ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸುವ ಸಂಬಂಧ ಫೇಮ್ 2 ಯೋಜನೆಯನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರವು ಮತ್ತೊಂದು ಕಡೆಗೆ ಬಿಎಸ್ 4 ಎಂಜಿನ್ ವಾಹನ ಉತ್ಪಾದನೆ ಮತ್ತು ಮಾರಾಟಕ್ಕೆ ಬ್ರೇಕ್ ಹಾಕುತ್ತಿದ್ದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಬಿಎಸ್-6 ಎಂಜಿನ್ ಮಾದರಿಯನ್ನು ಜಾರಿಗೆ ತರುತ್ತಿದೆ. ಹೀಗಾಗಿ ಬಹುತೇಕ ವಾಹನ ಸಂಸ್ಥೆಗಳು ಹೊಸ ನಿಯಮಕ್ಕೆ ಅನುಗುಣವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಿರದ ಡೀಸೆಲ್ ಎಂಜಿನ್‌ ಆಯ್ಕೆ ಕೈಬಿಡುತ್ತಿವೆ.

ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ವಾಯು ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಬಿಎಸ್-4 ಎಂಜಿನ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಮುಂದಿನ 2020ರ ಏಪ್ರಿಲ್ 1 ರಿಂದಲೇ ನಿಷೇಧಗೊಳಿಸಿ ಬಿಎಸ್-6 ಜಾರಿಗೆ ತರಲಾಗುತ್ತಿದ್ದು, ಮಾರುತಿ ಸುಜುಕಿ ಸೇರಿದಂತೆ ಹಲವು ಸಂಸ್ಥೆಗಳು ಬಿಎಸ್-6 ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡುವುದಾಗಿ ಸುಳಿವು ಕೊಟ್ಟಿವೆ. ಆದ್ರೆ ಈ ಬಗ್ಗೆ ದಿಟ್ಟ ಹೆಜ್ಜೆಯಿಟ್ಟಿರುವ ಹ್ಯುಂಡೈ ಸಂಸ್ಥೆಯು ಯಾವುದೇ ಕಾರಣಕ್ಕೂ ಡೀಸೆಲ್ ಎಂಜಿನ್ ಆಯ್ಕೆ ನಿಲ್ಲಿಸದೇ ಬಿಎಸ್-6 ನಿಯಮಾವಳಿಗಳಿಗೆ ಅನುಗುಣವಾಗಿ ಹೊಸ ಡೀಸೆಲ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವಾಗಿದೆ ಹೇಳಿಕೊಂಡಿದೆ.

ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ಬಿಎಸ್-6 ನಿಯಮದ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿರುವ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳ ಡೀಸೆಲ್ ಎಂಜಿನ್‌ಗಳು ಹೊಸ ನಿಯಮವನ್ನು ಪಾಲಿಸುವಲ್ಲಿ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಮರುಅಭಿವೃದ್ಧಿ ಮಾಡಬೇಕು ಇಲ್ಲವೇ ಮಾರಾಟದಿಂದ ಹಿಂಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ಒಂದು ವೇಳೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಿದರೂ ಸಹ ಕಾರಿನ ಬೆಲೆಗಳು ಕನಿಷ್ಠ ರೂ. 1.50 ರಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ಇದರಿಂದಾಗಿ ಮಾರುತಿ ಸುಜುಕಿ ಸೇರಿದಂತೆ ಹಲವು ಅಗ್ಗದ ಕಾರು ಉನ್ಪತ್ನಗಳನ್ನು ಮಾರಾಟಮಾಡುವ ಕಾರು ಸಂಸ್ಥೆಗಳಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಲಿದ್ದು, ಕಾರುಗಳ ಬೆಲೆಗಳನ್ನು ಒಂದೇ ಬಾರಿಗೆ ರೂ.1.50 ಲಕ್ಷ ರೂ. 2 ಲಕ್ಷ ಹೆಚ್ಚಳ ಮಾಡಿದ್ದಲ್ಲಿ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ಇದೇ ಕಾರಣಕ್ಕೆ ಜಾಣ್ಮೆಯ ಹೆಜ್ಜೆಯಿಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿ ಕಾರು ಮಾದರಿಯಲ್ಲೂ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳನ್ನು ಹೆಚ್ಚಿಸುತ್ತಿದ್ದು, 2020ರ ಏಪ್ರಿಲ್ ವೇಳೆ ಸಂಪೂರ್ಣವಾಗಿ ಡೀಸೆಲ್ ಎಂಜಿನ್ ಆಯ್ಕೆಯನ್ನು ನಿಲ್ಲಿಸಲು ಪ್ಲ್ಯಾನ್ ಮಾಡಿಕೊಂಡಿದೆ.

ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ಆದ್ರೆ ಇದೇ ಅವಕಾಶವನ್ನು ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿರುವ ಹ್ಯುಂಡೈ ಸಂಸ್ಥೆಯು ಬೆಲೆ ಹೆಚ್ಚಳವಾದರೂ ಸರಿ ಡೀಸೆಲ್ ಎಂಜಿನ್ ಮೇಲೆ ಅವಲಂಬಿತವಾಗಿರುವ ಗ್ರಾಹಕರನ್ನು ತನ್ನತ್ತ ಸೆಳೆಯುವ ನೀರಿಕ್ಷೆಯಲ್ಲಿದ್ದು, ಬಿಎಸ್-6 ನಿಯಮದ ಪ್ರಕಾರವೇ ಹೊಸ ಡೀಸೆಲ್ ಎಂಜಿನ್ ಸಿದ್ದಪಡಿಸುವುದಾಗಿ ಹೇಳಿಕೊಂಡಿದೆ.

MOST READ: ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ಇತ್ತೀಚೆಗೆ ಬಿಡುಗಡೆಯಾದ ವೆನ್ಯೂ ಕಾರಿನಲ್ಲೂ ಪೆಟ್ರೋಲ್ ಎಂಜಿನ್ ಆಯ್ಕೆಗೆಯೇ ಹೆಚ್ಚಿನ ಒತ್ತು ನೀಡಿರುವ ಹ್ಯುಂಡೈ ಸಂಸ್ಥೆಯು ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ಯೋಜನೆ ರೂಪಿಸುತ್ತಿದ್ದು, ಡೀಸೆಲ್ ಎಂಜಿನ್ ಹೆಚ್ಚು ಅವಲಂಬನೆಯಾಗದೆ ಹಂತ ಹಂತವಾಗಿ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯತ್ತ ಗಮನಹರಿಸಲಿದೆ.

ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ಇನ್ನು ಬಿಎಸ್-6 ವೈಶಿಷ್ಟ್ಯತೆಯನ್ನು ಹೊಂದಲಿರುವ ಹೊಸ ಡೀಸೆಲ್ ಎಂಜಿನ್‌ಗಳು ಸದ್ಯ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್‌ಗಿಂತ ಹೆಚ್ಚು ಕಾರ್ಯಕ್ಷಮತೆ, ಉತ್ತಮ ಪರ್ಫಾಮೆನ್ಸ್ ಜೊತೆ ಮೈಲೇಜ್ ಪ್ರಮಾಣದಲ್ಲೂ ಅಧಿಕವಾಗಿರಲಿವೆ.

MOST READ:ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಗಣಿ ಮೆತ್ತಿದ ಅಸಾಮಿ..!

ಡೀಸೆಲ್ ಎಂಜಿನ್ ಆಯ್ಕೆಯನ್ನು ಬಿಡುವುದಿಲ್ಲ ಎಂದ ಹ್ಯುಂಡೈ

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಹೊಗೆ ಉಗುಳುವ ಪ್ರಮಾಣದಲ್ಲೂ ಈಗಿರುವ ಡೀಸೆಲ್ ಎಂಜಿನ್‌ಗಳಿಂತಲೂ ಶೇ.25 ರಷ್ಟು ಕಡಿತಗೊಳ್ಳಲಿದ್ದು, ಬೆಲೆ ದುಬಾರಿಯಾಗಿ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತೆ ಎನ್ನುವ ಒಂದೇ ಕಾರಣಕ್ಕೆ ಬಹುತೇಕ ಸಂಸ್ಥೆಗಳು ಡೀಸೆಲ್ ಎಂಜಿನ್‌ಗೆ ಗುಡ್ ಬೈ ಹೇಳುತ್ತಿವೆ. ಆದ್ರೆ ಹ್ಯುಂಡೈ ಮಾತ್ರ ಡೀಸೆಲ್ ಎಂಜಿನ್ ಮುಂದುವರಿಸುವ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನಬಹುದು.

Article Published On: Thursday, May 23, 2019, 19:41 [IST]
English summary
Hyundai Confirms Diesel Engine Upgradation to BS-VI Norms — Will Not Discontinue Diesel Engines. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+