಐ10 ನಿಯೊಸ್‍‍ನಂತಹ ಹೆಡ್‍‍ಲೈಟ್‍‍ಗಳನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಡಿಸೆಂಬರ್ 11ರಂದು ಅನಾವರಣವಾಗಲಿದೆ ಹ್ಯುಂಡೈ ಒರಾ

ಎಕ್ಸೆಂಟ್‍‍ಗೆ ಹೋಲಿಸಿದರೆ ಹೊಸ ಸೆಡಾನ್‍‍ನಲ್ಲಿ ವಿನ್ಯಾಸಗೊಳಿಸಲಾದ ಬೋಲ್ಡ್ ಅಲಾಯ್ ವ್ಹೀಲ್ ಮತ್ತು ಹಿಂದಿನದಕ್ಕಿಂತ ಭಿನ್ನವಾದ ಹಿಂಭಾಗದ ವಿನ್ಯಾಸವನ್ನು ನವೀಕರಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಡಿಸೆಂಬರ್ 11ರಂದು ಅನಾವರಣವಾಗಲಿದೆ ಹ್ಯುಂಡೈ ಒರಾ

ಎಕ್ಸೆಂಟ್ ಮಾದರಿಗೆ ಹೋಲಿಸಿದರೆ ಒರಾ ಇಂಟಿರಿಯರ್‍‍‍ನಲ್ಲಿ ದೊಡ್ದ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ ಸ್ಟೀಯರಿಂಗ್ ವ್ಹೀಲ್, ಡ್ಯಾಶ್‍ಬೋರ್ಡ್ ಮತ್ತು ನಿಯೊಸ್‍‍ನಲ್ಲಿರುವ ಕೆಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಟಾಪ್ ಸ್ಪೆಕ್ ರೂಪಾಂತರದಲ್ಲಿ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಮತ್ತು ಬ್ಲೂಟೂತ್‍‍ನೊಂದಿಗೆ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಡಿಸೆಂಬರ್ 11ರಂದು ಅನಾವರಣವಾಗಲಿದೆ ಹ್ಯುಂಡೈ ಒರಾ

ಭಾರತದಲ್ಲಿ ಒರಾ ಬಿಡುಗಡೆಯಾದ ಬಳಿಕ ಎಕ್ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಬದಲಿಸಲಿದೆ. ಇದು ಸ್ವಲ್ಪ ಸಮಯದವರೆಗೆ ಮಾತ್ರ ಮಾರಾಟದಲ್ಲಿರುತ್ತದೆ. ಹೊಸ ಕಾಂಪ್ಯಾಕ್ಟ್ ಸೆಡಾನ್ ಅನ್ನು ಭಾರತದಲ್ಲಿ ಅನೇಕ ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಇದೀಗ ಡಿಸೆಂಬರ್11 ರಂದು ಬಹುನಿರೀಕ್ಷಿತ ಒರಾ ಕಾರ್ ಅನ್ನು ಅನಾವರಣಗೊಳಿಸುತ್ತಿದೆ.

Article Published On: Thursday, November 28, 2019, 19:29 [IST]
English summary
Hyundai Aura world premiere on December 19, 2019 - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+