ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಚೆನ್ನಾಗಿರೋ ಒಂದು ಕಾರು ಖರೀದಿ ಮಾಡುವುದು ಅಂದ್ರೆ ಸುಮ್ಮನೆನಾ? ಅದಕ್ಕೆ ಲೋನ್ ಬೇಕು, ನಂತರ ಪ್ರತಿ ತಿಂಗಳು ಇಎಂಐ ಕಟ್ಟುಬೇಕು. ಜೊತೆಗೆ ಮೆಂಟೆನೆನ್ಸ್ ಖರ್ಚು, ಇನ್ಸುರೆನ್ಸ್ ಹೀಗೆ ಎಲ್ಲಾ ಸೇರಿ ಸಾಕು ಸಾಕಾಗಿ ಹೋಗುತ್ತೆ. ಆದ್ರೆ ಇನ್ಮುಂದೆ ಆ ಚಿಂತೆ ಬೇಡ ಅನ್ನುತ್ತಿರುವ ಹ್ಯುಂಡೈ ಸಂಸ್ಥೆಯು ಲೋನ್, ಇಎಂಐ ತಲೆಬಿಸಿಯಿಲ್ಲದೆಯೇ ಕಾರು ಮಾಲೀಕರಾಗುವ ಅವಕಾಶವನ್ನು ನೀಡುತ್ತಿದೆ.

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಹೌದು, ಪ್ರತಿಯೊಬ್ಬರಿಗೂ ಸ್ವಂತಕ್ಕೆ ಸಣ್ಣದಾದ್ರು ಒಂದು ಕಾರನ್ನು ಹೊಂದಿರಲೇಬೇಕೇಂಬ ಆಸೆ ಇದ್ದೆ ಇರುತ್ತೆ. ಆದ್ರೆ ಹಣಕಾಸಿನ ವಿಚಾರಕ್ಕೆ ಬಂದಾಗ ಅದು ಕಷ್ಟ ಸಾಧ್ಯ. ಈ ಹಿನ್ನೆಲೆ ಹೊಸ ಪರಿಕಲ್ಪನೆಯೊಂದನ್ನು ಜಾರಿಗೆ ತರುತ್ತಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ನಿರ್ದಿಷ್ಟ ಪ್ರಮಾಣದ ದರಗಳೊಂದಿಗೆ ನಿಮಗೆ ಇಷ್ಟದ ಕಾರುಗಳನ್ನು ಒದಗಿಸುವ ಲೀಸ್‌ ಯೋಜನೆಗೆ ಚಾಲನೆ ನೀಡಿದೆ.

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಇತ್ತೀಚೆಗೆ ಸ್ವಂತ ಕಾರು ಖರೀದಿಗಿಂತ ಬಾಡಿಗೆ ಅಥವಾ ಲೀಸ್‌ಗೆ ಕಾರುಗಳನ್ನು ಹೊಂದುವ ಪರಿಪಾಠ ಹೆಚ್ಚುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿರುವ ಹ್ಯುಂಡೈ ಸಂಸ್ಥೆಯು ಎಎಲ್‌ಡಿ ಆಟೋಮೆಟಿವ್ ಸಂಸ್ಥೆಯ ಜೊತೆಗೂಡಿ ಲೀಸ್ ಆಧಾರದ ಮೇಲೆ ನಿಮ್ಮ ಇಷ್ಟದ ಕಾರುಗಳನ್ನು ಒದಗಿಸಲು ಮುಂದಾಗಿದೆ.

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಹೊಸ ಯೋಜನೆಯ ಮೂಲಕ ಎಂಟ್ರಿ ಲೆವಲ್ ಕಾರು ಮಾದರಿಯಾದ ಸ್ಯಾಂಟ್ರೋ ಮಾದರಿಯಿಂದ ಹೈ ಎಂಡ್ ಮಾದರಿಯಾದ ಟಕ್ಸನ್ ಎಸ್‌ಯುವಿ ತನಕವೂ ಲೀಸ್‌‌ಗೆ ನೀಡಲಿದ್ದು, ತಿಂಗಳು, ವರ್ಷದ ಆಧಾರ ಮೇಲೆ ಕಾರಿನ ಮಾಲೀಕತ್ವವನ್ನು ಹೊಂದಬಹುದು.

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಲೀಸ್ ಸಂದರ್ಭದಲ್ಲಿ ಕಾರಿನ ವಿಮೆ, ನಿರ್ವಹಣಾ ವೆಚ್ಚ, ರಸ್ತೆ ತೆರಿಗೆ, ಅಪಘಾತ ನಿರ್ವಹಣೆ ಸೇರಿದಂತೆ ಆನ್ ರೋಡ್ ಅಸಿಸ್ಟೆನ್ಸ್ ಸೌಲಭ್ಯ ಸಿಗಲಿದ್ದು, ದೇಶದ ಯಾವುದೇ ಮೂಲೆಯಲ್ಲಿದ್ದರು ನಿಮ್ಮ ಅವಶ್ಯಕತೆಗೆ ಅನುಗಣವಾಗಿ ನೆರವು ಸಿಗುತ್ತೆ. ಹೀಗಿರುವಾಗ ಸ್ವಂತಕ್ಕೆ ಕಾರು ಖರೀದಿ ಮಾಡಿ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುವುದಕ್ಕಿಂತ ನಿಮಗೆ ಇಷ್ಟವಾದ ಕಾರನ್ನು ಇಂತಿಷ್ಟ ತಿಂಗಳಿಗೆ ಅಂತಾ ಲೀಸ್‌ಗೆ ಪಡೆದು ಬೇಡವೆಂದಾಗ ವಾಪಸ್ ನೀಡಲು ಇದು ಸಹಕಾರಿಯಾಗಿದೆ.

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಜೊತೆಗೆ ಸ್ವಂತಕ್ಕೆ ಕಾರನ್ನು ಖರೀದಿ ಮಾಡಿದಾಗ ಪದೇ ಪದೇ ಕಾರು ಬದಲಿ ಮಾಡುವುದು ಅಷ್ಟು ಸುಲಭವಲ್ಲ. ಯಾಕೆಂದ್ರೆ ಪ್ರತಿ ಬಾರಿಯೂ ಕಾರು ಬದಲಿಸಲು ಹೋದಾಗಲೂ ನೀವು ಈ ಹಿಂದೆ ಖರೀದಿ ಮಾಡಿದ ಕಾರಿನ ಬೆಲೆ ಕಳೆದುಕೊಂಡು ನಷ್ಟದಲ್ಲಿ ಸುಳಿಯಲ್ಲಿ ಸಿಲುಕುವಿರಿ.

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಹೀಗಾಗಿ ಲೀಸ್‌ ಆಧಾರದ ಮೇಲೆ ಕಾರು ಮಾಲೀಕತ್ವವನ್ನು ಹೊಂದುವುದು ಒಂದು ಉತ್ತಮ ಮಾರ್ಗ ಎನ್ನಬಹುದಾಗಿದ್ದು, ಮಾರುಕಟ್ಟೆಯಲ್ಲಿ ಬರುವ ಹೊಸ ಬ್ರಾಂಡ್ ಕಾರುಗಳನ್ನು ಆಗಾಗ ಬದಲಿಸಲು ಇಲ್ಲಿ ಅವಕಾಶ ಸಿಗುತ್ತೆ.

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಇದರಿಂದ ವಿದೇಶಿಗಳಲ್ಲಿ ಇದೀಗ ಲೀಸ್ ಮೇಲೆ ಕಾರು ಮಾಲೀಕ್ವ ಹೊಂದುವುದು ಸಾಮಾನ್ಯವಾಗಿದ್ದು, ಹೊಸ ಕಾರುಗಳ ಮಾರಾಟಕ್ಕಿಂತ ಲೀಸ್ ಆಧಾರ ಮೇಲೆ ಕಾರನ್ನು ಒದಗಿಸುವುದೇ ಒಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಈ ಪರಿಕಲ್ಪನೆ ಮೇಲೆ ಭಾರತದಲ್ಲೂ ಈಗಾಗಲೇ ಹಲವಾರು ಆಟೋಮೆಟಿವ್ ಸಂಸ್ಥೆಗಳು ಲೀಸ್ ಆಧಾರದ ಮೇಲೆ ಗ್ರಾಹಕರಿಗೆ ಅವರ ನೆಚ್ಚಿನ ಕಾರುಗಳನ್ನು ಒದಗಿಸುತ್ತಿದ್ದು, ಎಎಲ್ ‌ಡಿ ಆಟೋಮೆಟಿವ್ ಸಂಸ್ಥೆಯು ಹ್ಯುಂಡೈ ಜೊತೆ ಇದೀಗ ಮಹತ್ವದ ಯೋಜನೆಗಾಗಿ ಕೈಜೋಡಿಸಿದೆ.

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಹೊಸ ಒಪ್ಪಂದದ ಪ್ರಕಾರ, ಎಎಲ್ ‌ಡಿ ಆಟೋಮೆಟಿವ್ ಸಂಸ್ಥೆಯು ಮುಂದಿನ ದಿನಗಳಲ್ಲಿ ಹ್ಯುಂಡೈ ನಿರ್ಮಾಣದ ಕಾರನ್ನೇ ಗ್ರಾಹಕರಿಗೆ ಒದಗಿಸಲಿದ್ದು, ಇದರಿಂದ ಹ್ಯುಂಡೈ ಕಾರುಗಳ ನಿರ್ಮಾಣ ಪ್ರಮಾಣವು ಹೆಚ್ಚುವುದಲ್ಲದೇ ಹ್ಯುಂಡೈ ಬ್ರಾಂಡ್ ಅನ್ನು ಮತ್ತಷ್ಟು ಜನಪ್ರಿಯಗೊಳಿಸುವುದು ಈ ಯೋಜನೆಯ ಪ್ರಮುಖ ಭಾಗವಾಗಿದೆ.

MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಟೊಯೊಟಾ ಕಾರು ಮಾಲೀಕನ ಕಥೆ ಹರೋಹರ

ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

ಒಟ್ಟಿನಲ್ಲಿ ಹ್ಯುಂಡೈ ಸಂಸ್ಥೆಯು ಜಾರಿಗೆ ತಂದಿರುವ ಈ ವಿನೂತನ ಯೋಜನೆಯು ಕಾರು ಖರೀದಿಗೆ ಕಷ್ಟಪಡುತ್ತಿರುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದ್ದು, ಲೀಸ್ ಆಧಾರದ ಮೇಲೆ ಕಾರು ಖರೀದಿ ಮಾಡಿದರೂ ಸಹ ಅದಕ್ಕೂ ಸಹ ಹಣಕಾಸಿನ ನೆರವು ಕೂಡಾ ಸಿಗಲಿದೆ. ಹೀಗಾಗಿ ಇದು ಮುಂಬರುವ ದಿನಗಳಲ್ಲಿ ಈ ಯೋಜನೆ ಮತ್ತಷ್ಟು ಜನಪ್ರಿಯತೆ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Hyundai Offers Leasing Options Across Entire Fleet — No Loans, No Maintenance. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X