ರಿಕಾಲ್ ಆಗುತ್ತಿವೆ ಹ್ಯುಂಡೈ ಗ್ರ್ಯಾಂಡ್ ಐ10, ಎಕ್ಸೆಂಟ್ ಕಾರು
ಹ್ಯುಂಡೈ ಇಂಡಿಯಾ ತನ್ನ ಗ್ರ್ಯಾಂಡ್ ಐ10 ಮತ್ತು ಎಕ್ಸೆಂಟ್ ಮಾದರಿಗಳ ಸಿಎನ್‍ಜಿ ರೂಪಾಂತರಗಳನ್ನು ರಿಕಾಲ್ ಮಾಡಲಾಗುತ್ತಿದೆ. ಸಿಎನ್‍ಜಿ ಫಿಲ್ಟರ್ ಅಸೆಂಬ್ಲಿ ಯುನಿಟ್‍ನಲ್ಲನ ಸಮಸ್ಯೆಗೆ ಸಂಬಂಧಿಸದಂತೆ ಹ್ಯುಂಡೈ ಗ್ರ್ಯಾಂಡ್ ಐ10 ಮತ್ತು ಎಕ್ಸೆಂಟ್ ಸಿಎನ್‍ಜಿ ರೂಪಾಂತರಗಳನ್ನು ಪರಿಶೀಲಿಸಲಾಗುತ್ತದೆ.

ಟೀಮ್ ಬಿಹೆಚ್‍ಪಿ ಪ್ರಕಾರ, ಕಂಪನಿಯು ಸುಮಾರು 16,409 ಯುನಿಟ್‍ಗಳನ್ನು ರಿಕಾಲ್ ಮಾಡಲಿದೆ. ಇವುಗಳಲ್ಲಿ 2019ರ ಆಗಸ್ಟ್ 1ರಿಂದ ಸೆಪ್ಟೆಂಬರ್ 30ರವರೆಗೆ ತಯಾರಾದ ಎಲ್ಲಾ ಮಾದರಿಗಳು ಸೇರಿವೆ. ಹ್ಯುಂಡೈ ಎಕ್ಸೆಂಟ್ ಮತ್ತು ಐ10 ಮಾದರಿಗಳ ಸಿಎನ್‍ಜಿ ರೂಪಾಂತರಗಳಲ್ಲಿನ ಸಮಸ್ಯೆಯನ್ನು ಸರಿಪಡಿಸಲು ಕಂಪನಿಯು ಪ್ರತ್ಯೇಕವಾಗಿ ಮಾಲೀಕರನ್ನು ಸಂಪರ್ಕಿಸುತ್ತದೆ ಎಂದು ವರದಿಯಾಗಿದೆ.

ಹ್ಯುಂಡೈ ನವೆಂಬರ್ 25 ರಿಂದ ಗ್ರಾಹಕರನ್ನು ಸಂಪರ್ಕಿಸಲು ಪ್ರಾರಂಭಿಸುತ್ತದೆ. ಎರಡೂ ಮಾದರಿಗಳಲ್ಲಿನ ಸಿಎನ್‍ಜಿ ಫಿಲ್ಟರ್ ಜೋಡಣೆಯನ್ನು ಗ್ರಾಹಕರಿಗೆ ಹ್ಯುಂಡೈ ಕಂಪನಿಯು ಉಚಿತವಾಗಿ ನೀಡಲಿದೆ. ಹ್ಯುಂಡೈ ಗ್ರ್ಯಾಂಡ್ ಐ10 ಮತ್ತು ಎಕ್ಸೆಂಟ್ ಸಿಎನ್‍ಜಿ ಮಾದರಿಗಳು 1.2 ಲೀಟರ್ ಎಂಜಿನ್ ಅನ್ನು ಹೊಂದಿದೆ. ಎರಡೂ ಮಾದರಿಗಳ ಸಿಎನ್‍ಜಿ ರೂಪಾಂತರಗಳು 65 ಬಿಹೆಚ್‍ಪಿ ಪವರ್ ಮತ್ತು 98 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ಗಳೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹ್ಯುಂಡೈ ಕಂಪನಿಯು ಹೊಸ ಒರಾ ಕಾರು ಉತ್ಪಾದನೆಯಲ್ಲಿ ನಿರತರಾಗಿದ್ದಾರೆ. ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್(ಹೆಚ್‍ಎಂಐಎಲ್) ಹೊಸ ಓರಾ ಕಾಂಪ್ಯಾಕ್ಟ್ ಸೆಡಾನ್‍ನ ಅಧಿಕೃತವಾಗಿ ಟೆಸ್ಟ್ ನಡೆಸಲು ಚಾಲನೆ ನೀಡಿದೆ. ಒರಾ ಟೆಸ್ಟ್ ಆರಂಭಿಸಿರುವುದರಿಂದ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದೆಂದು ನೀರಿಕ್ಷಿಸಬಹುದು.

ಹ್ಯುಂಡೈ ಒರಾ ಕಾರಿನಲ್ಲಿ ಹೊಸ ಎಂಜಿನ್ ಕಡಿಮೆ ವೈಬ್ರೇಷನ್ ಮತ್ತು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಸುಧಾರಿತ ಪರ್ಫಾಮೆನ್ಸ್ ನೀಡುತ್ತದೆ ಎನ್ನಲಾಗಿದೆ. ಒರಾ ಹ್ಯುಂಡೈ 'ಅಡ್ವಾನ್ಸ್ಡ್ ಆಫ್ಟರ್ ಟ್ರೀಟ್ಮೆಂಟ್ ಸಿಸ್ಟಮ್' ಎಂದು ಕರೆಯಲಾಗಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ.

ಹ್ಯುಂಡೈ ಕಂಪನಿಯು ತನ್ನ ಸರಣಿಯಲ್ಲಿರುವ ಜನಪ್ರಿಯ ಮಾದರಿಗಳನ್ನು ನವೀಕರಿಸಲು ಚಿಂತಿಸುತ್ತಿದೆ. ಹ್ಯುಂಡೈ ಎಲೈಟ್ ಐ20 ಕಾರನ್ನು ಇತ್ತೀಚಿಗೆ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಹ್ಯುಂಡೈ ಐ10 ಸ್ಥಗಿತಗೊಳ್ಳಲಿದೆ ಎಂಬ ವದಂತಿಗಳಿವೆ. ಮುಂದಿನ ವರ್ಷ ಕೇಂದ್ರ ಸರ್ಕಾರವು ವಾಯುಮಾಲಿನ್ಯ ನಿಯಂತ್ರಿಸುವ ಸಲುವಾಗಿ ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಬಿಎಸ್-6 ನಿಯಮ ಜಾರಿಯಾದ ಬಳಿಕ ಹ್ಯುಂಡೈ ಗ್ರ್ಯಾಂಡ್ ಐ10 ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಕಂಪನಿ ಹೇಳಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹ್ಯುಂಡೈ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಹೊಸ ಒರಾ ಸೆಡಾನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇನ್ನೂ ಜನಪ್ರಿಯ ಹ್ಯುಂಡೈ ಎಲೈಟ್ ಐ20 ಕಾರನ್ನು ನವೀಕರಿಸುತ್ತಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹ್ಯುಂಡೈ ಇಂಡಿಯಾ ಸದ್ದಿಲ್ಲದೇ ತಮ್ಮ ಗ್ರ್ಯಾಂಡ್ ಐ10 ಮತ್ತು ಎಕ್ಸೆಂಟ್ ಮಾದರಿಗಳ ಸಿಎನ್‍ಜಿ ರೂಪಾಂತರಗಳನ್ನು ರಿಕಾಲ್ ಮಾಡಲು ಸಜ್ಜಾಗುತ್ತಿದೆ. ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳನ್ನು ಸ್ಥಗಿತಗೊಳಿಸಲಿದೆ. ಹ್ಯುಂಡೈ ಹೊಸ ಕಾಂಪ್ಯಾಕ್ಟ್ ಸೆಡಾನ್ ಬರುವುದರಿಂದ ಎಕ್ಸೆಂಟ್ ಕಾರ್ ಅನ್ನು ಸ್ಥಗಿತಗೊಳಿಸುದರ ಬಗ್ಗೆ ಮಾಹಿತಿ ಇಲ್ಲ.


Click it and Unblock the Notifications