ಒಲಾಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲಿರುವ ಹ್ಯುಂಡೈ
ಹ್ಯುಂಡೈ ಕಂಪನಿಯು ಭವಿಷ್ಯದಲ್ಲಿನ ಎಲೆಕ್ಟ್ರಿಕ್ ವಾಹನಗಳಿಗಾಗಿ ಭಾರತದಲ್ಲಿ ದೊಡ್ಡ ಕ್ಯಾಬ್ ಸೇವೆಯನ್ನು ಒದಗಿಸುತ್ತಿರುವ ಒಲಾ ಕಂಪನಿಯ ಜೊತೆ ಕೈ ಜೋಡಿಸಲಿದೆ. ಲೈವ್ ಮಿಂಟ್ ವರದಿಗಳ ಪ್ರಕಾರ, ಹ್ಯುಂಡೈ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲು ಒಲಾ ಕಂಪನಿಯನ್ನು ಬಳಸಿಕೊಳ್ಳಲಿದೆ, ಈ ಮಾದರಿಯ ವಾಹನಗಳು 2021ರಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ.

ಹ್ಯುಂಡೈ ಕಂಪನಿಯು ತನ್ನ ಸ್ಮಾರ್ಟ್ ಇವಿ ಪ್ಲಾಟ್ ಫಾರಂನಡಿಯಲ್ಲಿ ಕ್ಯಾಬ್ ಸೇವೆಗಳಿಗಾಗಿಯೇ, ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಮೂಲಗಳ ಪ್ರಕಾರ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಮೊದಲ ಇವಿ ವಾಹನದ ಬಿಡುಗಡೆಯನ್ನು 2021ರ ವೇಳೆಗೆ ನಿರೀಕ್ಷಿಸಲಾಗುತ್ತಿದೆ. 2020ರ ವೇಳೆಗೆ ಬಿಡುಗಡೆಗೊಳಿಸುವ ಕುರಿತು ಯೋಜನೆ ಹಮ್ಮಕೊಳ್ಳಲಾಗಿದೆ.

ಅಧಿಕೃತ ಮೂಲಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಭಾರತದಲ್ಲಿ ವೈಯಕ್ತಿಕ ವಾಹನಗಳಿಗಿಂತ ಎಲೆಕ್ಟ್ರಿಕ್ ಕ್ಯಾಬ್ ವಾಹನಗಳ ಬಳಕೆಯು ಹೆಚ್ಚಲಿರುವ ಕಾರಣದಿಂದ ಹ್ಯುಂಡೈ ಕಂಪನಿಯು ಹೆಚ್ಚಿನ ಪ್ರಮಾಣದಲ್ಲಿ ಒಲಾದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳನ್ನು 2021ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಗಳಿದ್ದರೂ, ಹ್ಯುಂಡೈ ತನ್ನ ಸಾಮರ್ಥ್ಯದಿಂದ 2020ರ ವೇಳೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಹ್ಯುಂಡೈ ಕಂಪನಿಯು ಭಾರತದಲ್ಲಿ $300 ಮಿಲಿಯನ್ ಒಲಾದಲ್ಲಿ ಹೂಡಿಕೆ ಮಾಡುತ್ತಿರುವ ಬಗ್ಗೆ ವರದಿ ಮಾಡಲಾಗಿತ್ತು.

ಇದರ ಪ್ರಕಾರ ಹ್ಯುಂಡೈ ಮತ್ತು ಅದರ ಅಂಗ ಸಂಸ್ಥೆಯಾದ ಕಿಯಾ ಜೊತೆಯಾಗಿ ಸೇರಿ ಬೆಂಗಳೂರು ಮೂಲದ ಕ್ಯಾಬ್ ಸೇವಾ ಸಂಸ್ಥೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮತ್ತು ಚಾರ್ಜಿಂಗ್ ಸ್ಟೇಷನ್ ಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಒಪ್ಪಂದವಾಗಿತ್ತು. ನಂತರ ಈ ಎಲೆಕ್ಟ್ರಿಕ್ ವಾಹನಗಳನ್ನು ಒಲಾ ತನ್ನ ಸೇವೆಗೆ ಬಳಸಿಕೊಳ್ಳುವಂತೆ ನಿರ್ಧರಿಸಲಾಗಿತ್ತು. ವರದಿಗಳ ಪ್ರಕಾರ, ಎಲೆಕ್ಟ್ರಿಕ್ ಕಾರುಗಳನ್ನು ಪೂರೈಸಲು ಎರಡೂ ಬ್ರಾಂಡ್ ಹೆಸರುಗಳನ್ನು ಬಳಸಬೇಕೆ ಅಥವಾ ಒಂದೇ ಬ್ರಾಂಡ್‍ನ ಅಡಿಯಲ್ಲಿ ಪೂರೈಸಬೇಕೆ ಎಂಬುದನ್ನು ಹ್ಯುಂಡೈ ಕಂಪನಿಯೇ ನಿರ್ಧರಿಸಲಿದೆ.

ವಾಹನವು ಇನ್ನೂ ಉತ್ಪಾದನಾ ಹಂತದಲ್ಲಿರುವುದರಿಂದ ಈ ತೀರ್ಮಾನವನ್ನು ವಾಹನದ ಬಿಡುಗಡೆ ನಂತರ ಮಾಡಲಾಗುವುದು. ಕಂಪನಿಯ ವಕ್ತಾರರೊಬ್ಬರ ಪ್ರಕಾರ, ಭಾರತ ಮತ್ತು ಪ್ರಪಂಚದ ಬೇರೆ ಭಾಗಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮೊದಲಿಗೆ ಕ್ಯಾಬ್ ಸೇವೆಗಳಲ್ಲಿ ಬಳಸಿದ ನಂತರವೇ ಬೇರೆ ಕಮರ್ಷಿಯಲ್ ವಾಹನಗಳಲ್ಲಿ ಬಳಸುತ್ತಾರೆಂಬ ವಿಷಯವು ಹ್ಯುಂಡೈಗೂ ತಿಳಿದಿದೆ. ಒಲಾದಲ್ಲಿ ಮಾಡುತ್ತಿರುವ ಹೂಡಿಕೆಯಿಂದಾಗಿ ಹ್ಯುಂಡೈ ಕಂಪನಿಗೆ ತನ್ನ ವಾಹನಗಳನ್ನು ಪರೀಕ್ಷಿಸಲು ರೆಡಿ ಮೇಡ್ ಪ್ಲಾಟ್ ಫಾರಂ ಸಿಗುತ್ತದೆ.

ಒಲಾ ಕಂಪನಿಗೆ ಅಗ್ಗದ ದರದಲ್ಲಿ ಎಲೆಕ್ಟ್ರಿಕ್ ವಾಹನಗಳು ದೊರೆತು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಅನುಕೂಲವಾಗುತ್ತದೆ. ಹ್ಯುಂಡೈ, ಕೊನಾ ಎಲೆಕ್ಟ್ರಿಕ್ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವುದನ್ನು ಖಚಿತಪಡಿಸಿದೆ. ಹ್ಯುಂಡೈನ ಕೊನಾ ವಾಹನವು ಹ್ಯುಂಡೈ ಕಂಪನಿಯ ಮೊದಲ ಇವಿ ವಾಹನವಾಗಿರಲಿದ್ದು, ಈ ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
MOST READ: ಸೋರಿಕೆಯಾದ ಟೊಯೊಟಾ ಗ್ಲಾಂಝಾ ಇಂಟಿರಿಯರ್ಸ್ ಚಿತ್ರಗಳು

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹ್ಯುಂಡೈ ನ ಅಭಿಪ್ರಾಯದಲ್ಲಿ ಚಾಲ್ತಿಯಲ್ಲಿರುವ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವುದು, ಕ್ಯಾಬ್ ಸೇವೆಗಳಿಂದ ಶುರುವಾಗಲಿದೆ. ಆದ ಕಾರಣ ಹ್ಯುಂಡೈ ಒಲಾ ಕ್ಯಾಬ್ ಗಳ ಜೊತೆಯಲ್ಲಿ ಕೈ ಜೋಡಿಸಿದೆ. ಇದರಿಂದ ಭವಿಷ್ಯದಲ್ಲಿ ಯಾವ ರೀತಿಯ ಇವಿಗಳನ್ನು ಅಭಿವೃದ್ಧಿ ಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂಬುದರ ಬಗ್ಗೆ ಚಿತ್ರಣ ಸಿಗಲಿದೆ.


Click it and Unblock the Notifications