ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹ್ಯುಂಡೈ ಎಲಾಂಟ್ರಾ ಫೇಸ್‍ಲಿಫ್ಟ್
ಹ್ಯುಂಡೈ ಇಂಡಿಯಾ ಎಲಾಂಟ್ರಾ ಫೇಸ್‍ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಸೆಪ್ಟಂಬರ್ ಅಂತ್ಯದಲ್ಲಿ ಬಿಡುಗಡೆ ಮಾಡಲಿದೆ. ಈಗಾಗಲೇ ಹ್ಯುಂಡೈ ಎಲಾಂಟ್ರಾ ಫೇಸ್‍ಲಿಫ್ಟ್ ಕಾರನ್ನು ಡೀಸೆಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಾಗಿದೆ, ಆದರೆ ಈಗ ಕೇವಲ ಪೆಟ್ರೋಲ್ ಆಯ್ಕೆಯೊಂದಿಗೆ ಸೆಪ್ಟಂಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ.

ಹ್ಯುಂಡೈ ಈ ನಿರ್ಧಾರಕ್ಕೆ ಬರಲು ಕಾರಣ, ಎಲಾಂಟ್ರಾ ಫೇಸ್‍ಲಿಫ್ಟ್ ಡೀಸೆಲ್ ಆವೃತ್ತಿಯು ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ. ಎಕ್ಸಿಕ್ಯೂಟಿವ್ ಸೆಡಾನ್ ವಿಭಾಗದಲ್ಲಿ ಗ್ರಾಹಕರು ಪೆಟ್ರೋಲ್ ಎಂಜಿನ್ ಬಯಸುತ್ತಿದ್ದಾರೆ ಎಂದು ತಿಳಿದು ಡೀಸೆಲ್ ಇಂದ ಹಿಂದೆ ಸರಿದು ಪೆಟ್ರೋಲ್ ಎಂಜಿನ್‍ಗಳನ್ನು ಹೆಚ್ಚು ಅಭಿವೃದ್ಧಿ ಪಡಿಸುತ್ತಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಎಲಾಂಟ್ರಾ ಫೇಸ್‍ಲಿಫ್ಟ್ ಪೆಟ್ರೋಲ್ ಆಯ್ಕೆಯೊಂದಿರುವ ಕಾರು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ಹ್ಯುಂಡೈ ಎಲಾಂಟ್ರಾ ಕಾರುಗಳ ಮಾರಾಟ ಸಂಖ್ಯೆಯನ್ನು ನೋಡಿದಾಗ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಎಲಾಂಟ್ರಾ ಏಪ್ರೀಲ್-ಜುಲೈ ತಿಂಗಳಲ್ಲಿ ಒಟ್ಟು 214 ಯುನಿಟ್‍ಗಳು ಮಾರಾಟವಾಗಿದ್ದರೆ, ಕೇವಲ ಡೀಸೆಲ್ ಆಯ್ಕೆಯ ಎಲಾಂಟ್ರಾ ಕೇವಲ 90 ಯುನಿಟ್‍ಗಳು ಮಾತ್ರ ಮಾರಾಟವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಎಲ್ಲಾ ಮಾದರಿಗಳನ್ನು ಹೋಲಿಸಿದರೆ ಡೀಸೆಲ್ ಎಂಜಿನ್ ಕಾರುಗಳಿಗಿಂತ ಪೆಟ್ರೋಲ್ ಆಯ್ಕೆಯ ಕಾರುಗಳು ಹೆಚ್ಚು ಮಾರಾಟವಾಗಿವೆ.

ಹ್ಯುಂಡೈ ಎಲಾಂಟ್ರಾ ಕಳೆದ ಬಾರಿ ಬಿಡುಗಡೆಗೊಳಿಸಿದ ಅದೇ ಮಾದರಿಯ ಎಂಜಿನ್ ಅನ್ನು ಇದಕ್ಕೆ ಹೊಸ ಪೆಟ್ರೋಲ್ ಆಯ್ಕೆಯ ಎಲಾಂಟ್ರಾ ಫೇಸ್‍ಲಿಫ್ಟ್ ಅಳವಡಿಸಿದೆ. ಇದರಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ 150 ಬಿಎಚ್‍ಪಿ ಪವರ್ ಮತ್ತು 192 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕ ಎಂಜಿನ್ ಅಳವಡಿಸಲಾಗಿದೆ. ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಬಹುದು. ಆದರೆ ಕಂಪನಿ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಹ್ಯುಂಡೈ ದೇಶಿಯ ಮಾರುಕಟ್ಟೆಯಲ್ಲಿ ಡೀಸೆಲ್ ಎಂಜಿನ್‍ನ ಬೇಡಿಕೆಯನ್ನು ಅನುಸರಿಸಿ ನಂತರದ ಹಂತದಲ್ಲಿ ಡೀಸೆಲ್ ಪವರ್‍ಟ್ರೇನ್‍ನ್ನು ಮರಳಿ ತರಬಹುದು. ಆದರೆ ಪ್ರಸ್ತುತ ಮಾದರಿಯಲ್ಲಿ ಕಾಣಿಸಿಕೊಂಡೀರುವ ಅದೇ ಡೀಸೆಲ್ ಎಂಜಿನ್ ಆಗಿರುವುದಿಲ್ಲ ಎಂಬ ನಿರೀಕ್ಷೆ ಇದೆ. ಪ್ರಸ್ತುತ ಇರುವ ಡೀಸೆಲ್ ಎಂಜಿನ್ 1.6 ಲೀಟರ್ ಎಂಜಿನ್ ಹೊಂದಿದ್ದು, 128 ಬಿಎಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕಿಯಾ ಸೆಲ್ಟೋಸ್ 1.5 ಲೀಟರ್ ಡೀಸೆಲ್ ಪವರ್‍ಟ್ರೇನ್ ಹೊಸ ಎಂಜಿನ್ ಮಾದರಿಯಲ್ಲೇ ತರಬಹುದು.

ಕಿಯಾ ಸೆಲ್ಟೋಸ್ 1.5 ಲೀಟರ್ ಡೀಸೆಲ್ ಎಂಜಿನ್ ಈಗಾಗಲೇ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಪ್‍ಡೇಟ್ ಮಾಡಲಾಗಿದೆ. ಇದು ಎರಡು ಮಾದರಿಗಳಲ್ಲಿ ಲಭ್ಯವಿದ್ದು, ಅದರಲ್ಲಿ ಲೋವರ್-ಸ್ಪೆಕ್ ಮಾದರಿ 90 ಬಿಎಚ್‍ಪಿ ಉತ್ಪಾದಿಸಿದರೆ, ಟಾಪ್-ಸ್ಪೆಕ್ ಮಾದರಿ 115 ಬಿಎಚ್‍ಪಿ ಪವರ್ ಉತ್ಪಾದಿಸುತ್ತದೆ.

ಫೇಸ್‍ಲಿಫ್ಟ್ ಮಾದರಿಯಲ್ಲಿನ ಹೊರಭಾಗದಲ್ಲಿ ಮುಖ್ಯ ಬದಲಾವಣೆಗಳು ಯಾವುವೆಂದರೆ ಹೊಸ ಫ್ರಂಟ್ ಗ್ರಿಲ್, ಎಲ್‍ಇಡಿ(ಡಿಆರ್‍ಎಲ್) ಡೇಟೈಮ್ ರನ್ನಿಂಗ್ ಲೈಟ್ಸ್ ನೊಂದಿಗೆ ಮರುವಿನ್ಯಾಸ ಮಾಡಲಾದ ಹೆಡ್‍ಲ್ಯಾಂಪ್‍ಗಳು, ಮರುವಿನ್ಯಾಸಗೊಳಿಸಿದ ಫಾಗ್‍ಲ್ಯಾಂಪ್, ಹೊಸ ಅಲಾಯ್ ವ್ಹೀಲ್‍ಗಳು ಸೇರಿದೆ. ಕೆಲವು ವಿನ್ಯಾಸದಲ್ಲಿ ಬದಲಾವಣೆಗಳೊಂದಿಗೆ ಹಿಂಭಾಗದಲ್ಲಿರುವ ಬಂಪರ್ ಅನ್ನು ಸಹ ಸಣ್ಣ ಮಟ್ಟದಲ್ಲಿ ಪರಿಷ್ಕರಿಸಲಾಗಿದೆ. ಒಟ್ಟಾರೆಯಾಗಿ ಫೇಸ್‍ಲಿಫ್ಟ್ ಮಾದರಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಎಲಾಂಟ್ರಾ ಫೇಸ್‍ಲಿಫ್ಟ್ ಕಾರಿನ ಇಂಟಿರಿಯರ್‍ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‍ಪ್ಲೇ ಯೊಂದಿಗೆ ಹೊಸ 8.0 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‍ಪ್ಲೇ ಅಳವಡಿಸಿದ್ದಾರೆ. ಸೀಟ್‍ನಲ್ಲಿ ಸಣ್ಣ ಮಟ್ಟದ ಬದಲಾವಣೆ ಮಾಡಿದ್ದಾರೆ. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಅನ್ನು ಸೇರಿಸಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಎಲಾಂಟ್ರಾದ ಹೊಸ ಫೇಸ್‍ಲಿಫ್ಟ್ ನಲ್ಲಿ ಕಂಪನಿಯ ಪ್ರೀಮಿಯಂ ಸೆಡಾನ್‍ನ ಇತರ ಮಾದರಿಗಳಲ್ಲಿ ಇರುವ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಿದ್ದಾರೆ. ಹ್ಯುಂಡೈ ಎಲಾಂಟ್ರ ರೂ. 14 ರಿಂದ 19 ಲಕ್ಷ ದವರೆಗೂ ಬೆಲೆ ಹೊಂದಿರುವ ನಿರೀಕ್ಷೆ ಇದೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಹ್ಯುಂಡೈ ಸೇರಿದಂತೆ ಹಲವು ಜನಪ್ರಿಯ ಕಾರು ಉತ್ಪಾದಕರು ಡೀಸೆಲ್ ಎಂಜಿನ್‍ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಅಪ್‍ಡೇಟ್ ಮಾಡುತ್ತಿದ್ದಾರೆ. ಕೆಲವು ಉತ್ಪಾದಕರು ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದ್ದಾರೆ. ಯಾಕೆಂದರೆ ಬಿಎಸ್-4 ಎಂಜಿನ್ ಅನ್ನು ಬಿಎಸ್-6 ಎಂಜಿನ್‍ಗೆ ಅಪ್‍ಡೇಟ್‍ಗೊಳಿಸುವುದು ದುಬಾರಿಯಾಗಿದೆ. ಎಲಾಂಟ್ರಾ ಫೇಸ್‍ಲಿಫ್ಟ್ ಕಾರು ಹೋಂಡಾ ಸಿವಿಕ್, ಸ್ಕೋಡಾ ಆಕ್ಟೇವಿಯಾ ಮತ್ತು ಟೊಯೋಟಾ ಕೊರೊಲ್ಲಾ ಆಲ್ಟಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications