ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಕೊರಿಯಾದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಸರಣಿಯ ಹಲವು ಕಾರುಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹ್ಯುಂಡೈ ಕಂಪನಿಯ ಪ್ರಮುಖ ಮಾದರಿಗಳಾದ ಎಲಾಂಟ್ರ, ಗ್ರ್ಯಾಂಡ್ ಐ10, ಹ್ಯುಂಡೈ ವೆರ್ನಾ, ಐ20, ಸ್ಯಾಂಟ್ರೋ, ಐ20 ಆಕ್ಟಿವ್ ಕಾರುಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಹಲವು ತಿಂಗಳುಗಳಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವುದರಿಂದ ಕಾರುಗಳ ಮಾರಾಟದಲ್ಲಿ ಭಾರೀ ಇಳಿಕೆಯಾಗಿತ್ತು. ಕಳೆದ ಎರಡು ತಿಂಗಳಲ್ಲಿ ಹಬ್ಬದ ಪ್ರಯುಕ್ತ ಮಾರಾಟದಲ್ಲಿ ಸುಧಾರಣೆಯನ್ನು ಕಂಡಿದೆ. ಇದೀಗ ಹ್ಯುಂಡೈ ಕಂಪನಿಯು ಕಾರುಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ತಮ್ಮ ಪ್ರಮುಖ ಮಾದರಿಗಳಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಯಾವುದೆಲ್ಲಾ ಕಾರುಗಳಿಗೆ ಎಷ್ಟು ರಿಯಾಯಿತಿಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಇಲ್ಲಿವೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಹ್ಯುಂಡೈ ಟಕ್ಸನ್

ಹ್ಯುಂಡೈ ಟಕ್ಸನ್ ಎಸ್‍‍ಯು‍ವಿ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದ್ದಾರೆ. ಟಕ್ಸನ್ ಎಸ್‍‍ಯು‍ವಿ ಮಾರಾಟದಲ್ಲಿ ಕುಸಿತ ಕಂಡಿರುವುದರಿಂದ ನಗದು ರಿಯಾಯಿತಿ, ವಿನಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿ ಒಟ್ಟು ರೂ.2.65 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಈ ಎಸ್‍‍ಯು‍ವಿ ಎರಡೂ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಇದು 2.0 ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಗಿದೆ. ಎರಡು ಎಂಜಿನ್‍‍ನೊಂದಿಗೆ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಟಾಪ್ ಎಂಡ್ ಡೀಸೆಲ್ ಆವೃತ್ತಿಯು ಆಟೋ ಅಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಎಸ್‍‍ಯು‍ವಿಯು ಜೀಪ್ ಕಂಪಾಸ್, ಹೋಂಡಾ ಸಿಆರ್-ವಿ ಮತ್ತು ಫೋಕ್ಸ್ ವ್ಯಾಗನ್ ಟಿಗುವಾನ್ ಎಸ್‍‍ಯು‍ವಿಗಳಿಗೆ ಪೈಪೋಟಿ ನೀಡಲಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಹ್ಯುಂಡೈ ಎಲಾಂಟ್ರ

ಹ್ಯುಂಡೈ ಕಂಪನಿಯು ಕಳೆದ ತಿಂಗಳು ಎಲಾಂಟ್ರವನ್ನು ಬಿಎಸ್-6, 2.0 ಲೀಟರ್ ಪೆಟ್ರೋಲ್ ಎಂಜಿ‍ನ್‍ ಆಗಿ ನವೀಕರಿಸಲಾಗಿದೆ. ಇದೇ ಕಾರಣದಿಂದ ತಮ್ಮ ಹಳೆಯ ಬಿಎಸ್-4 ಮಾದರಿಗಳಿಗೆ ರೂ.2.4 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಬಿಎಸ್-4 ಸದ್ಯ ಮಾರುಕಟ್ಟೆಯಲ್ಲಿ ಸ್ಥಿರವಾಗಿ ಮಾರಾಟವಾಗುತ್ತಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಕೊರೊಲ್ಲಾ ಆಲ್ಟಿಸ್, ಹೋಂಡಾ ಸಿವಿಕ್ ಮತ್ತು ಸ್ಕೋಡಾ ಆಕ್ಟೇವಿಯಾ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಹ್ಯುಂಡೈ ಗ್ರ್ಯಾಂಡ್ ಐ10

ಹ್ಯುಂಡೈ ಗ್ರ್ಯಾಂಡ್ ಐ10 ಕಾರಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹ್ಯುಂಡೈ ಗ್ರ್ಯಾಂಡ್ ಐ10 ಕಾರಿಗೆ ವಿನಿಮಯ ಬೋನಸ್, ನಗದು ರಿಯಾಯಿತಿ ಮತ್ತು ಕಾರ್ಪೋರೇಟ್ ರಿಯಾಯಿತಿಗಳು ಸೇರಿ ಒಟ್ಟು ರೂ.85,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಹ್ಯುಂಡೈ ಗ್ರ್ಯಾಂಡ್ ಐ10 1.2 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಆಟೋಮ್ಯಾಟಿಕ್ ಮತ್ತು 4 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಹ್ಯುಂಡೈ ವೆರ್ನಾ

ಸೆಡಾನ್‍ ಸೆಗೆಮೆಂಟ್‍ನಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ವೆರ್ನಾ ಸೆಡಾನ್ ಆವೃತ್ತಿಯು ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ. ಕಾರು ಮಾರಾಟವು ಹೆಚ್ಚಿಸುವ ಉದ್ದೇಶದಿಂದ ಆಕರ್ಷಕ ರಿಯಾಯಿತಿಯನ್ನು ನೀಡಲಾಗಿದೆ. ಹ್ಯುಂಡೈ ವೆರ್ನಾ ಕಾರಿಗೆ ಬರೊಬ್ಬರಿ ರೂ.80,000 ರಿಯಾಯಿತಿಯನ್ನು ಘೋಷಿಸಲಾಗಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಹ್ಯುಂಡೈ ಐ20

ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20 ಜನಪ್ರಿಯ ಮಾದರಿಯಾಗಿದೆ. ಮುಂದಿನ ವರ್ಷದಲ್ಲಿ ಹೊಸ ಜನರೇಷನ್ ಐ20 ಬಿಡುಗಡೆಯಾಗಲಿದೆ. ಇದರಿಂದಾಗಿ ಪ್ರಸ್ತುತ ಜನರೇಷನ್ ಮಾದರಿಯಾದ ಹೈ ಸ್ಪೆಕ್ ಸ್ಪೋಟ್ಸ್ ಪ್ಲಸ್ ಮತ್ತು ಅಸ್ತಾ(ಒ)ಗಳಿಗೆ ರೂ.80,000ಗಳವರೆಗೆ ರಿಯಾಯಿತಿ ನೀಡಿದೆ. ಮ್ಯಾಗ್ನಾ ಪ್ಲಸ್ ಮಾದರಿಗೆ ರೂ.50,000 ರಿಯಾಯಿತಿಯನ್ನು ನೀಡಿದೆ. ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಎಂಜಿನ್‍‍ನೊಂದಿಗೆ ಮ್ಯಾನುವಲ್ ಮತ್ತು ಸಿವಿಟಿ ಆಟೋ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹ್ಯುಂಡೈ ಐ20 ಕಾರು ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಝಾ, ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಕಳೆದ ವರ್ಷ ಹೊಸ ಮಾದರಿಯನ್ನು ಬಿಡುಗಡೆಗೊಳಿಸುವುದರ ಮೂಲಕ ಸ್ಯಾಂಟ್ರೊ ಕಾರುಗಳನ್ನು ಮತ್ತೊಮ್ಮೆ ಮಾರುಕಟ್ಟೆಗೆ ತಂದರು. ಸ್ಯಾಂಟ್ರೊ ಕಾರು ಮಾರುತಿ ಸುಜುಕಿ ವ್ಯಾಗನ್‍ಆರ್ ಮತ್ತು ಟಾಟಾ ಟಿಯಾಗೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿವೆ. ಈ ಕಾರಿಗೆ ವಿನಮಯ ಬೋನಸ್, ಹೆಚ್ಚುವರಿ ನಗದು ಮತ್ತು ಕಾರ್ಪೋರೇಟ್ ರಿಯಾಯಿತಿಗಳು ಸೇರಿದಂತೆ ಒಟ್ಟು ರೂ.70,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ

ಹ್ಯುಂಡೈ ಐ20 ಆಕ್ಟಿವ್

ಹ್ಯುಂಡೈ ಐ20 ಆಕ್ಟಿವ್ ಕಾರಿಗೆ ರೂ.40,000 ರಿಯಾಯಿತಿಯನ್ನು ಘೋಷಿಸಲಾಗಿದೆ. ಹುಂಡೈ ಹೊಸ ಬಿಎಸ್-6 ಐ20 ಆಕ್ಟಿವ್ ಕಾರನ್ನು ಬಿಡುಗಡೆಗೊಳಿಸಲಾಗಿದೆ. ಹೊಸ ಹ್ಯುಂಡೈ ಐ20 ಆಕ್ಟಿವ್ ಅನ್ನು ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್ ಡ್ಯುಯಲ್ ಟೋನ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಎಲ್ಲಾ ಮೂರು ರೂಪಾಂತರಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಆಯ್ಕೆಗಳನ್ನು ಒಳಗೊಂಡಿದೆ.

Most Read Articles

Kannada
English summary
Up to Rs 2.65 lakh off on Hyundai Tucson, Grand i10, i20, Santro and more - Read in Kannada
Story first published: Friday, November 8, 2019, 18:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X