ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಹ್ಯುಂಡೈ ಸಂಸ್ಥೆಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಕ್ರೆಟಾ ಕಾರಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಎಡಿಷನ್ ಕೆಲವು ತಾಂತ್ರಿಕ ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಕ್ರೆಟಾ ಕಾರು ಸದ್ಯ ಟಾಪ್ 10 ಕಾರು ಮಾರಾಟದಲ್ಲಿ ಪಟ್ಟಿಯಲ್ಲಿ ಉತ್ತಮ ಸ್ಥಾನದೊಂದಿಗೆ ಮುನ್ನುಗ್ಗುತ್ತಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ ಮಾಡಿದೆ. ಸಾಮಾನ್ಯ ಮಾದರಿಗಿಂತ ಹಲವು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಸ್ಪೋರ್ಟ್ಸ್ ಎಡಿಷನ್ ಕ್ರೆಟಾ ಮಾದರಿಯು 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಕಾರು ಕೇವಲ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರವೇ ಮಾರಾಟಕ್ಕಿದ್ದು, ಸೀಮಿತ ಅವಧಿಗಾಗಿ ಹೊಸ ಎಡಿಷನ್ ಬಿಡುಗಡೆ ಮಾಡಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಕಾರು ಪೆಟ್ರೋಲ್ ಆವೃತ್ತಿಗೆ ರೂ.12.78 ಲಕ್ಷ ಮತ್ತು ಡೀಸೆಲ್ ಆವೃತ್ತಿಗೆ ರೂ. 14.13 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಇದು ಎಸ್ಎಕ್ಸ್ ಆವೃತ್ತಿಗಿಂತ ರೂ. 60 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಬೆಲೆ ಹೆಚ್ಚಳವಾದರೂ ಅದಕ್ಕೆ ತಕ್ಕಂತೆ ಹೊಸ ಸ್ಪೋರ್ಟ್ಸ್ ಎಡಿಷನ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಸ್ಪೋರ್ಟಿ ವಿನ್ಯಾಸಕ್ಕಾಗಿ ಸ್ಮೋಕ್ಡ್ ಎಫೆಕ್ಟ್ ವಿನ್ಯಾಸ ಹೊಂದಿರುವ ಪ್ರೊಜೆಕ್ಟರ್ ಲೈಟ್ಸ್, ಡಾರ್ಕ್ ಕ್ರೋಮ್, ಸಿಲ್ವರ್ ರೂಫ್ ರೈಲ್ಸ್, ಸ್ಕೀಡ್ ಪ್ಲೇಟ್, ಫ್ಲಕ್ಸ್ ಡ್ಯುಯಲ್ ಎಕ್ಸಾಸ್ಟ್, ಮಿರರ್ ಕೆಸಿಂಗ್ ಮತ್ತು ರಿಯರ್ ಸ್ಪಾಯ್ಲರ್ ಸೌಲಭ್ಯವು ಗಮನಸೆಳೆಯುತ್ತೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಇನ್ನುಳಿದಂತೆ ಸಾಮಾನ್ಯ ಕಾರುಗಳಲ್ಲಿನ ತಾಂತ್ರಿಕ ಸೌಲಭ್ಯಗಳನ್ನೇ ಸ್ಪೋರ್ಟ್ಸ್ ವರ್ಷನ್‌ನಲ್ಲೂ ಮುಂದುವರಿಸಲಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 7-ಇಂಚಿನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬೆಸ್ ವೆರಿಯೆಂಟ್‌ಗಳಿಂದಲೇ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೈಡ್ ಸೀಟುಗಳು, ಆರ್ಮ್ ರೆಸ್ಟ್, ಲೆದರ್ ವ್ಯಾರ್ಪ್ ಸ್ಟಿರಿಂಗ್ ವೀಲ್ಹ್, ಎಸಿ ವೆಂಟ್ಸ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವು ಕ್ರೆಟಾ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಇದೀಗ ಬಿಡುಗಡೆಯಾಗಿರುವ ಸ್ಪೋರ್ಟ್ಸ್ ವರ್ಷನ್ ಕ್ರೆಟಾ ಕಾರು ಆಲ್ ಬ್ಲ್ಯಾಕ್ ಇಂಟಿರಿಯರ್, ಬ್ಲ್ಯಾಕ್ ಫ್ಯಾಬ್ರಿಕ್ ಸೀಟ್ ಸೌಲಭ್ಯವನ್ನು ಹೊಂದಿದ್ದು, ಫ್ಯಾಂಥಮ್ ಬ್ಲ್ಯಾಕ್ ಮತ್ತು ಪೋಲಾರ್ ವೈಟ್ ಬಣ್ಣಗಳಲ್ಲಿ ಮಾತ್ರವೇ ಸ್ಪೋರ್ಟ್ಸ್ ಎಡಿಷನ್ ಖರೀದಿಸಬಹುದಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಇನ್ನು ಸಾಮಾನ್ಯ ಕ್ರೆಟಾ ಆವೃತ್ತಿಯಲ್ಲಿ 1.4-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಆವೃತ್ತಿಯನ್ನು ಮತ್ತು 1.6-ಲೀಟರ್ ಪೆಟ್ರೋಲ್ ಆವೃತ್ತಿಯನ್ನು ಖರೀದಿ ಮಾಡಬಹುದಾಗಿದ್ದು, ಎಲ್ಇಡಿ ಡಿಆರ್‍ಎಲ್‍‍ಗಳು, ರಿಯರ್ ಆರ್ಮ್‍ರೆಸ್ಟ್, ಇಂಟಿಗ್ರೆಟೆಡ್ ಕಪ್ ಹೋಲ್ಡರ್ಸ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ರಿಯರ್ ಪ್ಯಾಸೆಂಜರ್‍‍ಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್‍‍ರೆಸ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಹ್ಯುಂಡೈ ಕ್ರೆಟಾ ಕಾರಿನ ಪ್ರತಿ ಆವೃತ್ತಿಯಲ್ಲೂ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹೈ ಸ್ಪೀಡ್ ಅಲರ್ಟ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಅನ್ನು 2019ರ ಅಕ್ಟೋಬರ್‌ನಲ್ಲಿ ಜಾರಿಯಾಗಲಿರುವ ಹೊಸ ಸುರಕ್ಷಾ ನಿಯಮದ್ವನಯ ಉನ್ನಕರಿಸಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಇವುಗಳಲ್ಲದೇ ಇಂಪ್ಯಾಕ್ಟ್-ಸೆನ್ಸಿಂಗ್ ಆಟೋ ಡೋರ್ ಲಾಕ್, ಲೇನ್-ಚೇಂಜ್ ಇಂಡಿಕೇಟರ್, ಏಂಜಿನ್ ಇಮ್ಮೊಬಿಲೈಜರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ರಿಯರ್ ಡೀಫಾಗರ್, ಐಎಸ್ಒಫಿಕ್ಸ್ ಹಾಗೆಯೇ ಹ್ಯುಂಡೈ ಕ್ರೆಟಾ ಕಾರಿನ ಟಾಪ್ ಎಂಡ್ ಆವೃತ್ತಿಯಲ್ಲಿ 6 ಏರ್‍‍ಬ್ಯಾಗ್‍ ಸೌಲಭ್ಯವನ್ನು ನೀಡಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಎಡಿಷನ್ ಬಿಡುಗಡೆ

ಈ ಮೂಲಕ ಸದ್ಯ ಮಾರುಕಟ್ಟೆ ಅತ್ಯುತ್ತಮ ಬೇಡಿಕೆ ಪಡೆಯುತ್ತಿರುವ ಎಂಜಿ ಹೆಕ್ಟರ್ ಮತ್ತು ಬಿಡುಗಡೆಗಾಗಿ ಸಿದ್ದವಾಗಿರುವ ಕಿಯಾ ಸೆಲ್ಟೊಸ್ ಪರ್ಫಾಮೆನ್ಸ್ ಕಾರುಗಳಿಗೆ ಪೈಪೋಟಿಯಾಗಿ ಸ್ಪೋರ್ಟ್ಸ್ ವರ್ಷನ್ ರಸ್ತೆಗಿಳಿದಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯಲಿರುವ ಈ ಕಾರು ಸೀಮಿತ ಅವಧಿ ಮಾತ್ರವೇ ಖರೀದಿ ಲಭ್ಯವಿರಲಿದೆ.

Most Read Articles

Kannada
English summary
Hyundai Creta Sports Edition Launched In India — Prices Start At Rs 12.78 Lakh.
Story first published: Friday, August 2, 2019, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X